ಮಹಾರಾಷ್ಟ್ರವನ್ನು ಕಡೆಗಣಿಸಿದ್ದಕ್ಕಾಗಿ ಮತ್ತು ಚುನಾವಣೆ ಇರುವ ರಾಜ್ಯಗಳ ಮೇಲೆ ಮಾತ್ರ ಗಮನಹರಿಸಿದ್ದಕ್ಕಾಗಿ ಶಿವಸೇನೆ ಇಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಕೇಂದ್ರ ಬಜೆಟ್-2021 ವಿರುದ್ಧ ವಾಗ್ದಾಳಿ ನಡೆಸಿದೆ. ಹಣಕಾಸು ಸಚಿವರು ಡಿಜಿಟಲ್ ಕುದುರೆ ಸವಾರಿ ಮಾಡುತ್ತ, ಕನಸುಗಳ ಸಾರ್ವಜನಿಕ ಪ್ರವಾಸ’ ಕೈಗೊಂಡಿದ್ದಾರೆ ಎಂದು ಅದು ಲೇವಡಿ ಮಾಡಿದೆ.
ಅಸ್ಸಾಂ, ಕೇರಳ, ತಮಿಳುನಾಡು, ಮತ್ತು ಪಶ್ಚಿಮ ಬಂಗಾಳಗಳು ನಿರ್ಮಲಾ ಸೀತಾರಾಮನ್ ಅವರಿಂದ ಭಾರಿ ಮೂಲಸೌಕರ್ಯ ಯೋಜನೆಗಳನ್ನು ಪಡೆದಿವೆ ಎಂದು ಶಿವಸೇನೆಯ ಮುಖವಾಣಿ “ಸಾಮ್ನಾ’ ದ ಸಂಪಾದಕೀಯದಲ್ಲಿ ತಿಳಿಸಲಾಗಿದೆ. ಈ ರಾಜ್ಯಗಳಲ್ಲಿ ಕೆಲವೇ ತಿಂಗಳುಗಳಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿವೆ.
“ಚುನಾವಣೆಯನ್ನು ಗೆಲ್ಲಲು ಬಜೆಟ್ ಅನ್ನು ಆಯುಧವಾಗಿ ಬಳಸುವುದು ಎಷ್ಟು ಸೂಕ್ತವಾಗಿದೆ? ಈ ಮತದಾನದ ವ್ಯಾಪ್ತಿಯ ರಾಜ್ಯಗಳಿಗೆ ಸಾಕಷ್ಟು ಯೋಜನೆಗಳನ್ನು ವಿತರಿಸಿದ ಕೇಂದ್ರ ಸರ್ಕಾರವು, ದೇಶದಲ್ಲಿ ಹೆಚ್ಚು ತೆರಿಗೆ ಪಾವತಿಸುವ ಮಹಾರಾಷ್ಟ್ರವನ್ನು ನಿರ್ಲಕ್ಷಿಸಿದೆ” ಎಂದು ಸಂಪಾದಕೀಯದಲ್ಲಿ ಟೀಕಿಸಿದೆ.
ರಾಜ್ಯದ ಬಗ್ಗೆ ಬಜೆಟ್ ಪ್ರತೀಕಾರದ ಮನೋಭಾವವನ್ನು ತೋರಿಸಿದೆ ಎಂದು ಅದು ಆರೋಪಿಸಿದೆ. ಸೀತಾರಾಮನ್ ಕೆಲವು ರಾಜ್ಯಗಳಿಗಷ್ಟೇ ಅಲ್ಲ, ಇಡೀ ದೇಶದ ಹಣಕಾಸು ಸಚಿವರು ಎಂದು ಸಂಪಾದಕಿತದಲ್ಲಿ ನೆನಪಿಸಲಾಗಿದೆ. “ನಾಗ್ಪುರ ಮತ್ತು ನಾಸಿಕ್ ಮೆಟ್ರೋ ಯೋಜನೆಗಳ ಪ್ರಸ್ತಾಪ ಮಾಡಿದ್ದರ ಹೊರತುಪಡಿಸಿ, ಮುಂಬೈ ಮತ್ತು ಮಹಾರಾಷ್ಟ್ರಕ್ಕೆ ಏನನ್ನೂ ನೀಡಿಲ್ಲ” ಎಂದು ಅದು ಹೇಳಿದೆ. “ಈ ತಾರತಮ್ಯ ಏಕೆ? ದೇಶದ ಹಣಕಾಸು ಇಲಾಖೆ ಇಡೀ ದೇಶವನ್ನು ಪರಿಗಣಿಸಬೇಕು” ಎಂದು ಸಂಪಾದಕೀಯ ಆಗ್ರಹಿಸಿದೆ.
ಸಾಂಕ್ರಾಮಿಕ ಪೀಡಿತ ಕೈಗಾರಿಕೆಗಳಿಗೆ ಬಜೆಟ್‌ನಲ್ಲಿ ಏನೂ ಇಲ್ಲ ಎಂದು ಸಂಪಾದಕೀಯವು ಹೇಳಿದೆ. “ಕೋವಿಡ್ -19 ಕಾರಣಕ್ಕೆ ಸಾವಿರಾರು ಕೈಗಾರಿಕೆಗಳಿಗೆ ನಷ್ಟವಾಗಿದೆ. ಅನೇಕ ಜನರು ಉದ್ಯೋಗ ಕಳೆದುಕೊಂಡರು, ನಿರುದ್ಯೋಗ ಹೆಚ್ಚಾಗಿದೆ. ಆದರೆ ಹಣಕಾಸು ಸಚಿವರು ಈ ವಿಷಯದಲ್ಲಿ ಏನನ್ನೂ ಹೇಳಿಲ್ಲ” ಎಂದು ಅದು ಟೀಕಿಸಿದೆ.
ಸಾಮಾನ್ಯ ಜನರು, ತಮ್ಮ ಜೇಬುಗಳಿಗೆ ಎಷ್ಟು ಬಂದಿತು ಎಂದು ಕಾಳಜಿ ವಹಿಸುತ್ತಾರೆ. “ಸ್ವಾವಲಂಬಿ ಭಾರತ” ಮತ್ತು ‘ಸ್ಟಾರ್ಟ್-ಅಪ್’ನಂತಹ “ಹಳೆಯ-ಶೈಲಿಯ ಗುಳ್ಳೆಗಳು” ಮತ್ತು “ಮೂಲಸೌಕರ್ಯ ಮತ್ತು ಕೃಷಿ ಅಭಿವೃದ್ಧಿ”ಯಂತಹ ಕೆಲವು ಹೊಸ “ಟ್ರಿಕ್ ಪದಗಳನ್ನು” ಹೊರತುಪಡಿಸಿ, ಈ ಬಜೆಟ್‌ನಲ್ಲಿ ಸಾರ್ವಜನಿಕರಿಗೆ ಏನೂ ಸಿಕ್ಕಿಲ್ಲ ಎಂದು ಸಾಮ್ನಾ ವರದಿ ಮಾಡಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಶಿವಸೇನೆಯ ಪ್ರಕಾರ, ಬಜೆಟ್‌ನ “ಕಾಗದದ ಕುದುರೆಗಳು” ಕೇವಲ “ಡಿಜಿಟಲ್ ಕುದುರೆಗಳು” ಆಗಲಿವೆ. ಬಾವಿಯಲ್ಲಿ ಒಂದು ಹನಿ ನೀರು ಕೂಡ ಇಲ್ಲದಿದ್ದರೂ, ಜನರಿಗೆ ಸಾಕಷ್ಟು ನೀರು ಕೊಡುವುದಾಗಿ ಭರವಸೆ ನೀಡಿದ್ದಾರೆ ಎಂದು ಎಎನ್‌ಐ ವರದಿ ತಿಳಿಸಿದೆ.
ಇದನ್ನೂ ಓದಿ: ಟಿಆರ್‌ಎಸ್ ಶಾಸಕನ ಮನೆಗೆ ದಾಳಿ: 39 ಬಿಜೆಪಿ ಕಾರ್ಯಕರ್ತರ ಬಂಧನ


