ಜಾಗತಿಕ ಹಸಿವು ಸೂಚ್ಯಂಕ (GHI)ದಲ್ಲಿ ಭಾರತವು ವಿಶ್ವದ 127 ದೇಶಗಳಲ್ಲಿ 105 ನೇ ಸ್ಥಾನದಲ್ಲಿದೆ ಎಂದು 2024ರ 19ನೇ ಹಸಿವು ಸೂಚ್ಯಂತ ವರದಿ ಹೇಳಿದೆ. ಭಾರತವು ‘ಗಂಭೀರ’ ಹಸಿವಿನ ಸಮಸ್ಯೆಗಳಿರುವ ರಾಷ್ಟ್ರಗಳ ಪಟ್ಟಿಯಲ್ಲಿದ್ದು, ತನ್ನ ನೆರೆಯ ರಾಷ್ಟ್ರಗಳಾದ ಶ್ರೀಲಂಕಾ, ನೇಪಾಳ, ಮ್ಯಾನ್ಮಾರ್ ಮತ್ತು ಬಾಂಗ್ಲಾದೇಶಕ್ಕಿಂತ ಹಿಂದುಳಿದಿದೆ ಎಂದು ವರದಿ ಹೇಳಿದೆ. ಭಾರತದಲ್ಲಿ ಗಂಭೀರ ಹಸಿವು
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
‘ಕನ್ಸರ್ನ್ ವರ್ಲ್ಡ್‌ವೈಡ್’ ಮತ್ತು ‘ವೆಲ್ತ್‌ಹಂಗರ್‌ಹಿಲ್ಫ್’ ಜಂಟಿಯಾಗಿ ಪ್ರಕಟಿಸುತ್ತಿರುವ GHI ವರದಿಯ ಸರಣಿಯು ವಿಶ್ವಾದ್ಯಂತ ಹಸಿವನ್ನು ಟ್ರ್ಯಾಕ್ ಮಾಡುತ್ತದೆ ಮತ್ತು ತುರ್ತು ಕ್ರಮ ಅಗತ್ಯವಿರುವ ಪ್ರದೇಶಗಳ ಮೇಲೆ ಕೇಂದ್ರೀಕರಿಸುತ್ತದೆ.ಅದಾಗ್ಯೂ, ಭಾರತವು ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನಕ್ಕಿಂತ ಸ್ವಲ್ಪ ಮೇಲಿದೆ ಎಂದು ವರದಿ ಹೇಳಿದೆ.
ಇದನ್ನೂ ಓದಿ: ನವೆಂಬರ್ 1 ರಂದು ಎಲ್ಲಾ ಕಂಪನಿ, ಶಿಕ್ಷಣ ಕೇಂದ್ರಗಳಲ್ಲಿ ಕರ್ನಾಟಕ ಧ್ವಜಾರೋಹಣ ಕಡ್ಡಾಯ: ಡಿಕೆ ಶಿವಕುಮಾರ್
2024 ರ ವರದಿಯಲ್ಲಿ ಹಸಿವು ಸೂಚ್ಯಂಕದಲ್ಲಿ ಭಾರತದ ಸ್ಕೋರ್ 27.3 ಇದ್ದು, ಇದು ಹಸಿವಿನ ಗಂಭೀರ ಮಟ್ಟವನ್ನು ಪ್ರತಿಬಿಂಬಿಸುತ್ತದೆ. ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿ ಅಪೌಷ್ಟಿಕತೆಯ ಹರಡುವಿಕೆ ಸ್ವಲ್ಪ ಹೆಚ್ಚಳವಾಗಿದೆ ಎಂದು ವರದಿಯು ಹೇಳಿದೆ.
ಭಾರತದ 2016ರ GHI ಸ್ಕೋರ್ 29.3ಕ್ಕೆ ಹೋಲಿಸಿದರೆ 2024 ಸ್ಕೋರ್ ಸ್ವಲ್ಪ ಸುಧಾರಣೆಯಾಗಿದೆ. ಅದಾಗ್ಯೂ, ಈ ಸ್ಕೋರ್ ‘ಗಂಭೀರ ಹಸಿವು’ ವರ್ಗದ ಅಡಿಯಲ್ಲಿ ಬರುತ್ತದೆ. 2000 ಮತ್ತು 2008 ರಲ್ಲಿ ಕ್ರಮವಾಗಿ 38.4 ಮತ್ತು 35.2 ಅಂಕಗಳಿಗೆ ಹೋಲಿಸಿದರೆ ಗಣನೀಯ ಪ್ರಗತಿಯಾಗಿದೆ. ಈ ಎರಡೂ ಸ್ಕೋರ್ ಅನ್ನು ‘ಆತಂಕಕಾರಿ’ ಎಂದು ವರ್ಗೀಕರಿಸಲಾಗಿದೆ.
ಇದನ್ನೂಓದಿ: FACT CHECK : ವೈರಲ್ ಫೋಟೋ ಎಪಿಜೆ ಅಬ್ದುಲ್ ಕಲಾಂ ಅವರ ಬಾಲ್ಯದ್ದಲ್ಲ
ಭಾರತವು ಮಕ್ಕಳ ಅಪೌಷ್ಟಿಕತೆಯಲ್ಲಿ ತೀವ್ರ ಸವಾಲುಗಳನ್ನು ಎದುರಿಸುತ್ತಲೇ ಇದೆ. ಜಾಗತಿಕವಾಗಿ ಅತಿ ಹೆಚ್ಚು ಮಕ್ಕಳ ಅಪೌಷ್ಠಿಕತೆ ಪ್ರಮಾಣ 18.7% ಇದೆ. ದೇಶದಲ್ಲಿ ಮಕ್ಕಳ ಬೆಳವಣಿಗೆ ಕುಂಠಿತ 35.5%ರಷ್ಟಿದ್ದು, ಐದು ವರ್ಷದೊಳಗಿನ ಮರಣ ಪ್ರಮಾಣವು 2.9% ಮತ್ತು ಅಪೌಷ್ಟಿಕತೆಯ ಪ್ರಮಾಣವು 13.7% ಇದೆ.
2000 ರಿಂದ ಭಾರತವು ತನ್ನ ಮಕ್ಕಳ ಮರಣ ಪ್ರಮಾಣವನ್ನು ಗಣನೀಯವಾಗಿ ಸುಧಾರಿಸಿದೆಯಾದರೂ, ಮಕ್ಕಳ ಅಪೌಷ್ಟಿಕತೆಯು ದೊಡ್ಡ ಸಮಸ್ಯೆಯಾಗಿ ಉಳಿದಿದೆ. ಬೆಳವಣಿಗೆ ಕುಂಠಿತ ದರಗಳು ಇನ್ನೂ ಆತಂಕಕಾರಿಯಾಗಿ ಹೆಚ್ಚಿವೆ. ಭಾರತದಲ್ಲಿ ಗಂಭೀರ ಹಸಿವು
2016 ರಿಂದ ಹಸಿವನ್ನು ಕಡಿಮೆ ಮಾಡುವಲ್ಲಿ ಜಾಗತಿಕ ಪ್ರಗತಿಯು ಕುಂಠಿತವಾಗಿದೆ ಎಂದು 2024ರ GHI ವರದಿ ಎತ್ತಿ ತೋರಿಸುತ್ತದೆ. 2030 ರ ವೇಳೆಗೆ ಶೂನ್ಯ ಹಸಿವನ್ನು ಸಾಧಿಸುವ ಗುರಿಯು ಅಸಂಭವವಾಗಿದೆ ಎಂದು ವರದಿ ಹೇಳಿದೆ. ಮೌಲ್ಯಮಾಪನ ಮಾಡಿದ 127 ದೇಶಗಳಲ್ಲಿ, 42 ದೇಶಗಳು ಇನ್ನೂ ‘ಆತಂಕಕಾರಿ’ ಅಥವಾ ‘ಗಂಭೀರ’ ಹಸಿವಿನ ಮಟ್ಟವನ್ನು ಅನುಭವಿಸುತ್ತಿವೆ.
ವಿಡಿಯೊನೋಡಿ: DCM ಆಗಿದ್ದವರು, ಸಚಿವರು ನಿಮಗೆ ಪ್ರೋಟೋಕಾಲ್ ಏನೆಂದು ಹೇಳಿಕೊಡಬೇಕೆ – ಅಶ್ವಥ್ ನಾರಾಯಣ್ ವಿರುದ್ಧ ಡಿ.ಕೆ ಸುರೇಶ್ ಕಿಡಿ


