ಬಂಧನವಾಗಿ ಮೂರು ವರ್ಷಗಳು ಕಳೆದರೂ ಪೊಲೀಸರು ಯಾವುದೆ ದೋಷಾರೋಪ ಪಟ್ಟಿಯನ್ನು ಸಲ್ಲಿಸದೇ ಇರುವ ಕಾರಣ ಭೀಮಾ ಕೊರೆಗಾಂವ್ – ಎಲ್ಗರ್ ಪರಿಷತ್ ಪ್ರಕರಣದಲ್ಲಿ ಬಂಧಿಸಲ್ಪಟ್ಟಿದ್ದ ಮಾನವ ಹಕ್ಕುಗಳ ಹೋರಾಟಗಾರ್ತಿ, ವಕೀಲೆ ಸುಧಾ ಭಾರದ್ವಾಜ್ ಅವರಿಗೆ ಬಾಂಬೆ ಹೈಕೋರ್ಟ್ ಬುಧವಾರ ಡೀಫಾಲ್ಟ್ ಜಾಮೀನು ಮಂಜೂರು ಮಾಡಿದೆ.
ಪ್ರಕರಣದ ತನಿಖೆಗಾಗಿ ಒದಗಿಸಲಾದ ಗರಿಷ್ಠ ಅವಧಿ ಮುಗಿದ ನಂತರವೂ ಪೊಲೀಸರು ಯಾವುದೇ ಆರೋಪ ಪಟ್ಟಿಯನ್ನು ಸಲ್ಲಿಸದಿದ್ದರೆ, ಆರೋಪಿಯು ಜಾಮೀನಿನ ಮೇಲೆ ಬಿಡುಗಡೆಯಾಗಲು ಅರ್ಹನಾಗುತ್ತಾರೆ. ಇನ್ನು ಡೀಫಾಲ್ಟ್ ಜಾಮೀನು ಎಂದು ಕರೆಯುತ್ತಾರೆ.
ಇದನ್ನೂ ಓದಿ:ಬಡಜನರಿಗೆ ವಕೀಲೆಯಾಗಿದ್ದಕ್ಕೆ ಜೈಲಿಗೆ ಹೋದ ಐಐಟಿ ಪದವೀಧರೆ ಸುಧಾ ಭಾರದ್ವಾಜ್!
ನ್ಯಾಯಮೂರ್ತಿಗಳಾದ ಎಸ್.ಎಸ್. ಶಿಂಧೆ ಮತ್ತು ಎನ್.ಜೆ. ಜಮಾದಾರ್ ಅವರ ಪೀಠವು ಸುಧಾ ಭಾರದ್ವಾಜ್ ಅವರನ್ನು ನಗರದ ವಿಶೇಷ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ನ್ಯಾಯಾಲಯಕ್ಕೆ ಹಾಜರುಪಡಿಸಿ, ಅವರ ಜಾಮೀನಿಗೆ ವಿಧಿಸಬೇಕಾದ ಷರತ್ತುಗಳನ್ನು ನಿರ್ಧರಿಸುತ್ತದೆ. ಇದರ ನಂತರ ಬೈಕುಲ್ಲಾ ಮಹಿಳಾ ಜೈಲಿನಿಂದ ಅವರನ್ನು ಬಿಡುಗಡೆ ಮಾಡಲಾಗುತ್ತದೆ.
2018 ರಲ್ಲಿ ಅವರನ್ನು ಬಂಧಿಸಿದಾಗಿನಿಂದ ಅವರು ಅಂಡರ್ ಟ್ರಯಲ್ ಆಗಿ ಬಂಧನದಲ್ಲಿದ್ದರು. ನ್ಯಾಯಮೂರ್ತಿ ಶಿಂಧೆ ನೇತೃತ್ವದ ಹೈಕೋರ್ಟ್ ಪೀಠ ಈ ವರ್ಷ ಆಗಸ್ಟ್ 4 ರಂದು ಸುಧಾ ಭಾರದ್ವಾಜ್ ಅವರ ಜಾಮೀನು ಅರ್ಜಿಯ ಆದೇಶವನ್ನು ಕಾಯ್ದಿರಿಸಿತ್ತು.
ಆದಾಗ್ಯೂ, ಸುಧಾ ಅವರೊಂದಿಗೆ ಸಹ-ಆರೋಪಿಗಳಾಗಿರುವ ಸುಧೀರ್ ಧವಳೆ ಮತ್ತು ಇತರ ಏಳು ಮಂದಿಯ ಡೀಫಾಲ್ಟ್ ಜಾಮೀನು ಅರ್ಜಿಗಳನ್ನು ಹೈಕೋರ್ಟ್ ತಿರಸ್ಕರಿಸಿದೆ.
ಇದನ್ನೂ ಓದಿ:ಭಾರತದಲ್ಲಿ ಸಂವಿಧಾನ ಮತ್ತು ಪ್ರಜಾತಂತ್ರಗಳು ಉಳಿದರೆ ಮಾತ್ರ ಅಭಿವ್ಯಕ್ತಿ ಸ್ವಾತಂತ್ರ್ಯದ ರಕ್ಷಣೆ ಸಾಧ್ಯ



ವಿನಾಕಾರಣ ಮೂರು ವರ್ಷ ಜೈಲಿನಲ್ಲಿ ಇದ್ದ ಸುದಾ ಭಾರದ್ವಾಜ್ ಅವರಿಗೆ ಜಾಮೀನು ದೊರಕಿದ್ದು ಸ್ವಾಗತಾರ್ಹ.
ವಿನಾಕಾರಣ ಈ ರೀತಿಯಲ್ಲಿ ಅಮಾಯಕರನ್ನು ನ್ಯಾಯಕ್ಕಾಗಿ ಹೊರದುವವರನ್ನು ಬಂದಿಸಿ ಅವರ ಮೇಲೆ ಈ ರೀತಿ ಇಲ್ಲದ ಆರೋಪಗಳನ್ನು ಹೊರಿಸಿ, ಅವರನ್ನು ಭಯಪಡಿಸಿ ,ತೊಂದರೆ ಕೊಟ್ಟು ಜೈಲಿಗೆ ಕಳುಹಿಸುವ ಮೂಲಕ ಅಹಂಕಾರ ಇರುವ ಸ್ವಾರ್ಥಿಗಳು ಮಾಡುತ್ತಾರೆ.
ವಿನಾಕಾರಣ ಈ ರೀತಿಯಲ್ಲಿ ಅಮಾಯಕರನ್ನು ನ್ಯಾಯಕ್ಕಾಗಿ ಹೊರದುವವರನ್ನು ಬಂದಿಸಿ ಅವರ ಮೇಲೆ ಈ ರೀತಿ ಇಲ್ಲದ ಆರೋಪಗಳನ್ನು ಹೊರಿಸಿ, ಅವರನ್ನು ಭಯಪಡಿಸಿ ,ತೊಂದರೆ ಕೊಟ್ಟು ಜೈಲಿಗೆ ಕಳುಹಿಸುವ ಮೂಲಕ ಅಹಂಕಾರ ಇರುವ ಸ್ವಾರ್ಥಿಗಳು ಮಾಡುತ್ತಾರೆ.