Homeಮುಖಪುಟಉಪಚುನಾವಣೆ: ಎಲ್ಲಾ ರಾಜ್ಯಗಳಲ್ಲೂ ಬಿಜೆಪಿಗೆ ಗೆಲುವು- ಸಿ ವೋಟರ್ & ಇಂಡಿಯಾ ಟುಡೆ ಸಮೀಕ್ಷೆ

ಉಪಚುನಾವಣೆ: ಎಲ್ಲಾ ರಾಜ್ಯಗಳಲ್ಲೂ ಬಿಜೆಪಿಗೆ ಗೆಲುವು- ಸಿ ವೋಟರ್ & ಇಂಡಿಯಾ ಟುಡೆ ಸಮೀಕ್ಷೆ

ಗುಜರಾತ್, ಮಧ್ಯಪ್ರದೇಶ, ಉತ್ತರಪ್ರದೇಶ ಹಾಗೂ ಕರ್ನಾಟಕದಲ್ಲಿ ಬಿಜೆಪಿ ಅಧಿಕ ಕ್ಷೇತ್ರಗಳಲ್ಲಿ ಜಯಗಳಿಸಲಿದೆ ಎಂದು ಸಮೀಕ್ಷೆಗಳು ಹೇಳಿವೆ

- Advertisement -
- Advertisement -

ನಿನ್ನೆ ಬಿಹಾರದಲ್ಲಿ ಅಂತಿಮ ಮತ್ತು ಮೂರನೇ ಹಂತದ ವಿಧಾನಸಭಾ ಚುನಾವಣೆ ಮುಕ್ತಾಯಗೊಂಡಿದ್ದು, ಇನ್ನೇನು 2 ದಿನಗಳಲ್ಲಿ ಫಲಿತಾಂಶ ಹೊರಬೀಳಲಿದೆ. ಈ ಫಲಿತಾಂಶಕ್ಕಾಗಿ ಬಿಹಾರ ಸೇರಿದಂತೆ ಉಪಚುನಾವಣೆ ನಡೆದ ರಾಜ್ಯಗಳೂ ಸಹ ಕಾಯುತ್ತಿವೆ. 4 ರಾಜ್ಯಗಳಲ್ಲಿ ಉಪಚುನಾವಣೆ ನಡೆದಿದ್ದು, ಇದರ ಫಲಿತಾಂಶವೂ ನವೆಂಬರ್ 10 ರಂದು ಹೊರಬೀಳಲಿದೆ. ಈಗಾಗಲೇ ಇದರ ಕುರಿತಂತೆ ಹಲವು ಸಮೀಕ್ಷೆಗಳು ತಮ್ಮ ಫಲಿತಾಂಶಗಳನ್ನು ಬಹಿರಂಗಪಡಿಸಿವೆ. ಇದರ ಪ್ರಕಾರ ಈ ಉಪಚುನಾವಣೆಯಲ್ಲಿ ಬಿಜೆಪಿಯೆ ಮೇಲುಗೈ ಸಾಧಿಲಿದೆ ಎಂದು ಸಿ ವೋಟರ್ ಮತ್ತು ಇಂಡಿಯಾ ಟುಡೆ ಸಮೀಕ್ಷೆಗಳು ಹೇಳಿವೆ.

ವಿವಿಧ ರಾಜ್ಯಗಳಲ್ಲಿ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ಚುನಾವಣೋತ್ತರ ಸಮೀಕ್ಷೆಗಳು ತಿಳಿಸಿವೆ. ಗುಜರಾತ್, ಮಧ್ಯಪ್ರದೇಶ, ಉತ್ತರಪ್ರದೇಶ ಹಾಗೂ ಕರ್ನಾಟಕದಲ್ಲಿ ಬಿಜೆಪಿ ಅಧಿಕ ಕ್ಷೇತ್ರಗಳಲ್ಲಿ ಜಯಗಳಿಸಲಿದೆ ಎಂದು ಸಮೀಕ್ಷೆಗಳು ಹೇಳಿವೆ.

ಇದನ್ನೂ ಓದಿ: ಬಿಹಾರ ExitPoll: ಮಹಾಘಟಬಂಧನ್‌ಗೆ ಬಹುಮತ ಸಾಧ್ಯತೆ ಎಂದ ಎಲ್ಲಾ ಸಮೀಕ್ಷೆಗಳು!

ಇಂಡಿಯಾ ಟುಡೆ ಸಮೀಕ್ಷೆಯ ಪ್ರಕಾರ, ಉತ್ತರ ಪ್ರದೇಶದ ಒಟ್ಟು 7 ಸ್ಥಾನಗಳಲ್ಲಿ, ಬಿಜೆಪಿ 5-6, ಎಸ್‌ಪಿ – 1-2, ಬಿಎಸ್‌ಪಿ 0-1 ಹಂಚಿಕೆಯಾಗಲಿವೆ.

ಮಧ್ಯಪ್ರದೇಶದ ಒಟ್ಟು 28 ಸ್ಥಾನಗಳಲ್ಲಿ,  ಬಿಜೆಪಿ 16-18, ಕಾಂಗ್ರೆಸ್ 10-12, ಬಿಎಸ್‌ಪಿ 0-1 ರಂತೆ ಹಂಚಿಕೆಯಾಗಲಿದೆ. ಗುಜರಾತ್ ಒಟ್ಟು ಸ್ಥಾನಗಳಲ್ಲಿ 8, ಬಿಜೆಪಿ 6-7, ಕಾಂಗ್ರೆಸ್‌ 0-1 ಗೆದ್ದುಕೊಳ್ಳಲಿದೆ ಎಂದು ವರದಿ ಹೇಳುತ್ತದೆ.

ಇದನ್ನೂ ಓದಿ: ತಮಿಳು ನಟ ವಿಜಯ್ ಹೆಸರಿನಲ್ಲಿ ರಾಜಕೀಯ ಪಕ್ಷ ನೋಂದಣಿ: ವಿಜಯ್ ಪ್ರತಿಕ್ರಿಯೆ ಏನು?

ಇನ್ನು ಕರ್ನಾಟಕಕ್ಕೆ ಸಂಬಂಧಿಸಿದಂತೆ, ರಾಜರಾಜೇಶ್ವರಿನಗರ ಮತ್ತು ಶಿರಾ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ‘ಸಿ ವೋಟರ್‌’ ಚುನಾವಣೋತ್ತರ ಸಮೀಕ್ಷೆ ಹೇಳಿದೆ.

ಎರಡೂ ಕ್ಷೇತ್ರಗಳಲ್ಲಿ ನವೆಂಬರ್‌ 3ರಂದು ಮತದಾನ ನಡೆದಿತ್ತು. ನ.10 ರಂದು ಮತ ಎಣಿಕೆ ನಡೆಯಲಿದೆ. ಬಿಜೆಪಿ ಅಭ್ಯರ್ಥಿಗಳಾದ ಮುನಿರತ್ನ ಮತ್ತು ಡಾ. ರಾಜೇಶ್‌ ಗೌಡ ಗೆಲುವು ಸಾಧಿಸಲಿದ್ದಾರೆ ಎಂದು ‘ಸಿ ವೋಟರ್‌’ ಸಮೀಕ್ಷೆ ತಿಳಿಸಿದೆ.


ಇದನ್ನೂ ಓದಿ: ನಾಸ್ತಿಕತೆಯೇ ನನ್ನ ಆಯುಧ, ಮಾನವೀಯತೆ ನನ್ನ ಸಿದ್ಧಾಂತ: ಕಮಲ್ ಹಾಸನ್ ಹೇಳಿಕೆ ವೈರಲ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಿಯಾಂಕ ಗಾಂಧಿ

ಗಾಜಾದಲ್ಲಿ ಇಸ್ರೇಲ್‌ನ ‘ಜನಾಂಗೀಯ ಕೃತ್ಯಗಳು’ ನಿಲ್ಲಬೇಕು: ಪ್ರಿಯಾಂಕಾ ಗಾಂಧಿ

0
ಗಾಜಾದಲ್ಲಿ ಇಸ್ರೇಲ್ ನಡೆಸುತ್ತಿರುವ ಮಿಲಿಟರಿ ದಾಳಿಯನ್ನು ಸ್ವೀಕಾರಾರ್ಹವಲ್ಲ ಮತ್ತು ಹತ್ಯಾಕಾಂಡ ಎಂದು ಹೇಳಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ಇದನ್ನು ಜಗತ್ತಿನ ಪ್ರತಿಯೊಂದು ಸರ್ಕಾರ ಖಂಡಿಸಬೇಕು ಎಂದು ಶುಕ್ರವಾರ ಕರೆ...