Homeಮುಖಪುಟಕೇಂದ್ರ ಸರ್ಕಾರದ ಪರವಾಗಿ ಕಾಪಿ-ಪೇಸ್ಟ್ ಟ್ವೀಟ್: ಸಿಕ್ಕಿಬಿದ್ದ ಭಾರತೀಯ ಸೆಲೆಬ್ರಿಟಿಗಳು!

ಕೇಂದ್ರ ಸರ್ಕಾರದ ಪರವಾಗಿ ಕಾಪಿ-ಪೇಸ್ಟ್ ಟ್ವೀಟ್: ಸಿಕ್ಕಿಬಿದ್ದ ಭಾರತೀಯ ಸೆಲೆಬ್ರಿಟಿಗಳು!

- Advertisement -
- Advertisement -

ಸೋಮವಾರದಂದು ಅಂತಾರಾಷ್ಟ್ರೀಯ ಪಾಪ್ ತಾರೆ ರಿಹಾನ್ನಾ ಅವರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಹತ್ತು ಕೋಟಿ ಫಾಲೋವರ್‌ಗಳನ್ನು ಉಲ್ಲೇಖಿಸಿ, “ನಾವೇಕೆ ರೈತ ಪ್ರತಿಭಟನೆಯ ಬಗ್ಗೆ ಮಾತನಾಡುತ್ತಿಲ್ಲ?” ಎಂದು ಪ್ರಶ್ನಿಸಿದ್ದರು. ಇದರ ನಂತರ ಭಾರತದ ರೈತ ಹೋರಾಟಕ್ಕೆ ಅಂತಾರಾಷ್ಟ್ರೀಯವಾಗಿ ಬೆಂಬಲ ಹೆಚ್ಚಾಗಿದ್ದು, ಅಂತಾರಾಷ್ಟ್ರೀಯ ಸೆಲೆಬ್ರಿಟಿಗಳು, ರಾಜಕಾರಣಿಗಳು, ಸಾಮಾಜಿಕ ಕಾರ್ಯಕರ್ತರು ಭಾರತೀಯ ರೈತರ ಪರವಾಗಿ ಧ್ವನಿ ಎತ್ತಿದ್ದಾರೆ.

ರೈತ ಹೋರಾಟಕ್ಕೆ ಜಾಗತಿಕವಾಗಿ ಬೆಂಬಲ ವ್ಯಕ್ತವಾಗುತ್ತಿದ್ದಂತೆ ಎಚ್ಚೆತ್ತ ವಿದೇಶಾಂಗ ಸಚಿವಾಲಯ, ರೈತ ಹೋರಾಟವು ದೇಶದ ಆಂತರಿಕ ಸಮಸ್ಯೆಯಾಗಿದ್ದು ವಿದೇಶಿಗರು ಇದರ ಬಗ್ಗೆ ಮಾತನಾಡಬಾರದು ಎಂದು ಹೇಳಿತ್ತು. ಜೊತೆಗೆ #FarmersProtest ಹ್ಯಾಶ್‌ಟ್ಯಾಗ್‌ಗೆ ವಿರುದ್ದವಾಗಿ ’ಇಂಡಿಯಾ ಟುಗೇದರ್‌’ ಮತ್ತು  ’ಇಂಡಿಯಾ ಅಗೇನ್ಸ್ಟ್‌‌ ಪ್ರೊಪಗಾಂಡ’ ಎಂಬ ಹ್ಯಾಶ್ ಟ್ಯಾಗನ್ನು ನೀಡಿತ್ತು. ಇದನ್ನು ಸರ್ಕಾರದ ಪರವಾಗಿರುವ ಭಾತರದ ಹಲವಾರು ಸೆಲಬ್ರಿಟಿಗಳು ಟ್ವೀಟ್ ಮಾಡಿದ್ದರು.

ಇದನ್ನೂ ಓದಿ: ರೈತ ಹೋರಾಟ ಬೆಂಬಲಿಸಿದ ರಿಹಾನ್ನಾ: ಗೌರವಾರ್ಥವಾಗಿ ಹಾಡು ಸಮರ್ಪಿಸಿದ ದಿಲ್ಜಿತ್‌!

ಇದರಲ್ಲಿ, “ರೈತರು ನಮ್ಮ ದೇಶದ ಬಹುಮುಖ್ಯ ಅಂಗವಾಗಿದ್ದಾರೆ. ಅವರ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಗಳನ್ನು ನಡೆಸುತ್ತಿರುವುದು ಸ್ಪಷ್ಟವಾಗಿದೆ. ವಿಭಜನೆಯನ್ನು ಸೃಷ್ಟಿಸುವವರಿಗೆ ಗಮನಕೊಡುವ ಬದಲು ಅನೋನ್ಯ ಸೌರ್ಹಾದಯುತ ಪರಿಹಾರಕ್ಕಾಗಿ ಬೆಂಬಲಿಸೋಣ” ಎಂಬ ಟ್ವೀಟ್‌ ಸಾಮಾನ್ಯವಾಗಿ ಹರಿದಾಡಿತ್ತು. ಸಾಮಾಜಿಕ ಜಾಲತಾಣದ ಪರಿಣಿತರು ಹೇಳುವಂತೆ ಈ ಟ್ವೀಟ್ ಬಿಜೆಪಿಯ ಐಟಿ ಸೆಲ್‌ನಿಂದ ಬಂದಿದ್ದಾಗಿದೆ.

ಈ ಟ್ವೀಟ್‌ಗಳನ್ನು ಭಾರತದ ಹಲವು ಸೆಲೆಬ್ರಿಟಿಗಳು ಕಾಪಿ -ಪೇಸ್ಟ್‌ ಮಾಡಿ ಸಿಕ್ಕಿ ಬಿದ್ದಿದ್ದಾರೆ. ಸಿಕ್ಕಿ ಬಿದ್ದವರದಲ್ಲಿ ನಟ ಅಕ್ಷಯ್ ಕುಮಾರ್, ಬ್ಯಾಟ್ಮಿಟನ್ ಆಟಗಾರ್ತಿ ಸೈನಾ ನೆಹ್ವಾಲ್ ಪ್ರಮುಖರಾಗಿದ್ದಾರೆ. ಆದರೆ ನೆಟ್ಟಿಗರು ಅವರನ್ನು ಸಾಮಾಜಿಕ ಜಾಲತಾಣದಲ್ಲೇ ತರಾಟೆಗೆ ತೆಗೆದುಕೊಂಡಿದ್ದಾರೆ.

 

ಇದನ್ನೂ ಓದಿ: ರಿಹಾನ್ನಾ ಟ್ವೀಟ್ ಪರಿಣಾಮ-ರೈತ ಹೋರಾಟಕ್ಕೆ ಜಾಗತಿಕ ಮನ್ನಣೆ!

ಈ ಸೆಲೆಬ್ರಿಟಿಗಳು ಕಾಪಿ ಪೇಸ್ಟ್ ಮಾಡುವ ಭರದಲ್ಲಿ ಅದರಲ್ಲಿರುವ ”ಜೋಡಿಸಿದ ಕೈ” ಸ್ಟಿಕ್ಕರನ್ನು ಕೂಡಾ ತೆಗೆಲು ಮರೆತಿದ್ದಾರೆ ಎಂದು ನೆಟ್ಟಿಗರು ವ್ಯಂಗ್ಯ ಮಾಡಿದ್ದಾರೆ. ಅಂತಹದ್ದೇ ಹಲವು ಕಾಪಿ-ಪೇಸ್ಟ್‌ ಟ್ವೀಟ್ ನೋಡಲು ಇಲ್ಲಿ ಕ್ಲಿಕ್ ಮಾಡಿ.

ಮೂರು ಕರಾಳ ಕೃಷಿ ಕಾನೂನಿನ ವಿರುದ್ದ ದೆಹಲಿಯ ಗಡಿಗಳಲ್ಲಿ ರೈತರು ಕಳೆದ 71 ದಿನಗಳಿಂದ ದೆಹಲಿಯಲ್ಲಿ ಶಾಂತಿಯುತವಾಗಿ ಹೋರಾಟ ನಡೆಸುತ್ತಿದ್ದಾರೆ. ಕೇಂದ್ರ ಸರ್ಕಾರವು ರೈತರೊಂದಿಗೆ 11 ಸುತ್ತಿನ ಮಾತುಕತೆ ನಡೆಸಿತ್ತಾದರೂ, ರೈತರ ಯಾವುದೆ ಬೇಡಿಕೆಗಳನ್ನು ಈಡೇರಿಸುವತ್ತ ಹೆಜ್ಜೆ ಹಾಕದ ಕಾರಣ ಮಾತುಕತೆಗಳು ವಿಫಲಗೊಂಡಿದೆ. ಅದಾಗಿಯು ಹೋರಾಟವನ್ನು ಮುರಿಯಲು ಬೇಕಾಗಿ ರೈತ ಹೋರಾಟಗಾರರಿಗೆ ನಿರಂತರವಾಗಿ ಕಿರುಕುಳ ನೀಡುತ್ತಲೆ ಬಂದಿದೆ. ರೈತ ಹೋರಾಟದ ಬಗ್ಗೆ ಬರೆಯುವ ಪತ್ರಿಕೆಗಳ ಮೇಲೂ ಕೇಂದ್ರ ಸರ್ಕಾರ ತೊಂದರೆ ನೀಡುತ್ತಿದೆ.

ಇದನ್ನೂ ಓದಿ: ರೈತ ಹೋರಾಟಕ್ಕೆ ಗ್ರೇಥಾ ಥನ್‌‌ಬರ್ಗ್ ಮತ್ತು ಪಾಪ್‌ ಗಾಯಕಿ ರಿಹಾನ್ನಾ ಬೆಂಬಲ; ನೆಟ್ಟಿಗರ ಪ್ರತಿಕ್ರಿಯೆಯೇನು?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -