Homeಮುಖಪುಟಬೋಧನಾ ಕೆಲಸದಿಂದ ವಜಾ: ಬದುಕು ಸಾಗಿಸಲು ಬಾಳೆಹಣ್ಣು ಮಾರಾಟ ಆರಂಭಿಸಿದ ಶಿಕ್ಷಕ!

ಬೋಧನಾ ಕೆಲಸದಿಂದ ವಜಾ: ಬದುಕು ಸಾಗಿಸಲು ಬಾಳೆಹಣ್ಣು ಮಾರಾಟ ಆರಂಭಿಸಿದ ಶಿಕ್ಷಕ!

- Advertisement -
- Advertisement -

ಆಂಧ್ರಪ್ರದೇಶದ ನೆಲ್ಲೂರಿನ ನಾರಾಯಣ ಶಾಲೆಯಲ್ಲಿ 15 ವರ್ಷಗಳಿಂದ ತೆಲುಗು ಭಾಷಾ ಬೋಧನೆ ಮಾಡುತ್ತಿರುವ ಶಿಕ್ಷಕ ವೆಂಕಟಸುಬ್ಬಯ್ಯ ಅವರು ಈಗ ಕೆಲಸ ಕಳೆದುಕೊಂಡಿದ್ದಾರೆ. ಏಕೆಂದರೆ ಇಂತಿಷ್ಟು ವಿದ್ಯಾರ್ಥಿಗಳನ್ನು ನೀವು ಈ ವರ್ಷ ದಾಖಲಾತಿ ಮಾಡಲೇಬೇಕೆಂಬ ಟಾರ್ಗೆಟ್‌ ಅನ್ನು ಅವರು ಪೂರೈಸಲು ವಿಫಲರಾಗಿದ್ದಾರೆ. ಅದಕ್ಕೆ ಮತ್ತೂ ಕಾರಣ ಜನರ ಆರ್ಥಿಕ ಪರಿಸ್ಥಿತಿ ದಿನೇ ದಿನೇ ಕುಸಿಯುತ್ತಿರುವುದು. ಇದಕ್ಕೆ ಕಾರಣರಾರು?

ವೆಂಕಟಸುಬ್ಬಯ್ಯ ಸುಮಾರು 15 ವರ್ಷಗಳಿಂದ ಹೈಸ್ಕೂಲ್ ವಿದ್ಯಾರ್ಥಿಗಳಿಗೆ ತೆಲುಗು ಕಲಿಸಿದ್ದಾರೆ. ಲಾಕ್‌ಡೌನ್ ಪ್ರಾರಂಭವಾದಾಗಲೂ ಸಹ ಅವರು ಆನ್‌ಲೈನ್ ತರಗತಿಗಳ ಮೂಲಕ ನೆಲ್ಲೂರಿನ ನಾರಾಯಣ ಶಾಲೆಯಲ್ಲಿ ತಮ್ಮ ವಿದ್ಯಾರ್ಥಿಗಳಿಗೆ ಬೋಧನೆ ಮುಂದುವರೆಸಿದ್ದರು. ಆದರೆ ಯಾವಾಗ ದಾಖಲಾಗಿತ ಕಡಿಮೆಯಾಯಿತೊ ಅವರನ್ನು ಮನೆಗೆ ಕಳಿಸಲಾಯಿತು. ತಮ್ಮ ಮಗನ ವೈದ್ಯಕೀಯ ವೆಚ್ಚಕ್ಕಾಗಿ ಸಾಲ ಮಾಡಿಕೊಂಡಿದ್ದ ಅವರು ಕೆಲಸ ಕಳೆದುಕೊಂದು ಅಕ್ಷರಶಃ ಬೀದಿಗೆ ಬಿದ್ದರು. ಬದುಕಿನ ಬಂಡಿ ಸಾಗಿಸಲು ಅವರು ಈಗ ಬಾಳೆಹಣ್ಣು ಮಾರಾಟವನ್ನು ಆರಂಭಿಸಿದ್ದಾರೆ.

ಆಸರೆಗೆ ಬಂದ ಹಳೇ ವಿದ್ಯಾರ್ಥಿಗಳು

ವೆಂಕಟಸುಬ್ಬಯ್ಯನವರ ಪರಿಸ್ಥಿತಿ ನೋಡಿದ ಅವರ ಮಾಜಿ ವಿದ್ಯಾರ್ಥಿಗಳು ಕರಗಿದ್ದಾರೆ. ಎಷ್ಟೇ ಬಾಳೆಹಣ್ಣು ಮಾರಿದರೂ ಸಹ ಸದ್ಯದ ಅವರ ಸಾಲ ತೀರಿ, ಅವರ ಆರ್ಥಿಕ ಪರಿಸ್ಥಿತಿ ಉತ್ತಮಗೊಳ್ಳುವುದು ಕಷ್ಟವಿದೆ. ಇದನ್ನು ಅರಿತ ಅವರ 150 ಹಳೆಯ ವಿದ್ಯಾರ್ಥಿಗಳು ಸೇರಿ 86,300 ರೂಗಳನ್ನು ಒಟ್ಟುಗೂಡಿಸಿ ಕೊಟ್ಟಿದ್ದಾರೆ. ಆದರೆ ವೆಂಕಟಸುಬ್ಬಯ್ಯನವರು ಅದನ್ನು ಪಡೆಯಲು ನಿರಾಕರಿಸಿ, ಪರಿಸ್ಥಿತಿ ಭೀಕರವಾಗಿದೆ ಇದು ನಿಮಗೆ ಉಪಯೋಗಕ್ಕೆ ಬರುತ್ತದೆ ಇಟ್ಟುಕೊಳ್ಳಿ ಎಂದರೆ ಒಪ್ಪದ ವಿದ್ಯಾರ್ಥಿಗಳು ಬಲವಂತವಾಗಿ ತಮ್ಮ ಶಿಕ್ಷಕರಿಗೆ ನೀಡಿದ್ದಾರೆ.

“ಬಾಳೆಹಣ್ಣುಗಳನ್ನು ಮಾರಾಟ ಮಾಡುವುದು ತಾತ್ಕಾಲಿಕ ಕೆಲಸ. ವರ್ಷಗಳ ಹಿಂದಿನ ಅನೇಕ ಮಾಜಿ ವಿದ್ಯಾರ್ಥಿಗಳು ನನಗೆ ಸಹಾಯ ಮಾಡಲು ಬಯಸಿದರೆ, ನಾನು ಶಿಕ್ಷಕನಾಗಿ ಅವರ ಮೇಲೆ ಪ್ರಭಾವ ಬೀರಿರಬೇಕು. ಕಡಿಮೆ ಸಂಬಳ ಸಿಕ್ಕರೂ ಸರಿಯೇ ನಾನು ಅಂತಿಮವಾಗಿ ಬೋಧನೆಗೆ ಹಿಂತಿರುಗಲು ಬಯಸುತ್ತೇನೆ ”ಎಂದು ವೆಂಕಟಸುಬ್ಬಯ್ಯ ಹೇಳುತ್ತಾರೆ.

ಲಾಕ್‌ಡೌನ್‌ ತಂದಿಟ್ಟ ಸಂಕಷ್ಟ

COVID-19 ಲಾಕ್‌ಡೌನ್ ಪ್ರಾರಂಭವಾದಾಗ, ಮಾರ್ಚ್ 29 ರಿಂದ ನಾರಾಯಣ ಶಾಲೆಯಲ್ಲಿ ಆನ್‌ಲೈನ್ ತರಗತಿಗಳು ಪ್ರಾರಂಭವಾದವು ಎಂದು ವೆಂಕಟಸುಬ್ಬಯ್ಯ ಹೇಳುತ್ತಾರೆ. ತರಗತಿಗಳು ಮುಗಿಯುವ ಕೆಲವು ದಿನಗಳ ಮೊದಲು ಮೇ 14 ರಂದು ಶಾಲಾ ಆಡಳಿತ ಮಂಡಳಿ ವೆಂಕಟಸುಬ್ಬಯ್ಯ ಮತ್ತು ಅವರ ಐದು ಸಹೋದ್ಯೋಗಿಗಳೊಂದಿಗೆ ಆನ್‌ಲೈನ್‌ನಲ್ಲಿ ಸಭೆ ನಡೆಸಿತು. ಅವರ “ಕಾರ್ಯಕ್ಷಮತೆ ಅತೃಪ್ತಿಕರವಾಗಿರುವುದರಿಂದ” ಅವರು ಇನ್ನು ಮುಂದೆ ಕೆಲಸ ಮಾಡುವುದನ್ನು ಮುಂದುವರಿಸಬೇಕಾಗಿಲ್ಲ ಎಂದು ಅವರಿಗೆ ತಿಳಿಸಲಾಯಿತು.

ಅಂದರೆ ಇಲ್ಲಿ ಶಾಲೆಯ ಆಡಳಿತ ಮಂಡಳಿ ಇವರ ಬೋಧನಾ ಸಾಮರ್ಥ್ಯಗಳನ್ನು ಉಲ್ಲೇಖಿಸಿಲ್ಲ. ಬದಲಾಗಿ ಶಾಲೆಗೆ ಹೊಸ ದಾಖಲಾತಿ ಮಾಡಿಸುವಲ್ಲಿ ಇವರು ತಮ್ಮ ಟಾರ್ಗೆಟ್‌ ಮುಟ್ಟಿಲ್ಲ ಎಂಬುದು ಆಡಳಿತ ಮಂಡಳಿಯ ಆಕ್ಷೇಪಣೆ. ಲಾಕ್‌ಡೌನ್‌ ಸಮಯದಲ್ಲಿ ನಾವು ಮನೆ ಮನೆಗೆ ಹೋಗಿ ಪೋಷಕರ ಮನವೊಲಿಸಲು ಸಾಧ್ಯವಾಗುತ್ತಿಲ್ಲ, ಹೊಸ ದಾಖಲಾತಿ ಮಾಡಿಸಲು ಹೇಗೆ ಸಾಧ್ಯ, ಹಾಗಾದರೆ ನಾವು ಅಸಮರ್ಥರೆ? ಎಂಬುದು ವೆಂಕಟಸುಬ್ಬಯ್ಯನವರ ಪ್ರಶ್ನೆಯಾಗಿದೆ.

“2007 ರಲ್ಲಿ ನಾನು ಕಲಿಸಿದ್ದ ಹಳೆಯ ವಿದ್ಯಾರ್ಥಿಯ ತಂದೆ ತನ್ನ ಬಾಳೆಹಣ್ಣಗಳನ್ನು ಮಾರಾಟ ಮಾಡಲು ನನಗೆ ಅವಕಾಶ ಮಾಡಿಕೊಡುವ ಮೂಲಕ ನನಗೆ ಸಹಾಯ ಮಾಡಿದರು” ಎಂದು ತೆಲುಗು ಮತ್ತು ಸಾರ್ವಜನಿಕ ಆಡಳಿತದಲ್ಲಿ ಎರಡು ಸ್ನಾತಕೋತ್ತರ ಪದವಿಗಳನ್ನು ಪಡೆದಿರುವ ವೆಂಕಟಸುಬ್ಬಯ್ಯ ಹೇಳುತ್ತಾರೆ. ಅವರೊಂದಿಗೆ ಕೆಲಸ ಕಳೆದುಕೊಂಡ ಅವರ ಕೆಲವು ಸಹೋದ್ಯೋಗಿಗಳು ತಮ್ಮ ಗ್ರಾಮಗಳಿಗೆ ಮರಳಿದ್ದಾರೆ ಎಂದು ಅವರು ಹೇಳುತ್ತಾರೆ.

ಖಾಸಗಿ ಶಾಲೆಗಳ ಧನದಾಹಿತನ

ಶ್ರೀ ಚೈತನ್ಯ, ನಾರಾಯಣ ಮತ್ತು ಭಾಷ್ಯಾಮ್ ಶಾಲೆಗಳು ಎಂಬ ಹೆಸರಿನ ಕೆಲವೇ ಮಾಲೀಕರು ಸಾವಿರಾರು ಶಾಳೆಗಳು ಆಂಧ್ರ ತೆಲಂಗಾಣದಲ್ಲಿ ತಲೆಎತ್ತಿವೆ. ಹೆಚ್ಚಿನ ಲಾಭ ಮಾಡುವುದೇ ಈ ಶಾಲೆಗಳ ಏಕೈಕ ಗುರಿಯಾಗಿದೆ. ಹಾಗಾಗಿ ಹೆಚ್ಚಿನ ಮಕ್ಕಳ ದಾಖಲಾತಿ ಮಾಡಿಸುವಂತೆ ಶಿಕ್ಷಕರ ಮೇಲೆ ಒತ್ತಡ ಹೇರಲಾಗುತ್ತದೆ. ಟಾರ್ಗೆಟ್‌ ಮುಟ್ಟದ ಶಿಕ್ಷಕರನ್ನು ಕೆಲಸದಿಂದ ವಜಾ ಮಾಡಲಾಗುತ್ತದೆ ಎಂದು ಎಂದು ಆಂಧ್ರಪ್ರದೇಶದ ಖಾಸಗಿ ಶಾಲಾ ಶಿಕ್ಷಕರು ಆರೋಪಿಸಿದ್ದಾರೆ.

ವಿದ್ಯಾರ್ಥಿಗಳಿಂದ ಅತಿ ಹೆಚ್ಚು ಶುಲ್ಕ ವಸೂಲಿ ಮಾಡುವ ಈ ಶಾಲೆಗಳು ಶಿಕ್ಷಕರಿಗೆ ಪೂರ್ಣ ವೇತನ ನೀಡದೇ ಸತಾಯಿಸುತ್ತಿದ್ದಾರೆ. ಶಿಕ್ಷಕ ರು ಶಾಲೆಯಲ್ಲಿ ಪಾಠ ಮಾಡುವುದಲ್ಲದೇ ಮನೆ ಮನೆಗೆ ತೆರಳಿ ದಾಖಲಾತಿ ಮಾಡಿಸುವುದೇ ಪ್ರಧಾನ ಕೆಲಸವಾಗಿದೆ ಎಂಬ ದೊಡ್ಡ ಆರೋಪ ಈ ಶಾಲೆಗಳ ಮೇಲಿದೆ. ಲಾಕ್‌ಡೌನ್‌ನಂತಹ ಸಂಕಷ್ಟದ ಕಾಲದಲ್ಲಿಯೂ ಸಹ ಈ ಶಾಲೆಗಳು ಧನದಾಹಿತನಕ್ಕೆ ಬಿದ್ದು ಶಿಕ್ಷಕರನ್ನು ನಿರುದ್ಯೋಗಿಗಳನ್ನಾಗಿ ಮಾಡುತ್ತಿವೆ.

ಇಂತಹ ಸಂಕಷ್ಟದ ಸಮಯದಲ್ಲಿ ಖಾಸಗಿ ಶಿಕ್ಷಕ ಸಂಘಗಳು ರಾಜ್ಯ ಸರ್ಕಾರದ ಸಹಾಯವನ್ನು ಕೋರಿವೆ. ಈ ಸಮಯದಲ್ಲಿ ಹೆಚ್ಚಿನ ಬೋಧನಾ ಉದ್ಯೋಗಗಳು ಲಭ್ಯವಿಲ್ಲದ ಕಾರಣ ಸರ್ಕಾರವು ಕೆಲವು ಜೀವನೋಪಾಯ ಆಯ್ಕೆಗಳನ್ನು ನೀಡುವ ಮೂಲಕ ನಮಗೆ ಬೆಂಬಲ ನೀಡಬೇಕೆಂದು ನಾನು ಬಯಸುತ್ತೇನೆ ”ಎಂದು ವೆಂಕಟಸುಬ್ಬಯ್ಯ ಒತ್ತಾಯಿಸುತ್ತಾರೆ.


ಮತ್ತಷ್ಟು ಸುದ್ದಿಗಳು

JNUನಲ್ಲಿ ಸರಸ್ವತಿ ನಾಗರಿಕತೆ ವೆಬಿನಾರ್: ಪ್ರಾಧ್ಯಾಪರು, ವಿದ್ಯಾರ್ಥಿಗಳಿಂದ ತೀವ್ರ ವಿರೋಧ

ಮೋಡಿಯ ಮಾಡಿದವರ ಪರಸಂಗ: ಡಿಜಿಟಲ್ ಕಾಲದಲ್ಲೊಂದು ತಾರತಮ್ಯದ ತಕರಾರು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...