ಈಜಿಪ್ಟ್‌ನ ಅತಿದೊಡ್ಡ ಸುಯೆಜ್ ಕಾಲುವೆಯ ಮಧ್ಯೆ 400 ಮೀಟರ್ ಉದ್ದದ ಬೃಹತ್ ಸರಕು ಹಡಗು ‘ಎವರ್‌ಗಿವೆನ್’ ಕಳೆದ ಮೂರು ದಿನಗಳಿಂದ ಸಿಲುಕಿಕೊಂಡಿದ್ದು, ಜಾಗತಿಕ ಹಡಗು ಸಂಚಾರಕ್ಕೆ ಸಾಕಷ್ಟು ಸಮಸ್ಯೆ ಉಂಟುಮಾಡಿದೆ.
ರೆಡ್ ಸೀ ಮುಖಾಂತರ ಕಡಿದಾದ ಕಾಲುವೆಯಲ್ಲಿ ಸಾಗುತ್ತಿದ್ದಾಗ ನಿಯಂತ್ರಣ ಕಳೆದುಕೊಂಡ ಜಪಾನ್ ದೇಶದ ಈ ದೈತ್ಯ ಹಡಗಿನಿಂದಾಗಿ ಜಾಗತಿಕ ಜಲಮಾರ್ಗ ವ್ಯಾಪಾರ ವಹಿವಾಟಿನ ಮೇಲೆ ತೀವ್ರ ಪರಿಣಾಮ ಬೀರಿದ್ದು, ಬಿಲಿಯನ್‌ಗಟ್ಟಲೆ ಡಾಲರ್ ನಷ್ಟ ಉಂಟಾಗುತ್ತಿದೆ. ಈ ಹಡಗನ್ನು ಆ ಸ್ಥಳದಿಂದ ಬಂದರಿಗೆ ಸಾಗಿಸುವುದು ಹರಸಾಹಸದ ಕೆಲಸ ಎಂದು ಹೇಳಲಾಗುತ್ತಿದೆ.
ಈ ಕೆಲಸ ಪೂರ್ಣಗೊಳಿಸಲು ಕೆಲವು ವಾರಗಳೇ ಬೇಕಾಗಬಹುದು ಎಂದು ಎವರ್ ಗಿವನ್ ಹಡಗನ್ನು ಅಲ್ಲಿಂದ ಸಾಗಿಸಲು ಜವಾಬ್ದಾರಿ ನೀಡಲಾಗಿರುವ ಎರಡು ಸಂಸ್ಥೆಗಳ ಪೈಕಿ ಒಂದಾಗಿರುವ ಡೆನ್ಮಾರ್ಕ್‍ನ ಬೊಸ್ಲಾಲಿಸ್ ಸಂಸ್ಥೆಯ ಸಿಒಇಒ ಪೀಟರ್ ಬೆರ್ಡೊವೊಸ್ಕಿ ಹೇಳಿದ್ದಾರೆ.
ಇದನ್ನೂ ಓದಿ: ಬಾಂಗ್ಲಾದ ಸ್ವಾತಂತ್ರ್ಯಕ್ಕಾಗಿ ನಾನೂ ಹೋರಾಡಿದ್ದೆ: ಪ್ರಧಾನಿ ಮೋದಿ ಹೇಳಿಕೆ
ನಂತರ ಸುಯೆಜ್ ಕಾಲುವೆ ಪ್ರಾಧಿಕಾರ ಈ ಅತ್ಯಂತ ಮಹತ್ವದ ಕಾಲುವೆ ಮುಖಾಂತರ ಎಲ್ಲಾ ಸಂಚಾರ ನಿಲ್ಲಿಸಿದೆ. ಪ್ರತಿ ದಿನ ಈ ಕಾಲುವೆ ಮೂಲಕ ಸುಮಾರು 50 ಸರಕು ಹಡಗುಗಳು ಹಾದು ಹೋಗುತ್ತವೆ ಹಾಗೂ ಸರಾಸರಿ ಜಾಗತಿಕ ಹಡಗು ಸಂಚಾರದ ಶೇ 30ರಷ್ಟು ಹಡಗುಗಳು ವಾರ್ಷಿಕವಾಗಿ ಈ ಕಾಲುವೆ ಮೂಲಕ ಸಾಗುತ್ತವೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಈ ದೈತ್ಯ ಹಡಗು ಕಾಲುವೆಯಲ್ಲಿ ಸಿಲುಕಿಗೊಂಡಿರುವುದರಿಂದ ಈಗಾಗಲೇ ಕೋವಿಡ್ ಸಾಂಕ್ರಾಮಿಕದಿಂದ ಕಂಗೆಟ್ಟಿರುವ ದೇಶಗಳು ಇನ್ನಷ್ಟು ಸಮಸ್ಯೆ ಎದುರಿಸುವ ಸಾಧ್ಯತೆಯಿದ್ದು, ಸದ್ಯ ಹಡಗುಗಳು ಸುತ್ತಿ ಬಳಸಿ ಸಾಗಬೇಕಾಗಿರುವುದಿಂದ ಕಚ್ಛಾ ತೈಲ ಹಾಗೂ ಆಹಾರಧಾನ್ಯಗಳ ಬೆಲೆಗಳಲ್ಲೂ ಏರಿಕೆಯಾಗುವ ಸಾಧ್ಯತೆಯದೆ.
ಈಗಾಗಲೇ ಸುಯೆಜ್ ಕಾಲುವೆ ಬಂದ್ ಆಗಿರುವುದರಿಂದ ಗಂಟೆಗೆ ಸುಮಾರು 400 ಮಿಲಿಯನ್ ಡಾಲರ್ ನಷ್ಟ ಉಂಟಾಗುತ್ತಿದೆ. ಈ ದೈತ್ಯ ಹಡಗು 2.20 ಲಕ್ಷ ಟನ್ ಭಾರವಿದ್ದು, 193.3 ಕಿಮೀ ಉದ್ದವಿರುವ ಕಿರಿದಾದ ಸುಯೆಜ್ ಕಾಲುವೆಯನ್ನು ವಸ್ತುಶಃ ಬ್ಲಾಕ್ ಮಾಡಿದೆ. ಈ ಹಾದಿಯಲ್ಲಿ ಸಾಮಾನ್ಯವಾಗಿ ಸಾಗುವ ಸರಕು ನೌಕೆಗಳು ಹೆಚ್ಚಾಗಿ ತೈಲ, ಸಂಸ್ಕರಿತ ತೈಲ, ಆಹಾರ ಧಾನ್ಯ ಸಾಗಿಸುತ್ತವೆಯಲ್ಲದೆ ಪೂರ್ವ ಮತ್ತು ಪಾಶ್ಚಿಮಾತ್ಯ ದೇಶಗಳ ನಡುವೆ ವ್ಯಾಪಾರ ವಹಿವಾಟಿಗೆ ಮಹತ್ವದ ಕೊಂಡಿಯಾಗಿದೆ.
ಇದನ್ನೂ ಓದಿ: ಪ್ರಧಾನಿ ಮೋದಿ ಬಾಂಗ್ಲಾ ಭೇಟಿ: ಬಾಂಗ್ಲಾದಲ್ಲಿ ತೀವ್ರಗೊಂಡ ’ಮೋದಿ ನಾಟ್ ವೆಲ್ಕಮ್’ ಪ್ರತಿಭಟನೆ


