Homeಮುಖಪುಟದೆಹಲಿ ಹಿಂಸಾಚಾರ: ಮಾಧ್ಯಮಗಳಿಗೆ ಮಾಹಿತಿ ಸೋರಿಕೆ - ಪೊಲೀಸರಿಗೆ ಹೈಕೋರ್ಟ್ ತರಾಟೆ

ದೆಹಲಿ ಹಿಂಸಾಚಾರ: ಮಾಧ್ಯಮಗಳಿಗೆ ಮಾಹಿತಿ ಸೋರಿಕೆ – ಪೊಲೀಸರಿಗೆ ಹೈಕೋರ್ಟ್ ತರಾಟೆ

- Advertisement -
- Advertisement -

ದೆಹಲಿ ಗಲಭೆಯಲ್ಲಿ ಆರೋಪಿಗಳಿಗೆ ಸಂಬಂಧಿಸಿದ ಕೇಸ್ ಫೈಲ್ ಒಂದು ಮೀಡಿಯಾಗಳಿಗೆ ಸೋರಿಕೆಯಾದ ಕಾರಣವನ್ನು ವಿವರಿಸಲು ವಿಫಲವಾದ ಕಾರಣ, ದೆಹಲಿ ಹೈಕೋರ್ಟ್ ಸೋಮವಾರ ದೆಹಲಿ ಪೊಲೀಸರ ವಿಜಿಲೆನ್ಸ್ ವಿಭಾಗವನ್ನು ತರಾಟೆಗೆ ತೆಗೆದುಕೊಂಡಿದೆ. ಇದು ಆರೋಪಿಗೆ ಉಚಿತ ಮತ್ತು ನ್ಯಾಯಯುತ ವಿಚಾರಣೆಯನ್ನು ನಿರಾಕರಿಸುವ ಕ್ರಮವಾಗಿದೆ ಎಂದು ಕೋರ್ಟ್ ಹೇಳಿದೆ ಎಂದು ಲೈವ್ ಲಾ.ಇನ್ ವರದಿ ಮಾಡಿದೆ.

ನ್ಯಾಯಪೀಠ ಮೌಖಿಕವಾಗಿ ಗಮನಿಸಿದಂತೆ, ಪ್ರಮುಖ ವಿಚಾರಣೆಯ ವಿಷಯದಲ್ಲಿ ದೆಹಲಿ ವಿಜಿಲೆನ್ಸ್ ಪೊಲೀಸರು ಕ್ಷುಲ್ಲಕವಾದ ನಡವಳಿಕೆ ತೋರಿಸಿದ್ದು, ಸಣ್ಣ ಕಳ್ಳತನ ಪ್ರಕರಣದಲ್ಲಿ (ಪೆಟ್ಟಿ ಕೇಸ್) ವರ್ತಿಸುವುದಕ್ಕಿಂತ ತೀರಾ ಚಿಲ್ಲರೆಯಾಗಿ ವರ್ತಿಸಿದ್ದಾರೆ ಎಂದು ಮುಖಕ್ಕೆ ಹೊಡೆದಂತೆ ಹೇಳಿದೆ.

ದೆಹಲಿ ಗಲಭೆ ಪಿತೂರಿ ಪ್ರಕರಣದ ವಿಚಾರಣೆ ಆಸಿಫ್ ಇಕ್ಬಾಲ್ ತನ್ಹಾ ಅವರ ಮಾಧ್ಯಮ ವಿಚಾರಣೆಯ ವಿರುದ್ಧದ ರಿಟ್ ಅರ್ಜಿಯನ್ನು ಡಿ, ನ್ಯಾಯಮೂರ್ತಿ ಮುಕ್ತಾ ಗುಪ್ತಾ ಅವರ ಏಕ ನ್ಯಾಯಾಧೀಶ ಪೀಠ ಆಲಿಸುತ್ತಿದೆ.

ಸೋರಿಕೆಯ ಮೂಲವನ್ನು ವಿವರಿಸುವಲ್ಲಿ ವಿಜಿಲೆನ್ಸ್ ವಿಚಾರಣೆ ವಿಫಲವಾದ ಕಾರಣ ಕಠಿಣ ಆದೇಶಗಳನ್ನು ಜಾರಿಗೊಳಿಸುವಂತೆ ಅಧಿಕಾರಿಗಳಿಗೆ ಕೋರ್ಟ್ ಎಚ್ಚರಿಕೆ ನೀಡಿದೆ.

ದೆಹಲಿ ಗಲಭೆ ಪಿತೂರಿ ಪ್ರಕರಣ ಆರೋಪಿ ಆಸಿಫ್ ಇಕ್ಬಾಲ್ ತನ್ಹಾ ತಮ್ಮ ಸುತ್ತ ನಡೆದ ಮಾಧ್ಯಮ ವಿಚಾರಣೆಯ (ಮೀಡಿಯಾ ಟ್ರಯಲ್) ವಿರುದ್ಧ ರಿಟ್ ಅರ್ಜಿ ಸಲ್ಲಿಸಿದ್ದರು. ಈ ಸಂಬಂಧದ ಫೈಲ್ ಮೀಡಿಯಾಗಳಿಗೆ ಹೇಗೆ ಲೀಕ್ ಆಗಿತು ಎಂದು ದೆಹಲಿ ಹೈಕೊರ್ಟಿನ ನ್ಯಾಯಮೂರ್ತಿ ಮುಕ್ತಾ ಗುಪ್ತಾ ಅವರ ಏಕ ನ್ಯಾಯಾಧೀಶ ಪೀಠ ದೆಹಲಿ ಪೊಲೀಸರಿಗೆ ಛೀಮಾರಿ ಹಾಕಿದೆ.

ದೆಹಲಿ ಪೊಲೀಸರು ತನ್ನ ಅಫಿಡವಿಟ್‌ನಲ್ಲಿ ಮಾಧ್ಯಮಗಳಿಗೆ ಸೋರಿಕೆಯಾದ ಆರೋಪಗಳು ಕೇವಲ “ಆಧಾರರಹಿತ” ಎಂದು ಹೇಳಿದ್ದಾರೆ. ಇದಕ್ಕೆ ನ್ಯಾಯಮೂರ್ತಿ ಮುಕ್ತಾ ಗುಪ್ತಾ ಅವರ ಏಕ ನ್ಯಾಯಾಧೀಶರ ನ್ಯಾಯಪೀಠವು, ದೆಹಲಿ ಪೊಲೀಸರಿಗೆ ಮೂಲವನ್ನು ಕಂಡುಹಿಡಿಯಲು ಸಾಧ್ಯವಾಗದ ಕಾರಣ ಸೋರಿಕೆಯ ಆರೋಪಗಳು “ಆಧಾರ ರಹಿತವಾಗಿದೆಯೆ” ಎಂದು ವಿಜಿಲೆನ್ಸ್ ಅಧಿಕಾರಿಗಳನ್ನು ಪ್ರಶ್ನಿಸಿದೆ.

‘ಆ ಮುಖ್ಯ ಫೈಲನ್ನು ನೀವು ಬೀದಿಯಲ್ಲಿ ಎಸೆದು ಬಿಟ್ಟಿದ್ದೀರಿ ಅನಿಸುತ್ತದೆ. ಹೀಗಾಗಿಯೇ ಮಾಧ್ಯಮಗಳಿಗೆ ಮಾಹಿತಿ ಸೋರಿಕೆಯಾಗಿದೆ ಎಂದು ಕೋರ್ಟ್ ಅಭಿಪ್ರಾಯ ಪಟ್ಟಿದೆ.
ಈ ವಿಷಯವನ್ನು ಪೊಲೀಸ್ ಅಧಿಕಾರಿಗಳು ಸೋರಿಕೆ ಮಾಡಿರಬಹುದು ಎಂದು ಗಮನಿಸಿದ ನ್ಯಾಯಾಧೀಶ ಗುಪ್ತಾ, ಆದಾಗ್ಯೂ, ವಿಜಿಲೆನ್ಸ್ ವಿಚಾರಣೆ ಹೇಗೆ ನಡೆಯಿತು ಎಂಬ ಪ್ರಶ್ನೆಗಳನ್ನು ಎತ್ತಿದೆ.


ಇದನ್ನೂ ಓದಿ: ಹತ್ರಾಸ್: ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆಯ ತಂದೆಯನ್ನು ಹತೈಗೈದ ಆರೋಪಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

2ಜಿ ತರಂಗಾಂತರ ತೀರ್ಪಿನ ಸ್ಪಷ್ಟನೆ ಕೋರಿದ್ದ ಕೇಂದ್ರದ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್ ರಿಜಿಸ್ಟ್ರಿ

0
2ಜಿ ತರಂಗಾಂತರ ಹಂಚಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ 2012ರಲ್ಲಿ ನೀಡಿರುವ ತೀರ್ಪಿನ ಸ್ಪಷ್ಟನೆ ಕೋರಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸ್ವೀಕರಿಸಲು ಸುಪ್ರೀಂ ಕೋರ್ಟ್‌ನ ರಿಜಿಸ್ಟ್ರಾರ್ ನಿರಾಕರಿಸಿದ್ದಾರೆ. ಕೆಲ ಸಂದರ್ಭಗಳಲ್ಲಿ ಸಾರ್ವಜನಿಕ ಹರಾಜು ಹೊರತುಪಡಿಸಿ...