ಹೈದರಾಬಾದ್‌ನ ಪೆಟ್ರೋಲ್ ಪಂಪ್‌ನಲ್ಲಿ ಮದ್ಯದ ಅಮಲಿನಲ್ಲಿದ್ದ ವ್ಯಕ್ತಿಯೊಬ್ಬ ಲೈಟರ್ ಮೂಲಕ ಶನಿವಾರ ಸಂಜೆ ಬೆಂಕಿ ಹಚ್ಚಿದ್ದು, ಆತನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಂಜೆ 7 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಆರೋಪಿ ಚಿರನ್ ಎಂದು ಗುರುತಿಸಲಾಗಿದೆ. ಕೈಯಲ್ಲಿ ಸಿಗರೇಟ್ ಲೈಟರ್ ಹಿಡಿದು ಬಂದಿದ್ದ ಆತ ಕುಡಿದ ನಶೆಯಲ್ಲೇ ನಾಚರಂ ಪ್ರದೇಶದ ಪೆಟ್ರೋಲ್ ಪಂಪ್‌ಗೆ ಬಂದಿದ್ದಾನೆ. ಪೆಟ್ರೋಲ್ ಬಂಕ್‌ನಲ್ಲಿದ್ದ ಉದ್ಯೋಗಿಗಳಲ್ಲಿ ಒಬ್ಬರಾದ ಅರುಣ್ ಅವರು ಲೈಟರ್ ಹಚ್ಚಲು ಯೋಜಿಸುತ್ತಿದ್ದೀರಾ ಎಂದು ಆರೋಪಿಯನ್ನು ಕೇಳಿದ್ದಾರೆ. ಆಗ ಆತ ಚಿರನ್‌ಗೆ ಧೈರ್ಯವಿದ್ದರೆ ಹಚ್ಚು ಎಂದು ಸವಾಲು ಹಾಕಿ, ಆತನ್ನು ಪ್ರಚೋದಿಸಿದ್ದಾನೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಆರೋಪಿ, ಸ್ಕೂಟರ್‌ಗೆ ಪೆಟ್ರೋಲ್ ಹಾಕುವಗಲೇ ಲೈಟರ್‌ಗೆ ಬೆಂಕಿ ಹಚ್ಚಿದ ಪರಿಣಾಮ ಹಠಾತ್ ಬೆಂಕಿ ಹೊತ್ತಿಕೊಂಡಿತು. ಬೆಂಕಿ ಹೊತ್ತಿಕೊಂಡಾಗ ಪೆಟ್ರೋಲ್ ಪಂಪ್‌ನಲ್ಲಿ ಇಬ್ಬರು ನೌಕರರು ಸೇರಿದಂತೆ ಸುಮಾರು 10 ರಿಂದ 11 ಮಂದಿ ಇದ್ದರು.
Drunk #Bihari Man Starts Fire At #Hyderabad Petrol Pump On "Dare", Arrested
A man, said to be in an inebriated condition, was arrested after he ignited a lighter and started a fire at a petrol pump in Hyderabad on Saturday evening, officials said. pic.twitter.com/R0KTQ9pg0a
— Telangana News Point (@mediainfodesk) October 27, 2024
ಘಟನೆಯ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ರೆಕಾರ್ಡ್ ಅಗಿದ್ದು, ಬೆಂಕಿಯ ಬಳಿ ನಿಂತಿದ್ದ ಮಹಿಳೆ ಮತ್ತು ಮಗು ಅಪಯಾದಿಂದ ಸ್ವಲ್ಪದರಲ್ಲೆ ಪಾರಾಗುವ ದೇಶ್ಯ ದಾಖಲಾಗಿದೆ. ಪೆಟ್ರೋಲ್ ಪಂಪ್‌ನಲ್ಲಿ ನಿಂತಿದ್ದ ಇತರರೆಲ್ಲರೂ ಬೆಂಕಿಗೆ ಹೆಸರಿ ಓಡಿಹೋಗಿದ್ದಾರೆ.
ಪೊಲೀಸರು ಅರುಣ್‌ನನ್ನು ಬಂಧಿಸಿದ್ದು, ಇಬ್ಬರ ವಿರುದ್ಧ ಬೆಂಕಿ ಮತ್ತು ಸ್ಫೋಟಕಗಳ ಮೂಲಕ ಕಿಡಿಗೇಡಿತನದ ಆರೋಪ ಹೊರಿಸಿದ್ದಾರೆ. ಬಿಹಾರ ಮೂಲದ ಇಬ್ಬರೂ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
“ಈ ಅಪಾಯಕಾರಿ ಕೃತ್ಯವು ಜೀವಕ್ಕೆ ಅಪಾಯವನ್ನುಂಟುಮಾಡುತ್ತದೆ. ಆದರೆ, ದುರಂತದ ಸ್ಫೋಟವನ್ನು ಉಂಟುಮಾಡಬಹುದು, ವಿಶೇಷವಾಗಿ ಭಾರೀ ದಟ್ಟಣೆಯಿರುವ ಈ ಜನನಿಬಿಡ ಪ್ರದೇಶದಲ್ಲಿ” ಎಂದು ನಾಚರಂ ಪೊಲೀಸ್ ಇನ್ಸ್ಪೆಕ್ಟರ್ ಜಿ ರುದ್ವಿರ್ ಕುಮಾರ್ ಹೇಳಿದ್ದಾರೆ.
ಇದನ್ನೂ ಓದಿ; ಇಸ್ರೇಲ್‌ಗೆ ಹೇಗೆ ಪ್ರತಿಕ್ರಿಯಿಸಬೇಕು ಎಂದು ಇರಾನ್ ಅಧಿಕಾರಿಗಳು ನಿರ್ಧರಿಸುತ್ತಾರೆ: ಅಯತೊಲ್ಲಾ ಖಮೇನಿ


