Homeಅಂಕಣಗಳುನಮ್ಮ ತೋಟದ ಸಾಲಿಗೆ ನೀವೂ ಬನ್ನಿನಮ್ಮ ತೋಟದ ಸಾಲಿಗೆ ನೀವೂ ಬನ್ನಿ-7: ಬೇಲಿಯೆಂದರೆ ಹಸಿರ ಕಲೆ, ಇಲಿ, ಇಲಿಬುಲ್ಡೆ ಇತ್ಯಾದಿ...

ನಮ್ಮ ತೋಟದ ಸಾಲಿಗೆ ನೀವೂ ಬನ್ನಿ-7: ಬೇಲಿಯೆಂದರೆ ಹಸಿರ ಕಲೆ, ಇಲಿ, ಇಲಿಬುಲ್ಡೆ ಇತ್ಯಾದಿ…

ಹಸಿರು ಬೇಲಿಗಳಿರುವ ತೆಂಗಿನ ತೋಟದಲ್ಲಿ ನುಸಿ ರೋಗ ನಿಯಂತ್ರಣದಲ್ಲಿರುತ್ತದೆ ಎಂದು ನಮ್ಮ ಅನುಭವಕ್ಕೆ ಬಂದಿದೆ.

- Advertisement -
- Advertisement -

ಹಸಿರು ಬೇಲಿಗಳು ತೋಟ ಹೊಲಗಳ ಜೀವಾಳ. ಆದರೀಗ ಮುಳ್ಳು ತಂತಿ ಬೇಲಿಗಳು ಹೆಚ್ಚಾಗಿವೆ. ನಾವು ಹಸಿರು ಬೇಲಿಗಳನ್ನು ಉಳಿಸಿಕೊಂಡಿದ್ದೇವೆ  ಏಕೆಂದರೆ ಅವು ನಮಗೆ ಬೇಕಾದಷ್ಟು ಹಸಿರು ಸೊಪ್ಪು ಕೊಡುತ್ತವೆ, ಕೀಟಗಳ ನಿಯಂತ್ರಣ ಮಾಡುತ್ತವೆ, ಗಾಳಿತಡೆಗಳಾಗಿ ನಿಂತು ಮಣ್ಣಿನ ಸವಕಳಿ ಆಗದಂತೆ ನೋಡಿಕೊಳ್ಳುತ್ತವೆ, ಆಗೊಮ್ಮೆ ಈಗೊಮ್ಮೆ ಜೇನು ತುಪ್ಪ ಕೊಡುತ್ತವೆ. ಬೇಲಿಗೆ ಹೊಂದಿಕೊಂಡಂತೆ ಅನೇಕ ಜಾತಿಯ ಗಿಡಮರಗಳು ಅವರಷ್ಟಕ್ಕೆ ಅವು ಬೆಳೆದು ನಿಲ್ಲುತ್ತವೆ.

ಬೇಲಿಯನ್ನು ವರ್ಷಕ್ಕೆ ಎರಡು ಮೂರು ಬಾರಿ ಸವರಿದರೂ ಅದು ಚಿಮ್ಮಿ ಚಿಗುರಿ ಬೆಳೆಯುತ್ತದೆ. ಯಾಕೆಂದರೆ ಅದರ ಅಡಿಯಲ್ಲಿ ಅಪಾರ ತೇವಾಂಶ ಮತ್ತು ಗೊಬ್ಬರ ಇರುತ್ತದೆ. ಅದು ನಾವು ಹಾಕಿದ್ದಲ್ಲ, ಅಲ್ಲೆ ಉತ್ಪತ್ತಿಯಾದದ್ದು ಅದಕ್ಕೆ ಆ ಬೇಲಿಗೆ ಅಷ್ಟು ಶಕ್ತಿ.

ಹಸಿರು ಬೇಲಿಯನ್ನು ಚಪ್ಪರದ ರೀತಿಯಲ್ಲಿ ಬಳಸಿಕೊಂಡು ಮಳೆಗಾಲದಲ್ಲಿ ಬಳ್ಳಿ ತರಕಾರಿ ಬೆಳೆಯಬಹುದು. ಬೇಲಿಗೆ ಹೊಂದಿಕೊಂಡಂತೆ 2 ಅಡಿ ಗುಂಡಿ ತೆಗೆದು ಒಳ್ಳೆ ಗೊಬ್ಬರ ತುಂಬಿ ಬಿಟ್ಟುಕೊಂಡರೆ, ಒಂದೆರಡು ಮಳೆಬಿದ್ದ ನಂತರ ಹದಗೊಂಡ ಆ ಗುಂಡಿಗೆ ತುಪ್ಪೀರೆ, ಹಿತ್ತಲವರೆ, ಕುಂಬಳ,ತೊಂಡೆ, ಶಂಬೆ ಮುಂತಾದ ಬಳ್ಳಿ ತರಕಾರಿ ಬೀಜಗಳನ್ನು ಊರಿದರೆ ಹೆಚ್ಚು ಹಾರೈಕೆಯಿಲ್ಲದೆ ಬೇಲಿಗೆ ಹಬ್ಬಿ ರುಚಿಕರ, ವಿಷರಹಿತ ತರಕಾರಿ ಕೊಡುತ್ತವೆ. ತೋಟಕ್ಕೆ ಹೋದರೆ ಆ ಬೇಲಿಸಾಲಿಗೆ ಹೋಗದೆ ಹಿಂದಿರುಗದಂತಾ ಸುಸಮಯ ಒದಗಿಬರುತ್ತದೆ. ತರತರದ ತರಕಾರಿಗಳು ನಮ್ಮ ತರಕಾರಿ ಬ್ಯಾಗಿಗೆ ಬಂದು ತುಂಬಿಕೊಳ್ಳುತ್ತವೆ. ಮಳೆ ಆಶ್ರಯದಲ್ಲೆಯೇ ಬೆಳೆದ ಈ ತರಕಾರಿ ರುಚಿಗೆ ಯಾವುದೂ ಸಮವಲ್ಲ. ಚಪ್ಪರ ಹಾಕುವ ಉಸಾಬರಿಯಿಲ್ಲ, ಮತ್ತೆ ಗೊಬ್ಬರ ಕೊಡುವ ಗೊಡವೆ ಇಲ್ಲ, ಕೀಟನಾಶಕದ ಸುದ್ದಿಯಿಲ್ಲ, ಅನಿವಾರ್ಯವಾದರೆ ಮಾತ್ರ ಒಂದೆರಡು ಸಲ ನೀರು ಕೊಡಬೇಕಾಗಬಹುದು ಅಷ್ಟೆ.

ನಮ್ಮ ತೋಟಕ್ಕೆ ಬಂದ ಕೆಲವರು “ನಿಮಗೆ ಬುದ್ಧಿ ಗಿದ್ದಿ ಇದೆಯಾ ಈ ದಾರಿ ಕಡೆಯ ಬೇಲಿಗೆ ತರಕಾರಿ ಬಳ್ಳಿಗಳನ್ನ ಹಬ್ಬಿಸಿದ್ದೀರಲ್ಲ, ಜನ ತರಕಾರಿ ಕದಿಯದೆ ಬಿಟ್ಟಾರೆಯೇ?” ಎಂದು ತಗಾದೆ ತೆಗಿಯುತ್ತಾರೆ. ತೋಟದ ಮಧ್ಯೆ ಈ ಬಳ್ಳಿ ಹಬ್ಬಿಸಲು ಪುಕ್ಕಟೆ ಸಲಹೆ ಕೊಡುತ್ತಾರೆ. ನಿಜಕ್ಕು ಇದು ವಿಚಿತ್ರ. ಬಳ್ಳಿಗಳು ಬೇಲಿಯಾಚೆ ಹಬ್ಬಿ ಆಚೆಯ ಬಿಸಿಲಿನ ಬಳಕೆ ಮಾಡಿಕೊಂಡು ಕಾಯಿ ಕಸುರು ಬಿಟ್ಟು ದಾರಿ ಹೋಕರನ್ನು ಕರೆದು ತರಕಾರಿ ಕೊಟ್ಟರೆ ನಮಗೇನು ತೊಂದರೆ, ಇಷ್ಟಕ್ಕೂ ಯಾರು ನಮ್ಮ ಬೇಲಿಗೆ ಕೈಹಾಕಿ ಕದ್ದು ಕಿತ್ತುಕೊಂಡು ಹೋದದ್ದನ್ನು ನಾವು ಕಾಣೆವು. ಪುಕ್ಕಟೆ ಸಲಹೆ ಕೊಡುವ ಜನರೂ ಸೇರಿದಂತೆ ಎಲ್ಲರೂ ಬೇಲಿಗಳಿಗೆ ತರಕಾರಿ ಬಳ್ಳಿ ಹಬ್ಬಿಸಿದರೆ ಅದರ ಮಜ ಹೇಗಿರುತ್ತದೆ?  ಬೀಜ ಬಿತ್ತಬೇಕಷ್ಟೆ. ಅದಕ್ಕೆ ಮನಸ್ಸು ಇರಬೇಕು, ಒಳ್ಳೆಯದನ್ನು ತಿನ್ನುವ ಪುಣ್ಯವಿರಬೇಕು.

ಬೇಲಿಗಳಿರುವ ತೆಂಗಿನ ತೋಟದಲ್ಲಿ ನುಸಿ ರೋಗ ನಿಯಂತ್ರಣದಲ್ಲಿರುತ್ತದೆ ಎಂದು ನಮ್ಮ ಅನುಭವಕ್ಕೆ ಬಂದಿದೆ. ತೋಟದಲ್ಲಿ ಹುಲ್ಲು ಸೊಪ್ಪು ಇದ್ದರೆ ನುಸಿ ತನ್ನ ಜಾಲವನ್ನು ಇಲ್ಲಿಗೆ ವರ್ಗಾಯಿಸುವ ಅವಕಾಶವಿರುತ್ತದೆ.

ಎಷ್ಟೋ ಜನ ಬೇಲಿ ಎಂದರೆ ಮುಳ್ಳು ಎಂದು ತಿಳಿದಿದ್ದಾರೆ. ನಿಜ ಈ ಹಿಂದೆ ಬಿದಿರು ಮುಳ್ಳು, ಎರದೆ ಮುಳ್ಳು, ಜಾಲಿಮುಳ್ಳುಗಳನ್ನು ಬಳಸಿ ಬೇಲಿ ಕಟ್ಟುವ ಸಾಹಸ ಮಾಡುತ್ತಿದ್ದರು, ಅವು ಒಂದೆರಡು ವರ್ಷಕ್ಕೆ ಕರಕಲಾಗಿ ಹೋಗುತ್ತಿದ್ದವು. ಮತ್ತೆ ಮತ್ತೆ ಕಟ್ಟುವ ಉಸಾಬರಿ ಇರುತ್ತಿತ್ತು. ಆಗಲೂ ಬುದ್ಧಿವಂತ ರೈತರು ಈ ಮುಳ್ಳು ಬೇಲಿಯ ತಂಟೆಗೆ ಹೋಗದೆ, ಚಿಗುರು ಕಡ್ಡಿಗಳ ಸಹಾಯದಿಂದ ಹಸಿರು ಬೇಲಿಯನ್ನು ಸೃಷ್ಟಿಸುತ್ತಿದ್ದರು. ಅದರ ಎಲ್ಲಾ ಲಾಭಗಳನ್ನು ಪಡೆಯುತ್ತಿದ್ದರು.

ಈ ಬಗೆಯ ಬೇಲಿಗಳಿದ್ದರೆ ಇಲಿಗಳು ಮಾಮೇರಿ ಹೆಚ್ಚುತ್ತವೆ ಎಂಬ ಆಪಾದನೆ ಇದೆ. ಇದು ನಮ್ಮ ತೋಟದ ವಿಷಯದಲ್ಲಿ ಸಂಪೂರ್ಣ ಸುಳ್ಳು. ನಮ್ಮ ಇಡೀ ತೋಟವೇ ಬೇಲಿಯ ಲಕ್ಷಣಗಳನ್ನು ಹೊಂದಿದೆ. ಇವರ ಪ್ರಕಾರ ಇಲಿಗಳ ಸಾಮ್ರಜ್ಯವೇ ಇಲ್ಲಿ ನೆರೆಯಬೇಕಾಗಿತ್ತು. ನಮ್ಮ ತೋಟದಲ್ಲಿ ಇಲಿಗಳೇ ಇಲ್ಲ ಎನ್ನುವಂತಿಲ್ಲ, ಇವೆ ನಿಯಂತ್ರಣದಲ್ಲಿವೆ.

ನಮ್ಮಪ್ಪ ಉಳುಮೆ ಮಾಡುತ್ತಿದ್ದ ತೋಟದಲ್ಲಿ ಇಲಿಗಳ ಉಪಟಳ ಎಲ್ಲೆ ಮೀರುತ್ತಿತ್ತು. ಅವು ಎಳನೀರು ಕುಡಿದು ಸುರಿಸುವ ಬುಲ್ಡೆಗಳನ್ನು ನೋಡಿ ಅವುಗಳ ಮೇಲೆ ಸಮರ ಸಾರುವ ತೀರ್ಮಾನ ಮಾಡುತ್ತಿತ್ತು. ಹದವಾಗಿ ಹುರಿದ ನೆಲಗಡಲೆ ಕಾಯಿಗಳನ್ನು ಸಿಪ್ಪೆಬೆರೆಸೆ ಕುಟ್ಟಿ ಪುಡಿಮಾಡಿ, ಬರ್ನ್‌ ಆದ ಬುಲ್ಡೆ ಬಲ್ಬುಗಳನ್ನೂ ಸಣ್ಣಗೆ ಪುಡಿಮಾಡಿ, ಎರಡನ್ನು ಮಿಶ್ರಣ ಮಾಡುತ್ತಿದ್ದರು. ಇದಕ್ಕೆ ಹುಚ್ಚಳ್ಳು ಪುಡಿಯನ್ನು ಬೆರಸುತ್ತಿದ್ದರು. ಈ ಬಗೆಯ ಘಮಗುಟ್ಟುವ ಪರಿಕರವು ಇಲಿಗಳನ್ನು ಆಕರ್ಷಿಸಿ ತಿನ್ನುವಂತೆ ಮಾಡುತ್ತದೆಂದೂ, ತಿಂದ ಇಲಿಗಳು ನೆಗೆದು ಬೀಳುತ್ತವೆಂದು ಅವರ ಊಹೆ. ಸದರಿ ʻಇಲಿಬಾಂಬುʼ ತಯಾರಾಗುತ್ತಿರಬೇಕಾದರೆ ಆ ಘಮಗುಟ್ಟುವ ಪದಾರ್ಥದಿಂದ ಆಕರ್ಷಿತರಾಗಿ ನಾವೇ ಅದನ್ನು ತಿಂದುಬಿಡುವ ವಾಂಚಲ್ಯಕ್ಕೆ ಒಳಗಾಗುತ್ತಿದ್ದುದುಂಟು. ಇಂಥ ಇಲಿಪಾತಕ ಪುಡಿಯನ್ನು ಸಣ್ಣ ಸಣ್ಣ ಬಟ್ಟೆ ಗಂಟುಗಳಾಗಿಸಿ ರೆಡಿ ಮಾಡಿಕೊಳ್ಳುತ್ತಿದ್ದ ನಮ್ಮಪ್ಪ ಆ ಸಂದರ್ಭದಲ್ಲಿ ಮಾತೇ ಆಡುತ್ತಿರಲಿಲ್ಲ, ಯಜ್ಞಧ್ಯಾನದಲ್ಲಿ ತೊಡಗುತ್ತಿದ್ದರು.

PC : Gardeners World

ಈ ಪುಟ್ಟ ಪುಟ್ಟ ಬಟ್ಟೆ ಗಂಟುಗಳನ್ನು ಇಲಿಗೆ ಕಾಣುವಂತೆ ಇಡುವುದು ಸವಾಲಿನ ಕೆಲಸವಾಗಿತ್ತು. ಇಲಿಗಳು ಮರಗಳಿಂದ ಇಳಿಯುವುದೇ ಅಪರೂಪವಾದ್ದರಿಂದ ನೆಲದಲ್ಲಿ ಈ ಗಂಟುಗಳನ್ನಿಟ್ಟರೆ ಯಾವ ಪ್ರಯೋಜನವೂ ಇರುವುದಿಲ್ಲ. ಆದ್ದರಿಂದ ಮರದ ಮೇಲಕ್ಕೆ ಗಂಟುಗಳನ್ನು ಎಸೆಯಲು ಶತ ಪ್ರಯತ್ನ ಮಾಡುತ್ತಿದ್ದ ಅಪ್ಪ ಈ ಗಂಟುಗಳಿಗೆ ಕಲ್ಲ ಕಟ್ಟಿ ಎಸೆಯುತ್ತಿತ್ತು. ಬಿದಿರಿನ ಜವಣಿಗೆಯ ತುದಿಗೆ ಗಂಟುಗಳನ್ನು ಸಿಕ್ಕಿಸಿ ನಿಧಾನವಾಗಿ ತೆಂಗಿನ ಸುಳಿಗೆ ಸಾಗಿಸಲು ಯತ್ನಿಸುತ್ತಿತ್ತು. ಈ ಯತ್ನಗಳು ವಿಫಲವಾದ ಮೇಲೆ ತಾನೇ ಆ ಮರಗಳನ್ನು ಹತ್ತಿ ಆ ಗಂಟುಗಳನ್ನು ಇಟ್ಟು ಇಲಿಗಳನ್ನು ಆಹ್ವಾನಿಸುತ್ತಿತ್ತು. ಇಷ್ಟಕ್ಕೆ ಸುಮ್ಮನಾಗದ ಅವರು ತೆಂಗಿನ ಸುಳಿಯಲ್ಲಿ ಕಟ್ಟಿರಬಹುದಾದ ಇಲಿಯ ಗೂಡುಗಳನ್ನು ಕಿತ್ತು ನೇರ ಕಾರ್ಯಾಚರಣೆಗೆ ಇಳಿಯುತ್ತಿತ್ತು. ಒಮ್ಮೊಮೆ ಆ ಗೂಡುಗಳಲ್ಲಿ ನಿದ್ದೆ ಮಾಡುತ್ತಿದ್ದ ಇಲಿಗಳು ದಿಢೀರ್‌ ಆಕ್ರಮಣದಿಂದ ತತ್ತರಿಸಿ ಮರದಿಂದ ಕೆಳಕ್ಕೆ ಹಾರಿಬಿಡುತ್ತಿದ್ದವು. ಕೆಳಗೆ ಕೊರಂಬಳೆ ಕುಂಚಿಕೆಯನ್ನು ಹಿಡಿದು ಸಿದ್ಧವಾಗಿರುತ್ತಿದ್ದ ನಾವು ಕೂಗಾಡುತ್ತಾ ಅವುಗಳನ್ನು ಸದೆಬಡಿಯುವ ಪ್ರಯತ್ನ ಮಾಡುತ್ತಿದ್ದೆವು. ಇಂಥ ಪ್ರಯತ್ನಗಳು ವಿಫಲವಾಗುತ್ತಿದ್ದುದೇ ಹೆಚ್ಚು. ನಮ್ಮಪ್ಪನಾದರೋ ಒಮ್ಮೊಮ್ಮೆ ಇಲಿಗಳನ್ನು ಕೈಯಲ್ಲಿಯೇ ಹಿಡಿದು ಸಾಯಿಸುವಷ್ಟು ಸಿಟ್ಟಿನಿಂದ ವ್ಯಗ್ರಗೊಳ್ಳುತ್ತಿದ್ದರು. ಮರದಡಿಯಲ್ಲಿ ಬೀಳುತ್ತಿದ್ದ ಇಲಿಬುಲ್ಡೆಗಳ ಸುರಿಮಳೆ ಇಲಿಗಳನ್ನು ಹೀಗೆ ಸಾಯಿಸಲು ಪ್ರೇರಣೆಯಾಗಿತ್ತು. ಅವರಂತ ರೈತರು ಬೆಳೆದ ಬೆಳೆಗಳು ಹೀಗೆ ಇಲಿಗಳ ಸಾಕಣೆಗೆ ಬಳಕೆಯಾಗುವುದು ಯಾವ ಸರ್ಕಾರಗಳ ಗಮನಕ್ಕೂ ಬಂದಂತೆ ಕಾಣುವುದಿಲ್ಲ. ಅದಕ್ಕೇ ಅವರು ಹೀಗೆ ಹೇಳುತ್ತಿದ್ದರು, “ಜನರನ್ನೆಲ್ಲ ಸಾಕುವುದರ ಜೊತೆಗೆ, ಇಲಿ, ಹೆಗ್ಗಣ, ನಾಯಿನರಿ, ಹಕ್ಕಿ ಪಕ್ಷಿ, ಹಂದಿ ಕರಡಿ, ಮುಂತಾದುವುಗಳನ್ನು ರೈತರು ಸಾಕುತ್ತಿರುವುದರಿಂದ ಅದಕ್ಕೆ ಅನುದಾನ ಕೊಡಲಿ” ಎಂದು.

ನಾವೀಗ ಇಲಿಗಳಿಗೆ ಈ ಬಗೆಯ ಯಾವ ಪುಡಿಗಳನ್ನು, ವಿಷಗಳನ್ನು ಇಡುತ್ತಿಲ್ಲ. ಮರ ಹತ್ತಿ ಇಲಿಗಳ ಗೂಡಿಗೆ ಕೈ ಹಾಕುವಷ್ಟು ಯೋಗ್ಯತೆಯೂ ನಮ್ಮಲ್ಲಿಲ್ಲ. ಆದರೂ ಇಲಿಗಳು ನಿಯಂತ್ರಣದಲ್ಲಿವೆ. ನಮ್ಮ ತೋಟದಲ್ಲಿ ವಿಷ ಇಡುತ್ತಿಲ್ಲ ಎಂಬ ವಿಷಯ ಗೂಬೆಗಳಿಗೆ, ಸಾಂಬಾರ್ಗಾಗೆಗಳಿಗೆ, ಹಾವುಗಳಿಗೆ, ಹದ್ದು ಲಗಡಗಳಿಗೆ, ಕಾಡುಬೆಕ್ಕುಗಳಿಗೆ ಮುಂತಾಗಿ ಇಲಿ ಹಿಡಿದು ತಿನ್ನುವ ಜೀವಿಗಳಿಗೆ ಗೊತ್ತಾಗಿರಬೇಕು. ಅವು ನಮ್ಮ ಅರಿವಿಗೆ ಬಾರದಂತೆ ಇಲಿಗಳ ಊಟ ಮಾಡುತ್ತಿರಬೇಕು.

  • ಕೃಷ್ಣಮೂರ್ತಿ ಬಿಳಿಗೆರೆ

(ಹುಳಿಯಾರು ಬಿಎಂಎಸ್‌ ಸರ್ಕಾರಿ ಪದವಿ ಕಾಲೇಜಿನ ಪ್ರಾಂಶುಪಾಲರು. ತಮ್ಮ ತೋಟದಲ್ಲಿ ಸಹಜ ಕೃಷಿ ಮಾಡುತ್ತಲೇ ಕೃಷಿ ಶೋಧನೆಯಲ್ಲಿ ತೊಡಗಿಸಿಕೊಂಡಿರುವ ಇವರು ಸಾವಿರ ಕಣ್ಣಿನ ನವಿಲು, ಕಿಂಚಿತ್ತು ಪ್ರೀತಿಯ ಬದುಕು, ದಾಸಯ್ಯ ಇದು ಕನಸೇನಯ್ಯ, ಧರೆ ಮೇಲೆ ಉರಿಪಾದ, ಮಳೆ ನೀರ ಕುಡಿ, ಅನ್ನ ದೇವರ ಮುಂದೆ, ಮರದಡಿಯ ಮನುಷ್ಯ ಸೇರಿದಂತೆ ಹಲವು ಪುಸ್ತಕಗಳನ್ನು ರಚಿಸಿದ್ದಾರೆ.)


ಇದನ್ನೂ ಓದಿ: ನಮ್ಮ ತೋಟದ ಸಾಲಿಗೆ ನೀವೂ ಬನ್ನಿ-2: ಈ ಹಕ್ಕಿಗಳು ಎಲ್ಲಿರುತ್ತವೋ ಏನೋ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....

ಬಿಹಾರ: ಸರ್ಕಾರಿ ಶಾಲಾ ಶಿಕ್ಷಕರಿಗೆ ಬೀದಿ ನಾಯಿಗಳನ್ನು ಎಣಿಸುವ ಹೆಚ್ಚುವರಿ ಕರ್ತವ್ಯ ವಹಿಸಿದ ಪುರಸಭೆ  

ಪಾಟ್ನಾ: ಸುಪ್ರೀಂ ಕೋರ್ಟ್ ಬೀದಿ ನಾಯಿಗಳ ವಿಚಾರದಲ್ಲಿ ಮಹತ್ವದ ಆದೇಶ ನೀಡಿದೆ. ಸಾರ್ವಜನಿಕ ರಸ್ತೆಗಳು, ಬೀದಿಗಳು ಬೀದಿನಾಯಿ ಮುಕ್ತವಾಗಿರಬೇಕು ಎಂದು ಹೇಳಿದೆ. ಆದರೆ ಈ ಆದೇಶ ಸರ್ಕಾರಿ ಶಾಲಾ ಶಿಕ್ಷಕರ ಪಾಲಿಗೆ ದೊಡ್ಡ...

ಮಮತಾ ಬ್ಯಾನರ್ಜಿಯ ರಾಜಕೀಯ ಸಲಹಾ ಸಂಸ್ಥೆ ಐ-ಪ್ಯಾಕ್, ಅದರ ಮುಖ್ಯಸ್ಥ ಪ್ರತೀಕ್ ಜೈನ್ ಮನೆ ಮೇಲೆ ಇಡಿ ದಾಳಿ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ...

ಉತ್ತರಪ್ರದೇಶ: ಕಬ್ಬಿನ ಗದ್ದೆಯಲ್ಲಿ ಸುಟ್ಟ, ಅರೆನಗ್ನ ಮಹಿಳೆಯ ಮೃತದೇಹ ಪತ್ತೆ: ಅತ್ಯಾಚಾರ ಮಾಡಿ ಬೆಂಕಿ ಹಚ್ಚಿರುವ ಶಂಕೆ

ಹಾಪುರ್: ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಬಹದ್ದೂರ್‌ಗಢ ಪೊಲೀಸ್ ಠಾಣೆ ವ್ಯಾಪ್ತಿಯ ಲಹಾದ್ರಾ ಗ್ರಾಮದ ಇಟ್ಟಿಗೆ ಗೂಡುಗಳ ಹಿಂದಿನ ಕಬ್ಬಿನ ಗದ್ದೆಯಲ್ಲಿ ಸುಮಾರು 30 ವರ್ಷ ವಯಸ್ಸಿನ...

ಗೋಮಾಂಸ ಸೇವನೆ ಶಂಕೆಯಲ್ಲಿ ಮಾನಸಿಕ ಅಸ್ವಸ್ಥ ವ್ಯಕ್ತಿಯ ಮೇಲೆ ಕ್ರೂರ ಹಲ್ಲೆ : ಮೂವರು ದುಷ್ಕರ್ಮಿಗಳ ಬಂಧನ

ಸಾರ್ವಜನಿಕವಾಗಿ ಹಸುವನ್ನು ಕೊಂದು, ಅದರ ಮಾಂಸವನ್ನು ತಿಂದಿದ್ದಾರೆ ಎಂದು ಆರೋಪಿಸಿ ಮಾನಸಿಕ ಅಸ್ವಸ್ಥ ವ್ಯಕ್ತಿ ಮೇಲೆ ಸ್ವಘೋಷಿತ ಗೋರಕ್ಷಕರು ಕ್ರೂರವಾಗಿ ಹಲ್ಲೆ ನಡೆಸಿದ ಘಟನೆ ರಾಜಸ್ಥಾನದ ಝಾಲಾವರ್ ಜಿಲ್ಲೆಯ ಅಕ್ಲೇರಾ ತಾಲೂಕಿನ ಕಿಶನ್‌ಪುರ...

‘ನಿಮ್ಮನ್ನು ನಂಬಿ ಬಂದ ನಕ್ಸಲ್ ಕಾರ್ಯಕರ್ತರಿಗೆ ಕೊಟ್ಟ ಮಾತು ಉಳಿಸಿಕೊಳ್ಳಿ’: ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ ಶಾಂತಿಗಾಗಿ ನಾಗರೀಕ ವೇದಿಕೆ

ಬೆಂಗಳೂರು: ‘ಮುಖ್ಯವಾಹಿನಿಗೆ ಬಂದ ಏಳೂ ಜನ ನಕ್ಸಲೀಯರು ಜೈಲಿನಲ್ಲೇ ಇದ್ದಾರೆ. ಬಹಳ ಸೊರಗಿದ್ದಾರೆ. ತೀವ್ರ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರನ್ನು ಹೋಗಿ ಕಾಣುವುದೇ ನಮ್ಮ ಪಾಲಿಗೆ ದೊಡ್ಡ ಹಿಂಸೆಯಾಗಿದೆ ಎಂದು...

ಕೋಗಿಲು ಮನೆಗಳ ನೆಲಸಮ : ಪ್ರತಿಭಟಿಸಿದ ಹೋರಾಟಗಾರರ ಮೇಲೆ ಎಫ್‌ಐಆರ್

ಕೋಗಿಲು ಬಡಾವಣೆಯಲ್ಲಿ ಬಡವರ ಮನೆಗಳ ನೆಲಸಮ ವೇಳೆ ಬಿಗುವಿನ ವಾತಾವರಣ ಸೃಷ್ಟಿಸಿದ್ದಾರೆ ಎಂಬ ಆರೋಪದ ಮೇಲೆ ಹೋರಾಟಗಾರರ ವಿರುದ್ದ ಯಲಹಂಕ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಜನಪರ ವೇದಿಕೆಯ ಮುಖಂಡರಾದ ಗೌರಮ್ಮ ಮತ್ತು ಮನೋಹರ್,...

17 ವರ್ಷದ ಮಹಿಳಾ ಅಥ್ಲೀಟ್ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಮಾನತು

ಫರಿದಾಬಾದ್‌ನ ಹೋಟೆಲ್‌ನಲ್ಲಿ 17 ವರ್ಷದ ರಾಷ್ಟ್ರಮಟ್ಟದ ಮಹಿಳಾ ಶೂಟರ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಹರಿಯಾಣ ಪೊಲೀಸರು ಪ್ರಕರಣ ದಾಖಲಿಸಿದ ನಂತರ ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಂಕುಶ್ ಭಾರದ್ವಾಜ್ ಅವರನ್ನು...

ಸುಪ್ರೀಂ ಕೋರ್ಟ್‌ನಿಂದ ಜಾಮೀನು : ಗುಲ್ಫಿಶಾ ಫಾತಿಮಾ ಸೇರಿದಂತೆ ನಾಲ್ವರು ಜೈಲಿನಿಂದ ಬಿಡುಗಡೆ

ಈಶಾನ್ಯ ದೆಹಲಿಯ 2020ರ ಗಲಭೆ ಪಿತೂರಿ ಆರೋಪದಲ್ಲಿ ಬಂಧಿತರಾಗಿದ್ದ ನಾಲ್ವರು ವಿದ್ಯಾರ್ಥಿ ಹೋರಾಟಗಾರರು ಬುಧವಾರ (ಜ.7) ಜೈಲಿನಿಂದ ಹೊರ ಬಂದಿದ್ದಾರೆ. ಗುಲ್ಫಿಶಾ ಫಾತಿಮಾ, ಮೀರಾನ್ ಹೈದರ್, ಶಿಫಾ ಉರ್ ರೆಹಮಾನ್ ಮತ್ತು ಮೊಹಮ್ಮದ್ ಸಲೀಮ್...