HomeಚಳವಳಿBJP ಐಟಿ ಸೆಲ್‌ ಹೇಳಿದ ಸುಳ್ಳು ಬಯಲು: ವೈರಲ್ ಆದ ಚಿತ್ರದ‌ ಸತ್ಯ ಹೇಳಿದ ರೈತ!

BJP ಐಟಿ ಸೆಲ್‌ ಹೇಳಿದ ಸುಳ್ಳು ಬಯಲು: ವೈರಲ್ ಆದ ಚಿತ್ರದ‌ ಸತ್ಯ ಹೇಳಿದ ರೈತ!

ಪಿಟಿಐ ಛಾಯಾಗ್ರಾಹಕ ರವಿ ಚೌಧರಿ ಅವರು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ ಚಿತ್ರಗಳಲ್ಲೂ ಹಿರಿಯ ರೈತರ ಮೇಲೆ ಪೊಲೀಸರು ಹಲ್ಲೆ ಮಾಡುತ್ತಿರುವ ಚಿತ್ರವಿದೆ.

- Advertisement -
- Advertisement -

ದೆಹಲಿಯಲ್ಲಿ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರ ಬಗ್ಗೆ ಬಿಜೆಪಿ ವಿವಾದಾತ್ಮಕ, ಸಂಶಯಾತ್ಮಕ ಹೇಳಿಕೆಗಳನ್ನು ನೀಡುತ್ತಲೇ ಇದೆ. ಸಾಮಾಜಿಕ ಜಾಲತಾಣಗಳಲ್ಲಿ ಪೊಲೀಸ್ ಒಬ್ಬರು ಓರ್ವ ಹಿರಿಯ ರೈತ ಮುಖಂಡರ ಮೇಲೆ ಹಲ್ಲೆ ಮಾಡುತ್ತಿರುವ ಚಿತ್ರ ಸಕತ್ ವೈರಲ್ ಆಗಿತ್ತು.

ಹಲವು ಕಾಂಗ್ರೆಸ್ ಮುಖಂಡರು ಈ ಚಿತ್ರವನ್ನು ಬಳಸಿ ಕೇಂದ್ರ ಸರ್ಕಾರವನ್ನು ಟೀಕಿಸಿದ್ದರು. ಇದಕ್ಕೆ ಬಿಜೆಪಿ ನಿಜಕ್ಕೂ ಅವರನ್ನೂ ಥಳಿಸಲಾಗಿದೇಯೇ ಎಂದು ಪ್ರಶ್ನೆ ಮಾಡಿತ್ತು.

ಸದ್ಯ ವೈರಲ್ ಚಿತ್ರದಲ್ಲಿರುವ ಹಿರಿಯ ರೈತರು ಎನ್‌ಡಿಟಿವಿ ಜೊತೆಗೆ ಮಾತನಾಡಿದ್ದು, ಹಲವು ಬಾರಿ ಲಾಠಿಯಿಂದ ಅವರ ಮೇಲೆ ಹಲ್ಲೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಬಿಜೆಪಿಯ ಸೋಷಿಯಲ್ ಮೀಡಿಯಾ ಮುಖ್ಯಸ್ಥ ಅಮಿತ್ ಮಾಳವಿಯಾ ರಾಹುಲ್ ಗಾಂಧಿಯವರ ಟ್ವೀಟ್ ಅನ್ನು “ಮ್ಯಾನಿಪ್ಯುಲೇಟೆಡ್ ಮೀಡಿಯಾ” ಎಂದು ಕರೆದಿದ್ದರು. ಪೊಲೀಸರು ರೈತರ ಮೇಲೆ ಹಲ್ಲೆಯಲ್ಲ, ಚೂರು ಕೂಡ ಮುಟ್ಟಿಲ್ಲ ಎಂದಿರುವ ವಿಡಿಯೋವನ್ನು ಟ್ವೀಟ್ ಮಾಡಿದ್ದರು.

ಇದನ್ನೂ ಓದಿ: ಕೇಂದ್ರ ಸರ್ಕಾರ ರೈತರಿಗೆ ದ್ರೋಹ ಬಗೆಯುತ್ತಿದೆ: ಪದ್ಮವಿಭೂಷಣ ವಾಪಸ್ ಮಾಡಿದ ಪಂಜಾಬ್ ಮಾಜಿ ಸಿಎಂ

ಎನ್‌ಡಿಟಿವಿ ಚಿತ್ರದಲ್ಲಿರುವ 60 ವರ್ಷದ ಹಿರಿಯ ರೈತ ಸುಖದೇವ್ ಸಿಂಗ್ ಅವರನ್ನು ಪ್ರತಿಭಟನಾ ಸ್ಥಳದಲ್ಲಿ ಪತ್ತೆ ಮಾಡಿ, ಘಟನೆ ಬಗ್ಗೆ ಅವರಿಂದಲೇ ಮಾಹಿತಿ ಕೇಳಿದ್ದಾರೆ.

ಸುಖದೇವ್ ಸಿಂಗ್, ಪೊಲೀಸರ ಲಾಠಿಗಳಿಂದ ಅನೇಕ ಹೊಡೆತಗಳನ್ನು ತಿಂದಿದ್ದು, ಅವರ ದೇಹದಾದ್ಯಂತ ಮೂಗೇಟುಗಳು ಇರುವ ಬಗ್ಗೆ ತಿಳಿಸಿದ್ದಾರೆ. ದೆಹಲಿ ಮತ್ತು ಹರಿಯಾಣ ನಡುವಿನ ಸಿಂಧೂ ಗಡಿಯಲ್ಲಿ ರಾಜಧಾನಿಗೆ ಪ್ರವೇಶಿಸಲು ಯತ್ನಿಸುತ್ತಿರುವಾಗ ಶುಕ್ರವಾರ ಈ ಘಟನೆ ನಡೆದಿದೆ.

“ಅವರು ನಮ್ಮ ಮೇಲೆ ಜಲ ಫಿರಂಗಿಗಳು, ಅಶ್ರುವಾಯು ಬಳಸಿದರು ನಂತರ ಲಾಠಿಯಿಂದ ಹೊಡೆದರು. ನನ್ನ ದೇಹ, ಕಾಲುಗಳು, ಬೆನ್ನಿನಾದ್ಯಂತ ನನಗೆ ನೋವುಂಟಾಗಿದೆ” ಎಂದು ಸುಖದೇವ್ ಸಿಂಗ್ ಹೇಳಿದ್ದಾರೆ. ಜೊತೆಗೆ ಅವರ ಕೈ ಮೇಲೆ ಲಾಠಿ ಏಟಿನಿಂದ ಉಂಟಾಗಿರುವ ಗಾಯದ ಕಲೆಗಳನ್ನು ತೋರಿಸಿದ್ದಾರೆ.

ಇದನ್ನೂ ಓದಿ: ದೆಹಲಿ ಚಲೋ: ಹೋರಾಟದಲ್ಲಿ ತಮ್ಮದೆ ಛಾಪು ಮೂಡಿಸಿದ ರೈತ ಮಹಿಳೆಯರು!

ನೂರಾರು ರೈತರೊಂದಿಗೆ ಇನ್ನೂ ಪ್ರತಿಭಟನಾ ಸ್ಥಳದಲ್ಲಿದ್ದಲ್ಲಿರುವ ಸುಖದೇವ್ ಸಿಂಗ್, ’ತಾವು ಯಾವುದೇ ಘೋಷಣೆಗಳನ್ನು ಕೂಗದಿದ್ದರೂ, ಪೊಲೀಸರ ಮೇಲೆ ಕಲ್ಲು ಎಸೆಯದಿದ್ದರೂ ನಮಗೆ ಏಕೆ ಹೊಡೆದರು ಎಂದು ಅರ್ಥವಾಗುತ್ತಿಲ್ಲ’ ಎಂದು ಹೇಳಿದರು. ವೈರಲ್ ಚಿತ್ರದಲ್ಲಿರುವ ಸುಖದೇವ್ ಸಿಂಗ್ ಪಂಜಾಬ್‌ನ ಕಪುರ್ಥಾಲಾದಿಂದ ಬಂದಿದ್ದು, ವಿವಾದಿತ ಕೃಷಿ ಕಾನೂನುಗಳನ್ನು ಕೇಂದ್ರ ಸರ್ಕಾರವು ವಾಪಸ್ ತೆಗೆದುಕೊಳ್ಳುವವರೆಗೆ ಇಲ್ಲಿಯೇ ಉಳಿಯಲು ನಿರ್ಧರಿಸಿದ್ದಾರೆ.

ಫ್ಯಾಕ್ಟ್-ಚೆಕ್ ವೆಬ್‌ಸೈಟ್ ಆಲ್ಟ್ ನ್ಯೂಸ್ ನಂತರ ಸುದೀರ್ಘವಾದ ವೀಡಿಯೊವನ್ನು ಪೋಸ್ಟ್ ಮಾಡಿತ್ತು. ಇದರಲ್ಲಿ ಪ್ರತಿಭಟನಾಕಾರರ ಮೇಲೆ ಪೊಲೀಸರು ಹಲ್ಲೆ ಮಾಡುವ ದೃಶ್ಯಗಳು ಕಾಣಿಸುತ್ತಿದ್ದವು.

ಪಿಟಿಐ ಛಾಯಾಗ್ರಾಹಕ ರವಿ ಚೌಧರಿ ಅವರು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ ಚಿತ್ರಗಳಲ್ಲೂ ಹಿರಿಯ ರೈತರ ಮೇಲೆ ಪೊಲೀಸರು ಹಲ್ಲೆ ಮಾಡುತ್ತಿರುವ ಚಿತ್ರವಿದೆ. ಇಲ್ಲಿಂದಲೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಫೋಟೋವನ್ನು ತೆಗೆದುಕೊಂಡಿದ್ದಾರೆ.

erh385ds
PC: PTI

ರವಿ ಚೌಧರಿ ಅವರನ್ನು ಆಲ್ಟ್ ನ್ಯೂಸ್ ಉಲ್ಲೇಖಿಸಿದೆ, “ನಾನು ವೈರಲ್ ಆದ ಚಿತ್ರವನ್ನು ಇನ್ನೊಂದು ಕಡೆಯಿಂದ ಕ್ಲಿಕ್ ಮಾಡಿದ್ದೇನೆ ಮತ್ತು ಆ ಸಮಯದಲ್ಲಿ ಸಾಕಷ್ಟು ಗದ್ದಲ ಉಂಟಾಗಿದ್ದರಿಂದ ಲಾಠಿ ರೈತರನ್ನು ಮುಟ್ಟಿದೆಯೆ ಅಥವಾ ಇಲ್ಲವೇ ಎಂದು ಖಚಿತವಾಗಿ ಹೇಳಲಾಗುವುದಿಲ್ಲ’ ಎಂದಿದ್ದಾರೆ.

 

View this post on Instagram

 

A post shared by Ravi Choudhary (@choudharyravi)

’ಪೊಲೀಸರು ಪ್ರತಿಭಟನಾಕಾರರ ಮೇಲೆ ಲಾಠಿಚಾರ್ಜ್ ಮಾಡುತ್ತಿದ್ದರು. ರೈತ ಪ್ರತಿಭಟನಾಕಾರರು ತಮ್ಮನ್ನು ಉಳಿಸಿಕೊಳ್ಳಲು ಬೇರೆ ದಿಕ್ಕಿನಲ್ಲಿ ಓಡುತ್ತಿದ್ದರು. ಈತನಲ್ಲದಿದ್ದರೂ ಈ ಮೊದಲೇ ಇನ್ನೊಬ್ಬ ಪೋಲೀಸ್ ಸಿಬ್ಬಂದಿ ರೈತರನ್ನು ಹೊಡೆದಿರಬಹುದು’ ಎಂದಿದ್ದಾರೆ.


ಇದನ್ನೂ ಓದಿ: ಕೊರೆವ ಚಳಿಯಲ್ಲಿ ದೇಶದ ಅನ್ನದಾತರು: ದೇವ್ ದೀಪಾವಳಿ ಸಂಭ್ರಮದಲ್ಲಿ ಪ್ರಧಾನಿ ಮೋದಿ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹೇಮಂತ್ ಕರ್ಕರೆ ಆರೆಸ್ಸೆಸ್‌ ನಂಟಿನ ಪೊಲೀಸ್ ಅಧಿಕಾರಿಯ ಗುಂಡಿಗೆ ಬಲಿಯಾಗಿದ್ದು: ವಿಜಯ್ ವಡೆಟ್ಟಿವಾರ್

0
2008ರ ಮುಂಬೈ ಭಯೋತ್ಪಾದಕ ದಾಳಿಯ ಸಮಯದಲ್ಲಿ ರಾಜ್ಯ ಭಯೋತ್ಪಾದನಾ ನಿಗ್ರಹ ದಳದ(ಎಟಿಎಸ್) ಮಾಜಿ ಮುಖ್ಯಸ್ಥ ಹೇಮಂತ್ ಕರ್ಕರೆ ಅವರನ್ನು ಹತ್ಯೆಗೈದಿದ್ದು ಭಯೋತ್ಪಾದಕ ಅಜ್ಮಲ್ ಅಮೀರ್ ಕಸಬ್ ಅಲ್ಲ, ಆರೆಸ್ಸೆಸ್‌ ಜೊತೆ ನಂಟು ಹೊಂದಿದ್ದ...