ಬಿಜೆಪಿ ಸರ್ಕಾರವನ್ನು ಟೀಕಿಸುವ ಭರದಲ್ಲಿ ಲೈಂಗಿಕ ಅಲ್ಪಸಂಖ್ಯಾತ ಸಮುದಾಯವನ್ನು ಅವಹೇಳ ಮಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ವಿರುದ್ಧ ಬುಧವಾರ ಬೆಂಗಳೂರಿನ ಸ್ವಾತಂತ್ಯ್ರ ಉದ್ಯಾನದಲ್ಲಿ ಪ್ರತಿಭಟನೆ ನಡೆಸಲಾಯಿತು. ಲೈಂಗಿಕ ಅಲ್ಪಸಂಖ್ಯಾತರ ಸಂಘಟನೆ, ದಲಿತ ಮತ್ತು ಮುಸ್ಲಿಂ ಮೈನಾರಿಟಿ ಸೇನೆ, ಸ್ವಾರಾಜ್ಯ ಇಂಡಿಯಾ, ದಿಲ್ ಫರಾಜ್ ಸಮರ ಸಂಸ್ಥೆ ಹಾಗೂ ಸಂವಾದ ಸಂಸ್ಥೆಯ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಸಿಎಂ ಇಬ್ರಾಹಿಂ ಅವರು ರಾಜ್ಯದ ಬಿಜೆಪಿ ಸರ್ಕಾರವನ್ನು ಟೀಕಿಸುತ್ತಾ, ‘‘ಕರ್ನಾಟಕ ಸರ್ಕಾರ ಮಂಗಳಮುಖಿ ಸರ್ಕಾರವಾಗಿದ್ದು, ಗಂಡೂ ಅಲ್ಲ, ಹೆಣ್ಣು ಅಲ್ಲ” ಎಂದು ನಾಲಗೆ ಹರಿಬಿಟ್ಟಿದ್ದರು. ಜೆಡಿಎಸ್ ರಾಜ್ಯಾಧ್ಯಕ್ಷ ಈ ಹೇಳಿಕೆಗೆ ಲೈಂಗಿಕ ಅಲ್ಪಸಂಖ್ಯಾತ ಸಮುದಾಯದಿಂದ ತೀವ್ರ ಆಕ್ರೋಶ ವ್ಯಕ್ತವಾಗಿವೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಈ ಬಗ್ಗೆ ಪ್ರತಿಭಟನೆಯಲ್ಲಿ ಮಾತನಾಡಿದ ದಲಿತ ಮತ್ತು ಮುಸ್ಲಿಂ ಮೈನಾರಿಟಿ ಸೇನೆಯ ರಾಜ್ಯಾಧ್ಯಕ್ಷರು ಎಜೆ ಖಾನ್, ‘‘ಸಿಎಂ ಇಬ್ರಾಹಿಂ ಅವರು ದೇವೆಗೌಡರ ಕೃಪೆಯಿಂದ ಕೇಂದ್ರದಲ್ಲಿ ಸಚಿವರಾಗಿದ್ದವರು. ಅವರಿಗೆ ಎಲ್ಲಿ ಅಧಿಕಾರ ಸಿಗಲ್ಲವೋ ಅಲ್ಲಿಂದ ಬಿಟ್ಟು ಬೇರೆ ಕಡೆಗೆ ಹೋಗುತ್ತಾರೆ. ಎರಡು-ಮೂರು ತಿಂಗಳ ಹಿಂದೆ ಅವರ ನಾಟಕವನ್ನು ನಾವು ನೋಡಿದ್ದೇವೆ.
ಇದನ್ನೂ ಓದಿ:ಹಿಜಾಬ್: ಸಮತೋಲನವನ್ನು ಸಾಧಿಸದ, ಸಹಾನುಭೂತಿ ತೋರದ ತೀರ್ಪು
ಅವರು ಭದ್ರಾವತಿಯಲ್ಲಿ ಠೇವಣಿಯನ್ನು ಕೂಡಾ ಕಳೆದುಕೊಳ್ಳುವಂತಹ ನಾಯಕ. ಬಡ ಮುಸ್ಲಿಮರ ಪರವಾಗಿಯೂ ಮಾತನಾಡದ ಅವರು ಬೇರೆ ಸಮುದಾಯದ ಬಗ್ಗೆ ಮಾತನಾಡಲು ಸಾಧ್ಯವಿದೆಯೆ?” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರತಿಭಟನೆಯ ಹೋರಾಟಗಾರರು ಸಿಎಂ ಇಬ್ರಾಹಿಂ ಅವರ ಪೋನ್‌ಗೆ, ‘ಫೋನ್ ಕಾಲ್ ಅಭಿಯಾನ’ವನ್ನು ಮಾಡಿದ್ದು, 200ಕ್ಕೂ ಹೆಚ್ಚು ಫೋನ್ ಕಾಲ್ ದಾಖಲಾಗಿದೆ. ಈ ವೇಳೆ ಹೋರಾಟಗಾರರ ಕರೆಯನ್ನು ಸ್ವೀಕರಿಸಿದ ಸಿಎಂ ಇಬ್ರಾಹಿಂ ಅವರು, “ನನ್ನ ಹೇಳಿಕೆ ತಪ್ಪಾಗಿದ್ದು, ಈ ಬಗ್ಗೆ ಬೇಷರತ್ತಾಗಿ ಕ್ಷಮೆ ಕೇಳಿ ವಿಡಿಯೊ ಬಿಡುತ್ತೇನೆ. ಲೈಂಗಿಕ ಅಲ್ಪಸಂಖ್ಯಾತರು ನನ್ನ ಸೋದರ-ಸೋದರಿಯರಿದ್ದ ಹಾಗೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಮಜಾಭಾರತ ಷೋನಲ್ಲಿ ಟ್ರಾನ್ಸ್‌ಜೆಂಡರ್‌ಗಳಿಗೆ ಅಪಹಾಸ್ಯ: ಹೋರಾಟಗಾರ್ತಿ ಆಕ್ಷೇಪ
ಪ್ರತಿಭಟನೆಯಲ್ಲಿ ಲೈಂಗಿಕ ಅಲ್ಪಸಂಖ್ಯಾತ ಸಮುದಾಯದ ಕಾರ್ಯಕರ್ತರು, ದಲಿತ ಮತ್ತು ಮುಸ್ಲಿಂ ಮೈನಾರಿಟಿ ಸೇನೆಯ ರಾಜ್ಯಾಧ್ಯಕ್ಷರಾದ ಎಜೆ ಖಾನ್, ಸ್ವಾರಾಜ್ಯ ಇಂಡಿಯಾದ ಆರ್. ಕಲೀಮ್ ಉಲ್ಲಾ, ಸಾಮಾಜಿಕ ಹೋರಾಟಗಾರರಾದ ಜಗನ್, ಸೆಲ್ವರಾಜ್, ಖಲೀಲ್ ಉಲ್ಲಾ, ದಲಿತ ಹಕ್ಕುಗಳ ಹೋರಾಟಗಾರ ಹೆಬ್ಬಾಳ ವೆಂಕಟೇಶ್, ದಿಲ್ ಫರಾಜ್ ಸಮರ ಸಂಸ್ಥೆಯ ರುಬಿನ್, ಸಂವಾದ ಸಂಸ್ಥೆಯ ಶಿವಗೌರಿ ಸೇರಿದಂತೆ ಹಲವಾರು ಹೋರಾಟಗಾರರು ಭಾಗವಹಿಸಿದ್ದರು.


