Homeಮುಖಪುಟನಮ್ಮ ವರದಿಗೆ ಸರ್ಕಾರ ಹೆದರಿದೆ, ಆದರೆ ಐಟಿ ದಾಳಿಗೆ ನಾವು ಬಗ್ಗುವುದಿಲ್ಲ: ದೈನಿಕ್ ಭಾಸ್ಕರ್

ನಮ್ಮ ವರದಿಗೆ ಸರ್ಕಾರ ಹೆದರಿದೆ, ಆದರೆ ಐಟಿ ದಾಳಿಗೆ ನಾವು ಬಗ್ಗುವುದಿಲ್ಲ: ದೈನಿಕ್ ಭಾಸ್ಕರ್

"ನಾನು ಸ್ವತಂತ್ರ, ಏಕೆಂದರೆ ನಾನು ಭಾಸ್ಕರ್. ಓದುಗರ ವಿವೇಚನೆಯಿಂದ ಮಾತ್ರ ಭಾಸ್ಕರ್ ನಡೆಯುತ್ತದೆ"

- Advertisement -
- Advertisement -

ಭಾರತದ ಅತಿ ದೊಡ್ಡ ಹಿಂದಿ ಪತ್ರಿಕೆ ದೈನಿಕ್ ಭಾಸ್ಕರ್ ಮತ್ತು ಭಾರತ್ ಸಮಾಚಾರ್ ನ್ಯೂಸ್ ಚಾನೆಲ್ ಕಚೇರಿ ಮೇಲಿನ ಐಟಿ ದಾಳಿಗೆ ದೇಶಾದ್ಯಂತ ತೀವ್ರ ಖಂಡನೆ ವ್ಯಕ್ತವಾಗಿದೆ. ವಿರೋಧ ಪಕ್ಷದ ಮುಖಂಡರಾದ ಮಮತಾ ಬ್ಯಾನರ್ಜಿ, ಅರವಿಂದ್ ಕೇಜ್ರಿವಾಲ್, ಶಶಿ ತರೂರ್ ಸೇರಿದಂತೆ ಹಲವರು ತನ್ನ ವಿರುದ್ಧ ಮಾತನಾಡುವವರನ್ನು ಹಣಿಯುವ ಸರ್ಕಾರದ ಕೀಳು ಪ್ರಯತ್ನ ಎಂದು ಖಂಡಿಸಿದ್ದಾರೆ.

‘ಭಾಸ್ಕರ್ ನಿರ್ಭೀತ ಪತ್ರಿಕೋದ್ಯಮ ಮತ್ತು ಸತ್ಯವನ್ನು ಸಾರ್ವಜನಿಕರ ಮುಂದೆ ಇಟ್ಟಿದೆ. ನಾವು ಕಂಡಿದ್ದನ್ನು ವರದಿ ಮಾಡಿದ್ದೇವೆ. ನಮ್ಮ ವರದಿಗೆ ಸರ್ಕಾರ ಹೆದರಿದೆ, ಆದರೆ ಐಟಿ ದಾಳಿಗೆ ನಾವು ಬಗ್ಗುವುದಿಲ್ಲ’ ಎಂದು ದೈನಿಕ್ ಭಾಸ್ಕರ್ ಪ್ರತಿಕ್ರಿಯಿಸಿದೆ. “ನಾನು ಸ್ವತಂತ್ರ, ಏಕೆಂದರೆ ನಾನು ಭಾಸ್ಕರ್. ಓದುಗರ ವಿವೇಚನೆಯಿಂದ ಮಾತ್ರ ಭಾಸ್ಕರ್ ನಡೆಯುತ್ತದೆ” ಎಂದು ಅದು ಟ್ವೀಟ್ ಮಾಡುವ ಮೂಲಕ ಕೇಂದ್ರ ಸರ್ಕಾರದ ಬೆದರಿಕೆಗೆ ಬಗ್ಗುವುದಿಲ್ಲ ಎಂಬ ಸಂದೇಶ ಸಾರಿದೆ.

ದೈನಿಕ್ ಭಾಸ್ಕರ್ ಮತ್ತು ಭಾರತ್ ಸಮಾಚಾರ್ ಪತ್ರಿಕೆ ಮೇಲಿನ ದಾಳಿಯನ್ನು ವಿವಿಧ ರಾಜಕೀಯ ಮುಖಂಡರು ಖಂಡಿಸಿದ್ದಾರೆ. ಇದು ಸತ್ಯ ಹೇಳುವವರನ್ನು ಮೋದಿ ಸರ್ಕಾರ ನಡೆಸಿಕೊಳ್ಳುವ ರೀತಿ ಎಂದು ಟೀಕಿಸಿದ್ದಾರೆ.

ದೈನಿಕ್ ಭಾಸ್ಕರ್ ಮತ್ತು ಭಾರತ್ ಸಮಾಚಾರ್ ಮೇಲೆ ಐಟಿ ದಾಳಿ ಮಾಧ್ಯಮಗಳನ್ನು ಹೆದರಿಸುವ ಪ್ರಯತ್ನವಾಗಿದೆ. ಅವರ ಸಂದೇಶ ಸ್ಪಷ್ಟವಾಗಿದೆ – ಬಿಜೆಪಿ ಸರ್ಕಾರದ ವಿರುದ್ಧ ಮಾತನಾಡುವವರನ್ನು ಬಿಡಲಾಗುವುದಿಲ್ಲ. ಅಂತಹ ಆಲೋಚನೆ ತುಂಬಾ ಅಪಾಯಕಾರಿ. ಪ್ರತಿಯೊಬ್ಬರೂ ಇದರ ವಿರುದ್ಧ ಧ್ವನಿ ಎತ್ತಬೇಕು. ಈ ದಾಳಿಗಳನ್ನು ತಕ್ಷಣವೇ ನಿಲ್ಲಿಸಬೇಕು ಮತ್ತು ಮಾಧ್ಯಮಗಳಿಗೆ ಮುಕ್ತವಾಗಿ ಕೆಲಸ ಮಾಡಲು ಅವಕಾಶ ನೀಡಬೇಕು. – ಅರವಿಂದ್ ಕೇಜ್ರಿವಾಲ್

ಪತ್ರಕರ್ತರು ಮತ್ತು ಮಾಧ್ಯಮ ಸಂಸ್ಥೆಗಳ ಮೇಲಿನ ದಾಳಿ ಪ್ರಜಾಪ್ರಭುತ್ವವನ್ನು ಹತ್ತಿಕ್ಕುವ ಮತ್ತೊಂದು ಬರ್ಬರ ಪ್ರಯತ್ನವಾಗಿದೆ. ನರೇಂದ್ರ ಮೋದಿಯವರು ಕೋವಿಡ್ ಬಿಕ್ಕಟ್ಟನ್ನು ತಪ್ಪಾಗಿ ನಿಭಾಯಿಸಿದರು ಮತ್ತು ಉಗ್ರ ಸಾಂಕ್ರಾಮಿಕದ ಮಧ್ಯೆ ದೇಶವನ್ನು ಅತ್ಯಂತ ಭಯಾನಕ ದಿನಗಳಿಗೆ ಕರೆದೊಯ್ದರು. ಇದನ್ನು ದೈನಿಕ್ ಭಾಸ್ಕರ್ ಧೈರ್ಯದಿಂದ ವರದಿ ಮಾಡಿದೆ. ಸತ್ಯವನ್ನು ಹೊರತರುವ ಧ್ವನಿಗಳನ್ನು ನಿಗ್ರಹಿಸುವ ಗುರಿಯನ್ನು ಹೊಂದಿರುವ ಈ ಪ್ರತೀಕಾರಕ ಕೃತ್ಯವನ್ನು ನಾನು ಬಲವಾಗಿ ಖಂಡಿಸುತ್ತೇನೆ. ಇದು ಪ್ರಜಾಪ್ರಭುತ್ವದ ತತ್ವಗಳನ್ನು ಹಾಳುಮಾಡುವ ಗಂಭೀರ ಉಲ್ಲಂಘನೆಯಾಗಿದೆ. – ಮಮತಾ ಬ್ಯಾನರ್ಜಿ

ಲೆಕ್ಕವಿಲ್ಲದ COVID ಸಾವುಗಳನ್ನು ಲೆಕ್ಕಮಾಡಿದ ನಿಮ್ಮ ಮೇಲೆ ದಾಳಿ ಮಾಡುವ ಬದಲು ಪದಕ ನೀಡಬೇಕಿತ್ತು – ಬರ್ಖಾ ದತ್

“ದೈನಿಕ್ ಭಾಸ್ಕರ್ ಪತ್ರಿಕೆ ಮತ್ತು ಭಾರತ್ ಸಮಾಚಾರ್ ನ್ಯೂಸ್ ಚಾನೆಲ್ ಮೇಲೆ ಐಟಿ ದಾಳಿ ಮಾಧ್ಯಮಗಳ ಧ್ವನಿಯನ್ನು ನಿಗ್ರಹಿಸುವ ಒಂದು ಲಜ್ಜೆಗೆಟ್ಟ ಪ್ರಯತ್ನವಾಗಿದೆ. ಮೋದಿ ಸರ್ಕಾರವು ತನ್ನ ಟೀಕೆಗಳ ಒಂದು ಭಾಗವನ್ನು ಸಹ ಸಹಿಸಲಾರದು” – ಅಶೋಕ್ ಗೆಹ್ಲೋಟ್

ಸ್ಪಷ್ಟವಾದ, ಸಮಂಜಸ ಮತ್ತು ನಿರ್ಭೀತ ವರದಿಗಾರಿಕೆಯನ್ನು ಮೆಚ್ಚುವ ಕಾಲವೊಂದಿತ್ತು ಮತ್ತು ಸರ್ಕಾರಗಳಲ್ಲಿ ತಪ್ಪಿತಸ್ಥರನ್ನು ಬೆದರಿಸುವಂತಹ ಕಾಲವೊಂದಿತ್ತು. ಆದರೆ ಈಗ ಬೆದರಿಕೆ ಸರ್ಕಾರದ ಕಡೆಯಿಂದ ಬಂದಿದೆ. ಭಾರತವು ಅಭಿವೃದ್ಧಿ ಹೊಂದಲು ದೈನಿಕ್ ಭಾಸ್ಕರ್ ನಂತಹ ಪತ್ರಿಕೆಗಳು ಬೇಕಾಗುತ್ತವೆ. ನಾನು ಅವರೊಂದಿಗೆ ನಿಲ್ಲುತ್ತೇನೆ. – ಶಶಿ ತರೂರ್


ಇದನ್ನೂ ಓದಿ: ಸಂಸತ್ತನ್ನು ಹೇಗೆ ನಡೆಸಬೇಕೆಂದು ನಾವು ಒಕ್ಕೂಟ ಸರ್ಕಾರಕ್ಕೆ ತೋರಿಸುತ್ತೇವೆ – ಯೋಗೇಂದ್ರ ಯಾದವ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ವಾಕ್ ಸ್ವತಂತ್ರವನ್ನು ಭಾರತದಲ್ಲಿ ಬಿಜೆಪಿ ಸರ್ಕಾರ ಹತ್ತಿಕ್ಕುವ ಕೆಲಸವನ್ನು ಮಾಡುತ್ತಿದೆ ಎಂಬುದಕ್ಕೆ ಈ ದಾಳಿಗಳು ಸಾಕ್ಷಿಯಾಗಿದೆ. ತನ್ನ ದುರಾಡಳಿತವನ್ನು ಎಲ್ಲಿಯೂ ಬರೆಯದಂತೆ ತೆರೆಮರೆಯ ಗೋಮುಖ ವ್ಯಾಘ್ರನ ಮುಖ ಕಾಣದಂತೆ ಮಾಡುವ ತಂತ್ರಗಾರಿಕೆ ಈ ದಾಳಿ. ಪತ್ರಿಕೋದ್ಯಮದ ಮೇಲೆ ನಡೆಯುತ್ತಿರುವ ಈ ದಾಳಿಗಳು ತುರ್ತು ಪರಿಸ್ಥಿತಿಯನ್ನು ಮೀರಿಸುವಂತ ಸಂದಿಗ್ದ ಪರಿಸ್ಥಿತಿಗಳನ್ನು ದೇಶದ ಪ್ರತಿಯೊಂದು ಕ್ಷೇತ್ರವೂ ಎದುರಿಸುವಂತಾಗಿದೆ. ನಿರ್ಭೀತ ನಡೆಯ ದೈನಿಕ್ ಭಾಸ್ಕರ್ ಜೊತೆ ನಾವಿದ್ದೇವೆ. ಇಂತಹ ಗೊಡ್ಡು ಬೆದತಿಕೆಗಳಿಗೆ ಅಂಜದೆ ಮುನ್ನುಗ್ಗಿ.

LEAVE A REPLY

Please enter your comment!
Please enter your name here

- Advertisment -

Must Read

ಉತ್ತರಪ್ರದೇಶ: ಮಾದಕ ದ್ರವ್ಯ ಕಳ್ಳಸಾಗಣೆ, ಜುಗಾರಿ,  ಭಿಕ್ಷೆ ಬೇಡುವುದನ್ನು ‘ವೃತ್ತಿ’ ಎಂದು ಪಟ್ಟಿ ಮಾಡಿದ...

0
ಯೋಗಿ ಆದಿತ್ಯನಾಥ್‌ ನೇತೃತ್ವದ ಉತ್ತರಪ್ರದೇಶ ಸರಕಾರ ಮತ್ತೆ ಮುಜುಗರಕ್ಕೆ ಈಡಾಗಿದ್ದು, ಉತ್ತರಪ್ರದೇಶ ಪೊಲೀಸ್ ಮೊಬೈಲ್ ಅಪ್ಲಿಕೇಶನ್ UPCOPನಲ್ಲಿ ಬಾಡಿಗೆದಾರರ ಪರಿಶೀಲನೆಗಾಗಿ ವೃತ್ತಿ ಬಗ್ಗೆ ಪಟ್ಟಿ ಮಾಡಿದೆ. ಅವುಗಳಲ್ಲಿ 'ಮಾದಕ ದ್ರವ್ಯಗಳ ಕಳ್ಳಸಾಗಣೆ', 'ಜುಗಾರಿ',  ಮತ್ತು...