Homeಮುಖಪುಟಮೇ 15ರವರೆಗೂ ಲಾಕ್‌ಡೌನ್‌ ಮುಂದುವರೆಸುವ ಸುಳಿವ ಕೊಟ್ಟ ಪ್ರಧಾನಿ ಮೋದಿ

ಮೇ 15ರವರೆಗೂ ಲಾಕ್‌ಡೌನ್‌ ಮುಂದುವರೆಸುವ ಸುಳಿವ ಕೊಟ್ಟ ಪ್ರಧಾನಿ ಮೋದಿ

- Advertisement -
- Advertisement -

ಹಲವು ರಾಜ್ಯಗಳ ಮುಖ್ಯಮಂತ್ರಿಗಳ ಜೊತೆಗೆ ಪ್ರಧಾನಿ ಮೋದಿಯವರು ವಿಡಿಯೋ ಕಾನ್ಫರೆನ್ಸ್‌ ನಡೆಸುತ್ತಿದ್ದು, ದೇಶದ ಹಲವು ಭಾಗಗಳಲ್ಲಿ ಮೇ 15ರವರೆಗೂ ಲಾಕ್‌ಡೌನ್‌ ಮುಂದುವರೆಸುವ ಸುಳಿವು ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

“ಆರ್ಥಿಕ ಮುಂಚೂಣಿಯಲ್ಲಿ ಚಿಂತೆ ಮಾಡುವ ಅಗತ್ಯವಿಲ್ಲ, ನಮ್ಮ ಆರ್ಥಿಕತೆ ಉತ್ತಮವಾಗಿದೆ” ಎಂದು ಪಿಎಂ ಮೋದಿ ಒಂಬತ್ತು ಮುಖ್ಯಮಂತ್ರಿಗಳಿಗೆ ವೀಡಿಯೊ ಸಭೆಯಲ್ಲಿ ತಿಳಿಸಿದ್ದಾರೆ.

ಸಭೆಯಲ್ಲಿ ಒಂಬತ್ತು ಮುಖ್ಯಮಂತ್ರಿಗಳಲ್ಲಿ ಐವರು ಲಾಕ್‌ಡೌನ್ ಕೊನೆಗೊಳ್ಳಬೇಕು ಎಂದು ಹೇಳಿದರೆ, ಉಳಿದವರು COVID-19 ಹರಡುವುದನ್ನು ನಿಯಂತ್ರಿಸುವ ಸಲುವಾಗಿ ಅದನ್ನು ವಿಸ್ತರಿಸಲು ಒಲವು ತೋರಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಸೋಂಕಿನ ಮಟ್ಟವನ್ನು ಆಧರಿಸಿ ಜಿಲ್ಲೆಗಳನ್ನು ಕೆಂಪು, ಹಸಿರು ಮತ್ತು ಕಿತ್ತಳೆ ಎಂದು ಗುರುತಿಸುವ ಮೂಲಕ ಲಾಕ್‌ಡೌನ್‌ನಿಂದ ನಿರ್ಗಮಿಸುವ ಯೋಜನೆಯನ್ನು ಸಿದ್ಧಪಡಿಸುವಂತೆ ಪ್ರಧಾನಿ ಎಲ್ಲ ರಾಜ್ಯಗಳನ್ನು ಕೇಳಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಹಸಿರು ಮತ್ತು ಕಿತ್ತಳೆ ವಲಯಗಳಲ್ಲಿ ಆರ್ಥಿಕ ಚಟುವಟಿಕೆಗಳು ಮತ್ತೆ ತೆರೆಯುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಆದರೆ ಯಾವುದೇ ವಾಣಿಜ್ಯ ಚಟುವಟಿಕೆಯನ್ನು ಸಾಮಾಜಿಕ ಅಂತರದ ನಿಯಮಗಳು ಮತ್ತು ಮಾಸ್ಕ್‌ಗಳೊಂದಿಗೆ ಮಾತ್ರ ಮರುಪ್ರಾರಂಭಿಸಲು ಅನುಮತಿಸಲಾಗುತ್ತದೆ.

ಪ್ರಧಾನಿ ಮೋದಿ ಜೊತೆಗಿನ ಸಿಎಂ ಯಡಿಯೂರಪ್ಪ ವಿಡಿಯೋ ಕಾನ್ಫರೆನ್ಸ್ ಮುಕ್ತಾಯವಾಗಿದ್ದು, ರಾಜ್ಯದ ಮುಖ್ಯಮಂತ್ರಿಗಳು ಲಾಕ್‌ಡೌನ್‌ನಲ್ಲಿ ವಲಯವಾರು ವಿನಾಯಿತಿ ಬೇಕು ಎಂದು ಕೇಳಿದ್ದಾರೆ ಎನ್ನಲಾಗಿದೆ.

ಸದ್ಯಕ್ಕೆ ರಾಜ್ಯದ ಅಭಿಪ್ರಾಯಕ್ಕೆ ತಕ್ಷಣಕ್ಕೆ ಪ್ರಧಾನಿ ಕಡೆಯಿಂದ ಯಾವುದೇ ಉತ್ತರ ಬಂದಿಲ್ಲ. ಯಡಿಯೂರಪ್ಪನವರು ಸೋಂಕು‌ ಹರಡದಂತೆ ಎಲ್ಲಾ ಕ್ರಮ ಕೈಗೊಂಡಿದ್ದೇವೆ. ಮುಂದೆಯೂ ಅದನ್ನು ಮುಂದುವರಿಸುತ್ತೇವೆ. ವಲಯವಾರು ವಿಂಗಡಿಸಿ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ ಎಂದು ತಿಳಿಸಿದ್ದಾರೆ.

ಆದರೆ ಮೋದಿಯವರು ಮೇ 15ರವರೆಗೂ ಅಂದರೆ ಮತ್ತೆ ಎರಡು ವಾರಗಳ ಕಾಲ ಲಾಕ್ ಡೌನ್ ಮುಂದುವರಿಸಬೇಕಾಗಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ, ನಾವು ವಲಯವಾರು ಸಡಿಲತೆ ಕೇಳಿದ್ದೇವೆ ಎಂದು ಸಿಎಂ ತಿಳಿಸಿದ್ದಾರೆ.

ಇದೇ ಸಂದರ್ಭದಲ್ಲ ಯಾವುದೇ ಕಾರಣಕ್ಕೂ ಮದ್ಯ ಮಾರಾಟಕ್ಕೆ ಅವಕಾಶ ಕೊಡುವುದಿಲ್ಲ ಎಂದು ಸಿಎಂ ಯಡಿಯೂರಪ್ಪ ತಿಳಿಸಿದ್ದಾರೆ.

ಬಿಹಾರ, ಒಡಿಶಾ, ಗುಜರಾತ್, ಹರಿಯಾಣ, ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶ ಮತ್ತು ಕೇಂದ್ರ ಪ್ರಾಂತ್ಯದ ಪುದುಚೇರಿಯ ಮುಖ್ಯಮಂತ್ರಿಗಳು ಇಂದು ಮಾತನಾಡಿದರು. ಈಶಾನ್ಯದಿಂದ ಮೇಘಾಲಯ ಮತ್ತು ಮಿಜೋರಾಂ ಮುಖ್ಯಮಂತ್ರಿಗಳು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸಭೆಯಲ್ಲಿ ತಮ್ಮ ರಾಜ್ಯವನ್ನು ಪ್ರತಿನಿಧಿಸಲು ಮುಖ್ಯ ಕಾರ್ಯದರ್ಶಿಯನ್ನು ಕಳುಹಿಸಿದರು.


ಇದನ್ನೂ ಓದಿ: ಇನ್ನೂ ಬಾರದ ಅಕ್ಕಿ ಬೇಳೆ – ಹುಸಿಯಾದ ಕೇಂದ್ರ ಸರ್ಕಾರದ ಭರವಸೆ 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಾಂಗ್ರೆಸ್‌ ನಾಯಕ ಸುರ್ಜೇವಾಲಾಗೆ ಚುನಾವಣಾ ಪ್ರಚಾರ ಮಾಡದಂತೆ ನಿರ್ಬಂಧ ವಿಧಿಸಿದ ಚುನಾವಣಾ ಆಯೋಗ

0
ಬಿಜೆಪಿ ಸಂಸದೆಯ ವಿರುದ್ಧದ ಅವಹೇಳನಾಕಾರಿ ಹೇಳಿಕೆ ಆರೋಪದಲ್ಲಿ ಕಾಂಗ್ರೆಸ್‌ ಸಂಸದ ರಣದೀಪ್ ಸಿಂಗ್ ಸುರ್ಜೇವಾಲಾ ಅವರಿಗೆ 48 ಗಂಟೆಗಳ ಕಾಲ ಚುನಾವಣಾ ಪ್ರಚಾರ ಮಾಡದಂತೆ ನಿರ್ಬಂಧ ವಿಧಿಸಿ ಚುನಾವಣಾ ಆಯೋಗ ಆದೇಶವನ್ನು ಹೊರಡಿಸಿದೆ....