ಸಾಮೂಹಿಕ ಅತ್ಯಾಚಾರ ಪ್ರಕರಣದ ವಿಚಾರಣೆಯ ಸಮಯದಲ್ಲಿ ಐವರು ಸಿಸಿಎಲ್‌ಗಳನ್ನು (ಕಾನೂನಿನ ಪ್ರಕ್ರಿಯೆಯಲ್ಲಿ ತೊಡಗಿರುವ ಮಕ್ಕಳು) ವಯಸ್ಕರಂತೆ ಪರಿಗಣಿಸುವಂತೆ ಬಾಲ ನ್ಯಾಯ ಮಂಡಳಿಗೆ ತೆಲಂಗಾಣ ಪೊಲೀಸರು ಅರ್ಜಿ ಸಲ್ಲಿಸಲು ಚಿಂತನೆ ನಡೆಸುತ್ತಿದ್ದಾರೆ.
ಆರೋಪಿಗಳಿಗೆ ಗರಿಷ್ಠ ಶಿಕ್ಷೆಯಾಗುವುದನ್ನು ಖಚಿತಪಡಿಸಿಕೊಳ್ಳಲು ಕ್ರಮ ಕೈಗೊಳ್ಳಲಾಗಿದೆ. ರಾಜ್ಯ ಸಚಿವ ಕೆ.ಟಿ.ರಾಮರಾವ್ ಪೊಲೀಸರನ್ನು ಅಭಿನಂದಿಸಿದ್ದಾರೆ. ಮೇ 28 ರಂದು 17 ವರ್ಷದ ಬಾಲಕಿಯ ಮೇಲೆ ನಡೆದ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಐವರು ಬಾಲಾಪರಾಧಿಗಳು ಸೇರಿದಂತೆ ಆರು ಜನರನ್ನು ಬಂಧಿಸಲಾಗಿದೆ. ಒಬ್ಬ ಬಾಲಾಪರಾಧಿ ಸಂತ್ರಸ್ತೆಯೊಂದಿಗೆ ಅನುಚಿತವಾಗಿ ವರ್ತಿಸುತ್ತಿರುವುದು ವಿಡಿಯೊದಲ್ಲಿ ಸೆರೆಯಾಗಿದೆ. ಆದರೆ ಅಪರಾಧದಲ್ಲಿ ಆತ ಭಾಗಿಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಹೈದರಾಬಾದ್ ಪೊಲೀಸ್ ಕಮಿಷನರ್ ಸಿ.ವಿ.ಆನಂದ್ ಪಿಟಿಐಗೆ ತಿಳಿಸಿದ್ದು, “ಆರೋಪಿಗಳಿಗೆ ಗರಿಷ್ಠ ಶಿಕ್ಷೆಯನ್ನು ಖಾತ್ರಿಪಡಿಸಿಕೊಳ್ಳಲು ಐವರನ್ನೂ ವಯಸ್ಕರಂತೆ ಪರಿಗಣಿಸಲು ಮಂಡಳಿಯ ಮುಂದೆ ಮನವಿ ಸಲ್ಲಿಸಲು ಮುಂದಾಗಿದ್ದೇವೆ. ಘೋರ ಅಪರಾಧದಲ್ಲಿ ಭಾಗಿಯಾದವರ ವಿರುದ್ಧ ಕಾನೂನಿನ ಕಠಿಣ ಸೆಕ್ಷನ್‌ಗಳನ್ನು ಅನ್ವಯಿಸಲಾಗಿದೆ. ಈ ಕಾನೂನಿನ ಶಿಕ್ಷೆಯ ಪ್ರಕಾರ ಸಾಯುವವರೆಗೂ ಜೈಲಿನಲ್ಲಿರುಬಹುದು ಅಥವಾ ಮರಣದಂಡನೆಯಾಗಬಹುದು” ಎಂದಿದ್ದಾರೆ.
ಪ್ರಕರಣವು ಈಗ ತನಿಖೆಯಲ್ಲಿದೆ. ಚಾರ್ಜ್‌ಶೀಟ್ ಸಲ್ಲಿಸಿದ ನಂತರ, ಐವರು ಸಿಸಿಎಲ್‌ಗಳನ್ನು ವಯಸ್ಕರಂತೆ ವಿಚಾರಣೆಗೆ ಒಳಪಡಿಸುವಂತೆ ಶಿಫಾರಸು ಮಾಡಲು ಬಾಲ ನ್ಯಾಯ ಮಂಡಳಿಗೆ (ಜೆಜೆಬಿ) ವಿನಂತಿಸಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ. “ಇಲ್ಲದಿದ್ದರೆ ಅವರು ಬಾಲಾಪರಾಧಿಗಳಾಗಿ ಉಳಿಯುತ್ತಾರೆ. ಕೇವಲ ಮೂರು ವರ್ಷಗಳ ಶಿಕ್ಷೆಗೆ ಒಳಗಾಗುತ್ತಾರೆ” ಎಂದು ಪೊಲೀಸರು ಹೇಳಿದ್ದಾರೆ.
ಇದನ್ನೂ ಓದಿರಿ: ಮರ್ಯಾದೆಗೇಡು ಹತ್ಯೆ: ಸಾವಿನ ಕುರಿತು ಮೊದಲೇ ಬರೆದಿದ್ದ ಯುವತಿ; ಪತ್ರದಲ್ಲೇನಿದೆ?
ತೆಲಂಗಾಣ ರಾಷ್ಟ್ರರಕ್ಷಣಾ ಸಮಿತಿ ಪಕ್ಷದ ಕಾರ್ಯಾಧ್ಯಕ್ಷ ಕೆ.ಟಿ.ರಾಮರಾವ್ ಟ್ವೀಟ್ ಮಾಡಿದ್ದು, “ನಾನು ತೆಲಂಗಾಣ ಪೊಲೀಸರ ನಿಲುವನ್ನು ಸ್ವಾಗತಿಸುತ್ತೇನೆ ಹಾಗೂ ಬೆಂಬಲಿಸುತ್ತೇನೆ. ಅತ್ಯಾಚಾರದಂತಹ ಘೋರ ಅಪರಾಧವನ್ನು ಮಾಡುವಷ್ಟು ವಯಸ್ಕರಾಗಿದ್ದರೆ, ಅವರನ್ನು ವಯಸ್ಕರಂತೆ ಶಿಕ್ಷಿಸಬೇಕು. ಆದರೆ ಬಾಲಾಪರಾಧಿಯಾಗಿ ಪರಿಗಣಿಸಬಾರದು” ಎಂದಿದ್ದಾರೆ.
I welcome & support the stand of @TelanganaCOPs
If you are adult enough to commit a crime as heinous as rape, one must also be punished as an adult
& not as a juvenile https://t.co/Pp3ALBzbfx— KTR (@KTRTRS) June 9, 2022
ಸ್ಥಳೀಯ ನ್ಯಾಯಾಲಯವು ಕಸ್ಟಡಿಗೆ ನೀಡಿದ ನಂತರ ಸೆರೆಮನೆಯಲ್ಲಿದ್ದ ವಯಸ್ಕ ಆರೋಪಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು. ಅಪರಾಧದ ದೃಶ್ಯವನ್ನು ಮರುಸೃಷ್ಟಿ ಮಾಡುವುದು ಸೇರಿದಂತೆ ಪ್ರಕರಣದ ಹೆಚ್ಚಿನ ತನಿಖೆಯ ಭಾಗವಾಗಿ ಆರೋಪಿಯನ್ನು ಕಸ್ಟಡಿ ವಿಚಾರಣೆಗೆ ಒಳಪಡಿಸಲು ಪೊಲೀಸರು ಕೋರಿದ್ದಾರೆ.
ಸಂಬಂಧಿತ ಬೆಳವಣಿಗೆಯಲ್ಲಿ, ಜುವೆನೈಲ್ ಜಸ್ಟಿಸ್ ಬೋರ್ಡ್ ಪ್ರತಿಕ್ರಿಯೆ ನೀಡಿದ್ದು, ಜೂನ್ 10 ರಿಂದ ನಾಲ್ಕು ದಿನಗಳ ಕಾಲ ವಿಚಾರಣೆಗಾಗಿ ಮೂವರು ಸಿಸಿಎಲ್‌ಗಳನ್ನು ಪೊಲೀಸ್ ಕಸ್ಟಡಿಗೆ ನೀಡಲು ಒಪ್ಪಿಗೆ ನೀಡಿದೆ.


