Homeಮುಖಪುಟಕೇಂದ್ರದಿಂದ ರೈತರ ಮೇಲೆ FIR: ಕಾನೂನು ನೆರವಿಗೆ 70 ವಕೀಲರನ್ನು ನೇಮಿಸಿ ಪಂಜಾಬ್ ಸಿಎಂ ಹೇಳಿದ್ದೇನು?

ಕೇಂದ್ರದಿಂದ ರೈತರ ಮೇಲೆ FIR: ಕಾನೂನು ನೆರವಿಗೆ 70 ವಕೀಲರನ್ನು ನೇಮಿಸಿ ಪಂಜಾಬ್ ಸಿಎಂ ಹೇಳಿದ್ದೇನು?

- Advertisement -
- Advertisement -

ಹೋರಾಟ ನಿರತ ಹಲವಾರು ರೈತರ ಮೇಲೆ ದೆಹಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಈ ರೈತರಿಗೆ ತ್ವರಿತ ಕಾನೂನು ನೆರವು ನೀಡಲು ಪಂಜಾಬ್ ಸರ್ಕಾರ ದೆಹಲಿಯಲ್ಲಿ 70 ವಕೀಲರನ್ನು ನೇಮಿಸಿದೆ ಎಂದು ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಸೋಮವಾರ ತಿಳಿಸಿದ್ದಾರೆ. ಗಣರಾಜ್ಯೋತ್ಸವದ ಟ್ರಾಕ್ಟರ್ ಮೆರವಣಿಗೆಯ ನಂತರ “ಕಾಣೆಯಾದ ವ್ಯಕ್ತಿಗಳ” ಬಗ್ಗೆ ದೂರು ನೀಡಲು ಸಹಾಯವಾಣಿ ಸಂಖ್ಯೆಯಾಗಿ 112 ಅನ್ನು ತಮ್ಮ ಸರ್ಕಾರ ಘೋಷಿಸಿದೆ ಎಂದು ಅವರು ಹೇಳಿದ್ದಾರೆ.

ಟ್ವಿಟ್ಟರ್‌ನಲ್ಲಿ ಮಾಹಿತಿ ನೀಡಿದ ಮುಖ್ಯಮಂತ್ರಿ ಅಮರಿಂದರ್‌ ಸಿಂಗ್‌, “ದೆಹಲಿ ಪೊಲೀಸರು ಪ್ರಕರಣ ದಾಖಲಿಸಿದ ರೈತರಿಗೆ ತ್ವರಿತ ಕಾನೂನು ನೆರವು ನೀಡುವಂತೆ ಪಂಜಾಬ್ ಸರ್ಕಾರ ಈಗಾಗಲೇ 70 ವಕೀಲರ ತಂಡವನ್ನು ದೆಹಲಿಯಲ್ಲಿ ಏರ್ಪಡಿಸಿದೆ. ಅಲ್ಲದೆ ಕಾಣೆಯಾದ ರೈತರ ಸಮಸ್ಯೆ ಬಗ್ಗೆ ನಾನು ವೈಯಕ್ತಿಕವಾಗಿ ಕೇಂದ್ರ ಗೃಹ ಸಚಿವಾಲಯದೊಂದಿಗೆ ಮಾತನಾಡುತ್ತೇನೆ. ಆ ವ್ಯಕ್ತಿಗಳು ಸುರಕ್ಷಿತವಾಗಿ ಮನೆಗೆ ತಲುಪುವಂತೆ ನೋಡಿಕೊಳ್ಳುತ್ತೇನೆ. ಸಹಾಯಕ್ಕಾಗಿ 112 ಗೆ ಕರೆ ಮಾಡಿ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಈ ರಾಜ್ಯದಲ್ಲಿ ಸರ್ಕಾರಿ ಕಛೇರಿಗಳನ್ನು ಸ್ವಚ್ಚಗೊಳಿಸಲು ಇನ್ನುಮುಂದೆ ಗೋಮೂತ್ರ ಬಳಕೆ: ಆದೇಶ

 

ಈ ವಿಷಯದ ಬಗ್ಗೆ ಪಂಜಾಬ್ ಕ್ಯಾಬಿನೆಟ್ ಸಹೋದ್ಯೋಗಿಗಳು ದೆಹಲಿಯಲ್ಲಿ ಕೇಂದ್ರ ಗೃಹ ಸಚಿವರನ್ನು ಸೋಮವಾರ ಭೇಟಿಯಾದರು ಎಂದು ಮುಖ್ಯಮಂತ್ರಿಯ ಹೇಳಿಕೆಯನ್ನು ಉಲ್ಲೇಖಿಸಿ ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಜೊತೆಗೆ ವರದಿಯಲ್ಲಿ ಕಾಂಗ್ರೆಸ್‌ನ ಎರಡು ತಂಡಗಳು ಈ ವಿಷಯವಾಗಿ ಗೃಹ ಸಚಿವರನ್ನು ಭೇಟಿಯಾಗಿದೆ ಎಂದು ತಿಳಿಸಿದೆ.

ಇದನ್ನೂ ಓದಿ: ದೆಹಲಿ ಪೊಲೀಸರ ಕೈಗೆ ಲೋಹದ ಲಾಠಿ?: ಇದು ಯಾವುದರ ಸೂಚಕ?

ಇವರ ಮನವಿಗೆ ಸ್ಪಂದಿಸಿರುವ ಅಮಿತ್‌ ಷಾ, ಕೇಳಿದ ಕೂಡಲೇ ಪೊಲೀಸರು ವಶಕ್ಕೆ ಪಡೆದ ಎಲ್ಲರ ಪಟ್ಟಿಯನ್ನು ಸಿದ್ಧಪಡಿಸಿ ಅದನ್ನು ಪೊಲೀಸ್ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡುವಂತೆ ಪೊಲೀಸರಿಗೆ ಆದೇಶಿಸಿದ್ದಾರೆ ಎಂದು ಪಂಜಾಬ್ ಸಚಿವ ಸುಖೀಂದರ್‌ ಸಿಂಗ್ ರಾಂಧವ ತಿಳಿಸಿದ್ದಾರೆ. “ನಾವು ಹಿಂದಿರುಗುವ ಹೊತ್ತಿಗೆ, 119 ರ ಪಟ್ಟಿಯನ್ನು ಗೃಹ ಸಚಿವಾಲಯದ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ” ಎಂದು ಅವರು ತಿಳಿಸಿದ್ದಾರೆ.

ಪಂಜಾಬ್ ಸರ್ಕಾರದಿಂದ ನೇಮಕಗೊಂಡ ವಕೀಲರು ಬಂಧಿತ ವ್ಯಕ್ತಿಗಳು ಮತ್ತು ಅವರ ಕುಟುಂಬಗಳನ್ನು ಭೇಟಿ ಮಾಡುತ್ತಾರೆ ಮತ್ತು ಈ ವ್ಯಕ್ತಿಗಳಿಗೆ ಉಚಿತವಾಗಿ ನ್ಯಾಯ ಒದಗಿಸಿ ಕಾನೂನು ಹೋರಾಟ ನಡೆಸುತ್ತಾರೆ. ಬಂಧಿತ ವ್ಯಕ್ತಿಗಳ ಬಗ್ಗೆ ಮೃದುವಾಗಿ ನಡೆದುಕೊಳ್ಳಬೇಕಾಗಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾಗಿ ಎಂದು ರಾಂಧವ ಹೇಳಿದ್ದಾರೆ.

119 ಪಟ್ಟಿ

119 ಜನರ ಪಟ್ಟಿಯಲ್ಲಿ ಇರುವ ಎಫ್‌ಐಆರ್ ಸಂಖ್ಯೆ 31/21 ಅಡಿಯಲ್ಲಿ 9 ಮಂದಿಯನ್ನು ದೆಹಲಿ ಪೊಲೀಸರು ಮುಖರ್ಜಿ ನಗರದಲ್ಲಿ ಬಂಧಿಸಿದ್ದಾರೆ. ಬಂಧಿತರಾದವರು ಹರಿಯಾಣದ ಪಟಿಯಾಲ, ಫಿರೋಜ್‌ಪುರ, ಮಾನ್ಸಾ, ಹೋಶಿಯಾರ್‌ಪುರ್, ಖಮ್ನೋ, ಬರ್ನಾಲಾ ಮತ್ತು ಯಮುನಾ ನಗರ ಮೂಲದವರು. ಏಳು ಮಂದಿ ನಂಗ್ಲೋಯಿ ಪೊಲೀಸ್ ಠಾಣೆ ಬಂಧನದಲ್ಲಿದ್ದು, ಈ ಬಂಧಿತರೆಲ್ಲರೂ ಹರಿಯಾಣ ಮೂಲದವರು. ಹರಿಯಾಣ ಮತ್ತು ಪಂಜಾಬ್‌ನ 31 ವ್ಯಕ್ತಿಗಳ ಮತ್ತೊಂದು ಪಟ್ಟಿಯನ್ನು ಸಹ ಬಿಡುಗಡೆ ಮಾಡಲಾಗಿದ್ದು, ಅವರನ್ನು ನಂಗ್ಲೋಯಿ ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ: ಹೊಸ ಕೃಷಿ ಕಾನೂನುಗಳ ಹಿನ್ನೆಲೆ ಏನು? ಯಾಕಾಗಿ ಇವು ಈಗ ತಲೆ ಎತ್ತಿವೆ?

ವಿಧಾನ ಸಭಾ ಅಧಿವೇಶನದ ಫೇಸ್‌ಬುಕ್ ಲೈವ್ ನೋಡಿ►► 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...