ಎಫ್‌ಐಆರ್‌ಗೂ ಮೊದಲಿನ ಹೇಳಿಕೆ ತಪ್ಪೊಪ್ಪಿಗೆ ಆಗಲಾರದು: ಸೆಕ್ಷನ್ 160 ಕುರಿತು ಸುಪ್ರೀಂಕೋರ್ಟ್
PC: India TV News

ಅತ್ಯಾಚಾರ ಆರೋಪದ ಬಂಧನದಿಂದ ತಪ್ಪಿಸಿಕೊಳ್ಳಲು ರಕ್ಷಣೆ ಕೋರಿ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದ ಸರ್ಕಾರಿ ನೌಕರನನ್ನು ಅತ್ಯಾಚಾರದ ಆರೋಪ ಹೊರಿಸಿರುವ ಯುವತಿಯನ್ನು ಮದುವೆಯಾಗಲು ಕೇಳಿದ ಸುಪ್ರೀಂಕೋರ್ಟ್ ನಡೆಗೆ ತೀವ್ರ ಖಂಡನೆ ವ್ಯಕ್ತವಾಗಿದೆ.

ಮಹಾರಾಷ್ಟ್ರ ರಾಜ್ಯ ವಿದ್ಯುತ್ ಉತ್ಪಾದನಾ ಕಂಪನಿಯಲ್ಲಿ ತಂತ್ರಜ್ಞನಾಗಿ ಕಾರ್ಯನಿರ್ವಹಿಸುತ್ತಿರುವ ಮೋಹಿತ್ ಸುಭಾಷ್ ಚೌವಾಣ್ ಜಾಮೀನು ಅರ್ಜಿ ವಿಚಾರಣೆ ವೇಳೆ ಸುಪ್ರೀಂಕೋರ್ಟ್ ’ಆಕೆಯನ್ನು ಮದುವೆಯಾಗುತ್ತೀರಾ..?’ ಎಂದು ಪ್ರಶ್ನೆ ಕೇಳಿತ್ತು. ಮೋಹಿತ್ ಸುಭಾಷ್ ಚೌವಾಣ್ ಮೇಲೆ ಶಾಲಾ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿದ ಆರೋಪವಿದ್ದು, ಆತನ ಮೇಲೆ ಫೋಕ್ಸೋ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ) ಕಾನೂನಿನಡಿಯಲ್ಲಿ ದೂರು ದಾಖಲಾಗಿದೆ.

ಇದಕ್ಕೆ ಪ್ರತಿಕ್ರಿಯಿಸಿರುವ ಬಹುಭಾಷಾ ನಟಿ ತಾಪ್ಸಿ ಪನ್ನು, ಗಾಯಕಿ ಸೋನಾ ಮೊಹಾಪಾತ್ರ, ಆಲ್ ಇಂಡಿಯಾ ಲಾಯರ್ಸ್‌ ಅಸೋಷಿಯೇಷನ್ ಫಾರ್‌ ಜಸ್ಟಿಸ್ (AILAJ) ಸಂಘಟನೆ ಕಿಡಿ ಕಾರಿದೆ.

ಇದನ್ನೂ ಓದಿ: ಅತ್ಯಾಚಾರ ಸಂತ್ರಸ್ತೆಯನ್ನು ಮದುವೆಯಾಗಲು ಆರೋಪಿಯನ್ನೆ ಕೇಳಿದ ಸುಪ್ರೀಂ!

ಟ್ವಿಟರ್‌ನಲ್ಲಿ ತನ್ನ ಕೋಪವನ್ನು ಹೊರಹಾಕಿರುವ ನಟಿ ತಾಪ್ಸಿ, “ಯಾರಾದರೂ ಈ ಪ್ರಶ್ನೆಯನ್ನು ಹುಡುಗಿಗೆ ಕೇಳುತ್ತಾರ? ಆಕೆ ತನ್ನ ಅತ್ಯಾಚಾರಿಯನ್ನೇ ಮದುವೆಯಾಗಲು ಬಯಸುತ್ತಾಳೆಯೇ..!? ಅದು ಒಂದು ಪ್ರಶ್ನೆಯೇ..? ಇದು ಒಂದು ಪರಿಹಾರವೋ ಅಥವಾ ಶಿಕ್ಷೆಯೋ? ಇದೊಂದು ಅಸಹ್ಯ” ಎಂದು ಕಿಡಿಕಾರಿದ್ದಾರೆ.

ಇನ್ನೂ ಗಾಯಕ ಸೋನಾ ಮೊಹಾಪಾತ್ರ ಕೂಡ “ಇದು ಅನಾರೋಗ್ಯಕರ ಮತ್ತು ತೀವ್ರವಾಗಿ ಖಂಡಿಸುವಂತಹದ್ದು. ಅತ್ಯಾಚಾರ ಮಾಡಿದ ಆರೋಪಿ ಸಂತ್ರಸ್ತೆಯನ್ನು ಮದುವೆಯಾಗುವುದು ಈ ಹಿಂದೆ ಬಾಲಿವುಡ್‌ನಲ್ಲಿ ತೋರಿಸುತಿದ್ದ ಅಸಹ್ಯಕರ ಪರಿಹಾರವಾಗಿದೆ. ಭಾರತದ ಸುಪ್ರೀಂ ಕೋರ್ಟ್ ಈ ಮಟ್ಟಕ್ಕೆ ಹೇಗೆ ಇಳಿಯಬಹುದು?” ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: 8 ಹಂತಗಳಲ್ಲಿ ಪ.ಬಂಗಾಳ ಚುನಾವಣೆ: ಆಯೋಗದ ನಿರ್ಧಾರ ಪ್ರಶ್ನಿಸಿ ಸುಪ್ರೀಂನಲ್ಲಿ ಅರ್ಜಿ

ಇನ್ನು ವಕೀಲರ ಸಂಘಟನೆಯಾದ ಆಲ್ ಇಂಡಿಯಾ ಲಾಯರ್ಸ್ ಅಸೋಷಿಯೇಷನ್ ಫಾರ್‌ ಜಸ್ಟಿಸ್ (AILAJ) ಕೂಡ ನ್ಯಾಯಮೂರ್ತಿಗಳ ನಡೆಯನ್ನು ಖಂಡಿಸಿದ್ದು, ನ್ಯಾಯಾಲಯದ ಘನತೆ ಉಳಿಸಿರಿ ಎಂದಿದ್ದಾರೆ.

2015ರ ಮಧ್ಯಪ್ರದೇಶ ವರ್ಸಸ್ ಮದನ್‌ಲಾಲ್ (7 SCC 681) ಪ್ರಕರಣವನ್ನು ಉಲ್ಲೇಖಿಸಿರುವ ಸಂಘವು “ಅತ್ಯಾಚಾರ ಅಥವಾ ಅತ್ಯಾಚಾರದ ಪ್ರಯತ್ನದಲ್ಲಿ, ಯಾವುದೇ ಸಂದರ್ಭದಲ್ಲೂ ರಾಜಿ ಮಾಡಿಕೊಳ್ಳುವ ಕಲ್ಪನೆಯನ್ನು ನಿಜವಾಗಿಯೂ ಯೋಚಿಸಲಾಗುವುದಿಲ್ಲ” ಎಂಬ ಸುಪ್ರೀಂಕೋರ್ಟ್ ತೀರ್ಪನ್ನು ಮತ್ತೆ ನೆನಪಿಸಿದೆ. ನ್ಯಾಯಾಲಯಗಳು ಸಂಪೂರ್ಣವಾಗಿ ಉಳಿಯಬೇಕು ಎಂದು ನಾವು ಒತ್ತು ನೀಡುತ್ತೇವೆ ಎಂದಿದೆ.

“ಸಿಜೆಐ ಹೇಳಿಕೆಗಳು ಸಮಾನತೆಯ ಸಾಂವಿಧಾನಿಕ ಖಾತರಿಗೆ ಧಕ್ಕೆ ತರುವಂತಿದೆ. ಮಹಿಳೆಯರನ್ನು ಕಡಿಮೆ ನಾಗರಿಕರ ಸ್ಥಾನಮಾನಕ್ಕೆ ಇಳಿಸಿದೆ. ಇದು ಮಹಿಳೆಯ ಹಕ್ಕಿನ ಸಮಗ್ರ ಉಲ್ಲಂಘನೆಯಾಗಿದೆ. ನಾವು ಸಮಾಜವಾಗಿ, ಅದರ ರೂಪಗಳು ಮತ್ತು ಅನ್ಯಾಯದ ಪ್ರಶ್ನೆಗಳಿಗೆ ಉತ್ತರ ಹುಡುಕಬೇಕು. ನಾವು ಅದನ್ನು ಮಾಡದಿದ್ದಲ್ಲಿ, ನಾವು ಸಮಾಜದ ಅನ್ಯಾಯಗಳಿಗೆ ಕಾರಣವಾಗುತ್ತೇವೆ. ಈ ಹೇಳಿಕೆಗಳಿಂದ, ಸುಪ್ರೀಂ ಕೋರ್ಟ್ ಈ ನಿಖರವಾದ ಅಪಾಯವನ್ನು ಎದುರಿಸುತ್ತಿದೆ” ಎಂದು ಕಳವಳ ವ್ಯಕ್ತಪಡಿಸಿದ್ದಾರೆ.


ಇದನ್ನೂ ಓದಿ: ಕುರಿ, ಮೇಕೆಗಳು ಸತ್ತರೆ ಪರಿಹಾರ ನೀಡುವ ‘ಅನುಗ್ರಹ’ ಯೋಜನೆ ಮರುಜಾರಿಗೊಳಿಸಿ: ಸಿದ್ದರಾಮಯ್ಯ

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
Avatar
ನಾನು ಗೌರಿ ಡೆಸ್ಕ್
+ posts

LEAVE A REPLY

Please enter your comment!
Please enter your name here