ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರೈತ ವಿರೋಧಿ ಕಾನೂನುಗಳ ವಿರುದ್ದ ರೈತರು ನಡೆಸುತ್ತಿರುವ ಹೋರಾಟಕ್ಕೆ ಬಾಕ್ಸಿಂಗ್ ಚಾಂಪಿಯನ್ ಮತ್ತು ಖೇಲ್ ರತ್ನ ಪ್ರಶಸ್ತಿ ಪುರಸ್ಕೃತ ವಿಜೇಂದರ್ ಸಿಂಗ್ ಬೆಂಬಲ ನೀಡಿದ್ದಾರೆ. ಕರಾಳ ಕೃಷಿ ನೀತಿಯನ್ನು ಹಿಂಪಡೆಯದಿದ್ದರೆ ತನಗೆ ಸಿಕ್ಕಿರುವ ಕ್ರೀಡಾ ಪ್ರಶಸ್ತಿ ರಾಜೀವ್ ಗಾಂಧಿ ಖೇಲ್ ರತ್ನವನ್ನು ಹಿಂದಿರುಗಿಸುವುದಾಗಿ ಅವರು ಘೋಷಿಸಿದ್ದಾರೆ.
ಪ್ರತಿಭಟನೆಯಲ್ಲಿ ಭಾಗವಹಿಸಿ ರೈತರ ಹೋರಾಟಕ್ಕೆ ತಮ್ಮ ಬೆಂಬಲ ಘೋಷಿಸಿದ ನಟ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದರು. “ನಾನು ಪಂಜಾಬ್‌ನಲ್ಲಿ ತರಬೇತಿ ಪಡೆದಿದ್ದೇನೆ ಮತ್ತು ಅಲ್ಲಿನ ರೊಟ್ಟಿ ತಿಂದಿದ್ದೇನೆ. ಇಂದು ಅವರು ಚಳಿಯಲ್ಲಿ ಇದ್ದಾರೆ, ಹಾಗಾಗಿ ನಾನು ಅವರ ಸೋದರನಾಗಿ ಬಂದಿದ್ದೇನೆ. ಹರ್ಯಾಣದ ಇತರ ಕ್ರೀಡಾಪಟುಗಳು ಕೂಡಾ ಬರಲು ಬಯಸಿದ್ದರು ಆದರೆ ಅವರ ಸರ್ಕಾರಿ ಉದ್ಯೋಗಳು ಅವರಿಗೆ ತೊಂದರೆ ನೀಡುತ್ತಿದೆ. ಅವರೂ ರೈತರ ಪರವಿದ್ದಾರೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಡಿಸೆಂಬರ್ 8ಕ್ಕೆ ರೈತರಿಂದ ಭಾರತ್ ಬಂದ್: ಎಲ್ಲೆಡೆ ಹರಿದುಬರುತ್ತಿರುವ ಬೆಂಬಲದ ಮಹಾಪೂರ
I'd received training in Punjab & had their 'roti'. Today when they're here in cold, I've come as their brother. Other athletes from Haryana wanted to come but they have govt jobs & would've been in trouble. They say they're with farmers: Vijender Singh, boxer & Congress leader pic.twitter.com/sEb4WPC60W
— ANI (@ANI) December 6, 2020
ಹರಿಯಾಣದ ವಿಜೇಂದರ್ ಸಿಂಗ್ ಅವರು ಒಲಿಂಪಿಕ್‌ನ ಬಾಕ್ಸಿಂಗ್ ವಿಭಾಗದಲ್ಲಿ ಭಾರತಕ್ಕೆ ಪದಕ ಗೆದ್ದ ಮೊದಲ ಬಾಕ್ಸರ್. ಅವರು 2019 ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್‌ನಲ್ಲಿ ದಕ್ಷಿಣ ದೆಹಲಿಯಿಂದ ಸ್ಪರ್ಧಿಸಿ ಸೋತಿದ್ದರು.
ದೆಹಲಿಯ ಐದು ಪ್ರಮುಖ ಗಡಿಯುದ್ದಕ್ಕೂ ರೈತರು ನಡೆಸುತ್ತಿರುವ ಆಂದೋಲನವು ತನ್ನ 11 ನೇ ದಿನವನ್ನು ಪ್ರವೇಶಿಸಿದೆ. ಪ್ರತಿಭಟನಾಕಾರರನ್ನು ಬೆಂಬಲಿಸಿ ಹಲವಾರು ಕ್ರೀಡಾಪಟುಗಳು ಧ್ವನಿಯೆತ್ತಿದ್ದಾರೆ. ಈ ಹಿಂದೆ ಪಂಜಾಬ್ ಮಾಜಿ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ತಮ್ಮ ಪದ್ಮವಿಭೂಷಣ ಪ್ರಶಸ್ತಿಯನ್ನು ಹಿಂದಿರುಗಿಸುವುದಾಗಿ ಘೋಷಿಸಿದ್ದರು.
ಇದನ್ನೂ ಓದಿ: ‘ರೈತರಿಗಾಗಿ ಗಲ್ಲಿಗೇರಲು ಸಿದ್ಧ- ತಾಕತ್ತಿದ್ದರೆ ಬಂಧಿಸಿ’: ನಿತೀಶ್‌ಗೆ ತೇಜಸ್ವಿ ಯಾದವ್ ಸವಾಲು


