Homeಅಂತರಾಷ್ಟ್ರೀಯಭಾರತ, ಪಾಕಿಸ್ತಾನ ಎರಡೂ ನನಗೆ ಆಪ್ತ ದೇಶಗಳು; ಆದರೆ ಪಹಲ್ಗಾಮ್ ದಾಳಿ ಕೆಟ್ಟದು: ಟ್ರಂಪ್

ಭಾರತ, ಪಾಕಿಸ್ತಾನ ಎರಡೂ ನನಗೆ ಆಪ್ತ ದೇಶಗಳು; ಆದರೆ ಪಹಲ್ಗಾಮ್ ದಾಳಿ ಕೆಟ್ಟದು: ಟ್ರಂಪ್

- Advertisement -
- Advertisement -

ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಶುಕ್ರವಾರ ಪ್ರತಿಕ್ರಿಯಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇದು ತೀರಾ “ಕೆಟ್ಟದು” ಎಂದು ಹೇಳಿದ್ದಾರೆ.

ರೋಮ್‌ಗೆ ಹೋಗುವ ದಾರಿ ಮಧ್ಯೆ ಏರ್ ಫೋರ್ಸ್ ಒನ್‌ನಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಟ್ರಂಪ್, ಭಾರತ ಮತ್ತು ಪಾಕಿಸ್ತಾನದ ನಡುವೆ ಯಾವಾಗಲೂ ಉದ್ವಿಗ್ನತೆ ಇದೆ. ಎರಡೂ ದೇಶಗಳು “ಒಂದಲ್ಲ ಒಂದು ರೀತಿಯಲ್ಲಿ ಅದನ್ನು ಪರಿಹರಿಸಿಕೊಳ್ಳುತ್ತವೆ” ಎಂದಿದ್ದಾರೆ.

“ನನಗೆ ಭಾರತ ಮತ್ತು ಪಾಕಿಸ್ತಾನ ಎರಡೂ ತುಂಬಾ ಆಪ್ತ ರಾಷ್ಟ್ರಗಳು. ಕಾಶ್ಮೀರದಲ್ಲಿ ಸಾವಿರ ವರ್ಷ ಅವರು ಯುದ್ಧ ಮಾಡಿಕೊಳ್ಳಬಹುದು. ಸಾವಿರ ವರ್ಷಕ್ಕಿಂತಲೂ ಅಧಿಕ ಅವಧಿಗೂ ಅದು ಮುಂದುವರಿಯಬಹುದು. ಆದರೆ, ಭಯೋತ್ಪಾದಕ ದಾಳಿ ಕೆಟ್ಟದು” ಎಂದು ಟ್ರಂಪ್ ಹೇಳಿದ್ದಾಗಿ ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ.

1500 ವರ್ಷಗಳಿಂದ ಅಲ್ಲಿ ಸಂಘರ್ಷ ಇದೆ. ಅದು ಒಂದೇ ಬಗೆಯದ್ದು; ಆದರೆ ಒಂದಲ್ಲ ಒಂದು ವಿಧಾನದಲ್ಲಿ ಅದನ್ನು ಬಗೆಹರಿಸಿಕೊಳ್ಳಬಹುದು ಎಂಬ ನಿರೀಕ್ಷೆ ನನ್ನದು ಎಂದು ಟ್ರಂಪ್ ಹೇಳಿದ್ದಾರೆ.

ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಮಂದಿ ಪ್ರವಾಸಿಗರು ಹತ್ಯೆಗೀಡಾದ ಬಳಿಕ ಉಭಯ ದೇಶಗಳ ನಡುವಿನ ಸಂಘರ್ಷ ಮತ್ತಷ್ಟು ಹೆಚ್ಚಾಗಿದೆ. 2019ರ ಪುಲ್ವಾಮಾ ಬಾಂಬ್ ದಾಳಿಯ ಬಳಿಕ ನಡೆದ ಅತಿದೊಡ್ಡ ಭಯೋತ್ಪಾದಕ ದಾಳಿ ಇದಾಗಿದೆ.

ಪಹಲ್ಗಾಮ್ ಭಯೋತ್ಪಾದಕ ದಾಳಿ: ಪಾಕ್‌ ಜೊತೆಗಿನ ಸಂಬಂಧ ಕಡಿದುಕೊಂಡ ಭಾರತ

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -