ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರು ಮಂಗಳವಾರ ಕೇಂದ್ರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ದೇಶದಲ್ಲಿ ನಿರುದ್ಯೋಗ ಹೆಚ್ಚಾಗಿದ್ದು, ಬಿಜೆಪಿ ನೇತೃತ್ವದ ಸರ್ಕಾರ 2016 ರಲ್ಲಿ ಕೆಟ್ಟದಾಗಿ ಜಾರಿ ಮಾಡಿದ ನೋಟ್‌ಬ್ಯಾನ್ ನಂತರ ದೇಶದ ಅನೌಪಚಾರಿಕ ವಲಯವು ಅಸ್ತವ್ಯಸ್ತವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸರ್ಕಾರವು ರಾಜ್ಯಗಳೊಂದಿಗೆ ನಿಯಮಿತವಾಗಿ ಸಮಾಲೋಚನೆ ನಡೆಸುತ್ತಿಲ್ಲ ಎಂದು ಅವರು ಆರೋಪಿಸಿದ್ದಾರೆ.
ರಾಜೀವ್ ಗಾಂಧಿ ಇನ್ಸ್ಟಿಟ್ಯೂಟ್ ಆಫ್ ಡೆವಲಪ್ಮೆಂಟ್ ಸ್ಟಡೀಸ್ ಆಯೋಜಿಸಿರುವ ಅಭಿವೃದ್ಧಿ ಶೃಂಗಸಭೆ “ಪ್ರತೀಕ್ಷ 2030” ವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. “ನಿರುದ್ಯೋಗ ಹೆಚ್ಚಾಗಿದೆ ಮತ್ತು ಅನೌಪಚಾರಿಕ ವಲಯವು ಅಸ್ತವ್ಯಸ್ತವಾಗಿದೆ, ಇದು 2016 ಕೇಂದ್ರ ಸರ್ಕಾರ ಕೆಟ್ಟ ರೀತಿಯಲ್ಲಿ ಜಾರಿಗೆ ತಂದ ನೋಟ್‌ಬ್ಯಾನ್‌ನಿಂದಾಗಿ ಉಂಟಾದ ಬಿಕ್ಕಟ್ಟು” ಎಂದು ಅವರು ಸಭೆಯಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: ಈ ಸಲದ ಬೇಸಿಗೆ: ಉತ್ತರ ಉರಿಯಲಿದೆ, ದಕ್ಷಿಣಕ್ಕೆ ಕೊಂಚ ರಿಲೀಫ್!
ರಾಜ್ಯದ ಚುನಾವಣೆಗೆ ಮುಂಚಿತವಾಗಿ ಕೇರಳದ ಅಭಿವೃದ್ಧಿಯ ವಿಚಾರಗಳ ಚೌಕಟ್ಟಾದ ವಿಷನ್ ಡಾಕ್ಯುಮೆಂಟ್ ಅನ್ನು ಪ್ರಾರಂಭಿಸಲು ಈ ಶೃಂಗಸಭೆಯನ್ನು ಆಯೋಜಿಸಲಾಗಿತ್ತು. ಕೇರಳ ಮತ್ತು ಇತರ ಅನೇಕ ರಾಜ್ಯಗಳಲ್ಲಿ, ರಾಜ್ಯಗಳು ಅತಿಯಾದ ಸಾಲವನ್ನು ಆಶ್ರಯಿಸಬೇಕಾಗಿರುವುದರಿಂದ ಸಾರ್ವಜನಿಕ ಹಣಕಾಸು ಅಸ್ತವ್ಯಸ್ತವಾಗಿದೆ, ಇದು ಭವಿಷ್ಯದ ಬಜೆಟ್ ಮೇಲೆ ಭಾರಿ ಹೊರೆ ಸೃಷ್ಟಿಸುತ್ತದೆ ಎಂದು ಅವರು ಹೇಳಿದ್ದಾರೆ.
“ಸಂವಿಧಾನದಲ್ಲಿ ಪ್ರತಿಪಾದಿಸಿರುವಂತೆ ಭಾರತದ ಆರ್ಥಿಕ ಮತ್ತು ರಾಜಕೀಯ ತತ್ತ್ವಶಾಸ್ತ್ರದ ಮೂಲಾಧಾರವಾಗಿದ್ದ ಫೆಡರಲಿಸಂ ಮತ್ತು ರಾಜ್ಯಗಳೊಂದಿಗೆ ನಿಯಮಿತ ಸಮಾಲೋಚನೆಯನ್ನು ಈಗಿನ ಕೇಂದ್ರ ಸರ್ಕಾರ ಮಾಡುತ್ತಿಲ್ಲ” ಎಂದು ಅವರು ಹೇಳಿದ್ದಾರೆ.
ಕೇರಳದ ಸಾಮಾಜಿಕ ಗುಣಮಟ್ಟ ಹೆಚ್ಚಾಗಿದ್ದರೆ, ಭವಿಷ್ಯದಲ್ಲಿ ಗಮನ ಹರಿಸಬೇಕಾದ ಇತರ ಕ್ಷೇತ್ರಗಳಿವೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ನನ್ನನ್ನು ಬಂಧಿಸಲು ಲಿಂಗಾಯತ IPS ಅಧಿಕಾರಿಗಳನ್ನು ಕಳುಹಿಸಿದ್ದರು: ಯತ್ನಾಳ್ ಆರೋಪ
ಭತ್ತದ ಗದ್ದೆಯಿಂದ ವಿಶ್ವ ಅಥ್ಲೆಟಿಕ್ಸ್‌ವರೆಗೆ ಓಡಿದ ಚಿನ್ನದ ಹುಡುಗಿ. ವಿಡಿಯೋ ನೋಡಿ►►
