Homeಮುಖಪುಟಮುಂಬೈನ ಧಾರಾವಿ ಸ್ಲಂ ವೈರಸ್‌ ಅನ್ನು ಹಿಮ್ಮೆಟ್ಟಿಸಿದ್ದು ಹೀಗೆ.. : ಇದು ಉಳಿದವರಿಗೂ ಪಾಠ

ಮುಂಬೈನ ಧಾರಾವಿ ಸ್ಲಂ ವೈರಸ್‌ ಅನ್ನು ಹಿಮ್ಮೆಟ್ಟಿಸಿದ್ದು ಹೀಗೆ.. : ಇದು ಉಳಿದವರಿಗೂ ಪಾಠ

- Advertisement -
- Advertisement -

ಭಾರತದ ಧಾರಾವಿ ಸ್ಲಂ ಏಷ್ಯಾ ಖಂಡದ ಅತ್ಯಂತ ಜನದಟ್ಟಣೆಯ ಸ್ಲಂ ಆಗಿದೆ. ಇಲ್ಲಿ ಸುಮಾರು ಎಂಟೂವರೆ ಲಕ್ಷ ಜನ ವಾಸಿಸುತ್ತಿದ್ದಾರೆ. ಇಲ್ಲಿ ಏಪ್ರಿಲ್ 1ರಂದು ಮೊದಲ ಕೊರೊನಾ ವೈರಸ್‌ ಕಾಣಿಸಿಕೊಂಡಾಗ ದೇಶವೇ ಬೆಚ್ಚಿ ಬಿದ್ದಿತ್ತು. ಏಕೆಂದರೆ ಕೊರೊನಾ ಒಂದು ಸಾಂಕ್ರಾಮಿಕ ವೈರಸ್ ಆದ್ದರಿಂದ ಈ ಜನದಟ್ಟಣೆಯ ಸ್ಲಂನಲ್ಲಿ ಕ್ವಾರಂಟೈನ್‌ ಆಗುವುದು, ದೈಹಿಕ ಅಂತರ ಕಾಪಾಡಿಕೊಳ್ಳುವುದು ಕನಸೇ ಸರಿ ಎಂದು ಹಲವರು ಭಯಭೀತರಾಗಿದ್ದರು. ಅಂತೆಯೇ ಮೇ ತಿಂಗಳಿನಲ್ಲಿ ದಿನಕ್ಕೆ ಸುಮಾರು 60 ಪ್ರಕರಣದಲ್ಲಿ ಈ ಸ್ಲಂನೊಂದರಿಂದಲೇ ದಾಖಲಾಗುತ್ತಿದ್ದವು. ಆದರೆ ಕೊರೊನಾ ಎದುರಿಸುವಲ್ಲಿ ಧಾರಾವಿ ಯಶಸ್ವಿಯಾಗಿದೆ. ಈಗ ದಿನಕ್ಕೆ ವರದಿಯಾಗುವ ಪ್ರಕರಣಗಳ ಸಂಖ್ಯೆ 20ಕ್ಕೆ ಇಳಿದಿದೆ. ಅಲ್ಲದೇ ಮುಂಬೈನ ಧಾರಾವಿ ಸ್ಲಂ ಹಾಟ್‌ಸ್ಪಾಟ್‌ನಿಂದ ಹೊರಬಂದಿದ್ದು, ಕೊರೊನಾ ನಿಯಂತ್ರಣದಲ್ಲಿ ಹೆಣಗಾಡುತ್ತಿರುವ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಒಂದು ಮಾದರಿಯಾಗಿದೆ.

ಸದ್ಯದ ಸ್ಥಿತಿ

ಜೂನ್ 12 ರ ಹೊತ್ತಿಗೆ, ಧಾರಾವಿ 2,013 ಕರೋನವೈರಸ್ ಪ್ರಕರಣಗಳನ್ನು ದಾಖಲಿಸಿದೆ, ಆದರೆ ಅದರ ದೈನಂದಿನ ಬೆಳವಣಿಗೆಯ ದರವು ಕೇವಲ 1.57 ಶೇಕಡಾ ಇದೆ. ಅಂದರೆ ಮುಂಬೈ ನಗರದಲ್ಲಿ ದೈನಂದಿನ ದರ 3 ಶೇಕಡಾ ಇದ್ದರೆ, ಪಿ ನಾರ್ತ್, ಆರ್ ಸೌತ್ ಮತ್ತು ಎಸ್ ವಾರ್ಡ್‌ಗಳಂತಹ ಇತರ ವಾರ್ಡ್‌ಗಳಲ್ಲಿ 5 ಪ್ರತಿಶತದಷ್ಟು ಇದೆ.

ಮೇ 30 ಮತ್ತು ಜೂನ್ 8 ರ ನಡುವೆ ಯಾವುದೇ ಸಾವುಗಳು ದಾಖಲಾಗಿಲ್ಲ. ಆದರೆ ಕಳೆದ ನಾಲ್ಕು ದಿನಗಳಲ್ಲಿ ಆರು ಸಾವುಗಳು ವರದಿಯಾಗಿದ್ದು ಈ ಸಂಖ್ಯೆ 77 ಕ್ಕೆ ತಲುಪಿದೆ.

ಸಾಧ್ಯವಾದುದ್ದಾದರೂ ಹೇಗೆ?

ನವೀನ ಸರಣಿ ಪ್ರಯೋಗಗಳನ್ನು ನಡೆಸಿದ್ದು, ಖಾಸಗಿ ವೈದ್ಯರನ್ನು ಕರೆತರುವುದು, ದುರ್ಬಲ ಜನರನ್ನು ಪ್ರತ್ಯೇಕಿಸುವುದು, ದೊಡ್ಡ ಕ್ವಾರಂಟೈನ್‌ ಸೌಲಭ್ಯಗಳನ್ನು ಪಡೆಯುವುದು ಮತ್ತು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗಳನ್ನು ಸ್ವಾಧೀನಪಡಿಸಿಕೊಳ್ಳುವುದು – ಈ ತಂತ್ರವನ್ನು ಇಲ್ಲಿ ಯಶಸ್ವಿಯಾದಂತೆ ಕಾಣುತ್ತದೆ.

ಅಲ್ಲಿನ ಜನರ ತಾಪಮಾನವನ್ನು ಅಳೆಯಲು ಅಧಿಕಾರಿಗಳು ಏಪ್ರಿಲ್‌ನಿಂದ ಇದುವರೆಗೆ 47,500 ಕುಟುಂಬಗಳ ಬಾಗಿಲು ಬಡಿದಿದ್ದಾರೆ. ಈ ಕೊಳೆಗೇರಿ ಕ್ಲಸ್ಟರ್‌ನಲ್ಲಿ ಸುಮಾರು 7,00,000 ಜನರನ್ನು ಸ್ಕ್ರೀನಿಂಗ್‌ಗೆ ಒಳಪಡಿಸಲಾಗಿದೆ. 9000 ಜನರನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಅಲ್ಲದೇ  ಜ್ವರ ಚಿಕಿತ್ಸಾಲಯಗಳನ್ನು ಸ್ಥಾಪಿಸಿದ್ದಾರೆ.  ಇಲ್ಲಿ ರೋಗಲಕ್ಷಣಗಳನ್ನು ತೋರಿಸುವವರನ್ನು ಹತ್ತಿರದ ಶಾಲೆಗಳಿಗೆ ಸ್ಥಳಾಂತರಿಸಲಾಯಿತು ಮತ್ತು ಕ್ರೀಡಾ ಕ್ಲಬ್‌ಗಳನ್ನು ಕ್ವಾರಂಟೈನ್ ಕೇಂದ್ರಗಳಾಗಿ ಪರಿವರ್ತಿಸಲಾಯಿತು. ಮೇ ಆರಂಭಕ್ಕೆ ಹೋಲಿಸಿದರೆ ತಾಜಾ ದೈನಂದಿನ ಸೋಂಕುಗಳು ಈಗ ಮೂರನೇ ಒಂದು ಭಾಗಕ್ಕೆ ಇಳಿದಿವೆ, ಅರ್ಧಕ್ಕಿಂತ ಹೆಚ್ಚು ರೋಗಿಗಳು ಚೇತರಿಸಿಕೊಳ್ಳುತ್ತಿದ್ದಾರೆ, ಮತ್ತು ಈ ತಿಂಗಳ ಸಾವಿನ ಸಂಖ್ಯೆಯು ಕುಸಿದಿದೆ.

ಈ ಸಂಖ್ಯೆಗಳು ಭಾರತದ ಉಳಿದ ಭಾಗಗಳಿಗೆ ತದ್ವಿರುದ್ಧವಾಗಿವೆ. ಏಕೆಂದರೆ ಮೇ ನಂತರ ಪ್ರಕರಣು ಕಂಡುಬಂದಲೆಲ್ಲಾ ನಿಯಂತ್ರಣಕ್ಕೆ ಸಿಗದೇ ಓಡುತ್ತಿವೆ. ಆದರೆ ಧಾರಾವಿ ಸಂಪೂರ್ಣ ನಿಯಂತ್ರನದಲ್ಲಿದೆ.

“ದೈಹಿಕ ದೂರವನ್ನು ಅನುಸರಿಸುವುದು ಅಸಾಧ್ಯವಾದದ್ದು” ಎಂದು ಧಾರಾವಿ ಯಲ್ಲಿ ಹೋರಾಟವನ್ನು ಮುನ್ನಡೆಸುವ ಉಸ್ತುವಾರಿ ವಹಿಸಿರುವ ಮುಂಬೈ ಪುರಸಭೆಯ ಸಹಾಯಕ ಆಯುಕ್ತ ಕಿರಣ್ ದಿಘವ್ಕರ್ ಹೇಳುತ್ತಾರೆ. “ಪ್ರಕರಣಗಳು ದಾಖಲಾಗುವವರೆಗೆ ಕಾಯುವ ಬದಲು ವೈರಸ್ ಅನ್ನು ಬೆನ್ನಟ್ಟುವುದು ಒಂದೇ ಆಯ್ಕೆಯಾಗಿದೆ. ಬನ್ನಿ ಪ್ರತಿಕ್ರಿಯೆಗೆ ಬದಲಾಗಿ ಪೂರ್ವಭಾವಿಯಾಗಿ ಕೆಲಸ ಮಾಡೋಣ ಎಂಬುದು ಅವರ ಧ್ಯೇಯವಾಕ್ಯವಾಗಿದೆ.”

“ನಾವು ಆರಂಭಿಕ ಹಂತಗಳಲ್ಲಿಯೇ ಜನರನ್ನು ಪ್ರತ್ಯೇಕಿಸಲು ಸಾಧ್ಯವಾಗುತ್ತಿದೆ ಮತ್ತು ಅಗತ್ಯವಿದ್ದವರಿಗೆ ತುರ್ತು ಚಿಕಿತ್ಸೆ ನೀಡುತ್ತಿದ್ದೆವೆ. ಅಂದರೆ ಮುಂಬಯಿಯ ಉಳಿದ ಭಾಗಗಳಲ್ಲಿ ಹೆಚ್ಚಿನ ರೋಗಿಗಳು ತಡವಾಗಿ ಆಸ್ಪತ್ರೆಗಳನ್ನು ತಲುಪುತ್ತಿದ್ದಾರೆ, ಆದರೆ ನಾವು ಅದಕ್ಕೆ ವಿರುದ್ಧವಾಗಿ ಕೂಡಲೇ ಚಿಕಿತ್ಸೆ ಆರಂಭಿಸುತ್ತಿರುವುದು ಫಲ ಕೊಟ್ಟಿದೆ. ಇದು ಮರಣ ಪ್ರಮಾಣವನ್ನು ಕುಗ್ಗಿಸಿದೆ ಎನ್ನುತ್ತಾರೆ.

ಉಚಿತ ಸೇವೆಗಳು

ಐಸೋಲೇಶನ್‌ ಕೇಂದ್ರಗಳಲ್ಲಿರುವ ಪ್ರತಿಯೊಬ್ಬರೂ ಉಚಿತವಾಗಿ ದಿನದ 24 ಗಂಟೆಯೂ ಸಹ ವೈದ್ಯಕೀಯ ಚಿಕಿತ್ಸೆ ಮತ್ತು ಮೇಲ್ವೀಚಾರಣೆ ಪಡೆಯುತ್ತಿದ್ದಾರೆ. ರೋಗಲಕ್ಷಣಗಳು ಕಾಣಿಸಿಕೊಂಡ ತಕ್ಷಣ ಜನರು ತಮ್ಮನ್ನು ತಾವು ಕ್ವಾರಂಟೈನ್‌ಗೆ ಒಳಗಾಗಲು ಸ್ವಯಂಪ್ರೇರಿತರಾಗುತ್ತಾರೆ ಎಂದು ದಿಘವ್ಕರ್ ಹೇಳುತ್ತಾರೆ.

ಪ್ರಕರಣಗಳ ಸಂಖ್ಯೆಯನ್ನು ಕಡಿಮೆ ಮಾಡಲು ಯಾವುದೇ ಒತ್ತಡ ಮಾಡಬಾರದು ಎನ್ನುವ ಅವರು ಬದಲಿಗೆ ಸ್ಕ್ರೀನಿಂಗ್ ಮತ್ತು ಸಮಯೋಚಿತ ಚಿಕಿತ್ಸೆಯತ್ತ ಗಮನ ಹರಿಸಬೇಕಾಗಿದೆ. ಏಕೆಂದರೆ ನಮ್ಮ ಅಂತಿಮ ಗುರಿ ಜೀವಗಳನ್ನು ಉಳಿಸುವುದು ಎನ್ನುತ್ತಾರೆ.

ಇನ್ನು ಮುಗಿದಿಲ್ಲ ಯುದ್ಧ!

ಆದರೂ, ವೈರಸ್ ವಿರುದ್ಧದ ಧಾರಾವಿ ಯುದ್ಧ ಮುಗಿದಿಲ್ಲ. ಲಾಕ್ ಡೌನ್ ಸಮಯದಲ್ಲಿ ಪುರಸಭೆ ಇಲ್ಲಿನ 24,000 ಕುಟುಂಬಗಳಿಗೆ ಪಡಿತರವನ್ನು ನೀಡಿದೆ. 11,000 ಇಫ್ತಾರ್ ಊಟ ಸೇರಿದಂತೆ 19,000 ಜನರಿಗೆ ಆಹಾರವನ್ನು ನೀಡಿತು. ಆದರೂ ಇಲ್ಲಿನ ಜನಸಂಖ್ಯೆಗೆ ಹೋಲಿಸಿದರೆ ಇದು ಏನೇನೂ ಅಲ್ಲ. ಲಾಕ್ ಡೌನ್ ನಂತರ ಹೆಚ್ಚಿನ ನಿವಾಸಿಗಳು ಈಗ ನಿರುದ್ಯೋಗಿಗಳಾಗಿದ್ದಾರೆ ಮತ್ತು ಪಡಿತರ ಅಂಗಡಿಗಳು ಅಕ್ಕಿ ಮತ್ತು ಗೋಧಿಯನ್ನು ಮಾತ್ರ ನೀಡುತ್ತಿವೆ. ಇದು ಧಾರಾವಿಯನ್ನು ಚಿಂತೆಗೀಡು ಮಾಡಿದೆ.

ಮುಂದೆ ಲಾಕ್‌ಡೌನ್‌ ನಿರ್ಬಂಧಗಳನ್ನು ಸಂಪೂರ್ಣವಾಗಿ ತೆಗೆದುಹಾಕಿದ ನಂತರ ಮತ್ತು ಜನರು ತಮ್ಮ ಕೆಲಸಕ್ಕೆ ತೆರಳಿದಾಗ ಎರಡನೇ ಹಂತದಲ್ಲಿ ಸೋಂಕು ಹರಡುವ ಅಪಾಯವಿದೆ. ಹಾಗಾಗಿ ವೈರಸ್ ಇಡೀ ನಗರ, ರಾಜ್ಯ, ಮತ್ತು ದೇಶದಿಂದ ಹೋಗುವವರೆಗೆ ಯುದ್ಧವು ಮುಗಿಯುವುದಿಲ್ಲ ಎಂದು ದಿಘವ್ಕರ್ ಹೇಳುತ್ತಾರೆ”. ಜನರು ಹೇಗೆ ಸುರಕ್ಷಿತವಾಗಿರಬೇಕು ಎಂಬುದರ ಬಗ್ಗೆ ಈಗ ಸಾಕಷ್ಟು ತಿಳಿದಿದ್ದಾರೆ ಮತ್ತು ಲಾಕ್‌ಡೌನ್ ಮುಗಿಯುವ ಹೊತ್ತಿಗೆ, ನಮ್ಮಲ್ಲಿ ಹೆಚ್ಚಿನವರು ಹರ್ಡ್ ಇಮ್ಯುನಿಟಿ (ಹಿಂಡಿನ ಪ್ರತಿರಕ್ಷೆ) ಯನ್ನು ಪಡೆದಿರಬಹುದು ಎಂದು ನಾನು ಭಾವಿಸುತ್ತೇನೆ ಎನ್ನುತ್ತಾರೆ.


ಇದನ್ನೂ ಓದಿ: ಬೋಧನಾ ಕೆಲಸದಿಂದ ವಜಾ: ಬದುಕು ಸಾಗಿಸಲು ಬಾಳೆಹಣ್ಣು ಮಾರಾಟ ಆರಂಭಿಸಿದ ಶಿಕ್ಷಕ! 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾರ್ಖಂಡ್| ವಾಮಾಚಾರ ಆಚರಣೆಗೆ ಅಪ್ರಾಪ್ತ ಬಾಲಕಿ ಬಲಿ; ತಾಯಿ ಸೇರಿದಂತೆ ಮೂವರ ಬಂಧನ

ಜಾರ್ಖಂಡ್‌ನ ಹಜಾರಿಬಾಗ್ ಬಳಿಕ ಕುಸುಂಭ ಗ್ರಾಮದಲ್ಲಿ ಬಲಿದಾನದ ಆಚರಣೆಯಲ್ಲಿ ಕತ್ತು ಹಿಸುಕಿ ಕೊಂದ ಹದಿಹರೆಯದ ಹುಡುಗಿಯ 35 ವರ್ಷದ ತಾಯಿಯನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ. ಜೊತೆಗೆ, ಮಾಂತ್ರಿಕ ಮತ್ತು ಓರ್ವ ವ್ಯಕ್ತಿಯನ್ನು ಬಂಧಿಸಿರುವುದಾಗಿ...

ಪ. ಬಂಗಾಳ | ಎಸ್‌ಐಆರ್ ಕರ್ತವ್ಯದಲ್ಲಿದ್ದ ನ್ಯಾಯಾಧೀಶರನ್ನು ಒತ್ತೆಯಾಳಾಗಿಟ್ಟುಕೊಂಡ ಆರೋಪ : ತೀವ್ರ ಕಳವಳ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್, ಕೇಂದ್ರ ಪಡೆಗಳ ನಿಯೋಜನೆಗೆ ನಿರ್ದೇಶನ

ನಿನ್ನೆ (ಏ.1) ಮಧ್ಯಾಹ್ನದಿಂದ ಮಧ್ಯರಾತ್ರಿಯವರೆಗೆ ಪಶ್ಚಿಮ ಬಂಗಾಳದಲ್ಲಿ ನಡೆದ ಪ್ರತಿಭಟನೆಯ ವೇಳೆ, ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಕಾರ್ಯದಲ್ಲಿ ತೊಡಗಿದ್ದ ನ್ಯಾಯಾಂಗ ಅಧಿಕಾರಿಗಳನ್ನು ಪ್ರತಿಭಟನಾಕಾರರು ಒತ್ತೆಯಾಳಾಗಿ ಇರಿಸಿಕೊಂಡಿದ್ದರು ಎಂದು ಆರೋಪಿಸಲಾಗಿದೆ....

ಉತ್ತರ ಪ್ರದೇಶ| ಮುಸ್ಲಿಂ ಯುವಕನನ್ನು ಥಳಿಸಿ ದರೋಡೆ ಮಾಡಿದ ಗುಂಪು; ಹಿಂದೂ ಶ್ಲೋಕ ಪಠಿಸುವಂತೆ ಒತ್ತಾಯ

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಲ್ಲಿ ಹಿಂದುತ್ವವಾದಿ ಗುಂಪೊಂದು ಮುಸ್ಲಿಂ ಯುವಕನನ್ನು ನಿರ್ದಯವಾಗಿ ಥಳಿಸಿ, ಅವಮಾನಿಸಿ, ಹಿಂದುತ್ವ ಶ್ಲೋಕಗಳನ್ನು ಪಠಿಸುವಂತೆ ಒತ್ತಾಯಿಸಿದೆ ಎಂದು ಪೊಲೀಸರನ್ನು ಉಲ್ಲೇಖಿಸಿ 'ಕ್ಲಾರಿಯನ್ ಇಂಡಿಯಾ' ವರದಿ ಮಾಡಿದೆ. ಮಾರ್ಚ್ 28...

‘ಇರಾನ್‌ಗೆ ಅಮೆರಿಕನ್ನರ ವಿರುದ್ಧ ಯಾವುದೇ ದ್ವೇಷವಿಲ್ಲ’: ಅಮೆರಿಕದ ಸಾರ್ವಜನಿಕರಿಗೆ ‘ಮುಕ್ತ ಪತ್ರ’ ಬರೆದ ಇರಾನ್ ಅಧ್ಯಕ್ಷ ಪೆಜೆಶ್ಕಿಯಾನ್

ಪಶ್ಚಿಮ ಏಷ್ಯಾ ಸಂಘರ್ಷ ತೀವ್ರವಾಗುತ್ತಿರುವಾಗಲೇ ಅಮೆರಿಕ ಸಾರ್ವಜನಿಕರನ್ನು ಉದ್ದೇಶಿಸಿ ದೀರ್ಘ ಪತ್ರ ಬರೆದಿರುವ ಇರಾನ್ ಅಧ್ಯಕ್ಷ ಮಸೌದ್ ಪಜೆಶ್ಕಿಯಾನ್, ಅಮೆರಿಕನ್ನರ ವಿರುದ್ಧ ಇರಾನ್ ಯಾವುದೇ ದ್ವೇಷವನ್ನು ಹೊಂದಿಲ್ಲ ಎಂದು ಹೇಳಿದ್ದಾರೆ. ಆದರೆ  ಜಾಗತಿಕ ನಿರೂಪಣೆಗಳಲ್ಲಿ...

ಬಿಜು ಪಟ್ನಾಯಕ್ ವಿರುದ್ಧ ಹೇಳಿಕೆ : ಬೇಷರತ್ ಕ್ಷಮೆಯಾಚಿಸಿದ ಬಿಜೆಪಿ ಸಂಸದ ನಿಶಿಕಾಂತ್ ದುಬೆ

ಒಡಿಶಾದ ಮಾಜಿ ಮುಖ್ಯಮಂತ್ರಿ ಬಿಜು ಪಟ್ನಾಯಕ್ ಅವರ ಕುರಿತು ನೀಡಿದ ಹೇಳಿಕೆ ವಿರುದ್ದ ದೇಶದಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾದ ಹಿನ್ನೆಲೆ, ಬಿಜೆಪಿ ಸಂಸದ ನಿಶಿಕಾಂತ್ ದುಬೆ ಬುಧವಾರ (ಏ.1) ಬೇಷರತ್ ಕ್ಷಮೆಯಾಚಿಸಿದ್ದಾರೆ. "ಬಿಜು ಬಾಬು...

ಮಹಾರಾಷ್ಟ್ರ: ‘ನಿನ್ನ ಮಗಳನ್ನು ನನ್ನ ಬಳಿ ಕಳುಹಿಸು’; ಬಂಧಿತ ಮಹಿಳಾ ಆರೋಪಿಗೆ ಲೈಂಗಿಕ ಕಿರುಕುಳ ನೀಡಿದ್ದ ಪೊಲೀಸ್ ಅಮಾನತು 

ಮಹಾರಾಷ್ಟ್ರ: ಅಕೋಲಾದಲ್ಲಿ ನಡೆದ ಆಘಾತಕಾರಿ ಘಟನೆಯೊಂದರಲ್ಲಿ, ಕಸ್ಟಡಿಯಲ್ಲಿರುವ ಮಹಿಳೆಯೊಬ್ಬರಿಂದ ಲೈಂಗಿಕ ಕಿರುಕುಳಕ್ಕೆ ಬೇಡಿಕೆ ಇಟ್ಟಿದ್ದ ಮತ್ತು ಆಕೆಯ ಮಗಳನ್ನು ತನ್ನ ಬಳಿಗೆ ಕಳುಹಿಸುವಂತೆ ಕೇಳಿದ್ದಕ್ಕಾಗಿ ಸಹಾಯಕ ಪೊಲೀಸ್ ಸಬ್-ಇನ್ಸ್‌ಪೆಕ್ಟರ್ (ಎಎಸ್‌ಐ) ಒಬ್ಬರನ್ನು ಅಮಾನತುಗೊಳಿಸಲಾಗಿದೆ.  80...

ನಾಗ್ಪುರ-ಮುಂಬೈ ಎಕ್ಸ್‌ಪ್ರೆಸ್‌ವೇಯಲ್ಲಿ ಅಪಘಾತ : 8 ಮಹಿಳಾ ಕಾರ್ಮಿಕರು ಸಾವು

ವೇಗವಾಗಿ ಬಂದ ಟ್ರಕ್ ಟೆಂಪೋಗೆ ಡಿಕ್ಕಿ ಹೊಡೆದ ಪರಿಣಾಮ ಎಂಟು ಮಹಿಳಾ ಕಾರ್ಮಿಕರು ಸಾವನ್ನಪ್ಪಿ, ಮೂವರು ಗಾಯಗೊಂಡ ಘಟನೆ ಮಹಾರಾಷ್ಟ್ರದ ಜಲ್ನಾ ಜಿಲ್ಲೆಯ ನಾಗ್ಪುರ-ಮುಂಬೈ ಎಕ್ಸ್‌ಪ್ರೆಸ್‌ವೇಯಲ್ಲಿ ಬುಧವಾರ (ಏ.1) ಸಂಜೆ ನಡೆದಿದೆ. ಎಕ್ಸ್‌ಪ್ರೆಸ್‌ವೇಯ...

ಭಾರತದಲ್ಲಿ 12 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿದ ಒರಾಕಲ್ : ಜಾಗತಿಕವಾಗಿ 30 ಸಾವಿರ ಜನರ ಕೆಲಸಕ್ಕೆ ಕುತ್ತು

ಐಟಿ ದೈತ್ಯ ಒರಾಕಲ್ ಜಾಗತಿಕ ಮಟ್ಟದಲ್ಲಿ ಸುಮಾರು 30,000 ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಿದ್ದು, ಇದು ಭಾರತದ ಮೇಲೂ ತೀವ್ರ ಪರಿಣಾಮ ಬೀರಿದೆ. ವರದಿಗಳ ಪ್ರಕಾರ, ಭಾರತವೊಂದರಲ್ಲೇ ಸುಮಾರು 12,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಕಂಪನಿಯು ತನ್ನ ಒಟ್ಟು ಉದ್ಯೋಗಿಳ...

ಗೋವಾ ನೈಟ್‌ಕ್ಲಬ್ ಬೆಂಕಿ ಪ್ರಕರಣ: ಮಾಲೀಕರಾದ ಸೌರಭ್ ಲೂತ್ರಾ, ಗೌರವ್ ಲೂತ್ರಾ ಸಹೋದರರಿಗೆ ಜಾಮೀನು

ಪಣಜಿ: ಕಳೆದ ಡಿಸೆಂಬರ್‌ನಲ್ಲಿ 25 ಜನರ ಸಾವಿಗೆ ಕಾರಣವಾದ ವಿನಾಶಕಾರಿ ಬೆಂಕಿ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಿರ್ಚ್ ಬೈ ರೋಮಿಯೋ ಲೇನ್ ನೈಟ್‌ಕ್ಲಬ್‌ನ ಮಾಲೀಕರಾದ ಸೌರಭ್ ಲೂತ್ರಾ ಮತ್ತು ಗೌರವ್ ಲೂತ್ರಾ ಅವರಿಗೆ...

ಲೈಂಗಿಕ ದೌರ್ಜನ್ಯ ಆರೋಪ: ಮಲಯಾಳಂ ಚಲನಚಿತ್ರ ನಿರ್ದೇಶಕ ರಂಜಿತ್ ಬಾಲಕೃಷ್ಣನ್ 14 ದಿನಗಳ ನ್ಯಾಯಾಂಗ ಬಂಧನಕ್ಕೆ 

ಕೇರಳ: ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಯಾಳಂ ನಿರ್ದೇಶಕ ಮತ್ತು ನಿರ್ಮಾಪಕ ರಂಜಿತ್ ಬಾಲಕೃಷ್ಣನ್ ಅವರನ್ನು ಬುಧವಾರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಪ್ರಸ್ತುತ ಅವರನ್ನು ಎರ್ನಾಕುಲಂ ಸಬ್ ಜೈಲಿನಲ್ಲಿ ಇರಿಸಲಾಗಿದೆ.  ಜನವರಿ...