Homeಮುಖಪುಟಹತ್ರಾಸ್, ಬಿಜ್ನೋರ್‌ ಗಳಲ್ಲಿ ಬೃಹತ್ ಮಹಾಪಂಚಾಯತ್: ಸರ್ಕಾರದ ವಿರುದ್ಧ ರೈತರ ಗುಡುಗು

ಹತ್ರಾಸ್, ಬಿಜ್ನೋರ್‌ ಗಳಲ್ಲಿ ಬೃಹತ್ ಮಹಾಪಂಚಾಯತ್: ಸರ್ಕಾರದ ವಿರುದ್ಧ ರೈತರ ಗುಡುಗು

- Advertisement -
- Advertisement -

ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೇಶಾದ್ಯಂತ ಮಹಾಪಂಚಾಯತ್‌ಗಳು ಮುಂದುವರೆದಿವೆ. ಇಂದು ಹತ್ರಾಸ್, ಬಿಜ್ನೋರ್‌ ಮತ್ತು ಶಾದಾಬಾದ್ ಗಳಲ್ಲಿ ಬೃಹತ್ ಮಹಾಪಂಚಾಯತ್‌ಗಳು ನಡೆದಿದ್ದು ಕೇಂದ್ರ ಸರ್ಕಾರದ ವಿರುದ್ಧ ರೈತರು ಶಕ್ತಿ ಪ್ರದರ್ಶನ ಮಾಡಿದ್ದಾರೆ.

ಹತ್ರಾಸ್ ಮತ್ತು ಶಾಜಾಬಾದ್ ಗಳಲ್ಲಿ ನಡೆದ ಕಿಸಾನ್ ಮಹಾಪಂಚಾಯತ್‌ಗಳಲ್ಲಿ ಮಾಜಿ ಸಂಸದ, ಆರ್‌ಎಲ್‌ಡಿ ಮುಖಂಡ ಜಯಂತ್ ಚೌಧರಿ ಭಾಗವಹಿಸಿ “ರೈತರೊಟ್ಟಿಗೆ ಯುವಜನರು ನಿಂತಿದ್ದಾರೆ” ಎಂದು ಘೋಷಿಸಿದ್ದಾರೆ.

ಉತ್ತರ ಪ್ರದೇಶದ ಬಿಜ್ನೋರ್‌ನಲ್ಲಿ ನಡೆದ ಮಹಾಪಂಚಾಯತ್‌ನಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಭಾಗವಹಿಸಿ, “ಅವರು ಮಂತ್ರಿಯಾಗಲಿ, ಈ ದೇಶದ ಪ್ರಧಾನಿಯಾಗಲಿ ಅಥವಾ ಯಾರೇ ಆಗಿರಲಿ ತನ್ನ ಅಧಿಕಾರಕ್ಕಾಗಿ ಹುತಾತ್ಮರನ್ನು ಗೇಲಿ ಮಾಡುವ ಹಕ್ಕು ಯಾರಿಗೂ ಇಲ್ಲ” ಎಂದು ಕಿಡಿಕಾರಿದ್ದಾರೆ.

ಕೈಗಾರಿಕೋದ್ಯಮಿ ವಿರುದ್ಧ ರೈತ ಹೋರಾಟದಲ್ಲಿ, ಯಾರು ಗೆಲ್ಲುತ್ತಾರೆ ಎಂದು ನೀವು ಭಾವಿಸುತ್ತೀರಿ? ರೈತನಿಗೆ ಎಂದಾದರೂ ನ್ಯಾಯ ಸಿಗುತ್ತದೆಯೇ? ಎಂದು ಪ್ರಶ್ನಿಸಿದ್ದಾರೆ.

ದೆಹಲಿ ಗಡಿಯಲ್ಲಿ 80 ದಿನಗಳ ಕಾಲ ಚಳಿಯಲ್ಲಿ ಕುಳಿತಿರುವ ರೈತರು ಈಗ ಬೇಸಿಗೆ ಕಾಲದಲ್ಲಿ ಹೋರಾಡಬೇಕಾಗಿದೆ. ಅವರು ಏಕೆ ಅಷ್ಟೆಲ್ಲ ಕಷ್ಟಪಡಬೇಕು? “ಕಾನೂನುಗಳು ರೈತರ ಅನುಕೂಲಕ್ಕಾಗಿ ಎಂದು ಪ್ರಧಾನಿ ಹೇಳುತ್ತಾರೆ. ರೈತರು ಅದನ್ನು ಬಯಸುವುದಿಲ್ಲ ಎಂದು ಹೇಳುತ್ತಿರುವಾಗ ನೀವು ಅವನ್ನು ಏಕೆ ಹಿಂತೆಗೆದುಕೊಳ್ಳುತ್ತಿಲ್ಲ?” ಎಂದು ಪ್ರಿಯಾಂಕ ಪ್ರಶ್ನಿಸಿದ್ದಾರೆ.

ಇನ್ನೊಂದೆಡೆ ಮಾಧ್ಯಮಗಳೊಂದಿಗೆ ರಾಕೇಶ್ ಟಿಕಾಯತ್ ಮಾತನಾಡಿ “ಕೇಂದ್ರದ ಕೃಷಿ ಕಾನೂನುಗಳ ವಿರುದ್ಧದ ಆಂದೋಲನಕ್ಕೆ ನಾಂದಿ ಹಾಡಿದ 40 ರೈತ ನಾಯಕರು ಇಡೀ ದೇಶದಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ಎಲ್ಲೆಡೆ ಕಿಸಾನ್ ಮಹಾಪಂಚಾಯತ್‌ಗಳು ನಡೆಯಲಿವೆ. ಈ ಸರ್ಕಾರ ನೆಮ್ಮದಿಯಿಂದಿರಲು ಬಿಡುವುದಿಲ್ಲ” ಎಂದು ಘೋಷಿಸಿದ್ದಾರೆ.

ಇನ್ನು ಫೆಬ್ರವರಿ 28 ರಂದು ಉತ್ತರ ಪ್ರದೇಶದ ಮೀರತ್‌ನಲ್ಲಿ ರೈತರ ಪ್ರತಿಭಟನೆಯನ್ನು ಬೆಂಬಲಿಸಿ ಕಿಸಾನ್ ಮಹಾಪಂಚಾಯತ್ ನಡೆಯಲಿದ್ದು, ದೆಹಲಿ ಸಿಎಂ ಮತ್ತು ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಭಾಗವಹಿಸಲಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ.


ಇದನ್ನೂ ಓದಿ: ದಿಶಾ ಬಂಧನಕ್ಕೂ ಮುನ್ನ ಬೆಂಗಳೂರು ಪೊಲೀಸರಿಗೆ ಮಾಹಿತಿಯೇ ಇಲ್ಲ: ಇದೆಂಥ ಒಕ್ಕೂಟ ವ್ಯವಸ್ಥೆ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಗದಗ: ನಗರಸಭೆ ಅಧ್ಯಕ್ಷೆ ಪುತ್ರ ಸೇರಿ ನಾಲ್ವರ ಹತ್ಯೆ

0
ಗದಗದ ಬೆಟಗೇರಿ ನಗರಸಭೆ ಅಧ್ಯಕ್ಷೆ ಸುನಂದಾ ಬಾಕಳೆ ಅವರ ಪುತ್ರ ಸೇರಿದಂತೆ ನಾಲ್ವರನ್ನು ಹತ್ಯೆಗೈದಿರುವ ಘಟನೆ ನಗರದಲ್ಲಿ ಗುರುವಾರ (ಏ.18) ಮಧ್ಯರಾತ್ರಿ ನಡೆದಿದೆ. ನಗರದ ಚನ್ನಮ್ಮ ವೃತ್ತದ ಸಮೀಪವಿರುವ ದಾಸರ ಓಣಿಯಲ್ಲಿ ಈ ಘಟನೆ...