ಆಪರೇಷನ್ ಸಿಂಧೂರ್ ಬಗ್ಗೆಗಿನ ಜಾಗತಿಕ ರಾಜತಾಂತ್ರಿಕ ಸಂಪರ್ಕದ ನಂತರ ‘ಭಾರತಕ್ಕೆ ಎಷ್ಟು ದೇಶಗಳು ಬೆಂಬಲ ನೀಡಿವೆ’ ಎಂದು ನಿಯೋಗದ ಭಾಗವಾಗಿರುವ ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ ಸೋಮವಾರ ಪ್ರಶ್ನಿಸಿದ್ದಾರೆ. ಪಹಲ್ಗಾಮ್ ದಾಳಿಯ ನಂತರ ಭಯೋತ್ಪಾದನೆಯ ಬಗ್ಗೆ ಭಾರತದ ನಿಲುವನ್ನು ತಿಳಿಸಲು ಇತ್ತೀಚಿನ ವಾರಗಳಲ್ಲಿ 33 ದೇಶಗಳಿಗೆ ಭಾರತೀಯ ನಿಯೋಗ ಭೇಟಿ ನೀಡಿತ್ತು. ಈ ನಿಯೋಗದಲ್ಲಿ ಅಭಿಷೇಕ್ ಬ್ಯಾನರ್ಜಿ ಅವರು ಕೂಡಾ ಇದ್ದರು. ಜಾಗತಿಕ ರಾಜತಾಂತ್ರಿಕ ಸಂಪರ್ಕದ
ಈ ಸಂಪರ್ಕದ ನಂತರ ಎಷ್ಟು ದೇಶಗಳು ಭಾರತಕ್ಕೆ ಸ್ಪಷ್ಟವಾಗಿ ಬೆಂಬಲ ನೀಡಿವೆ ಎಂದು ತೃಣಮೂಲ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯೂ ಅಗಿರುವ ಅವರು ಕೇಳಿದ್ದಾರೆ. ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿ ಸಂಬಂಧಿಸಿದಂತೆ ಸರ್ಕಾರದ ಪ್ರತಿಕ್ರಿಯೆಯಲ್ಲಿ ಭಾರತೀಯ ನಾಗರಿಕರೊಂದಿಗೆ ಪಾರದರ್ಶಕತೆ ಮತ್ತು ಹೊಣೆಗಾರಿಕೆ ಇರಬೇಕು ಎಂದು ಅವರು ಹೇಳಿದ್ದಾರೆ.
“ನಾಲ್ವರು ಭಯೋತ್ಪಾದಕರು ಗಡಿಯೊಳಗೆ ನುಸುಳಿ 26 ಅಮಾಯಕ ನಾಗರಿಕರನ್ನು ಕೊಂದ ಈ ದಾಳಿ ಹೇಗೆ ನಡೆಯಿತು? ರಾಷ್ಟ್ರೀಯ ಭದ್ರತೆಯಲ್ಲಿನ ಈ ಬೃಹತ್ ಲೋಪಕ್ಕೆ ಹೊಣೆಗಾರಿಕೆ ಎಲ್ಲಿದೆ?” ಎಂದು ಅವರು ಕೇಳಿದ್ದಾರೆ. ಈ ಹತ್ಯಾಕಾಂಡಕ್ಕೆ ಕಾರಣವಾದ ನಾಲ್ವರು ಭಯೋತ್ಪಾದಕರನ್ನು ಕಾನೂನಿಯ ಅಡಿಯಲ್ಲಿ ತರಲಾಗಿದೆಯೇ ಎಂದು ಅವರು ಪ್ರಶ್ನಿಸಿದ್ದಾರೆ.
ಈ ದಾಳಿಯು ಗುಪ್ತಚರ ವೈಫಲ್ಯದ ಪರಿಣಾಮವೇ ಎಂದು ಪ್ರಶ್ನಿಸಿದ ಅಭಿಷೇಕ್, ದಾಳಿಯ ಕೇವಲ ಒಂದು ತಿಂಗಳ ನಂತರ ಗುಪ್ತಚರ ಬ್ಯೂರೋ ಮುಖ್ಯಸ್ಥ ತಪನ್ ಕುಮಾರ್ ದೇಕಾ ಅವರಿಗೆ ಒಂದು ವರ್ಷದ ಸೇವಾ ಅವಧಿ ವಿಸ್ತರಣೆ ಯಾಕೆ ನೀಡಲಾಯಿತು ಎಂದು ಪ್ರಶ್ನಿಸಿದ್ದಾರೆ. “ಘಟನೆಗೆ ಅವರನ್ನು ಹೊಣೆಗಾರರನ್ನಾಗಿ ಮಾಡುವ ಬದಲು ಅವರಿಗೆ ಏಕೆ ಬಹುಮಾನ ನೀಡಲಾಯಿತು?. ಅಂತಹ ಒತ್ತಡ ಏನಿತ್ತು” ಎಂದು ಅವರು ಕೇಳಿದ್ದಾರೆ.
ಭಾರತ ಮತ್ತು ಪಾಕಿಸ್ತಾನದ ನಡುವೆ ಕದನ ವಿರಾಮಕ್ಕೆ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸಿದ್ದೇನೆ ಎಂಬ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಯ ಬಗ್ಗೆಯೂ ಅವರು ಪ್ರಶ್ನೆಗಳನ್ನು ಎತ್ತಿದ್ದಾರೆ.
ಸೋಮವಾರ ಪಕ್ಷದ ರಾಜ್ಯಸಭಾ ಸಂಸದ ಡೆರೆಕ್ ಒ’ಬ್ರಿಯಾನ್ ಅವರು ಭಯೋತ್ಪಾದಕ ದಾಳಿ ನಡೆದು 55 ದಿನಗಳು ಕಳೆದಿವೆ ಎಂದು ಪುನರುಚ್ಚರಿಸಿದ್ದು, ಅಭಿಷೇಕ್ ಅವರು ಕೇಂದ್ರ ಸರ್ಕಾರಕ್ಕೆ ಕೇಳಿದ ಪ್ರಶ್ನೆಗಳಿಗೆ ಉತ್ತರಗಳನ್ನು ಕೋರಿದ್ದಾರೆ.
ಮಂಗಳವಾರ ಪ್ರತಿಕ್ರಿಯಿಸಿದ ಅವರ ಪಕ್ಷವೂ, ಅಭಿಷೇಕ್ ಬ್ಯಾನರ್ಜಿ ಅವರು ಉತ್ತರಗಳನ್ನು ನಿರೀಕ್ಷಿಸಿ ಕೇಳಲಾದ ಪ್ರಶ್ನೆಗಳಿಗೆ 24 ಗಂಟೆಗಳು ಕಳೆದಿವೆ, “ಉತ್ತರಕ್ಕಾಗಿ ರಾಷ್ಟ್ರ ಇನ್ನೂ ಕಾಯುತ್ತಿದೆ” ಎಂದು ಪಕ್ಷ ಹೇಳಿದೆ.
It’s been 24 hours since Shri @abhishekaitc asked 5 crucial questions that demand answers.
The nation still waits. The silence is deafening.#5Sawal pic.twitter.com/X2G42X3RDC
— All India Trinamool Congress (@AITCofficial) June 17, 2025
ಪಾಕಿಸ್ತಾನದ ಗಡಿಯಾಚೆಗಿನ ಭಯೋತ್ಪಾದನೆಯ ಕುರಿತು ಭಾರತದ ನಿಲುವನ್ನು ತಿಳಿಸಲು ಇತ್ತೀಚಿನ ವಾರಗಳಲ್ಲಿ 33 ದೇಶಗಳಿಗೆ ಭೇಟಿ ನೀಡಿದ್ದ ಮಾಜಿ ರಾಜತಾಂತ್ರಿಕರು ಮತ್ತು ಸಂಸದರನ್ನು ಒಳಗೊಂಡ ಭಾರತೀಯ ನಿಯೋಗಗಳ ಸದಸ್ಯರಿಗೆ ಪ್ರಧಾನಿ ಮೋದಿ ಆತಿಥ್ಯ ವಹಿಸಿದ ನಂತರ ಅಭಿಷೇಕ್ ಬ್ಯಾನರ್ಜಿ ಈ ಪ್ರಶ್ನೆಗಳನ್ನು ಕೇಳಿದ್ದಾರೆ.
ಸರ್ಕಾರ ಘೋಷಿಸಿದ ನಿಯೋಗದ ಸದಸ್ಯರಲ್ಲಿ ಅಭಿಷೇಕ್ ಬ್ಯಾನರ್ಜಿ ಅವರ ಹೆಸರು ಆರಂಭದಲ್ಲಿ ಇರಲಿಲ್ಲ. ಬಹರಾಮ್‌ಪುರ ಸಂಸದ ಯೂಸುಫ್ ಪಠಾಣ್ ಅವರನ್ನು ಪಕ್ಷವನ್ನು ಪ್ರತಿನಿಧಿಸಲು ಕೇಂದ್ರವು ಆಯ್ಕೆ ಮಾಡಿತ್ತು.
ಅದಾಗ್ಯೂ, ತೃಣಮೂಲ ಕಾಂಗ್ರೆಸ್ ಅನ್ನು ಪ್ರತಿನಿಧಿಸುವವರು ಯಾರಾಗಿರಬೇಕು ಎಂದು ಕೇಂದ್ರ ಸರ್ಕಾರ ಏಕಪಕ್ಷೀಯವಾಗಿ ನಿರ್ಧರಿಸಿದ್ದಕ್ಕಾಗಿ ಟೀಕೆ ವ್ಯಕ್ತವಾದ ನಂತರ, ಪಕ್ಷದ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು ಯೂಸುಫ್ ಪಠಾಣ್ ಅವರ ಹೆಸರನ್ನು ಹಿಂತೆಗೆದುಕೊಂಡು ಮತ್ತು ಬದಲಿಗೆ ಅಭಿಷೇಕ್ ಬ್ಯಾನರ್ಜಿಯನ್ನು ಕಳುಹಿಸಿದರು. ಜಾಗತಿಕ ರಾಜತಾಂತ್ರಿಕ ಸಂಪರ್ಕದ
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ: 10 ಜನರ ಬಂಧನ

