Homeಚಳವಳಿರೈತ ಹೋರಾಟ: ಗಾಜಿಪುರ್‌ ಗಡಿಯಿಂದ ಭಾಗಶಃ ವಾಹನ ಸಂಚಾರ ಆರಂಭ

ರೈತ ಹೋರಾಟ: ಗಾಜಿಪುರ್‌ ಗಡಿಯಿಂದ ಭಾಗಶಃ ವಾಹನ ಸಂಚಾರ ಆರಂಭ

ಸಾವಿರಾರು ಸಂಖ್ಯೆಯಲ್ಲಿ ರೈತರು ಗಾಜಿಪುರ್‌ ಗಡಿಯಲ್ಲಿ ಜಮಾಯಿಸಲು ಶುರು ಮಾಡಿದ್ದರಿಂದ ದೆಹಲಿ ಮತ್ತು ಉತ್ತರ ಪ್ರದೇಶ ಪೊಲೀಸರು ಗಡಿಗಳನ್ನು ಬಂದ್ ಮಾಡಿ ವಾಹನ ಸಂಚಾರವನ್ನು ನಿರ್ಬಂಧಿಸಿದ್ದರು.

- Advertisement -
- Advertisement -

ಜನವರಿ 26 ರಂದು ರೈತ ಗಣರಾಜ್ಯೋತ್ಸವದ ಟ್ರಾಕ್ಟರ್ ರ್‍ಯಾಲಿಯಲ್ಲಿ ನಡೆದ ಅಹಿತಕರ ಘಟನೆ ನಂತರ ದೆಹಲಿಯ ಎಲ್ಲಾ ಪ್ರತಿಭಟನಾ ಸ್ಥಳಗಳಿಗೆ ಹೋಗುವ ಗಡಿ ಮಾರ್ಗಗಳನ್ನು ದೆಹಲಿ ಪೊಲೀಸರು ನಿರ್ಬಂಧಿಸಿದ್ದರು. ಗಡಿಗಳಲ್ಲಿನ ಎಲ್ಲಾ ಸಂಚಾರ ಮಾರ್ಗಗಳನ್ನು ಮುಚ್ಚಿ, ಪರ್ಯಾಯ ಮಾರ್ಗಗಳನ್ನು ಒದಗಿಸಲಾಗಿತ್ತು.

ಒಂದು ತಿಂಗಳ ನಂತರ ಪ್ರತಿಭಟನಾ ಸ್ಥಳವಾದ ಗಾಜಿಪುರ ಗಡಿಯ ಮೂಲಕ ದೆಹಲಿಯಿಂದ ಗಾಜಿಯಾಬಾದ್‌ಗೆ ವಾಹನ ಸಂಚಾರವನ್ನು ಸೋಮವಾರ ಸಂಜೆಯಿಂದ ಭಾಗಶಃ ಆರಂಭಿಸಲಾಗಿದೆ. ಜನವರಿ 26 ರಂದು ನಡೆದ ಘಟನೆಗೆ ರೈತರು ಕಾರಣ ಎಂದು ಪೊಲೀಸರು ಚಿಲ್ಲಾ ಗಡಿ ಭಾಗದಲ್ಲಿದ್ದ ಪ್ರತಿಭಟನಾಕಾರರನ್ನು ಬಲವಂತವಾಗಿ ಖಾಲಿ ಮಾಡಿಸಿದ್ದರು.

ಗಾಜಿಪುರ್ ಗಡಿ ಭಾಗದಲ್ಲಿಯು ಪೊಲೀಸರು ಪ್ರತಿಭಟನನಾಕಾರರನ್ನು ಚದುರಿಸಲು ಮಾಡಿದ ಯೋಜನೆ ಅವರಿಗೆ ತಿರುಗುಬಾಣವಾಗಿತ್ತು. ಪರಿಸ್ಥಿತಿ ವಿಕೋಪಕ್ಕೆ ತಿರುಗಿದ್ದರಿಂದ, ರೈತರು ಸಾವಿರಾರು ಸಂಖ್ಯೆಯಲ್ಲಿ ಗಾಜಿಪುರ್‌ ಗಡಿಯಲ್ಲಿ ಜಮಾಯಿಸಲು ಶುರು ಮಾಡಿದ್ದರಿಂದ ದೆಹಲಿ ಪೋಲಿಸರು ಮತ್ತು ಉತ್ತರ ಪ್ರದೇಶ ಪೊಲೀಸರು ಗಡಿಗಳನ್ನು ಬಂದ್ ಮಾಡಿ ವಾಹನ ಸಂಚಾರವನ್ನು ನಿರ್ಬಂಧಿಸಿದ್ದರು.

ಇದನ್ನೂ ಓದಿ: ಹೋರಾಟ ನಿರತ ರೈತರನ್ನು ಭೇಟಿಯಾಗಲು ಗಾಜಿಪುರ್‌ ತಲುಪಿದ ವಿರೋಧ ಪಕ್ಷ ನಾಯಕರು

ತುರ್ತು ಸಂದರ್ಭಗಳಲ್ಲಿ ತುರ್ತು ವಾಹನಗಳು ಮತ್ತು ವಾಹನ ಚಾಲಕರಿಗೆ ಮಾತ್ರ ಒಂದು ಮಾರ್ಗದಲ್ಲಿ (ದೆಹಲಿಯಿಂದ ಗಾಜಿಯಾಬಾದ್‌ಗೆ) ಸಂಚಾರವನ್ನು ಮತ್ತೆ ಆರಂಭಿಸಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

“ನಾವು ಮೊದಲೇ ಆಂಬುಲೆನ್ಸ್‌ಗಳ ಸಂಚಾರಕ್ಕೆ ಸಹಕರಿಸುತ್ತಿದ್ದೆವು. ಈಗ, ನಾವು ಈ ಮಾರ್ಗವನ್ನು ಭಾಗಶಃ ತೆರೆದಿದ್ದೇವೆ ಮತ್ತು ತುರ್ತು ಪರಿಸ್ಥಿತಿಯನ್ನು ಎದುರಿಸುತ್ತಿರುವ ವಾಹನ ಚಾಲಕರಿಗೆ ಅವಕಾಶ ನೀಡಿದ್ದೇವೆ. ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಿ ಮತ್ತೆ ಪರಿಶೀಲಿಸಲಾಗುವುದು.  ಯಾವುದೇ ಸಮಸ್ಯೆಗಳು ಎದುರಾದರೆ, ನಾವು ಮತ್ತೆ ಮಾರ್ಗವನ್ನು ಮುಚ್ಚುತ್ತೇವೆ” ಎಂದು ಹೆಸರು ಹೇಳಲು ಇಚ್ಛಿಸದ ಪೊಲೀಸ್ ಅಧಿಕಾರಿಯೊಬ್ಬರನ್ನು ಹಿಂದೂಸ್ತಾನ್ ಟೈಮ್ಸ್ ಉಲ್ಲೆಖಿಸಿ ವರದಿ ಮಾಡಿದೆ.

ಕಳೆದ 97 ದಿನಗಳಿಂದ ಒಕ್ಕೂಟ ಸರ್ಕಾರದ ಮೂರು ವಿವಾದಾತ್ಮಕ ಕೃಷಿ ಕಾನೂನುಗಳ ವಿರುದ್ಧ ರೈತರು ಪ್ರತಿಭಟನೆ ನಡೆಸುತ್ತಿರುವ ನಾಲ್ಕು ಪ್ರಮುಖ ಗಡಿಗಳಲ್ಲಿ ಗಾಜಿಪುರ ಗಡಿಯೂ ಈಗ ಪ್ರಮುಖವಾಗಿದೆ. ರೈತ ಹೋರಾಟದ ಆರಂಭದಲ್ಲಿ, ಗಾಜಿಯಾಬಾದ್‌ನಿಂದ ದೆಹಲಿ ಕಡೆಗೆ ಹೋಗುವ ಸಂಚಾರ ಮಾರ್ಗಗಳನ್ನು ಮಾತ್ರ ಮುಚ್ಚಲಾಗಿತ್ತು.


ಇದನ್ನೂ ಓದಿ: ಬಿಸಿಲಿಗೂ ಬಗ್ಗುವುದಿಲ್ಲ: ಹೋರಾಟನಿರತ ರೈತರ ಟ್ಯ್ರಾಲಿ, ಟೆಂಟ್‌ಗಳಿಗೆ ಬಂದ ಎಸಿ, ಕೂಲರ್‌ಗಳು!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಪಿಡಿಪಿ-ಬಿಜೆಪಿ ಮೈತ್ರಿಯು ಅಖಂಡವಾಗಿ ಉಳಿದಿದೆಯೇ..?’; ಮುಫ್ತಿ ವಿರುದ್ಧ ಒಮರ್ ಅಬ್ದುಲ್ಲಾ ಕಿಡಿ

0
ಅನಂತನಾಗ್ ರಜೌರಿ ಸಂಸದೀಯ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಅವರಿಗೆ ಮತ ನೀಡುವಂತೆ, ಬಿಜೆಪಿ ಪ್ರಮುಖ ನಾಯಕರೊಬ್ಬರು ತಮ್ಮ ಪಹಾರಿ ಸಮುದಾಯದ ಸದಸ್ಯರನ್ನು ಕೇಳಿದ್ದು, ಮಾಜಿ ಮುಖ್ಯಮಂತ್ರಿ...