Homeಮುಖಪುಟಹಾಸ್ಯ ಪ್ರಬಂಧ; ಯಲಕ್ಷನ್ಗೆ ನಿಂತ್ರು ಕಾವಿಶೂರರು!

ಹಾಸ್ಯ ಪ್ರಬಂಧ; ಯಲಕ್ಷನ್ಗೆ ನಿಂತ್ರು ಕಾವಿಶೂರರು!

- Advertisement -
- Advertisement -

ಅದೆಷ್ಟೇ ಅಲವತ್ತುಕೊಂಡರೂ ತಮ್ಮ ಫೇವರೇಟ್ ಸಿ.ಎಂಅನ್ನು ಪದಚ್ಯುತಿಗೊಳಿಸಿಯೇಬಿಟ್ಟ ಕೇಂದ್ರ ಸರ್ಕಾರದವರ ಮೇಲೆ ಮಠಾಧೀಶರೆಲ್ಲಾ ಮುನಿಸಿಕೊಂಡಿದ್ದರು. ರಾಜಕೀಯವನ್ನು ತಾವೇ ಮುಷ್ಠಿಯಲ್ಲಿಟ್ಟುಕೊಂಡರೆ, ತಮಗೆ ಬೇಕಾದ ಮೆಡಿಕಲ್ಲು, ಡೆಂಟಲ್ಲು, ಎಂಜನಿಯರಿಂಗ್ ಕಾಲೇಜು, ಬಜೆಟ್ ಸ್ಯಾಂಕ್ಷನ್ಸ್, ಕ್ಯಾಪಿಟೇಶನ್, ಡೆವೆಲೆಪ್‌ಮೆಂಟ್ಸ್‌ಗೆಲ್ಲಾ ರಾಜಕಾರಣಿಗಳೆದರು ಹಲ್ಲುಗಿಂಜುವ ಪ್ರಮೇಯವೇ ಬಾರದಲ್ಲವೆಂಬಾಲೋಚನೆ ಮಿದುಳಲ್ಲಿ ಮಿಂಚುತ್ತಲೇ ಡಿಂಗಾಲೇಶರು ಪ್ರಸನ್ನವದನರಾದರು. ನಾವುಗಳು ಹೇಳಿದವರಿಗೇ ಮತಹಾಕುವ ಮಳ್ಳಮಂದಿ ಇರೋವಾಗ ನಾವುಗಳೇ ಚುನಾವಣೆಗೆ ನಿಂತರೆ ಮತಹಾಕಿ ಗೆಲ್ಲಿಸದೆ ಇದ್ದಾರೆಯೇ ಎಂಬ ಥಿಂಕಿಂಗ್ ತಲೆಗೆ ನುಸುಳುತ್ತಲೇ ಥ್ರಿಲ್ ಆಗಿ ತುರ್ತುಸಭೆ ಸೇರಲು ಸರ್ವ ಕಾವಿಶೀಲ್ಡ್‌ಗಳಿಗೂ ಕರೆಕೊಟ್ಟುಬಿಟ್ಟರು. ಹಿರಿಯ ಗಣಗಳಾದ ಗಿರಿಗೆರೆಶ್ರೀ ಆದಿಗಿರಿಶ್ರೀ ನಡೆದಾಡೋಗಾಡು, ಮತ್ತೂರುಸ್ವಾಮಿ, ಕಿತ್ತೂರುಸ್ವಾಮಿ ನಾಟಕದಸ್ವಾಮಿ, ದುರ್ಗದ ಅಭಿನಯ ಬಸವಣ್ಣೋರ ಜೊತೆಗೆ ಮರಿಕಿರಿ, ಕಿರಿಕಿರಿ ಸ್ವಾಮಿಗಳಾದ ಮಾದಾರೇಶ, ಮೇದಾರೇಶ ಭೋವಿವರ ಜೊತೆಗೆ ಉಡುಪಿವರ ಮುಂತಾದವರಿಗೆಲ್ಲಾ ಕಾಲ್‌ಹೋಯಿತು.

ಸಾವಿರಾರು ಸ್ವಾಮಿಗಳು ದೌಡು ಬಂದು ನೆರೆವಾಗ ಪೆಂಡಾಲ್ ಬಿರಿಯಿತು. ಹೆಂಗೆಲ್ಲಾರಾ ಆಗ್ಲಿ ಅಂತ ಕಾರ್ಯಕ್ರಮದ ಬಂದೋಬಸ್ತ್‌ಗೆ ಪೊಲೀಸ್‌ಪಡೆಯನ್ನೇ ಕರೆಸಲಾಯಿತು. ಸಭಾದ್ಯಕ್ಷತೆಗೆ ಹಿರಿಯರೂ, ರಾಜಕಾರಣಿಗಳ ಪರಮಾಪ್ತರೂ ಆದ ಗಿರಿಗೆರೆ ಹೈಟೆಕ್ ಸ್ವಾಮಿಗಳೆ ಪಸಂದು ಎಂಬ ತೀರ್ಮಾನಕ್ಕೆ ಬರಲಾಯಿತು. ಒಪ್ಪದವರೂ ಇದ್ದರಾದರೂ ಬಿಗಿನಿಂಗಲ್ಲೇ ಕಡ್ಡಿ ಆಡಿಸೋದೇಕೆಂದು ಗಪ್‌ಕುಂತರು. ಮೊದಲ ಮಾತು ಗಿರಿಗೆರೆಯೋರಿಂದ್ಲೆ ಶುರುವಾತು. ’ನೋಡಿ, ಈ ವೀರಸಾಧಿಕ್ ರಾಜಕಾರಣಿಗಳು ಚುನಾವಣೆ ಹತ್ತಿರ ಬಂದಾಗ ಮಠಕ್ಕೆ ನುಗ್ಗಿ ಕಾಲು ಹಿಡ್ಕೋತಾವೆ. ಆಮೇಲೆ ’ಕ್ಯಾರೆ’ ಅಂಬೋಲ್ಲ. ಮಠಕ್ಕೆ ಅನುದಾನ ಕೊಡೋಕೆ ಇವರಪ್ಪನ ಮನೆರೊಕ್ಕ ತಂದು ಕೊಡೋರ್‍ಹಂಗ ಪಿರಿಪಿರಿಮಾಡ್ತವೆ.

ನಮ್ಮ ಸಮಾಜದ ಜನ ಎಪ್ಪತ್ತು ವರ್ಷದಿಂದ ಮೀಸಲಾತಿನೂ ಸಿಗ್ದೆ ಇದ್ದಲ್ಲೇ ಅವೆ. ಇವರುಗಳು ಇಂಡಿಯಾನು ಶೈನಿಂಗೂ ಮಾಡಲಿಲ್ಲ, ಸಿಂಗಾಪುರ್‍ನೂ ಮಾಡಲಿಲ್ಲ. ಚಿನ್ನದ ದಾರಿನೂ ಇಲ್ಲ. ಆದರೆ ಇವು ಮಾತ್ರ ಮೈ ತುಂಬಾ ಚಿನ್ನ ಮನೆ ತುಂಬಾ ರೊಕ್ಕ ಮಾಡ್ಕೊಂಡು ಎಕ್ಸಟ್ರಾ ರೊಕ್ಕನಾ ಸ್ವಿಸ್ನಾಗೆ ಮಡಗ್ತಾ ಅವೆ! ಇನ್ನು ಮುಂದೆ ನಮ್ಮ ಆಶೀರ್ವಾದ ಇವರಿಗಿಲ್ಲ, ನಾವೆಯಾ ಯಲ್ಲಕ್ಕಸನ್ನಾಗೆ ನಿಂತು ಗೆಲ್ಲೋಣ್ರಿ. ಅಧಿಕಾರವಿಲ್ಲದೆ ಅಣುರೇಣು ತೃಣಕಾಷ್ಠವೂ ಚಲಿಸೋಲ್ರಪಾ… ತಿಳಿತ್ರಾ’ ಅನ್ನುತ್ಲೂವೆ ಆದಿಗಿರಿಶ್ರೀ ತಟಾರನೆ ಅನುಮೋದಿಸಿಯೇ ಬಿಟ್ಟರು. ’ನೋಡಿ ಸ್ವಾಮ್ಗುಳೆ, ಚುನಾವಣೆಗೆ ಮಠದ ರೊಕ್ಕ ಖರ್ಚು ಮಾಡಬಾರದೆಂಬುದೇ ನನ್ನ ಏಕೈಕ ಕಂಡೀಸನ್ನು’ ಎಂದು ಕ್ಯಾತೆ ತೆಗೆದವರು ಅಭಿನಯ ಬಸವಣ್ಣ.

’ಅದಕ್ಕೆ ಎದಕ್ರಿ ಮಠದ ರೊಕ್ಕ? ನೋಟು ಹೆಂಡ ಖಂಡ ಸೀರಿಪಂಚಿ ಹಂಚೋಕೆ ನಾವೇನ್ ತತ್ರಾಪಿ ಖಾದಿಗಳೆ? ಜಗದ್ಗುರುಗೋಳು….. ನಾವು ನಿಂತ್ರ ಭಕ್ತಾದಿಗಳೇ ಕಾಣಿಕೆ ಕೊಟ್ಟು ಕಾಲಿಗೂ ಬಿದ್ದು, ಓಟ್ನೂ ಹಾಕ್ತವೆ’ ಗಿರಿಗೆರೆಯೋರ ಮಾತಿಗೆ ಸರ್ವರೂ ಆನಂದ ತುಂಬಿದವರಂತಾದರೂ ಅಭಿನಯ ಬಸವಣ್ಣ ಅಬ್ಜಕ್ಶನ್ ರೈಸ್ ಮಾಡಿದರು. ’ಅಲ್ರಿ, ಈಗ ನಮ್ಮ ಜಾತಿಯೋನೇ ಸಿಎಂ ಆಗಿರೋವಾಗ ಇದೆಲ್ಲಾ ಬೇಕಾ?’ ಎಂದು ಮಾರಿ ಸೊಟ್ಟ ಮಾಡಿದರು ’ಆಫ್‌ಕೋರ್ಸ್. ನಾವೆ ಸಿಯಮ್ಮು, ಮಿನಿಸ್ಟರ್‌ಗಳಾದ್ರೆ ಬೆಟರಲ್ರಾ? ಇವರಿಗೆ ಬಟರ್ ಹಚ್ಚೋದೇ ತಪ್ಪುತ್ತಲ್ರಪಾ’ ಅಂದ ಗಿರಿಗೆರೆಶ್ರೀ ಒಳಗೇ ಕುಪಿತರಾಗಿ, ’ನಿಮಗೇನಾರ ಗೆಲ್ಲೋದ್ರಾಗೆ ಅನುಮಾನ ಐತ್ರೇನಿ’ ಎಂದು ದುರುಗುಟ್ಟಿದರು.

’ಕೃಷ್ಣನಾಣೆ ಇಲ್ಲಬಿಡಿ, ನಾವೆಲ್ಲಾ ಗೆದ್ದು ಸರ್ಕಾರ ರಚಿಸೋದುಂಟು, ರಾಮನಾಣೆ ಸತ್ಯಸ್ಯಸತ್ಯ’ ಎಂದು ಬಡಕಲು ದೇಹದಿಂದ ಕೀಂಚರ ದನಿ ತೆಗೆದ ಉಡುಪಿವರರು, ’ಅಂದ್ಹಾಗೆ ತರವಾಯ ಸಿಎಂ ಯಾರಾಗಬೇಕು? ಯಾರಾರಿಗೆ ಯಾವ ಖಾತೆ, ಈಗ್ಲೆ ಪಕ್ಕಾ ಆದಲ್ಲಿ ಮುಂದ ತ್ರಾಸಿರೋದಿಲ್ರಿ’ ಎಂದೂ ತಮ್ಮ ಮನದಿಂಗಿತನವನ್ನೂ ತೆರೆದಿಟ್ಟರು ನಡೆದಾಡೋಗಾಡು. ಈ ಮಾತು ಕೇಳಿದ್ದೇ ಸೆಂಟ್‌ಪರ್ಸೆಂಟ್ ಕಾವಿಗಳಾಗಲೇ ಪವರ್‌ಡ್ರೀಮ್ಗೆ ಜಾರಿದರು. ನಡೆದಾಡೋಗಾಡಿನ ಮಾತಿನ ಹಿಂದಿರೋ ಮಸಲತ್ತನ್ನು ಗ್ರಹಿಸಿದ ಗಿರಿಗೆರೆಯೋರು, ’ಕೇಳ್ರಿಲ್ಲೀ ಅಂತ ಗೊಗ್ಗರು ದನಿ ತೆಗೆದು ಡ್ರೀಮ್ಗೆ ಜಾರಿದವರನ್ನು ಡಿಸ್‌ಕನೆಕ್ಟ್ ಮಾಡಿದರಲ್ಲದೆ, ’ಮೊದಲು ಸಿಎಂ ಯಾರಾಗಬೇಕು ಅಂಬೋದ್ನ ನಮ್ಮಲ್ಲಿ ಗೆದ್ದ ಶಾಸಕರು ನಿರ್ಧರಿಸಲಿ. ಪ್ರಜಾಹಿತ, ಪ್ರಜಾಸತ್ತೆ ನಮಗೆ ಮುಖ್ಯ’ ಎಂದು ಅಡ್ಡಗೋಡೆಯ ಮೇಲೆ ಟಾರ್ಚ್ ಇಟ್ಟರು.

ಹಾಗೆ ನೋಡಿದರೆ ಉಳಿದೆಲ್ಲರಿಗಿಂತ ಧನಕನಕ, ವಸ್ತುವಾಹನ ಈವನ್ ಹೆಲಿಕ್ಯಾಪ್ಟರ್ ಮಡಗಿರೋರಾದ್ರೂ ತಮ್ಮ ಕೋಮು ವೀರಶೈವರಷ್ಟಿಲ್ಲವೆಂಬ ತರ್ಕಕ್ಕೆ ಬಿದ್ದ ಆದಿಗಿರೀಶ ’ಸದ್ಯಕ್ಕೆ ನಮ್ಮ ಗಿರಿಗೆರೆಯೋರೇ ಸಿಎಂ
ಅಂದ್ಕೋಂಡ್ರಾತೇಳ್ರಿ’ ಎಂದು ದಾಳ ಉರುಳಿಸಿ, ತಮ್ಮನ್ನು ಯಾರಾರ ನಾಮಿನೇಟ್ ಮಾಡಿಯಾರೇನೋ ಅಂತ ಪಿಳಿಪಿಳಿಸುವಾಗ ಮತ್ತೂರುಸ್ವಾಮಿಗೆ ತಲೆಸುತ್ತು ಬಂತು.

’ಕೇಳ್ರಿಲ್ಲಿ. ಆಗೋದಾದ್ರೆ ಒಬಿಸಿಗಳೋ ದಲಿತರೋ ಸಿಎಂ ಆಗ್ಲಿ’ ಕೊಕ್ಕೆ ಜಡಿದರು ಅಭಿನಯ ಬಸಣ್ಣೋರು.

’ಅವಿನ್ನೂ ಈಗಿನ್ನ ನಿಮ್ಮ ವರದಿಂದ ಹುಟ್ಟಿಬೆಳಿತಾ ಅವೆ. ಸದ್ಯಕ್ಕೆ ಕಾರ್ಯಕರ್ತರಾಗಿ ಪಕ್ಷಕ್ಕಾಗಿ ದುಡೀಲಿ ಬಿಡ್ರಿ’ ರಾಂಗ್ ಆಗಿಬಿಟ್ಟರು ಡಿಂಗಾಲೇಶ.

’ಆತಾತು, ಯಾರಿಗೆ ಯಾವ ಖಾತೆ? ಅದಾರಯೋಳ್ರಿ’ ಚಡಪಡಿಸಿದರು ಬಸಣ್ಣೋರು.

’ಅಡ್ಡಿಯಿಲ್ಲ’ ಎಂದು ನಿಮೀಲನೇತ್ರರಾದ ಭಾವಿ ಸಿಎಂ ಗಿರಿಗೆರೆಯೋರು ಮಾತು ಮುಂದುವರೆಸಿದರು.

’ನಮ್ಮ ಆದಿಗಿರಿಯೋರ್‍ಗೆ ಫಿನಾನ್ಸ್’ ಅಂದರು.

’ಬ್ಯಾಡ್ರಿ, ನಮಗೆ ಹೋಮೇ ಬೇಕ್ರಿ’ ತಟ್ಟನಂದರು ಆದಿಗಿರೀಶ.

’ಇಲಿಲ್ಲ, ನಮ್ಮ ಸ್ವಾಮ್ಗುಳ್ಗೆ ಡಿಸಿಯಮ್ಮೇ ಮಾಡಬೇಕ್ರಿ’ ವಕ್ಕಲಿಗ ಭಕ್ತರು ಸಡನ್ನಾಗಿ ಆಕ್ರೋಶ ತೋರಿದರು. ದಿಗಿಲುಗೊಂಡ ಗಿರಿಗೆರೆಯೋರು, ’ಭಕ್ತರೂ ಬಂದಾರೇನ್ರಪ್ಪಾ. ಅಡ್ಡಿಯಿಲ್ಲ. ಗದ್ದಲಮಾಡ್ದೆ ಗಪ್‌ಕುಂದಿರ್ರಿ. ಹಂಗಾರೆ ನಮ್ಮ ಮತ್ತೂರಶ್ರೀಗಳಿಗೇ ಫಿನಾನ್ಸ್’ ತಿದ್ದುಪಡಿ ಮಾಡಿದರು.

’ನಮ್ಮ ಡಿಂಗಾಲೇಶರಿಗೆ ರೆವಿನ್ಯೂ ಕೊಟ್ಟರೆ ಹೆಂಗ್ ಬುದ್ದಿ’ ಗೊಣಗಿತವರ ಭಕ್ತಗಣ.

’ಭಕ್ತರೂ ಬಂದಿರೇನ್ರಿ! ಅಡ್ಡಿಯಿಲ್ಲ’ ಎಂದು ಹುಳ್ಳಗೆ ನಕ್ಕರು, ಗಿರಿಗೆರೆಯೋರು, ’ಅಂದಂಗೆ ನಮ್ಮ ಉಡುಪಿವರರಿಗೆ ಟೆಂಪಲ್‌ಗಳೆಂದ್ರೆ ಅಗದಿ ಪ್ರೇಮ. ಅವರಿಗೆ ಮುಜರಾಯಿ’ ಅಂದರು,

’ಶಟಪ್, ಅವರು ಸಿಯಮ್ಮು ಮೆಟೀರಿಯಲ್ಲು, ಯುನೊ? ಶ್ರೀಗಳಿಗೆ ಸ್ಟ್ರಾಂಗ್ ಖಾತೆ ಬೇಕ್ರಿ’ ಪರಕ್ಕೆ ನಿಂತರು ಕರ್ಮಸ್ಥಳದೋರು.

’ಹಂಗಾರೆ ಅಬ್ಕಾರಿ ಕೊಡ್ರಿ’ ನಕ್ಕರು ಭೋವಿವರ.

’ಅದು ನೀವೇ ಇಕ್ಕಳಿ. ಉಡುಪಿವರರಿಗೆ ರೆವಿನ್ಯೂ ಕೊಡಿ. ದಪ್ಪಗಾರೇ ಆದಾರು’ ಕರ್ಮಸ್ಥಳದೋರು ಪ್ಯಾರ್ ತೋರಿದರು.

’ಮತ್ತೆ, ರಾಗಾಪುರದ ಗೋಸ್ವಾಮ್ಗುಳ್ಗೆ?’ ಕೊಶ್ಚನ್ ಮಾಡಿದ್ದು ಗದಗಿನ ಮಠದೋರು.

’ಅವರಿಗೆ ಪಶುಸಂಗೋಪನಾನೇ ಖಾಯಂ’ ನಕ್ಕರು ಡಿಂಗಾಲೇಶ.

’ವಾರ್ತಾ ಮತ್ತು ಪ್ರಚಾರ?’ ಕೂಗಿದರು ಮಾದಾರೇಶ

’ಅದು ನಿಮ್ಮ ಪಿತೃಗಳಿಗೇ ಮೀಸಲು’ ನಕ್ಕರು ನಾಟಕದಸಾಮಿ.

’ಮತ್ತೆ ನಿಮಗೆ?’ ಅಣುಕಿಸಿದರು ಅಭಿನಯ ಬಸವಣ್ಣ.

’ಅವರಿಗೆ ಸಂಸ್ಕೃತಿ ಇಲಾಖೆ, ನಾಟ್ಕ ಮಾಡ್ಕೊಂಡಿರ್ತಾರೆ’ ಕಣ್ಣು ಮಿಟುಕಿಸಿದರು ಸೈಜಗಲ್ಲುಸಾಮಿ.

’ಅಷ್ಟಮಸಾಲಿ ಅಷ್ಟಮಠದೋರ್‍ಗೇನ್ರಿ?’ ಸಿಡಿದೆದ್ದರು ಭಕ್ತರು.

’ಅವರು ಸಭೆಗೇ ಬಂದಿಲ್ಲವಲ್ರೀ’ ಕಾಲೆಳೆದರು ಮತ್ತೂರುಸಾಮಿ.

’ಅವರು ನಿಂತ್ರೂ ಗೆಲ್ಲೋದಿಲ್ ಬಿಡ್ರಿ. ಎಂಎಲ್ಸಿ ಮಾಡಿದ್ರಾತು’, ತಿಪ್ಪೆಸಾರಿದರು ಹದಿಮೂರು ಸಾವಿರ ಮಠದೋರು.

’ರಾಜಕಾರಣಿಗೋಳು ಯಲಕ್ಷನ್ಗೆ ನಿಲ್ತಾರಲ್ರೀ?’ ಚಿಂತಿಸಿದರು ಸಂತೆಲಾಲ್. ’ಮೆಜಾರ್‍ಟಿನಾಗೆ ಗೆಲ್ಲೋರು ನಾವೆಯಾ. ಅವರುಗಳು ವಿರೋಧಪಕ್ಷದೋರ ಸಾಲ್ನಾಗೆ ಬಿದ್ದಿರ್ತಾರೆ’ ಹೂಂಕರಿಸಿದರು ಗಿರಿಗೆರೆಶ್ರೀ. ಅಭಿನಯಬಸಣ್ಣೋರೀಗ ಮೂಲಭೂತ ಸಮಸ್ಯೆ ಮುಂದಿಟ್ಟರು. ’ನಮ್ಮ ಕಾವಿಪಕ್ಷಕ್ಕೊಂದು ಚಿನ್ಹೆ ಬೇಕಲ್ರೀ…?’

’ನಮ್ಮ ಬಸವಣ್ಣನೇ ಸಿಂಬಲಾದ್ರೆ ಹೆಂಗೆ?’ ಕೊಶ್ಚನ್ ಮಾಡಿ ಆನ್ಸರ್ರೂ ಮುಂದಿಟ್ಟ ಅವರು ಪೇಟ ತೆಗೆದು ಗಾಳಿ ಹಾಕ್ಕೊಂಡ್ರು.

’ಬ್ಯಾಡ್ರಪ್ಪೋರೆ, ಲಿಂಗವೇ ನಮ್ಮ ಚಿಹ್ನೆ’ ಕೆಲವು ಕಾವಿಶೀಲ್ಡ್‌ಗಳು ಕೊಡವಿಕೊಂಡೆದ್ದರು. ’ಆಪದಿಲ್ಲೆ, ಅದು ಜಾತಿ ಸಂಕೇತ ಮಾರ್ರೆ’ ಕನಲಿದರು ಉಡುಪಿವರ. ’ಅದು ಸಮಾನತೆಯ ಸಂಕೇತಾರೀ’ ಮತ್ತೂರರು ಗುಡುಗಿದರು.

’ಹೋಗ್ಲಿ ಈಬತ್ತಿಗಟ್ಟಿ ಚಿನ್ಹೆ ಹೆಂಗೆ?’ ಡಿಂಗಾಲೇಶ್ವರರ ಹಪಾಹಪಿ.

’ಮೂರುನಾಮ ಯಾಕಾಗಬಾರ್‍ದು ಸ್ವಾಮ್ಗುಳೆ?’ ಕೊಲ್ಲೂರಸಾಮಿ ಕೊಲ್ಲುವವರಂತೆ ಮುನ್ನುಗಿದರು.

’ಹೌದ್ರಪಾ, ಶ್ರೀರಾಮನ ಹಣೆಯ ಮೇಲುಂಟು. ಅದೇ ಬೆಸ್ಟು, ಅಯೋಧ್ಯಾನಾಗೆ ರಾಮಮಂದಿರ ಆಗ್ತಿದೆ. ಗೊತ್ತುಂಟಾ’ ಉಡುಪಿವರ ಬೀಗಿ ಇತರರ ಹೊಟ್ಟಿ ಉರಿಸಿದರು.

’ನಾವು ಅಧಿಕಾರಕ್ಕೆ ಬಂದ್ವೋ ಅದರ ಅಪೋಸಿಟ್ನಾಗೆ ಬಸವಮಂದಿರ ಕಟ್ತೀವಿ…’ ಅಭಿನಯ ಬಸಣ್ಣೋರು ಚಾಲೆಂಜಿಂಗ್ ಸ್ಟಾರ್‌ನಂತಾಡಿದರು.

’ಹಂಗಾರೆ, ನಾವು ವಾಲ್ಮೀಕಿ ಸ್ಟಾಚ್ಯು ನಿಲ್ಲಿಸ್ತೀವಿ ಕಣ್ರಿ’ ಬೇಡರಸ್ವಾಮಿ ಶಪಥವನ್ನೇ ಮಾಡಿಬಿಟ್ಟರು.

’ಹಂಗಾರೆ ನಮ್ಮ ಕನಕಂದು ಯಾಕೆ ಆಗಬಾರ್‍ದರೀ?’ ಕೆಲವರು ಕಂಬಳಿ ಕೊಡವಿಕೊಂಡೆದ್ದರು. ಕಾವಿಶೀಲ್ಡ್‌ಗಳೆಲ್ಲಾ ಟೋಟಲ್ಲಾಗಿ ಕೂಗಾಡಿ ಕೈಕೈ ಮಿಲಾಯಿಸೋವಾಗ, ಲಾಠಿಚಾರ್ಜ್ ಮಾಡಲಾಗದೆ, ಒದ್ದು ಬಿಡಿಸಲಾಗದೆ ಪೋಲಿಸಪ್ಪಗಳು ಪರದೇಶಿಗಳಂತಾದರು. ಕಾವಿಗಳೆಲ್ಲಾ ಕರೆಂಟ್ ಬಡಿದವರಂತಾಡುತ್ತಾ ಕೈಗೆ ಸಿಕ್ಕಿದ್ದನ್ನು ಎತ್ತಿ ಎಸೆದಾಡುವಾಗ ಧಿಡೀರನೆ ವೇದಿಕೆ ಧಡಾರನೆ ಕುಸಿಯಿತು.

***

ನಿದ್ದೆಗಣ್ಣಿನಲ್ಲಿ ಮಂಚದಿಂದ ಬುಡಕ್ಕನುರಳಿ ನೆಲಕ್ಕೆ ಬಿದ್ದು, ನರಳಾಡುತ್ತಾ ಕಿಟಕಿಯತ್ತ ನೋಡಿದೆ. ಬೆಳಗಾಗುತ್ತಿದೆ! ಬೆಳಗಿನ ಜಾವದ ಕನಸು ನಿಜವಾಗುತ್ತಂತೆ ಹೌದ್ರಾ!?

ಡಾ. ಬಿ. ಎಲ್. ವೇಣು

ಬಿ.ಎಲ್. ವೇಣು
ಐತಿಹಾಸಿಕ ಕಾದಂಬರಿಗಳ ಮೂಲಕ ಜನಪ್ರಿಯರಾಗಿರುವ ಲೇಖಕ ಬಿ.ಎಲ್. ವೇಣು. ರಂಗಭೂಮಿ ಹಿನ್ನೆಲೆಯ ಅವರು ಇತಿಹಾಸ ಮತ್ತು ಸಂಶೋಧನೆಗಳಲ್ಲಿ ಪ್ರೀತಿ ಹೊಂದಿದ್ದಾರೆ.


ಇದನ್ನೂ ಓದಿ: ರಾಜಶೇಖರ ಹಳೆಮನೆ ಅವರ ಹೊಸ ಸಣ್ಣ ಕಥೆ ‘ಸೂತಕ’

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...