ಹೈದರಾಬಾದ್‌ನ ಹಳೆಯ ನಗರದ ಟಪ್ಪಚಬುತ್ರದಲ್ಲಿರುವ ದೇವಾಲಯದ ಆವರಣದಲ್ಲಿ ಮಾಂಸದ ತುಂಡುಗಳು ಪತ್ತೆಯಾದ ನಂತರ ಬುಧವಾರ ಪ್ರತಿಭಟನೆ ನಡೆದಿದೆ.
ಪೊಲೀಸರ ಪ್ರಕಾರ, ಟಪ್ಪಚಬುತ್ರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಹನುಮಾನ್ ಮತ್ತು ಶಿವ ಮಂದಿರವಿರುವ ದೇವಾಲಯ ಸಂಕೀರ್ಣದ ಒಳಗೆ ಬುಧವಾರ ಮುಂಜಾನೆ ಈ ಘಟನೆ ನಡೆದಿದ್ದು, ಘಟನೆಯ ಬಗ್ಗೆ ನಾಲ್ಕು ತಂಡಗಳು ತನಿಖೆ ನಡೆಸುತ್ತಿವೆ.
ಶಿವಲಿಂಗದ ಬಳಿ ಯಾರೋ ಮಾಂಸ ಎಸೆದಿದ್ದಾರೆ, ಪೂಜೆಗೆ ಬಂದ ಭಕ್ತರು ಅದನ್ನು ಗಮನಿಸಿ ಮಾಹಿತಿ ನೀಡಿದ್ದಾರೆ ಎಂದು ದೇವಾಲಯ ಸಮಿತಿ ಸದಸ್ಯರೊಬ್ಬರು ತಿಳಿಸಿದ್ದಾರೆ.
ಬಿಜೆವೈಎಂ ಸದಸ್ಯರೊಂದಿಗೆ ಸ್ಥಳೀಯ ಜನರು ದೇವಾಲಯದ ಮುಂದೆ ಜಮಾಯಿಸಿ ಘಟನೆಯನ್ನು ಖಂಡಿಸಿ ಪ್ರತಿಭಟನೆ ನಡೆಸಿದರು. ನ್ಯಾಯಕ್ಕಾಗಿ ಒತ್ತಾಯಿಸಿ ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗಿದರು.
ದೇವಾಲಯದೊಳಗೆ ಮಾಂಸದ ತುಂಡುಗಳು ಪತ್ತೆಯಾಗಿವೆ ಎಂಬ ಮಾಹಿತಿ ಸಿಕ್ಕಿದ್ದು, ಘಟನೆಯ ಎಲ್ಲಾ ಕೋನಗಳಿಂದಲೂ ತನಿಖೆ ನಡೆಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಸಿಸಿಟಿವಿ ಕ್ಯಾಮೆರಾಗಳ ದೃಶ್ಯಗಳನ್ನು ಸಹ ಪರಿಶೀಲಿಸಲಾಗುತ್ತಿದೆ ಎಂದು ಅವರು ಹೇಳಿದರು.
“ಯಾರೋ ಕಿಡಿಗೇಡಿಗಳು ಈ ರೀತಿಯ ದೃಶ್ಯವನ್ನು ಸೃಷ್ಟಿಸಿದ್ದಾರೆ. ಪರಿಸ್ಥಿತಿ ಶಾಂತಿಯುತವಾಗಿದೆ ಮತ್ತು ನಾವು ಪರಿಸ್ಥಿತಿಯನ್ನು ಪರಿಶೀಲಿಸುತ್ತಿದ್ದೇವೆ. ಇದು ಹೇಗೆ ಸಂಭವಿಸಿತು ಎಂದು ಇಲ್ಲಿಯವರೆಗೆ ದೃಢಪಡಿಸಲಾಗಿಲ್ಲ. ಏಕೆಂದರೆ, ಇದನ್ನು ಪ್ರಾಣಿ ಅಥವಾ ವ್ಯಕ್ತಿ ತಂದಿರಬಹುದು, ಅಸ್ವಸ್ಥ ಮನಸ್ಸಿನ ವ್ಯಕ್ತಿ ತಂದಿದ್ದಾರೋ ಎಂಬುದು ತನಿಖೆಯಲ್ಲಿ ಖಚಿತವಾಗುತ್ತದೆ” ಎಂದು ಅಧಿಕಾರಿ ಹೇಳಿದರು.
“ನಾವು ಘಟನೆಯ ವಿವಿಧ ಅಂಶಗಳನ್ನು ಪರಿಶೀಲಿಸುತ್ತಿದ್ದೇವೆ. ಅದು ಮಾನವ ಕೋನವೋ ಅಥವಾ ಇಲ್ಲವೋ ಎಂಬುದನ್ನು ನಾವು ಎಲ್ಲಾ ಆಯಾಮಗಳಿಂದ ಪರಿಶೀಲಿಸುತ್ತೇವೆ. ಆದಷ್ಟು ಬೇಗ ಹೊಣೆಗಾರರನ್ನು ಬಂಧಿಸುತ್ತೇವೆ” ಎಂದು ಅಧಿಕಾರಿ ಹೇಳಿದರು.
ಪ್ರಕರಣ ದಾಖಲಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದರು. ದೇವಾಲಯದ ಬಳಿ ಹೆಚ್ಚುವರಿ ಪಡೆಗಳನ್ನು ನಿಯೋಜಿಸಲಾಗಿದೆ.
ಇದನ್ನೂ ಓದಿ; 370ನೇ ವಿಧಿ ರದ್ದತಿಗೆ ಮೆಹಬೂಬಾ ಮುಫ್ತಿ, ಅವರ ತಂದೆ ಕಾರಣ: ಎನ್‌ಸಿ


