Homeಅನುವಾದಿತ ಲೇಖನದೇಶದ ಮೊದಲ ಗೇ ಜಡ್ಜ್‌ ಆಗಿ ಶಿಫಾರಸ್ಸುಗೊಂಡ ಸೌರಭ್‌ ಕಿರ್ಪಾಲ್‌ ಅವರನ್ನು ಭಾರತ ಇನ್ನೆಷ್ಟು ಕಾಲ...

ದೇಶದ ಮೊದಲ ಗೇ ಜಡ್ಜ್‌ ಆಗಿ ಶಿಫಾರಸ್ಸುಗೊಂಡ ಸೌರಭ್‌ ಕಿರ್ಪಾಲ್‌ ಅವರನ್ನು ಭಾರತ ಇನ್ನೆಷ್ಟು ಕಾಲ ನಿರ್ಲಕ್ಷಿಸುತ್ತದೆ?

ದೆಹಲಿ ಹೈಕೋರ್ಟ್‌ನ 33 ಜಡ್ಜ್‌ಗಳು ಸೌರಭ್ ಕಿರ್ಪಾಲ್‌ರನ್ನು ನ್ಯಾಯಾಧೀಶರನ್ನಾಗಿ ಶಿಫಾರನ್ನು ಮಾಡಿದ 4 ವರ್ಷದ ನಂತರವೂ  ಅವರು ನ್ಯಾಯಾಧೀಶರಾಗಿ ನೇಮಕವಾಗಲು ಸಾಧ್ಯವಾಗಿಲ್ಲ.

- Advertisement -
- Advertisement -

2017 ರ ಅಕ್ಟೋಬರ್‌ ನಲ್ಲಿ ದೆಹಲಿ ಹೈಕೋರ್ಟ್ ಹಿರಿಯ ನ್ಯಾಯವಾದಿ  ಸೌರಭ್ ಕಿರ್ಪಾಲ್ ಅವರನ್ನು ದೆಹಲಿ ನ್ಯಾಯಾಲಯದ ಖಾಯಂ ನ್ಯಾಯಾಧೀಶರನ್ನಾಗಿ ನೇಮಿಸುವಂತೆ ಸುಪ್ರೀಂ ಕೋರ್ಟ್‌ ಗೆ ಶಿಫಾರಸ್ಸು ಮಾಡಿತ್ತು. ಸೌರಭ್ ಕಿರ್ಪಾಲ್ ಆ ಮೂಲಕ ದೇಶದಲ್ಲಿ ಆಯ್ಕೆಯಾದ ಮೊಟ್ಟ ಮೊದಲ ಗೇ ಜಡ್ಜ್ ಆದರು. ಆದರೆ ಅವರನ್ನು ದೆಹಲಿ ಹೈಕೋರ್ಟ್‌ನ 33 ಜಡ್ಜ್‌ಗಳು ಸೌರಭ್ ಕಿರ್ಪಾಲ್‌ರನ್ನು ನ್ಯಾಯಾಧೀಶರನ್ನಾಗಿ ಶಿಫಾರನ್ನು ಮಾಡಿದ 4 ವರ್ಷದ ನಂತರವೂ  ಅವರು ನ್ಯಾಯಾಧೀಶರಾಗಿ ನೇಮಕವಾಗಲು ಸಾಧ್ಯವಾಗಿಲ್ಲ. ಭಾರತದಲ್ಲಿ ಒಬ್ಬ ನ್ಯಾಯಾಧೀಶರ ಆಯ್ಕೆಯ ಶಿಫಾರಸ್ಸು 4 ವರ್ಷಗಳ ನಂತರವೂ ನಡೆಯದೇ ಇರುವ ಮೊಟ್ಟ ಮೊದಲ ಘಟನೆ ಇದು. ನಡುವೆ ಸುಪ್ರೀಂ ಕೋರ್ಟ್ ಕಡೆಯಿಂದ ಸೌರಭ ಕಿರ್ಪಾಲ್ ಅವರನ್ನು ಯಾವ ಕಾರಣಕ್ಕೆ ನ್ಯಾಯಾಧೀಶರನ್ನಾಗಿ ನೇಮಕಮಾಡಲಾಗಿಲ್ಲ ಎಂಬ ಉತ್ತರ ಕೂಡ ಬಂದಿಲ್ಲ. ಹಾಗೇ ಶಿಫಾರಸ್ಸನ್ನು ತಿರಸ್ಕರಿಸಲಾಗಿದೆ ಎಂದು ಕೂಡ ಸುಪ್ರೀಂ ಕೋರ್ಟ್ ಇದುವರೆಗೆ ಹೇಳಿಲ್ಲ. ಹೀಗಾಗಿ ಸೌರಭ್‌ ಕಿರ್ಪಾಲ್ ಅವರ ಲೈಂಗಿಕ ಆಯ್ಕೆಯ ಕುರಿತಾದ ಕಾರಣಕ್ಕೆ ಅಥವಾ ಅವರು ಗೇ ಎನ್ನುವ ಕಾರಣಕ್ಕೆ ನ್ಯಾಯಾಧೀಶರಾಗಿ ನೇಮಕವಾಗಲು ಸಾಧ್ಯವಾಗುತ್ತಿಲ್ಲವೇ ಎಂಬ ಪ್ರಶ್ನೆ ಎದ್ದಿದೆ.

ಸೌರಭ್ ಕಿರ್ಪಾಲ್ ಅವರು “ದೇಶದಲ್ಲಿ ಯಾವ ಕಾರಣಕ್ಕೆ ಗೇ ಸಮುದಾಯದ ಒಬ್ಬರೇ ಒಬ್ಬ ನ್ಯಾಯಾಧೀಶರಾಗಿ, ಈ ದೇಶದಲ್ಲಿ ಆಯ್ಕೆಯಾಗಲಿಲ್ಲ. ಈ ವಿಷಯವನ್ನು ಭಾರತ ಅಷ್ಟು ಸಲುಭವಾಗಿ ನಿರ್ಲಕ್ಷಿಸುವಂತಿಲ್ಲ. ಕೇವಲ ವ್ಯಕ್ತಿಯ ಲೈಂಗಿಕ ಆಯ್ಕೆಯ ಕಾರಣಕ್ಕೆ ನ್ಯಾಯಾಧೀಶರನ್ನಾಗಿ ಆಯ್ಕೆ ಮಾಡುತ್ತಿಲ್ಲವೆಂದಾದರೆ ಅದು ದೇಶದ ಸಂವಿಧಾನ ಹೇಳುವ ಸಮಾನತೆಯ ಹಕ್ಕಿನ ಉಲ್ಲಂಘನೆಯಾಗುತ್ತದೆ” ಎಂದು ಅವರು ಅಭಿಪ್ರಾಯ ಪಡುತ್ತಾರೆ.

ನನ್ನನ್ನು ನ್ಯಾಯಾಧೀಶನನ್ನಾಗಿ ದೆಹಲಿ ಹೈಕೋರ್ಟ್ ಶಿಫಾರಸ್ಸು ಮಾಡಿದಾಗ ನಾನು ಎಲ್ಲ ರೀತಿಯಲ್ಲಿಯೂ ನ್ಯಾಯಾಧೀಶ ಹುದ್ದೆಗೆ ಅರ್ಹನಾಗಿದ್ದೆ. ಆದರೆ ದೇಶದಲ್ಲಿ ಇದುವರೆಗೆ ಪರ್ಯಾಯ ಲೈಂಗಿಕತೆಯ ವ್ಯಕ್ತಿ ಈ ದೇಶದಲ್ಲಿ ಆಯ್ಕೆಯಾಗದಿರುವುದು ನನ್ನ ನೇಮಕಾತಿ ಸಾಧ್ಯವೇ ಎಂಬ ಹಲವು ಅನುಮಾನಗಳನ್ನು ಹುಟ್ಟಿ ಹಾಕಿತ್ತು. ಯಾವುದಾದರೂ ಪ್ರಕ್ರಿಯೆ ದೇಶದಲ್ಲಿ ಮೊಟ್ಟ ಮೊದಲಿಗೆ ಸಂಭವಿಸಲು ಸಾಕಷ್ಟು ಸಮಯ ಬೇಕಾಗುತ್ತದೆ. ಈ ನಾಲ್ಕು ವರ್ಷಗಳಲ್ಲಿ ದೇಶದ ಕಾನೂನಿನಲ್ಲಿ ಹಲವು ಬದಲಾವಣೆಗಳಾಗಿವೆ. ಮುಂದೆ ಭಾರತ ತನ್ನ ಮೊಟ್ಟಮೊದಲ ಗೇ ಜಡ್ಜ್ ಅನ್ನು ಹೊಂದಬಹುದು ಎಂಬ ನಂಬಿಕೆ ಇದೆ ಎಂದು ಸೌರಭ್ ಕಿರ್ಪಾಲ್ ಅಭಿಪ್ರಾಯ ಪಡುತ್ತಾರೆ.

ಮಾಧ್ಯಮಗಳ ವರದಿ‌ ಮತ್ತು ಸುಪ್ರೀಂ ಕೋರ್ಟ್ ನ್ಯಾಯಾಧೀಶರಾದ ಜಸ್ಟಿಸ್ ಮದನ್ ಲೋಕುರ್ ಹೇಳಿಕೆಗಳ ಆಧಾರದಲ್ಲಿ ಹೇಳುವುದಾದರೆ ಸುಪ್ರೀಂ ಕೋರ್ಟ್ ಮುಂದೆ ಗೇ ಜಡ್ಜ್ ಆಯ್ಕೆಯ ಚರ್ಚೆ ನಡೆಯುತ್ತಿದೆ. ಮತ್ತು ದೇಶ ಇದನ್ನು ಹೇಗೆ ಸ್ವೀಕರಿಸಬಹುದು ಎಂದು ಸುಪ್ರೀಂ ಕೋರ್ಟ್ ಜಿಜ್ಞಾಸೆಯಲ್ಲಿ ತೊಡಗಿದೆ ಎಂದು ಸೌರಭ್ ಕಿರ್ಪಾಲ್ ತಿಳಿಸಿದ್ದಾರೆ.

ಸೌರಭ್ ಕಿರ್ಪಾಲ್ ವಿದೇಶಿ ಪ್ರಜೆಯನ್ನು ತನ್ನ ಸಂಗಾತಿಯನ್ನಾಗಿ ಹೊಂದಿರುವುದು ದೇಶದ ಭದ್ರತೆಗೆ ಧಕ್ಕೆಯೆಂದು ಭಾವಿಸಲಾಗಿದೆಯೇ ?

2021 ಮಾರ್ಚ್ ತಿಂಗಳಿನಲ್ಲಿ ಅಂದಿನ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರಾದ ಜಸ್ಟಿಸ್ ಎಸ್. ಎ. ಬೋಬ್ಡೆ ಭಾರತದ ವಿದೇಶಾಂಗ ಮಂತ್ರಿ ಎಸ್ ಜೈ ಶಂಕರ್ ಅವರಿಗೆ ಪತ್ರ ಬರೆದು ಸೌರಭ್ ಕಿರ್ಪಾಲ್ ಅವರ ಆಯ್ಕೆಯ ಕುರಿತು ಸರ್ಕಾರದ ನಿರ್ಧಾರವನ್ನು ಅಂತಿಮ ಗೊಳಿಸುವಂತೆ ಕೇಳಿದ್ದಾರೆ. ಹಾಗೇ ಸೌರಭ್ ಕಿರ್ಪಾಲ್ ಅವರನ್ನು ದೆಹಲಿ ಹೈಕೋರ್ಟ್ ನೇಮಕ ಮಾಡಲು ಯಾಕೆ ತಡವಾಗುತ್ತಿದೆ ಎಂದು ಕಾರಣವನ್ನು ಕೇಳಿದ್ದಾರೆ.

ಎಸ್. ಜೈಶಂಕರ್ ಅವರು ಇದುವರೆಗೆ ಜಸ್ಟಿಸ್ ಎಸ್.ಎ. ಬೋಬ್ಡೆ ಅವರ ಪತ್ರಕ್ಕೆ ಉತ್ತರ ನೀಡಿಲ್ಲ. ಹಿಂದೆ ಕೇಂದ್ರ ಸರ್ಕಾರ ಸೌರಭ್ ಕಿರ್ಪಾಲ್ ನೇಮಕಾತಿಗೆ ತೀವ್ರ ವಿರೋಧವನ್ನು ವ್ಯಕ್ತಪಡಿಸಿತ್ತು. ಅವರು ವಿದೇಶಿ ಪ್ರಜೆಯನ್ನು ಸಂಗಾತಿಯಾಗಿ ಹೊಂದಿರುವುದು ದೇಶದ ಭದ್ರತೆಗೆ ತೊಂದರೆ ಆಗಲಿದೆ ಎಂಬ ಕಾರಣಗಳನ್ನು ಕೇಂದ್ರ ಸರ್ಕಾರ ನೀಡಿದೆ.

ಸೌರಭ್ ಕಿರ್ಪಾಲ್ ಅವರ ಹಿನ್ನಲೆಯನ್ನು ತನಿಖೆ ಮಾಡುವ ಕೆಲಸ ಮಾಡುತ್ತಿದ್ದ ಭಾರತದ ಗುಪ್ತಚರ ಇಲಾಖೆ ನೇರವಾಗಿ ಸೌರಭ್ ನೇಮಕಾತಿಗೆ ಆಕ್ಷೇಪವನ್ನು  ವ್ಯಕ್ತಪಡಿಸಿಲ್ಲ. ಆದರೆ ಸೌರಭ್ ವಿದೇಶಿ ಸಂಗಾತಿಯನ್ನು ಹೊಂದಿರುವುದು ದೇಶದ ಭದ್ರತೆಗೆ ತೊಡಕಾಗಬಹುದು ಎಂಬ ಅಭಿಪ್ರಾಯವನ್ನು ಭಾರತ ಸರ್ಕಾರಕ್ಕೆ ನೀಡಿದೆ. ಹಿಂದಿನ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಕೊಲಿಜಿಯಂ ಮುಂದೆ ಕೂಡ ಸೌರಭ್ ಕಿರ್ಪಾಲ್ ಆಯ್ಕೆ ವಿಷಯ ಬಂದಿತ್ತು.  ಕೇಂದ್ರ ಸರ್ಕಾರದ ಆಕ್ಷೇಪದಿಂದ ಅದು ಮುಂದಕ್ಕೆ ಹೋಗಲಿಲ್ಲ.

ಈಗಾಗಲೇ ಜಸ್ಟಿಸ್ ವಿವಿನ್ ಬೋಸ್ ಅವರನ್ನು ಭಾರತದ ಸುಪ್ರೀಂ ಕೋರ್ಟ್‌ ನ್ಯಾಯಾಧೀಶರನ್ನಾಗಿ ಭಾರತ ನೋಡಿದೆ. ಅವರು ಅಮೆರಿಕನ್‌ ಪ್ರಜೆಯನ್ನು ಮದುವೆಯಾಗಿದ್ದವರು. ನಾವು ದೇಶದಲ್ಲಿ ಮುಖ್ಯ ನ್ಯಾಯಾಧೀಶರಾದ ಜಸ್ಟಿಸ್‌ ರವಿ ಧವನ್‌, ಮುಖ್ಯ ನ್ಯಾಯಾಧೀಶರಾದ ಪಟ್ನಾಯಕ್‌ ಅವರನ್ನು ನಮ್ಮ ದೇಶದ ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶರಾಗಿ ದಕ್ಷವಾಗಿ ಕಾರ್ಯ ನಿರ್ವಹಿಸಿರುವುದನ್ನು ದೇಶದ ಇತಿಹಾಸದಲ್ಲಿ ನೋಡಿದ್ದೇವೆ. ಇವರುಗಳು ವಿದೇಶಿ ಪ್ರಜೆಗಳನ್ನು ಮದುವೆಯಾಗಿದ್ದರು. ವಿದೇಶಿ ಪ್ರಜೆಗಳನ್ನು ಮದುವೆಯಾಗುವುದು ಅಥವಾ ಸಂಗಾತಿಯನ್ನು ಹೊಂದಿರುವುದು ನ್ಯಾಯಾಧೀಶರ ಆಯ್ಕೆ ಪರಿಗಣನೆಗೆ ದೊಡ್ಡ ವಿಷಯವಲ್ಲವೆಂದು ಈ ಸಂಬಂಧ ಸೌರಭ್‌ ಕಿರ್ಪಾಲ್‌ ಅಭಿಪ್ರಾಯ ಪಡುತ್ತಾರೆ.

ಭಾರತದಲ್ಲಿ ನ್ಯಾಯಾಂಗ ವ್ಯವಸ್ಥೆ ಸಂಪೂರ್ಣವಾಗಿ ನಿಷ್ಪಕ್ಷಪಾತವಾಗಿ ಇರಲು ಸಾಧ್ಯವಿಲ್ಲ. ನಾವು ಈ ದೇಶದ ವ್ಯವಸ್ಥೆಯಲ್ಲಿ ಎಲ್ಲಾ ವರ್ಗಗಳಿಗೂ ಪ್ರಾತಿನಿಧ್ಯವಿರಬೇಕೆಂದು ಬಯಸಬೇಕು. ಹಾಗೇ ವ್ಯವಸ್ಥೆಯಲ್ಲಿ ನಂಬಿಕೆಯನ್ನೂ ಇಡಬೇಕು. ನಿರ್ಧಾರಗಳನ್ನು ಕೈಗೊಳ್ಳುವ ನ್ಯಾಯಾಧೀಶರಿರಲಿ ಅಥವಾ ಸರ್ಕಾರದಲ್ಲಿರುವ ವ್ಯಕ್ತಿಗಳು ಪ್ರಸ್ತುತ ಸಮಾಜದ ಪ್ರತಿಬಿಂಬವೇ ಆಗಿರುತ್ತಾರೆ ಎಂಬುದನ್ನು ಮರೆಯಲು ಸಾಧ್ಯವಿಲ್ಲ.  ಬಹುತೇಕ ಮೇಲ್ಜಾತಿಯ ಪುರುಷರೇ ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲಿದ್ದಾರೆ. ಇದು ನಮ್ಮ ಇಂದಿನ ಸಮಾಜದಲ್ಲಿ ಯಾರು ಪ್ರಾಬಲ್ಯವನ್ನು ಸಾಧಿಸಿದ್ದಾರೆ ಎಂಬುದರ ಸಂಕೇತವೇ ಆಗಿದೆ ಎಂದು ಹಿರಿಯ ನ್ಯಾಯವಾದಿಯೊಬ್ಬರು ಸೌರಭ್‌ ಕಿರ್ಪಾಲ್ ನೇಮಕಾತಿ ವಿಷಯದ ಕುರಿತು ತಮ್ಮ ಅಭಿಪ್ರಾಯವನ್ನು ಹೇಳುತ್ತಾರೆ.

ಸೌರಭ್‌ ಕಿರ್ಪಾಲ್ ನೇಮಕ ಭಾರತದಲ್ಲಿ ಸಲಿಂಗಿಗಳ ಕುರಿತಾದ ಅಭಿಪ್ರಾಯವನ್ನು ಬದಲಿಸಬಹುದೇ? ಶೋಷಣೆಯನ್ನು ತಡೆಯಬಹುದೇ?

 

ಈ ಪ್ರಶ್ನೆಗೆ ಉತ್ತರ ಹೌದು ಮತ್ತು ಇಲ್ಲ. ಹೈಕೋರ್ಟ್‌ ನಂತಹ ಉನ್ನತ ಸಂಸ್ಥೆಯಲ್ಲಿ ಭಾರತ ಬಹಿರಂಗವಾಗಿ ತಾನು ಎಂದು ಹೇಳಿಕೊಳ್ಳುವ ನ್ಯಾಯಾಧೀಶರನ್ನು ಹೊಂದಿದ್ದರೆ ಭಾರತದಲ್ಲಿ ಸಾಕಷ್ಟು ಬದಲಾವಣೆಗಳು ಸಾಧ್ಯವಾಗಬಹುದು. ದೇಶದಲ್ಲಿ ಸಲಿಂಗಿಗಳ ಕುರಿತಾಗಿ ನಿಂದನಾತ್ಮಕ ಹೇಳಿಕೆಗಳು, ಅಭಿಪ್ರಾಯಗಳು ನಿಲ್ಲಬಹುದು. ನ್ಯಾಯಾಲಯದ ಮುಂದೆ ಪ್ರಕರಣಗಳು ಬಂದಾಗ ಸಂವಿಧಾನದ ಸಮಾನತೆಯ ತತ್ವವನ್ನು ಸಲಿಂಗಿಗಳ ವಿಷಯದಲ್ಲೂ ಅನ್ವಯಿಸಬಹುದು. ಆದರೆ ಈಗ ದೇಶದ ಸರ್ವೋಚ್ಛ ನ್ಯಾಯಾಲಯ ಹಾಗೂ ಹೈಕೋರ್ಟ್‌ ಗಳಲ್ಲಿ ಮಹಿಳಾ ನ್ಯಾಯಾಧೀಶರಿದ್ದರೂ ಸಹ ದೇಶದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ, ತಾರತಮ್ಯ, ಅತ್ಯಾಚಾರಗಳು ನಿಂತಿಲ್ಲ. ಕನಿಷ್ಠ ನ್ಯಾಯಾಲಯದಲ್ಲಿ, ನ್ಯಾಯಾಂಗ ವ್ಯವಸ್ಥೆಯಲ್ಲಿ ಮಹಿಳೆಯರ ಮೇಲಿನ ತಾರತಮ್ಯ ಮತ್ತು ದೌರ್ಜನ್ಯಗಳು ನಿಂತಿಲ್ಲ. ಹೀಗಿರುವಾಗ ಸೌರಭ್‌ ಕಿರ್ಪಾಲ್ ಅಥವಾ ಬೇರೇ  ವ್ಯಕ್ತಿ ನ್ಯಾಯಾಧೀಶರಾದ ಮಾತ್ರಕ್ಕೆ ಭಾರತದ ಸಮಾಜದಲ್ಲಿ ಸಲಿಂಗಿಗಳಿಗೆ ಗೌರವ ಮತ್ತು ಮಾನ್ಯತೆಗಳು ಬಂದು ಬಿಡುತ್ತವೆ ಎಂದು ನಿರೀಕ್ಷಿಸಲು ಸಾಧ್ಯವಿಲ್ಲ. ಆದರೆ ಗೇ ಎಂಬ ಒಂದೇ ಕಾರಣಕ್ಕೆ ನಾಗರೀಕರ ಹಕ್ಕುಗಳಿಗಾಗಿ ತೀವ್ರ ಹೋರಾಟವನ್ನು ನಡೆಸುತ್ತ ಅರ್ಹತೆಯನ್ನು ಹೊಂದಿದ ವ್ಯಕ್ತಿಯನ್ನು ಹೈಕೋರ್ಟ್‌ ನ್ಯಾಯಾಧೀಶರಾಗುವ ಅವಕಾಶವನ್ನು ನಿರಾಕರಿಸುವುದು ಸಾಧ್ಯವಿಲ್ಲ. ದೆಹಲಿ ಹೈಕೋರ್ಟ್‌ನ 33  ಜನ ನ್ಯಾಯಾಧೀಶರು ಒಮ್ಮತದಿಂದ ಸೌರಭ್‌ ಕಿರ್ಪಾಲ್ ಅವರ ಹೆಸರನ್ನು ಶಿಫಾರಸ್ಸು ಮಾಡಿರುವಾಗ ಕೇಂದ್ರ ಸರ್ಕಾರ ಇದನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ.

ಗೇ ಹಕ್ಕುಗಳ ಹೋರಾಟದ ತಿಂಗಳೆಂದು ಕರೆಯುವ ಜೂನ್‌ ತಿಂಗಳಿನಲ್ಲಿ ಅನೇಕ ವರ್ಷದಿಂದ ಚರ್ಚೆಯಾಗುತ್ತಿರವ ಸೌರಭ್‌ ಕಿರ್ಪಾಲ್ ನೇಮಕಾತಿ ವಿಚಾರ ಇನ್ನಷ್ಟು ಚರ್ಚೆಯಾಗಬೇಕಿದೆ.

ಮೂಲ : ಕ್ವಿಂಟ್‌ ನಡೆಸಿದ ಸೌರಭ್‌ ಕಿರ್ಪಾಲ್‌ ಸಂದರ್ಶನ

ಅನುವಾದ : ರಾಜೇಶ್‌ ಹೆಬ್ಬಾರ್


ಇದನ್ನೂ ಓದಿ; ಪಿಕೆ ಟಾಕೀಸ್: LGBT ಸಮುದಾಯದ ನೋವು-ನಲಿವಿನ ಪಯಣವನ್ನು ಹಿಡಿಯುವ ಪಾನೋಸ್‌ನ ಸಿನಿಮಾಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಭಾರತದಲ್ಲಿ 12 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿದ ಒರಾಕಲ್ : ಜಾಗತಿಕವಾಗಿ 30 ಸಾವಿರ ಜನರ ಕೆಲಸಕ್ಕೆ ಕುತ್ತು

ಐಟಿ ದೈತ್ಯ ಒರಾಕಲ್ ಜಾಗತಿಕ ಮಟ್ಟದಲ್ಲಿ ಸುಮಾರು 30,000 ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಿದ್ದು, ಇದು ಭಾರತದ ಮೇಲೂ ತೀವ್ರ ಪರಿಣಾಮ ಬೀರಿದೆ. ವರದಿಗಳ ಪ್ರಕಾರ, ಭಾರತವೊಂದರಲ್ಲೇ ಸುಮಾರು 12,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಕಂಪನಿಯು ತನ್ನ ಒಟ್ಟು ಉದ್ಯೋಗಿಳ...

ಗೋವಾ ನೈಟ್‌ಕ್ಲಬ್ ಬೆಂಕಿ ಪ್ರಕರಣ: ಮಾಲೀಕರಾದ ಸೌರಭ್ ಲೂತ್ರಾ, ಗೌರವ್ ಲೂತ್ರಾ ಸಹೋದರರಿಗೆ ಜಾಮೀನು

ಪಣಜಿ: ಕಳೆದ ಡಿಸೆಂಬರ್‌ನಲ್ಲಿ 25 ಜನರ ಸಾವಿಗೆ ಕಾರಣವಾದ ವಿನಾಶಕಾರಿ ಬೆಂಕಿ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಿರ್ಚ್ ಬೈ ರೋಮಿಯೋ ಲೇನ್ ನೈಟ್‌ಕ್ಲಬ್‌ನ ಮಾಲೀಕರಾದ ಸೌರಭ್ ಲೂತ್ರಾ ಮತ್ತು ಗೌರವ್ ಲೂತ್ರಾ ಅವರಿಗೆ...

ಲೈಂಗಿಕ ದೌರ್ಜನ್ಯ ಆರೋಪ: ಮಲಯಾಳಂ ಚಲನಚಿತ್ರ ನಿರ್ದೇಶಕ ರಂಜಿತ್ ಬಾಲಕೃಷ್ಣನ್ 14 ದಿನಗಳ ನ್ಯಾಯಾಂಗ ಬಂಧನಕ್ಕೆ 

ಕೇರಳ: ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಯಾಳಂ ನಿರ್ದೇಶಕ ಮತ್ತು ನಿರ್ಮಾಪಕ ರಂಜಿತ್ ಬಾಲಕೃಷ್ಣನ್ ಅವರನ್ನು ಬುಧವಾರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಪ್ರಸ್ತುತ ಅವರನ್ನು ಎರ್ನಾಕುಲಂ ಸಬ್ ಜೈಲಿನಲ್ಲಿ ಇರಿಸಲಾಗಿದೆ.  ಜನವರಿ...

ಫಾರ್ಮ್–6 ವಿವಾದ : ಕೋಲ್ಕತ್ತಾದ ಚುನಾವಣಾಧಿಕಾರಿ ಕಚೇರಿ ಮುಂದೆ ಟಿಎಂಸಿ -ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ

ಮತದಾರರ ಪಟ್ಟಿಗೆ ಹೊಸದಾಗಿ ಹೆಸರುಗಳನ್ನು ಸೇರಿಸುವ ನಮೂನೆ -6 (ಫಾರ್ಮ್ -6) ವಿಚಾರದಲ್ಲಿ ಕೋಲ್ಕತ್ತಾದ ಮುಖ್ಯ ಚುನಾವಣಾಧಿಕಾರಿ ಕಚೇರಿ ಮುಂದೆ ಮಂಗಳವಾರ (ಮಾ. 31) ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಬಿಜೆಪಿ ಕಾರ್ಯಕರ್ತರ...

‘ಶೀಘ್ರದಲ್ಲೇ ಹೊರಡುತ್ತೇನೆ’: ‘2-3 ವಾರಗಳಲ್ಲಿ’ ಇರಾನ್ ಮೇಲಿನ ಯುದ್ಧ ಕೊನೆಗೊಳಿಸುವ ಬಗ್ಗೆ ಸುಳಿವು ನೀಡಿದ ಅಮೆರಿಕ ಅಧ್ಯಕ್ಷ ಟ್ರಂಪ್ 

ವಾಷಿಂಗ್ಟನ್ ಡಿಸಿ: ಜಾಗತಿಕ ಇಂಧನ ಮಾರುಕಟ್ಟೆಗಳನ್ನು ಅಸ್ತವ್ಯಸ್ತಗೊಳಿಸಿರುವ ಒಂದು ತಿಂಗಳ ಕಾಲ ನಡೆದ ಯುದ್ಧದ ಸಂಭಾವ್ಯ ಅಂತ್ಯದ ಬಗ್ಗೆ ಸುಳಿವು ನೀಡುವ ಮೂಲಕ, ಮುಂದಿನ ಎರಡು ಮೂರು ವಾರಗಳ ಮೊದಲೇ ಇರಾನ್ ವಿರುದ್ಧದ...

ದೊಡ್ಡಬಳ್ಳಾಪುರದಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ : ಕೆಐಎಡಿಬಿ ವಿರುದ್ಧ ಬೀದಿಗಿಳಿದ ಜನ

ದೇವನಹಳ್ಳಿ ಬಳಿಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ ಪ್ರಾರಂಭಗೊಂಡಿದೆ. ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ದಿ ಮಂಡಳಿ (ಕೆಐಎಡಿಬಿ) ವಿರುದ್ಧ ಜನರು ಬೀದಿಗಿಳಿದಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ...

ಬಿಹಾರ: ಪತಿಯನ್ನು ಹತ್ಯೆ ಮಾಡಿದ ಗುಂಪಿನಿಂದ ಬೆದರಿಕೆ; ಇಬ್ಬರು ಮಕ್ಕಳೊಂದಿಗೆ ವಿಷ ಸೇವಿಸಿದ ಮುಸ್ಲಿಂ ಮಹಿಳೆ ಸಾವು, ಮಕ್ಕಳ ಸ್ಥಿತಿ ಗಂಭೀರ

ಬಿಹಾರದ ರೋಹ್ತಾಸ್ ಜಿಲ್ಲೆಯ ಮುಸ್ಲಿಂ ಮಹಿಳೆಯೊಬ್ಬರು ಮಂಗಳವಾರ ತನ್ನ ಇಬ್ಬರು ಅಪ್ರಾಪ್ತ ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.  ಪತಿಯನ್ನು ಅಮಾನುಷವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದ ಆರೋಪಿಗಳಿಂದ ಬೆದರಿಕೆಗಳನ್ನು ತಾಳಲಾರದೆ...

ಅತ್ಯಾಚಾರ ಆರೋಪ: ಅಶೋಕ್ ಖರತ್ ಅವರ ಪುತ್ರನನ್ನು ವಿಚಾರಣೆಗಾಗಿ ವಶಕ್ಕೆ ಪಡೆದ ಎಸ್ಐಟಿ; ಪತ್ನಿಗಾಗಿ ಹುಡುಕಾಟ 

ನಾಸಿಕ್: ಅತ್ಯಾಚಾರ ಆರೋಪಿ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ನಾಸಿಕ್ ನಗರದಲ್ಲಿ ಆತನ ಮಗನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ಆತನ ಪತ್ನಿಗಾಗಿಯೂ...

ಇರಾಕ್‌ : ಬಗ್ದಾದ್‌ನಲ್ಲಿ ಯುಎಸ್‌ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅಪಹರಣ

ಇರಾಕ್‌ ರಾಜಧಾನಿ ಬಗ್ದಾದ್‌ ನಗರದ ಅಲ್-ಸಾದೂನ್ ಬೀದಿಯಲ್ಲಿರುವ ಬಗ್ದಾದ್ ಹೋಟೆಲ್ ಬಳಿ ಅಮೆರಿಕದ ಪ್ರಶಸ್ತಿ ವಿಜೇತ ಸ್ವತಂತ್ರ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅವರನ್ನು ಮಂಗಳವಾರ (ಮಾ.31, 2026) ಅಪಹರಿಸಲಾಗಿದೆ ಎಂದು ವರದಿಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ,...

ವಾಣಿಜ್ಯ ಎಲ್‌ಪಿಜಿ ದರ 195.50 ರೂ. ಏರಿಕೆ : ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ತೈಲ ಬೆಲೆಗಳು ಏರುತ್ತಿರುವ ನಡುವೆ, ವಾಣಿಜ್ಯ ಎಲ್‌ಪಿಜಿ ದರವನ್ನು ಬುಧವಾರ (ಏ.1) 195.50 ರೂ. ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪ್ರಕಾರ, ಬೆಲೆ ಏರಿಕೆ ಬಳಿಕ...