ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶ ಎಂದು ಕರೆದುಕೊಳ್ಳುವ ಅಮೆರಿಕಾದ ಇತಿಹಾಸದಲ್ಲಿ ಇಲ್ಲಿಯವರೆಗೂ ಒಬ್ಬ ಮಹಿಳೆಯು ಸಹ ಅಧ್ಯಕ್ಷ ಅಥವಾ ಉಪಾಧ್ಯಕ್ಷ ಹುದ್ದೆಗೇರಿಲ್ಲ ಎನ್ನುವುದು ಅವಮಾನವೇ ಸರಿ. ಇಂತಹ ಪರಿಸ್ಥಿತಿಯಲ್ಲಿ 2020ರ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಗೆಲುವಿನೊಂದಿಗೆ ಭಾರತೀಯ ಮೂಲದ ಕಮಲ ಹ್ಯಾರಿಸ್ ಅಡೆತಡೆಗಳನ್ನು ಮೀರಿ ಮೊದಲ ಮಹಿಳಾ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಅವರ ವಿಜಯ ಭಾಷಣದ ಆಯ್ದ ಮಾತುಗಳು ಇಲ್ಲಿವೆ.
“ಶ್ವೇತಭವನ ಕಚೇರಿಯ ಮೊದಲ ಮಹಿಳೆ ನಾನಾಗಿರಬಹುದು, ಆದರೆ ಕೊನೆಯವಳಲ್ಲ. ಏಕೆಂದರೆ ಇದನ್ನು ದೂರದರ್ಶನದಲ್ಲಿ ನೋಡುವ ಪ್ರತಿಯೊಬ್ಬ ಪುಟ್ಟ ಹುಡುಗಿಗೂ ಅಮೆರಿಕದಲ್ಲಿ ಇದು ಸಾಧ್ಯ ಎಂದು ತಿಳಿಯುತ್ತಿದೆ.”
ನನ್ನ ತಾಯಿ 19ನೇ ವಯಸ್ಸಿನಲ್ಲಿ ಅಮೆರಿಕಾಗೆ ಬಂದಾಗ, ಇಂತಹ ಕ್ಷಣವು ನಿಜವಾಗಬಲ್ಲ ಅಮೆರಿಕವನ್ನು ಅವರು ನಂಬಿದ್ದರು.
ಪ್ರಜಾಪ್ರಭುತ್ವ ಒಂದು ಕ್ರಿಯೆ. ಅಮೆರಿಕದ ಪ್ರಜಾಪ್ರಭುತ್ವ ಖಾತರಿಯಿಲ್ಲ. ಅದು ತ್ಯಾಗವನ್ನು ಕೇಳುತ್ತದೆ. ಈ ಚುನಾವಣೆಯಲ್ಲಿ ಪ್ರಜಾಪ್ರಭುತ್ವವು ಅಪಾಯದಲ್ಲಿದೆ ಎಂಬುದು ಅರಿವಾಗಿದೆ.
ನೀವು ಯಾರಿಗೆ ಮತ ಹಾಕಿದ್ದರೂ, ಜೋ ಅವರಂತೆ ನಾನು ಎಲ್ಲರಿಗೂ ಉಪಾಧ್ಯಕ್ಷಳಾಗುತ್ತೇನೆ. ಕೆಲಸ ಈಗ ಪ್ರಾರಂಭವಾಗುತ್ತದೆ. ಮುಂದಿನ ಹಾದಿ ಸುಲಭವಿಲ್ಲ. ಆದರೆ ಅಮೆರಿಕಾ ಸಿದ್ಧವಾಗಿದೆ ಮತ್ತು ಜೋ ಮತ್ತು ನಾನು ಕೂಡ.
ಇದನ್ನೂ ಓದಿ: ಭಾರತ ಮೂಲದ ಕಮಲಾ ಹ್ಯಾರಿಸ್; ಅಮೆರಿಕಾದ ಮೊದಲ ಮಹಿಳಾ ಉಪಾಧ್ಯಕ್ಷೆಯಾದ ಕಥೆ!


