ಹೈದರಾಬಾದ್‌ನಲ್ಲಿ ಸುಮಾರು 39 ಟ್ರಾನ್ಸ್‌ಜೆಂಡರ್ ವ್ಯಕ್ತಿಗಳು ನಗರದ ರಸ್ತೆಗಳಲ್ಲಿ ಭಿಕ್ಷೆ ಬೇಡುವುದನ್ನು ಬಿಟ್ಟು ತೆಲಂಗಾಣ ಪೊಲೀಸರ ಭಾಗವಾಗಿ ಸಂಚಾರವನ್ನು ನಿರ್ವಹಿಸುವತ್ತ ಸಾಗಿದ್ದಾರೆ. ಪ್ರಾಯೋಗಿಕ ಆಧಾರದ ಮೇಲೆ ಸಂಚಾರ ಸಹಾಯಕರಾಗಿ ನೇಮಕಗೊಂಡಿರುವ ಅವರ ಪ್ರಯಾಣವನ್ನು ಸಬಲೀಕರಣ ಮತ್ತು ಸಾಮಾಜಿಕ ಸ್ವೀಕಾರದ ಸಂಕೇತವೆಂದು ಬಣ್ಣಿಸಲಾಗುತ್ತಿದೆ.
ಟ್ರಾಫಿಕ್ ಸಹಾಯಕರಲ್ಲಿ ಒಬ್ಬರಾದ ನಿಶಾ ಮಾತನಾಡಿ, ಅವಕಾಶಕ್ಕಾಗಿ ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಅವರಿಗೆ ಕೃತಜ್ಞತೆ ಸಲ್ಲಿಸಿದರು. “ಹಿಂದೆ ನಾವು ಭಿಕ್ಷೆ ಬೇಡುತ್ತಿದ್ದ ಸ್ಥಳಗಳಲ್ಲಿ ಸಂಚಾರವನ್ನು ನಿರ್ವಹಿಸುವುದು ಅದ್ಭುತವಾಗಿದೆ” ಎಂದು ಅವರು ಸಂತಸ ಹಂಚಿಕೊಂಡಿದ್ದಾರೆ.
“ನನ್ನ ಪೋಷಕರು ನನ್ನನ್ನು ಸ್ವೀಕರಿಸಲಿಲ್ಲ. ಆದರೆ, ಅವರು ಈಗ ನನ್ನನ್ನು ಸ್ವೀಕರಿಸಿದರು. ನನ್ನ ಸ್ನೇಹಿತರು ನನ್ನನ್ನು ತಪ್ಪಿಸುತ್ತಿದ್ದರು. ಆದರೆ, ಈಗ ಅವರು ನನಗೆ ಸಂದೇಶ ಕಳುಹಿಸುತ್ತಾರೆ; ಸಂಪರ್ಕದಲ್ಲಿರುತ್ತಾರೆ. ನಾನು ಕೆಲಸ ಪಡೆದ ನಂತರ, ನನ್ನ ಸಂಬಂಧಿಕರು ಮತ್ತು ಇತರರು ಮೆಚ್ಚುತ್ತಿದ್ದಾರೆ; ಇದು ಅದ್ಭುತ. ನಾನು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ” ಎಂದು ನಿಶಾ ಹೇಳಿದರು.
ಮತ್ತೊಬ್ಬ ಟ್ರಾಫಿಕ್ ಸಹಾಯಕರಾದ ಸನಾ ಇದೇ ರೀತಿಯ ಭಾವನೆಗಳನ್ನು ಪ್ರತಿಧ್ವನಿಸಿದರು; ನಾಗರಿಕರಿಂದ ಅವರು ಪಡೆಯುವ ಹೊಸ ಗೌರವವದ ಕುರಿತು ಖುಷಿ ವ್ಯಕ್ತಪಡಿಸಿದರು.
ನವೆಂಬರ್ 2024 ರಲ್ಲಿ, ಸಿಎಂ ರೆಡ್ಡಿ ಅವರು ಹೆಚ್ಚಿನ ದಟ್ಟಣೆಯ ಪ್ರದೇಶಗಳಲ್ಲಿ ಟ್ರಾನ್ಸ್‌ಜೆಂಡರ್ ವ್ಯಕ್ತಿಗಳನ್ನು ಸಂಚಾರ ಸ್ವಯಂಸೇವಕರಾಗಿ ನೇಮಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದಾಗ ಈ ಉಪಕ್ರಮ ಪ್ರಾರಂಭವಾಯಿತು. ಅವರಿಗೆ ಗೃಹರಕ್ಷಕರಿಗೆ ಹೋಲುವ ಉದ್ಯೋಗಾವಕಾಶಗಳನ್ನು ಒದಗಿಸುವುದು, ಮೀಸಲಾದ ಡ್ರೆಸ್ ಕೋಡ್ ಮತ್ತು ಸಂಬಳ ಒದಗಿಸುವುದು ಇದರ ಉದ್ದೇಶವಾಗಿತ್ತು.
ಡಿಸೆಂಬರ್ 6, 2024 ರಂದು, ಸಿಎಂ ರೇವಂತ್ ರೆಡ್ಡಿ ಅವರು ಆಯ್ಕೆಯಾದ ಅಭ್ಯರ್ಥಿಗಳಿಗೆ ದಾಖಲಾತಿ ಪತ್ರಗಳನ್ನು ಹಸ್ತಾಂತರಿಸಿದರು. ಡಿಸೆಂಬರ್ 22 ರ ಹೊತ್ತಿಗೆ ಅವರನ್ನು ಔಪಚಾರಿಕವಾಗಿ ಸೇವೆಗೆ ಸೇರಿಸಲಾಯಿತು. 100 ಅರ್ಜಿದಾರರಲ್ಲಿ, ದೈಹಿಕ ಪರೀಕ್ಷೆಗಳು ಸೇರಿದಂತೆ ಕಠಿಣ ಆಯ್ಕೆ ಪ್ರಕ್ರಿಯೆಯ ನಂತರ 44 ಜನರನ್ನು ಶಾರ್ಟ್‌ಲಿಸ್ಟ್ ಮಾಡಲಾಯಿತು. 39 ಜನರು ತಮ್ಮ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದರು.
ಹೆಚ್ಚುವರಿ ಪೊಲೀಸ್ ಆಯುಕ್ತ (ಟ್ರಾಫಿಕ್) ಪಿ. ವಿಶ್ವ ಪ್ರಸಾದ್, ಟ್ರಾನ್ಸ್‌ಜೆಂಡರ್ ಸಂಚಾರ ಸಹಾಯಕರು ಸೇರ್ಪಡೆಯಾದಾಗಿನಿಂದ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಗಮನಿಸಿದರು.
“ಟ್ರಾಫಿಕ್ ಸಹಾಯಕರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರು ವೃತ್ತಿಪರ ಕುಶಾಗ್ರಮತಿ ಪಡೆಯಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಅವರು ಸಮಾಜದೊಂದಿಗೆ ಸಂಯೋಜನೆಗೊಳ್ಳಲು ಮತ್ತು ಉತ್ತಮವಾಗಿ ಕಾರ್ಯನಿರ್ವಹಿಸಲು ಬಯಸುತ್ತಾರೆ” ಎಂದರು.
ಇದನ್ನೂ ಓದಿ; ಸ್ಯಾಮ್ ಪಿತ್ರೋಡಾ ವಿರುದ್ಧ ಅಕ್ರಮ ಭೂ ಒತ್ತುವರಿ ದೂರು ಕೊಟ್ಟ ಬಿಜೆಪಿ ನಾಯಕ ಎನ್.ಆರ್. ರಮೇಶ್



Very good decision to all Transgenders. This opportunity need to implement in all states of India. With warm regards to Govt of Telengana. Jaihind.