Homeಕರೋನಾ ತಲ್ಲಣಒಬ್ಬ ಅಧಿಕಾರಿಯ 15 ದಿನ ಕೆಲಸ: 7 ಸಾವಿರದಿಂದ 2,600ಕ್ಕೆ ಇಳಿದ ದೈನಂದಿನ ಪಾಸಿಟಿವ್ ಕೇಸ್‌

ಒಬ್ಬ ಅಧಿಕಾರಿಯ 15 ದಿನ ಕೆಲಸ: 7 ಸಾವಿರದಿಂದ 2,600ಕ್ಕೆ ಇಳಿದ ದೈನಂದಿನ ಪಾಸಿಟಿವ್ ಕೇಸ್‌

- Advertisement -
- Advertisement -

ಐಎಎಸ್ ಅಧಿಕಾರಿ ಗಗನ್‌ದೀಪ್ ಸಿಂಗ್ ಬೇಡಿ ಅವರನ್ನು ಗ್ರೇಟರ್ ಚೆನ್ನೈ ಕಾರ್ಪೊರೇಶನ್‌ನ (ಜಿಸಿಸಿ) ಆಯುಕ್ತರಾಗಿ ನೇಮಕವಾಗಿ ಇನ್ನೂ ಒಂದು ತಿಂಗಳೂ ಆಗಿಲ್ಲ. ಆದರೆ ಕೋವಿಡ್ ನಿರ್ವಹಣೆ-ನಿಯಂತ್ರಣದಲ್ಲಿ ಅವರು ಸಾಕಷ್ಟು ಯಶಸ್ಸು ಪಡೆದಿದ್ದಾರೆ ಎಂದು ದಿ ಪ್ರಿಂಟ್ ವರದಿ ಮಾಡಿದೆ.

ಕಳೆದ ತಿಂಗಳು ಪ್ರಧಾನಿ ಮೋದಿಯವರೊಂದಿಗೆ ಕೇಂದ್ರ ಆರೋಗ್ಯ ಸಚಿವಾಲಯವು ಹಂಚಿಕೊಂಡ ಅತ್ಯುತ್ತಮ  ಕೋವಿಡ್ ಉಪಕ್ರಮಗಳಲ್ಲಿ ಈ ಐಎಎಸ್ ಅಧಿಕಾರಿ ತೆಗೆದುಕೊಂಡ ಕ್ರಮಗಳು ಉಲ್ಲೇಖಿತವಾಗಿವೆ. ಟ್ಯಾಕ್ಸಿ ಆಂಬ್ಯುಲೆನ್ಸ್ ಸೇವೆಯನ್ನು ಗಗನದೀಪ್ ಆರಂಭಿಸಿದರು. ವಿಕಲಚೇತನರಿಗೆ ಮನೆಯಲ್ಲಿಯೇ ಲಸಿಕೆ ನೀಡುವ ವ್ಯವಸ್ಥೆ ಮಾಡಿದರು. 2004ರ ಸುನಾಮಿ ಮತ್ತು 2018ರ ರ ಗಾಜಾ ಚಂಡಮಾರುತದ ಸಮಯದಲ್ಲಿ ಅವರು ಮಾಡಿದ ಕೆಲಸದ ಕಾರಣದಿಂದಾಗಿ ಅವರಿಗೆ  ‘ವಿಪತ್ತು ನಿರ್ವಹಣೆಯಲ್ಲಿ ನಿಪುಣ’ ಎಂಬ ಹೆಗ್ಗಳಿಕೆ ಸಲ್ಲಿದೆ.

ಹೊಸದಾಗಿ ಚುನಾಯಿತಗೊಂಡ ತಮಿಳುನಾಡಿನ ಸ್ಟಾಲಿನ್  ಸರ್ಕಾರ, ಮೇ 9 ರಂದು ಗಗನದೀಪ್‍ ಸಿಂಗ್‍ ಅವರನ್ನು ಗ್ರೇಟರ್ ಚೆನ್ನೈ ಕಾರ್ಪೊರೇಶನ್‌ನ ಆಯುಕ್ತರನ್ನಾಗಿ ನೇಮಿಸಿತು.

ನಂತರದ ದಿನಗಳಲ್ಲಿ, ಚೆನ್ನೈನ ಕೋವಿಡ್ ಪರಿಸ್ಥಿತಿಯಲ್ಲಿ ಒಂದು ತಿರುವು ಕಂಡುಬಂದಿದೆ. ಮೇ ಮಧ್ಯದಲ್ಲಿ ಪ್ರತಿದಿನ ಸುಮಾರು 7 ಸಾವಿರ ಪ್ರಕರಣಗಳನ್ನು ದಾಖಲಿಸುತ್ತಿದ್ದ ನಗರವು ತಿಂಗಳ ಅಂತ್ಯದ ವೇಳೆಗೆ 2,600ಕ್ಕಿಂತ ಕ್ಕಿಂತ ಕಡಿಮೆ ಪ್ರಕರಣಗಳನ್ನು ದಾಖಲಿಸಿದೆ.

ದಿ ಪ್ರಿಂಟ್‌ನೊಂದಿಗೆ ಮಾತನಾಡಿದ  ಗಗನದೀಪ್  ಬೇಡಿ, ‘ಕೋವಿಡ್ ನಿರ್ವಹಣೆಗಾಗಿ ತಳಮಟ್ಟದಲ್ಲಿ ಕೆಲಸ ಮಾಡುವ  ಪರಿಷ್ಕೃತ ಮೈಕ್ರೋ-ಪ್ಲ್ಯಾನ್’  ರೂಪಿಸಿದ್ದು ಇದಕ್ಕೆ ಕಾರಣವೆಂದು ಹೇಳಿದ್ದಾರೆ. ಆರೋಗ್ಯ ಕಾರ್ಯಕರ್ತರ ಕಣ್ಗಾವಲು ಮೂಲಕ ಸೋಂಕನ್ನು ಮೊದಲೇ ಗುರುತಿಸಲು ಈ ಯೋಜನೆಯು ಆದ್ಯತೆ ನೀಡುತ್ತದೆ. ಇದು  ಸೋಂಕು ಹರಡುವಿಕೆ ಕಡಿಮೆ ಮಾಡಲು ಸಹಾಯ ಮಾಡಿದೆ ಎಂದು ಬೇಡಿ ಹೇಳಿದ್ದಾರೆ.

1993ರ ಬ್ಯಾಚ್‌ನ ಈ ಐಎಎಸ್ ಅಧಿಕಾರಿಯು ದಿನಕ್ಕೆ 13-14 ಗಂಟೆಗಳ ಕಾಲ ಕೆಲಸ ಮಾಡುತ್ತಾರೆ. ಬೇಡಿ ಅವರೊಂದಿಗೆ  ಸೇವೆ ಸಲ್ಲಿಸಿರುವ ಕಾಮರಾಜ್ ಪೋರ್ಟ್ ಲಿಮಿಟೆಡ್‌ನ ಅಧ್ಯಕ್ಷ ಸುನಿಲ್ ಪಾಲಿವಾಲ್, “ಅವರು ತನ್ನ ಹೃದಯದಿಂದ ಕೆಲಸ ಮಾಡುತ್ತಾರೆ” ಎಂದು ಹೇಳಿದ್ದಾರೆ. “26 ವರ್ಷಗಳ ಸೇವೆಯ ನಂತರವೂ ಅವರ ಉತ್ಸಾಹವು ಯಾವುದೇ ಯುವಕನಿಗಿಂತ ಕಡಿಮೆಯಿಲ್ಲ, ಅಷ್ಟು ಯೌವನ ಅವರಲ್ಲಿದೆ’ ಎಂದು ಶ್ಲಾಘಿಸಿದ್ದಾರೆ.

ಜಿಸಿಸಿಯಲ್ಲಿ ಬೇಡಿ ಅವರ ಅತ್ಯಂತ ಶ್ಲಾಘನೀಯ ಉಪಕ್ರಮವೆಂದರೆ ಅಂಗವಿಕಲರಿಗೆ ಮನೆಯಲ್ಲಿಯೇ ವ್ಯಾಕ್ಸಿನೇಷನ್ ಸೇವೆ ನೀಡುವ ಕ್ರಮ. ಲಸಿಕಾ ಅಭಿಯಾನದ ಬಗ್ಗೆ ಮಾತನಾಡಿದ ಬೇಡಿ, ಜಿಸಿಸಿ ಅಂಗವಿಕಲರಿಗೆ ಮೂರು ರೀತಿಯ ವ್ಯಾಕ್ಸಿನೇಷನ್ ಬೆಂಬಲವನ್ನು ಆಯೋಜಿಸಿದೆ ಎಂದು ಹೇಳಿದರು

ಮತ್ತೊಂದು ಪ್ರಮುಖ ಕ್ರಮವೆಂದರೆ, ಜೊಮಾಟೊ, ಅಮೆಜಾನ್, ಉಬರ್ ಮತ್ತು ಸ್ವಿಗ್ಗಿ ಮುಂತಾದ ಸೇವಾ ಕಂಪನಿಗಳಲ್ಲಿನ ವಿತರಣಾ ಸಿಬ್ಬಂದಿಗೆ (ಡೆಲಿವರಿ ಸ್ಟಾಫ್‍)‘ಆದ್ಯತೆಯ ಕೆಲಸಗಾರರು’ ಎಂದು ಲಸಿಕೆ ಹಾಕುತ್ತಿದ್ದಾರೆ. ಇವರು ದಿನವೂ ಸಾರ್ವಜನಿಕರ ಸಂಪರ್ಕದಲ್ಲಿ ಇರುವ ಕಾರಣ ಈ ಕ್ರಮ ಕೈಗೊಳ್ಳಲಾಗಿದೆ.

ಚೆನ್ನೈನಲ್ಲಿ ಪ್ರಾರಂಭಿಸಲಾದ ಟ್ಯಾಕ್ಸಿ ಆಂಬ್ಯುಲೆನ್ಸ್‌ಗಳು ಆಮ್ಲಜನಕ-ಸುಸಜ್ಜಿತ 108 ಆಂಬುಲೆನ್ಸ್‌ಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡಿವೆ. ಜಿಸಿಸಿ 250 ಟ್ಯಾಕ್ಸಿ ಆಂಬುಲೆನ್ಸ್‌ಗಳನ್ನು ನಿಯೋಜನೆ ಮಾಡಿದೆ. ಇವು ಸ್ವಲ್ಪ ಅನಾರೋಗ್ಯದ ರೋಗಿಗಳಿಗೆ, ಆಮ್ಲಜನಕದ ಅಗತ್ಯವಿಲ್ಲದವರನ್ನು ಆಸ್ಪತ್ರೆಗೆ ಸೇರಿಸಲು ಸಹಾಯ ಮಾಡುತ್ತವೆ.

ಇದರ ಜೊತೆಗೆ, 2020ರಲ್ಲಿ ನೇಮಕಗೊಂಡ ಸ್ಥಳೀಯ ಸಮುದಾಯಗಳ 12 ಸಾವಿರ ಆರೋಗ್ಯ ಕಾರ್ಯಕರ್ತರ ನೆಟ್‌ವರ್ಕ್ ಬಲಪಡಿಸಿದ್ದು, ಇವರು ಮನೆಮನೆಗೆ ತೆರಳಿ ಟೆಸ್ಟಿಂಗ್‍ ಮತ್ತು ಇತರ ಚಿಕಿತ್ಸೆಗೆ ನೆರವಾಗುತ್ತಿದ್ದಾರೆ.

ಚೈನ್ನೈ ಮಹಾನಗರ ಪಾಲಿಕೆ ಅಡಿ ಒಟ್ಟು 80 ಲಕ್ಷ ಜನಸಂಖ್ಯೆ ಇದ್ದು, 200 ವಾರ್ಡ್‍ಗಳಿವೆ. ಕಾರ್ಪೋರೇಷನ್ ಆರೋಗ್ಯ ಕಾರ್ಯಕರ್ತರು  ಮನೆ-ಮನೆಗೆ  ತೆರಳಿ ಪರೀಕ್ಷೆ ಮತ್ತು ತಪಾಸಣೆ ನಡೆಸುತ್ತಾರೆ. ಅವರು ಕ್ವಾರಂಟೈನ್‌ನಲ್ಲಿರುವವರಿಗೆ ಅಗತ್ಯ ವಸ್ತುಗಳನ್ನು ಪೂರೈಸುತ್ತಿದ್ದಾರೆ.

ಗಗನದೀಪ್‍ ಬೇಡಿ ದೈನಂದಿನ ಪರಿಶೀಲನಾ ಸಭೆಗಳನ್ನು ನಡೆಸುತ್ತಾರೆ. ಮನೆಮನೆ ಪರೀಕ್ಷೆ ಮತ್ತು ಜ್ವರ ಚಿಕಿತ್ಸೆಯ ಶಿಬಿರಗಳನ್ನು ನಡೆಸಲು ವಿಭಾಗ ಮಟ್ಟದಲ್ಲಿ 200 ಸಂಚಾರಿ ತಂಡಗಳನ್ನು ನಿಯೋಜಿಸಿದ್ದಾರೆ. ಇದರ ಜೊತೆಗೆ, ಮಾರುಕಟ್ಟೆಯಲ್ಲಿ ನಿತ್ಯ ವ್ಯಾಪಾರ ಮಾಡುವ ಹೆಚ್ಚಿನ ಅಪಾಯದ ಗುಂಪುಗಳನ್ನು ಪರೀಕ್ಷಿಸಲು 10  ಸಂಚಾರಿ ಪರೀಕ್ಷಾ ಘಟಕಗಳನ್ನು ನಿಯೋಜನೆ ಮಾಡಿದ್ದಾರೆ.

ತಂತ್ರಜ್ಞಾನ ಬಳಕೆಯನ್ನು  ಉತ್ತೇಜಿಸುವ ಗಗನದೀಪ್ ಬೇಡಿ,  ಜಿಸಿಸಿಯಲ್ಲೂ ಸಾಮಾಜಿಕ ಮಾಧ್ಯಮದ ಅನ್ವಯವನ್ನು ಹೆಚ್ಚಿಸಿದ್ದಾರೆ. “ಫೇಸ್‌ಬುಕ್ ಮತ್ತು ಟ್ವಿಟರ್‌ನಲ್ಲಿ ಕೋವಿಡ್ ದೂರುಗಳನ್ನು ಹುಡುಕಲು ಮತ್ತು ಅವುಗಳನ್ನು ಸಂಪರ್ಕ ಮಾಡಲು ಕಂಟ್ರೋಲ್ ರೂಮ್ ತಂಡಕ್ಕೆ ಸೂಚನೆ ನೀಡಿದ್ದೇನೆ. ಅಂತಹ ವಿನಂತಿಗಳನ್ನು ಟ್ಯಾಗ್ ಮಾಡಿದ ನಂತರ ತಕ್ಷಣ ಕ್ರಮ ಕೈಗೊಳ್ಳಲಾಗುತ್ತದೆ” ಎಂದು ಹೇಳಿದರು.

ಒಬ್ಬ ಅಧಿಕಾರಿ ಕೇವಲ 15 ದಿನದಲ್ಲಿ 7 ಸಾವಿರದಷ್ಟು ಇದ್ದ ಪಾಸಿಟಿವ್ ಕೇಸ್‌ಗಳನ್ನು 2,600ಕ್ಕೆ ಇಳಿಸಿದ್ದಾರೆ. ವೈಜ್ಞಾನಿಕ ಮನೋಭಾವದ ಹೊಸ ಡಿಎಂಕೆ ಸರ್ಕಾರ ಅವರಿಗೆ ಬೆಂಬಲವಾಗಿ ನಿಂತಿದೆ.


ಇದನ್ನೂ ಓದಿ: ಲಸಿಕೆ ಕುರಿತು ಕೇಂದ್ರಕ್ಕೆ ಸುಪ್ರೀಂಕೋರ್ಟ್ ಪ್ರಶ್ನೆಗಳು: ಕಟಕಟೆಯಲ್ಲಿ ಮೋದಿ ಸರ್ಕಾರ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

31 ವರ್ಷಗಳ ಹಳೇ ಸಾಲ ತೀರಿಸಲು 1200 ಕಿ.ಮೀ ಪ್ರಯಾಣಿಸಿದ ಕೇರಳದ ಇಸ್ಮಾಯಿಲ್

"ನನ್ನ ಕಣ್ಣುಗಳಿಂದ ಆನಂದಬಾಷ್ಪಗಳು ಉದುರಿದವು. ನನ್ನ ಮನಸ್ಸಿಗೆ ಅದೆಷ್ಟು ನೆಮ್ಮದಿ ಸಿಕ್ಕಿತೆಂದರೆ, ಅದನ್ನು ವಿವರಿಸಲು ಪದಗಳೇ ಸಾಲದು. ಆತನಿಗೂ ಅಷ್ಟೇ ದೊಡ್ಡ ಸಮಾಧಾನ." ಹೀಗೆ ಭಾವುಕರಾಗಿ ನುಡಿಯುತ್ತಾರೆ ಮೊಹಮ್ಮದ್ ಇಸ್ಮಾಯಿಲ್. 1995ರಲ್ಲಿ ಸೌದಿ...

ಬಂಡಾಯದ ಬಳಿಕ ಟಿಎಂಸಿಗೆ ಮತ್ತೊಂದು ಸವಾಲು : ಪಕ್ಷದ ಬ್ಯಾಂಕ್ ಖಾತೆಗಳು ಫ್ರೀಝ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂರು ಬ್ಯಾಂಕ್ ಖಾತೆಗಳಲ್ಲಿರುವ 440 ಕೋಟಿ ರೂಪಾಯಿ ಹಣವನ್ನು ಭಾಗಶಃ ಬಳಸಲು ಕಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು...

ಮಂದಿರ ನಿರ್ಮಾಣದ ಕ್ರೆಡಿಟ್‌ಗೆ ಇದ್ದ ಯಜಮಾನಿಕೆ, ಕೊಳ್ಳೆ ಹೊಡೆದಾಗ ಯಾಕಿಲ್ಲ ಸೇವಕರೇ?

ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನ ಪ್ರಧಾನಿಯವರು 11 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದರು, ಕೇವಲ ಎಳನೀರು ಕುಡಿದರು, ನೆಲದ ಮೇಲೆ ಮಲಗಿದರು ಎಂದು ಇಡೀ ದೇಶಕ್ಕೆ ಸಾರಲಾಗಿತ್ತು. ಅಯೋಧ್ಯೆಯಿಂದ ಹೊಸ ಕಾಲದ...

‘ಫ್ರೀ ಪ್ಯಾಲೆಸ್ತೀನ್’ ಘೋಷಣೆಯನ್ನು ತಮಾಷೆ ಮಾಡಿದ ಸೈಫ್ ಅಲಿ ಖಾನ್ – ನಿರೂಪಕಿ ಅನುಪಮಾ ಚೋಪ್ರಾ

ಸ್ಪ್ಯಾನಿಷ್ ನಟ ಜೇವಿಯರ್ ಬಾರ್ಡೆಮ್ ಅವರ "ಫ್ರೀ ಪ್ಯಾಲೆಸ್ತೀನ್" ಹೇಳಿಕೆ ಕುರಿತು ಸೈಫ್ ಅಲಿ ಖಾನ್ ಮತ್ತು ಚಲನಚಿತ್ರ ಪತ್ರಕರ್ತೆ ಅನುಪಮಾ ಚೋಪ್ರಾ ನಗುತ್ತಿರುವ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನಟನ ಅಸೂಕ್ಷ್ಮ...

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...

‘ನನ್ನನ್ನು ಮೌನಗೊಳಿಸಲು, ನೀವು ನನ್ನನ್ನು ಕೊಲ್ಲಬೇಕಾಗುತ್ತದೆ’: ಟಿಎಂಸಿ ಬಿಕ್ಕಟ್ಟಿನ ನಡುವೆ ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಆಕ್ರೋಶ  

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿರುವ ಬೆನ್ನಲ್ಲೇ, ಪಕ್ಷದ ಸುಪ್ರೀಮೋ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇತ್ತೀಚಿನ ತಿಂಗಳುಗಳಲ್ಲೇ ಅತ್ಯಂತ ಪ್ರಬಲವಾದ ರಾಜಕೀಯ...

ಸುಪ್ರೀಂ ಕೋರ್ಟ್‌ನಲ್ಲಿ ಜಡ್ಜ್‌ಗಳನ್ನೇ ‘ನ್ಯಾಯಾಂಗ ಸೇವಕರು’ ಎಂದ ಅರ್ಜಿದರ

ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ಅತ್ಯಂತ ನಾಟಕೀಯ ಹಾಗೂ ಆಘಾತಕಾರಿ ದೃಶ್ಯವೊಂದು ತೆರೆದುಕೊಂಡಿದೆ. ಪ್ರಕರಣವೊಂದರ ವಿಚಾರಣೆ ವೇಳೆ ಖುದ್ದಾಗಿ ಹಾಜರಾಗಿದ್ದ ಅರ್ಜಿದಾರನೊಬ್ಬ, ಲಕ್ನೋದ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲು ನಾನು ನ್ಯಾಯಪೀಠಕ್ಕೆ...

ಮದ್ಯದ ಅಮಲಿನಲ್ಲಿ ಸಾರಿಗೆ ಬಸ್‌ ಅಪಹರಿಸಿದ ವ್ಯಕ್ತಿ; 21 ಕಿ.ಮೀ. ಪ್ರಯಾಣದ ನಂತರ ಅಪಘಾತ

ತೆಲಂಗಾಣದ ಜನಗಾಂವ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ (ಟಿಜಿಎಸ್‌ಆರ್‌ಟಿಸಿ) ಬಸ್‌ ಅನ್ನು ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಕದ್ದಿದ್ದಾನೆ. ನಂತರ ಅದನ್ನು ಸುಮಾರು 21 ಕಿ.ಮೀ. ದೂರ ಓಡಿಸಿ,...

ಬೆಂಗಳೂರಿನಲ್ಲಿ: ರಸ್ತೆ ಬದಿ ವಾರಗಟ್ಟಲೆ ವಾಹನ ನಿಲ್ಲಿಸಿದರೆ ಜಪ್ತಿ ಮಾಡಿ ‘ಹರಾಜು’ ಹಾಕಲಿದೆ ಸರ್ಕಾರ!

ಸಿಲಿಕಾನ್ ಸಿಟಿಯ ಟ್ರಾಫಿಕ್ ದಟ್ಟಣೆಗೆ ಮುಕ್ತಿ ಹಾಡಲು ಮತ್ತು ಪಾದಚಾರಿಗಳ ಹಕ್ಕನ್ನು ರಕ್ಷಿಸಲು ರಾಜ್ಯ ಸರ್ಕಾರ ಈಗ ಅತ್ಯಂತ ಕಠಿಣ ಹೆಜ್ಜೆಯನ್ನಿಟ್ಟಿದೆ. ನಗರದ ರಸ್ತೆ ಬದಿ ಹಾಗೂ ಫುಟ್‌ಪಾತ್‌ಗಳಲ್ಲಿ ತಿಂಗಳುಗಟ್ಟಲೆ ಧೂಳು ತಿನ್ನುತ್ತಾ...

ಸರ್ಕಾರಿ ಶಾಲೆಗಳಲ್ಲಿ 86 ಲಕ್ಷ ವಿದ್ಯಾರ್ಥಿಗಳ ಕುಸಿತ, ಖಾಸಗಿ ಶಾಲೆಗಳತ್ತ ಮುಖ ಮಾಡಿದ 88 ಲಕ್ಷ ಮಕ್ಕಳು: ಕಳವಳಕಾರಿ ವರದಿ

ನವದೆಹಲಿ: ದೇಶದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗಳು ಕಂಡುಬರುತ್ತಿದ್ದು, ಸರ್ಕಾರಿ ಶಾಲೆಗಳ ದಾಖಲಾತಿಯಲ್ಲಿ ಭಾರಿ ಕುಸಿತ ಉಂಟಾಗಿದೆ. 2023–24 ಮತ್ತು 2025–26ರ ಶೈಕ್ಷಣಿಕ ವರ್ಷಗಳ ನಡುವಿನ ಅವಧಿಯಲ್ಲಿ ದೇಶಾದ್ಯಂತ ಸರ್ಕಾರಿ ಶಾಲೆಗಳಲ್ಲಿ...