ಕೇಂದ್ರದ ವಿವಾದಾತ್ಮಕ ಹೊಸ ಕೃಷಿ ಕಾನೂನುಗಳ ವಿರುದ್ಧ ಹೋರಾಟ ನಡೆಸುತ್ತಿರುವ ರೈತರನ್ನು ಭೇಟಿಯಾಗಲು ಪ್ರತಿಪಕ್ಷ ನಾಯಕರ ನಿಯೋಗವೊಂದು ಗುರುವಾರ ಬೆಳಿಗ್ಗೆ ಗಾಜಿಪುರ ಗಡಿಗೆ ಆಗಮಿಸಿದೆ. ನಿಯೋಗದಲ್ಲಿ ಎನ್‌ಸಿಪಿ ಸಂಸದೆ ಸುಪ್ರಿಯಾ ಸುಲೇ, ಡಿಎಂಕೆ ಸಂಸದೆ ಕನಿಮೋಳಿ, ಎಸ್‌ಎಡಿ ಸಂಸದೆ ಹರ್ಸಿಮ್ರತ್ ಕೌರ್ ಬಾದಲ್ ಮತ್ತು ಟಿಎಂಸಿ ಸಂಸದ ಸೌಗತಾ ರಾಯ್ ಸೇರಿದ್ದಾರೆ.
“ನಾವು ರೈತರನ್ನು ಭೇಟಿಯಾಗುವ ಹಾದಿಯಲ್ಲಿದ್ದೇವೆ. ನಾವೆಲ್ಲರೂ ರೈತರನ್ನು ಬೆಂಬಲಿಸುತ್ತೇವೆ, ರೈತರೊಂದಿಗೆ ಮಾತುಕತೆ ನಡೆಸಿ ಅವರಿಗೆ ನ್ಯಾಯ ದೊರಕಿಸುವಂತೆ ನಾವು ಸರ್ಕಾರವನ್ನು ಕೋರುತ್ತೇವೆ” ಎಂದು ಎನ್‌ಸಿಪಿ ಸಂಸದೆ ಸುಪ್ರಿಯಾ ಸುಲೇ ಅವರು ಹೇಳಿದ್ದಾರೆಂದು ಎಎನ್‌ಐ ವರದಿ ಮಾಡಿದೆ.
ಪ್ರತಿಭಟನಾ ಸ್ಥಳವಾದ ಗಾಜಿಪುರ್ ಗಡಿ ತಲುಪಿದ ಕೂಡಲೇ ಪೊಲೀಸರು ಪ್ರತಿಪಕ್ಷ ನಾಯಕರನ್ನು ತಡೆದಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ.
ಇದನ್ನೂ ಓದಿ: ಕೇಂದ್ರ ಸರ್ಕಾರದ ಪರವಾಗಿ ಕಾಪಿ-ಪೇಸ್ಟ್ ಟ್ವೀಟ್: ಸಿಕ್ಕಿಬಿದ್ದ ಭಾರತೀಯ ಸೆಲೆಬ್ರಿಟಿಗಳು!
“ನಾವು ಪ್ರತಿಭಟನಾ ಸ್ಥಳದಲ್ಲೇ ಇರುವುದರಿಂದ ರೈತರ ಪ್ರತಿಭಟನೆಯ ವಿಷಯವನ್ನು ಸಂಸತ್ತಿನಲ್ಲಿ ಚರ್ಚಿಸಬಹುದು. ಸ್ಪೀಕರ್ ಈ ವಿಷಯವನ್ನು ಎತ್ತಲು ನಮಗೆ ಅವಕಾಶ ನೀಡುತ್ತಿಲ್ಲ. ಈಗ ಎಲ್ಲಾ ಪಕ್ಷಗಳಿಗೂ ಇಲ್ಲಿ ಏನು ನಡೆಯುತ್ತಿದೆ ಎಂಬ ವಿವರಗಳನ್ನು ನೀಡುತ್ತವೆ ”ಎಂದು ಎಸ್‌ಎಡಿ ಸಂಸದೆ ಹರ್ಸಿಮ್ರತ್ ಕೌರ್ ಬಾದಲ್ ಹೇಳಿದ್ದಾರೆ.
We are here so that we can discuss this issue (farmers' protest) in Parliament, Speaker is not letting us raise the issue. Now all the parties will give details of what is happening here: SAD MP Harsimrat Kaur Badal pic.twitter.com/nC5fp6Y2vF
— ANI (@ANI) February 4, 2021
ಇದನ್ನೂ ಓದಿ: ರೈತ ಹೋರಾಟಕ್ಕೆ ಗ್ರೇಥಾ ಥನ್‌ಬರ್ಗ್ ಮತ್ತು ಪಾಪ್ ಗಾಯಕಿ ರಿಹಾನ್ನಾ ಬೆಂಬಲ; ನೆಟ್ಟಿಗರ ಪ್ರತಿಕ್ರಿಯೆಯೇನು?
ವಿಧಾನ ಸಭಾ ಅಧಿವೇಶನ ಲೈವ್ ನೋಡಿ►►