Homeಅಂತರಾಷ್ಟ್ರೀಯ'ಏನೇ ಆಗಲಿ, ನಾನು ಭಾರತವನ್ನು ಬೆಂಬಲಿಸುತ್ತೇನೆ': ಸಾನಿಯಾ ಮಿರ್ಜಾ

‘ಏನೇ ಆಗಲಿ, ನಾನು ಭಾರತವನ್ನು ಬೆಂಬಲಿಸುತ್ತೇನೆ’: ಸಾನಿಯಾ ಮಿರ್ಜಾ

- Advertisement -
- Advertisement -

ಭಾರತೀಯ ಟೆನಿಸ್ ತಾರೆ ಸಾನಿಯಾ ಮಿರ್ಜಾ 2010 ರಲ್ಲಿ ಪಾಕಿಸ್ತಾನದ ಕ್ರಿಕೆಟಿಗ ಶೋಯೆಬ್ ಮಲಿಕ್ ಅವರನ್ನು ವಿವಾಹವಾಗಿದ್ದರು. ಮದುವೆಯ ಮುಂಚೆಯು ಅವರೊಂದಿಗಿನ ಸಂವಾದದಲ್ಲಿ ‘ಏನೇ ಆಗಲಿ, ನಾನು ಭಾರತವನ್ನು ಬೆಂಬಲಿಸುತ್ತೇನೆ’ ಎಂದು ಧೈರ್ಯವಾಗಿ ಹೇಳುತ್ತಿದ್ದೆ. ಅಷ್ಟರಮಟ್ಟಿಗೆ ನಮ್ಮ ನಡುವೆ ಸಮಾನತೆಯಿತ್ತು ಎಂದು ಮಿರ್ಜಾ ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ.

ಟೆನ್ನಿಸಿನ ಸಿಂಗಲ್ಸ್ ಮತ್ತು ಡಬಲ್ಸ್ ಎರಡರಲ್ಲೂ ಹೆಸರು ಗಳಿಸಿದ ಸಾನಿಯಾ ಮದುವೆಗೂ ಮೊದಲು ತಾವಿಬ್ಬರೂ ಫೇಸ್ ಬುಕ್ ಚಾಟ್ ನಡೆಸುತ್ತಿದ್ದನ್ನು ನೆನೆಸಿಕೊಂಡಿದ್ದಾರೆ.

“ನಾವು ಬಹಳ ಖುಷಿಯಿಂದ ಇದ್ದೇವೆ. ನಾವಿಬ್ಬರೂ ನಮ್ಮ ಸಂಬಂಧವನ್ನು ತುಂಬಾ ಹಗುರವಾಗಿಡಲು ಪ್ರಯತ್ನಿಸುತ್ತೇವೆ. ಯಾರಾದರೂ ನೋಡಿದವರು ಅವರು ನನಗಿಂತ ಹೆಚ್ಚು ಮಾತನಾಡುತ್ತಾರೆ ಎನ್ನುವ ವಿಶ್ವದ ನಂಬಿಕೆಗೆ ಇದು ವಿರುದ್ಧವಾಗಿದೆ” ಎಂದು ಸಾನಿಯಾ ಮಿರ್ಜಾ ಹೇಳಿದರು.

ಇಬ್ಬರೂ ಆಯಾ ದೇಶಗಳನ್ನು ಪ್ರತಿನಿಧಿಸುವಲ್ಲಿ ಸಾಕಷ್ಟು ಹೆಮ್ಮೆಪಡುವ ಕ್ರೀಡಾಪಟುಗಳು. ಸಾನಿಯಾ ಅವರು ಶೋಯೆಬ್ ಮಲಿಕ್ ಅವರೊಂದಿಗೆ ಡೇಟಿಂಗ್‌ಗೆ ಹೋಗುತ್ತಿದ್ದಾಗ ‘ಭಾರತವನ್ನು ಬೆಂಬಲಿಸುವ’ ಬಗ್ಗೆ ಮಾತನಾಡುತ್ತಿದ್ದೆ ಎಂದು ಅವರು ಹೇಳಿದ್ದಾರೆ.

“ಕೆಲವು ಕಾರಣಗಳಿಂದಾಗಿ ಅವರು ಭಾರತದ ವಿರುದ್ಧ ಆಟವಾಡುತ್ತಿದ್ದರು. ಹಾಗಾಗಿ ನಾವು ಡೇಟಿಂಗ್ ನಲ್ಲಿದ್ದಾಗ ಅದರ ಬಗ್ಗೆ ಮಾತನಾಡುವಾಗಲೆಲ್ಲಾ ‘ನಾನು ಭಾರತವನ್ನು ಬೆಂಬಲಿಸುತ್ತೇನೆ’ ಎಂದು ಹೇಳುತ್ತಿದ್ದೆ. ನಂತರ ‘ಭಾರತದ ವಿರುದ್ಧದ ನನ್ನ ದಾಖಲೆಯು ನನ್ನಲ್ಲಿರುವ ಅತ್ಯುತ್ತಮವಾದ ದಾಖಲೆ’ಎಂದು ಅವರು ಹೇಳುತ್ತಿದ್ದರು. ಹಾಗಾಗಿ ನನಗೆ ಅವರ ಬಗ್ಗೆ ನಿಜವಾಗಿಯೂ ಹೆಮ್ಮೆಯಿದೆ” ಎಂದು ಸಾನಿಯಾ ಹೇಳಿದರು.

ದಂಪತಿಗೆ ಎರಡು ವರ್ಷದ ಇಝಾನ್ ಹೆಸರಿನ ಮಗು ಇದೆ.


ಇದನ್ನೂ ಓದಿ: ಹೊಬಾರ್ಟ್‌ ಪ್ರಶಸ್ತಿ ಗೆಲುವಿನೊಂದಿಗೆ ಟೆನಿಸ್‌ಗೆ ರೀಎಂಟ್ರಿ ಕೊಟ್ಟ ಸಾನಿಯಾ ಮಿರ್ಜಾ…

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಾಸನ ಪೆನ್‌ಡ್ರೈವ್ ಪ್ರಕರಣ: ಎಸ್‌ಐಟಿ ರಚಿಸಲು ಕೋರಿ ಮಹಿಳಾ ಆಯೋಗದಿಂದ ಸಿಎಂಗೆ ಪತ್ರ

0
ಹಾಸನ ಜಿಲ್ಲೆಯಲ್ಲಿ ಹರಿದಾಡುತ್ತಿರುವ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ವಿಶೇಷ ತಂಡ ರಚನೆ ಮಾಡುವಂತೆ ಕೋರಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ ಅವರು ಸಿಎಂ ಸಿದ್ದರಾಮಯ್ಯ, ಗೃಹ ಸಚಿವ...