ಬಾಂಗ್ಲಾದ ಸ್ವಾತಂತ್ರ್ಯಕ್ಕಾಗಿ ನಾನೂ ಹೋರಾಡಿದ್ದೆ: ಪ್ರಧಾನಿ ಮೋದಿ ಹೇಳಿಕೆ
PC: Scroll.in

ಬಾಂಗ್ಲಾದೇಶದ ಸ್ವಾತಂತ್ರ್ಯಕ್ಕಾಗಿ ನಾನೂ ಕೂಡ ಹೋರಾಟ ನಡೆಸಿದ್ದೆ ಎಂದು ಪ್ರಧಾನಿ ನರೇಂದ್ರ ಮೋದಿ ಬಾಂಗ್ಲಾದೇಶದ ರಾಜಧಾನಿ ಡಾಕಾದಲ್ಲಿ ಹೇಳಿದ್ದಾರೆ. ಸ್ವಾತಂತ್ರ್ಯದ 50ನೇ ವರ್ಷಾಚರಣೆಯಲ್ಲಿರುವ ಬಾಂಗ್ಲಾದೇಶಕ್ಕೆ ಅಭಿನಂದನೆ ಸಲ್ಲಿಸಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ, ಈ ಹೋರಾಟ ನನ್ನ ರಾಜಕೀಯ ಜೀವನದ ಮೊದಲ ಘಟ್ಟವಾಗಿತ್ತು ಎಂದು ಹೇಳಿದ್ದಾರೆ.

“ಬಾಂಗ್ಲಾದೇಶದ ಸ್ವಾತಂತ್ರ್ಯ ಸಂಗ್ರಾಮವು ನನ್ನ ಜೀವನ ಯಾನದಲ್ಲೂ ಒಂದು ಮಹತ್ವದ ಕ್ಷಣವಾಗಿತ್ತು. ನಾನು ಹಾಗೂ ನನ್ನ ಸಹೋದ್ಯೋಗಿಗಳು ಭಾರತದಲ್ಲಿ ಸತ್ಯಾಗ್ರಹ ಮಾಡಿದ್ದೆವು. ಆಗ ನನಗೆ 20-22ರ ವಯಸ್ಸು. ಬಾಂಗ್ಲಾದೇಶ ಸ್ವಾತಂತ್ರ್ಯಕ್ಕಾಗಿ ನಡೆದ ಈ ಸತ್ಯಾಗ್ರಹದಲ್ಲಿ ನಾನು ಜೈಲಿಗೆ ಹೋಗಿದ್ದೆ” ಎಂದು ಮೋದಿ ಹೇಳಿದರು.

ಇದು ನನ್ನ ಜೀವನದ ಅವಿಸ್ಮರಣೀಯ ದಿನಗಳಲ್ಲಿ ಒಂದಾಗಿದೆ. ಈ ಕಾರ್ಯಕ್ರಮದಲ್ಲಿ ಬಾಂಗ್ಲಾದೇಶವು ನನ್ನನ್ನೂ ಸೇರಿಸಿಕೊಂಡಿದ್ದಕ್ಕೆ ನಾನು ಆಭಾರಿಯಾಗಿದ್ದೇನೆ. ಈ ಮಹಾನ್ ರಾಷ್ಟ್ರದ ಸೈನಿಕರು ಮಾಡಿದ ತ್ಯಾಗ ಹಾಗೂ ಬಾಂಗ್ಲಾದೇಶದ ಸೈನಿಕರ ಪಕ್ಕದಲ್ಲಿ ನಿಂತಿದ್ದ ಭಾರತೀಯರು ಮಾಡಿದ ತ್ಯಾಗವನ್ನು ನಾವು ಎಂದಿಗೂ ಮರೆಯುವುದಿಲ್ಲ. ಅವರ ಧೈರ್ಯ, ಸ್ಥೈರ್ಯವನ್ನು ನಾವು ಮರೆತಿಲ್ಲ. ನಾವು ಅದನ್ನು ಎಂದಿಗೂ ಮರೆಯುವುದಿಲ್ಲ ಎಂದು ಅವರು ಹೇಳಿದರು.

ಭಾರತ ಮತ್ತು ಬಾಂಗ್ಲಾದೇಶ ಎರಡೂ ಭವಿಷ್ಯಕ್ಕಾಗಿ ಪ್ರಜಾಪ್ರಭುತ್ವ ಮತ್ತು ದೂರ ದೃಷ್ಟಿಯ ಶಕ್ತಿಯನ್ನು ಹೊಂದಿವೆ, ಮತ್ತು ಉಭಯ ದೇಶಗಳು ಒಟ್ಟಾಗಿ ಪ್ರಗತಿ ಸಾಧಿಸುವುದಕ್ಕೆ ಇದು ಅವಶ್ಯಕವಾಗಿದೆ. ಅದಕ್ಕಾಗಿಯೇ ಭಾರತೀಯ ಮತ್ತು ಬಾಂಗ್ಲಾದೇಶ ಸರ್ಕಾರಗಳು ಈ ದಿಕ್ಕಿನಲ್ಲಿ ಅರ್ಥಪೂರ್ಣ ಪ್ರಯತ್ನಗಳನ್ನು ಮಾಡುತ್ತಿವೆ ಎಂದೂ ಹೇಳಿದರು.


ಇದನ್ನೂ ಓದಿ: ಪ್ರಧಾನಿ ಮೋದಿ ಬಾಂಗ್ಲಾ ಭೇಟಿ: ಬಾಂಗ್ಲಾದಲ್ಲಿ ತೀವ್ರಗೊಂಡ ’ಮೋದಿ ನಾಟ್ ವೆಲ್ಕಮ್’ ಪ್ರತಿಭಟನೆ

LEAVE A REPLY

Please enter your comment!
Please enter your name here