Homeಅಂತರಾಷ್ಟ್ರೀಯರೈತ ಹೋರಾಟಕ್ಕೆ ಅಮೆರಿಕದ ಚುನಾಯಿತ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಬೆಂಬಲಿಸಿದ್ದು ನಿಜವೆ?

ರೈತ ಹೋರಾಟಕ್ಕೆ ಅಮೆರಿಕದ ಚುನಾಯಿತ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಬೆಂಬಲಿಸಿದ್ದು ನಿಜವೆ?

- Advertisement -
- Advertisement -

ರೈತ ವಿರೋಧಿ ಕಾಯ್ದೆಯ ವಿರುದ್ದ ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆ 11 ದಿನಕ್ಕೆ ಕಾಲಿಟ್ಟಿದ್ದು ವಿಶ್ವದಾದ್ಯಂತ ಭಾರಿ ಬೆಂಬಲವನ್ನು ಪಡೆದಿದೆ. ಬ್ರಿಟನ್‌‌ನ 30 ಸಂಸದರು ಸೇರಿದಂತೆ, ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಕೂಡಾ ರೈತರ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಪ್ರತಿಭಟನೆಯ ಹಿನ್ನಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹಲವಾರು ಸುಳ್ಳು ಸುದ್ದಿಗಳು ಕೂಡಾ ಹರಿದಾಡುತ್ತಿದೆ. ಅಮೆರಿಕದ ನೂತನ ಚುನಾಯಿತ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಕೂಡಾ ರೈತ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲಾಗಿದೆ.

ಇದನ್ನೂ ಓದಿ: BJP ಐಟಿ ಸೆಲ್‌ ಹೇಳಿದ ಸುಳ್ಳು ಬಯಲು: ವೈರಲ್ ಆದ ಚಿತ್ರದ‌ ಸತ್ಯ ಹೇಳಿದ ರೈತ!

PC: BBC

ಕಮಲಾ ಹ್ಯಾರಿಸ್ ಅವರದ್ದೆಂದು ವೈರಲಾಗಿರುವ ಟ್ವೀಟ್‌‌ನಲ್ಲಿ, “ಕೃಷಿ ಕಾನೂನುಗಳ ವಿರುದ್ಧ ಹೋರಾಡುತ್ತಿರುವ ರೈತರ ಮೇಲೆ ಭಾರತ ಸರ್ಕಾರ ದಬ್ಬಾಳಿಕೆ ನಡೆಸುತ್ತಿರುವುದು ಆಘಾತಕಾರಿ. ನೀರಿನ ಫಿರಂಗಿಗಳನ್ನು ಮತ್ತು ಅಶ್ರುವಾಯುಗಳನ್ನು ಬಳಸುವ ಬದಲು, ಭಾರತ ಸರ್ಕಾರವು ರೈತರೊಂದಿಗೆ ಬಹಿರಂಗವಾಗಿ ಮಾತುಕತೆ ನಡೆಸಬೇಕು” ಎಂದು ಬರೆಯಲಾಗಿದೆ.

ಇದನ್ನೂ ಓದಿ: ಉತ್ತಮ ಆಡಳಿತ ನೀಡದೆ, BJP ಚುನಾವಣೆ ಗೆಲ್ಲುತ್ತಿರುವುದು ಹೇಗೆ?

ಪೇಸ್‌‌ಬುಕ್‌ನಲ್ಲಿ ಹಂಚಿಕೊಂಡಿರುವ ಈ ರೀತಿಯ ಪೋಸ್ಟ್‌ಗಳಲ್ಲಿ ಸ್ವತಃ ಫೇಸ್ಬುಕ್ ಚಿತ್ರವು ನಕಲಿ ಎಂದು ಎಚ್ಚರಿಸುತ್ತದೆ. ಅಲ್ಲದೆ ಅವರ ಟ್ವಿಟ್ಟರ್‌‌ ಖಾತೆಯಲ್ಲಿ ಕೂಡಾ ರೈತ ಹೋರಾಟದ ಬಗ್ಗೆಗಿನ ಯಾವುದೇ ಪ್ರತಿಕ್ರಿಯೆಗಳು ಇಲ್ಲ. ಹಾಗಾಗಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಟ್ವೀಟ್ ನಕಲಿ ಎಂಬುವುದು ಸ್ಪಷ್ಟವಾಗಿದೆ.

ಇದನ್ನೂ ಓದಿ: Fact check: ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯ ಹರಡಿದ 16 ಸುಳ್ಳು ಸುದ್ದಿಗಳು 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...