Homeಚಳವಳಿಶ್ರಧ್ಧಾಂಜಲಿ: ಜನಪರ ಚಳವಳಿಯ ಮಾರ್ಗದರ್ಶಕ - ಧೀರ ಹೋರಾಟಗಾರ ಮಾರುತಿ ಮಾನ್ಪಡೆ

ಶ್ರಧ್ಧಾಂಜಲಿ: ಜನಪರ ಚಳವಳಿಯ ಮಾರ್ಗದರ್ಶಕ – ಧೀರ ಹೋರಾಟಗಾರ ಮಾರುತಿ ಮಾನ್ಪಡೆ

ಕೆಲಸ ಕಾರ್ಯಗಳಲ್ಲಿ ಸಮರಶೀಲತೆ ಮತ್ತು ಬದ್ದತೆಯ ಹೋರಾಟಕ್ಕೆ ಮತ್ತೊಂದು ಹೆಸರಾಗಿದ್ದ ಕಾಮ್ರೆಡ್ ಮಾರುತಿ ಮಾನ್ಪಡೆಯವರು 8 ಕ್ಕೂ ಹೆಚ್ಚು ಬಾರಿ ಜೈಲುವಾಸ ಕಂಡವರು.

- Advertisement -
- Advertisement -

ಕರ್ನಾಟಕ ಪ್ರಾಂತ ರೈತ ಸಂಘ ರಾಜ್ಯ ಸಮಿತಿ ಉಪಾಧ್ಯಕ್ಷರು, ಸಿಪಿಐಎಂ ಪಕ್ಷದ ರಾಜ್ಯ ನೇತಾರರು ಆಗಿದ್ದ ಹಿರಿಯ ರೈತ ನಾಯಕ ಕಾಮ್ರೆಡ್ ಮಾರುತಿರಾವ್ ಮಾನ್ಪಡೆ ರವರು ದಿನಾಂಕ 20.10.2020ರ ಬೆಳಗ್ಗೆ 9:30ಕ್ಕೆ ನಿಧನರಾದರು. ಇದು ರಾಜ್ಯದ ರೈತ ಚಳವಳಿ ಹಾಗೂ ಶೋಷಿತರ ಪರ ಹೋರಾಟದ ಹಿತೈಷಿಗಳಿಗೆ ಒಟ್ಟಾರೆಯಾಗಿ ಇಡೀ ಪ್ರಜಾಸತ್ತಾತ್ಮಕ ಹೋರಾಟದ ಒಡನಾಡಿಗಳಿಗೆ ಅಘಾತ ಉಂಟುಮಾಡಿದೆ. ಕೋವಿಡ್-19 ಸೋಂಕು ಅಪಾಯವನ್ನು ಲೆಕ್ಕಿಸದೇ ಅಂತಿಮ ದರ್ಶನದ ಅವಕಾಶ ಇಲ್ಲದಿದ್ದರೂ ಅಂತಿಮ ನಮನಕ್ಕೆ ಸೇರಿದ್ದ ಅಪಾರ ಜನಸ್ತೋಮ ಹಾಗೂ ರಾಜ್ಯದೆಲ್ಲೆಡೆ ವ್ಯಕ್ತವಾದ ಸಂತಾಪ ಮಾನ್ಪಡೆಯವರು ಹೊಂದಿದ್ದ ಜನಪರ ಕಾಳಜಿಯ ಅಭಿವ್ಯಕ್ತಿಯಾಗಿತ್ತು.

ಕಾಮ್ರೆಡ್ ಮಾರುತಿರಾವ್ ಮಾನ್ಪಡೆಯವರು ಇಡೀ ರಾಜ್ಯ ಕಂಡ ಅಪರೂಪದ ದಿಟ್ಟ ರೈತ ನಾಯಕ. ರಾಜ್ಯದ ನೀರಾವರಿ ಯೋಜನೆಗಳು ಮತ್ತು ನೀರಾವರಿ ಹೋರಾಟಗಳ ಕುರಿತು ಅಪಾರ ಜ್ಞಾನ ಹೊಂದಿದ್ದರು. ತೊಗರಿ ಬೆಲೆಗಾಗಿ, ಬಗರ್‌ಹುಕುಂ ಸಾಗುವಳಿ ಸಕ್ರಮಕ್ಕಾಗಿ, ಕೃಷ್ಣ ನದಿ ನೀರು ಬಳಕೆಯ ನೀರಾವರಿಗಾಗಿ, ವಿದ್ಯುತ್ ಖಾಸಗೀಕರಣ, ಕೃಷಿ ಉತ್ಪನ್ನಗಳ ಅಮದು ಮುಂತಾದ ಕೇಂದ್ರ, ರಾಜ್ಯ ಸರ್ಕಾರಗಳ ರೈತ ವಿರೋಧಿ ನೀತಿಗಳು ಸೇರಿದಂತೆ ಹಲವಾರು ರೈತ ಹೋರಾಟ ಪ್ರಶ್ನೆಗಳನ್ನು ಕೈಗೆತ್ತಿಕೊಂಡು ರೈತ ಸಮುದಾಯಕ್ಕೆ ನ್ಯಾಯ-ಪರಿಹಾರ ಒದಗಿಸುವುದರಲ್ಲಿ ನಿರತರಾಗಿದ್ದ ರಾಜಿರಹಿತ ಹೋರಾಟಗಾರ ಅವರಾಗಿದ್ದರು. ತೊಗರಿ ಬೆಳೆಗೆ ಸಿಗಬೇಕಾದ ವೈಜ್ಞಾನಿಕ ಬೆಲೆ ವಿಷಯದ ಹೋರಾಟದ ಚಾಂಪಿಯನ್ ಆಗಿ ಮನೆ ಮಾತಾಗಿದ್ದ ಮಾನ್ಪಡೆಯವರು ಕೃಷ್ಣ ಜಲ ಭಾಗ್ಯ ನಿಗಮ ರಚನೆಗೆ ಒತ್ತಡ ಹೇರಿದ ಪ್ರಮುಖ ಶಕ್ತಿಯಾಗಿದ್ದರು. ವಿಶ್ವ ಬ್ಯಾಂಕ್‌ನ ಸಾಲದ ಷರುತ್ತಗಳಿಗೆ ಕೃಷ್ಣ ಜಲ ಭಾಗ್ಯ ನಿಗಮ ಈಡಾಗದಂತೆ ರೈತರ ಬೃಹತ್ ಸಮಾವೇಶವನ್ನು ಸಂಘಟಿಸಿದ್ದರು.

ರೈತ – ಕೃಷಿ ಕೂಲಿಕಾರರ ಪ್ರಶ್ನೆಗಳಿಗೆ ಮಾತ್ರವೇ ಅಲ್ಲದೇ ರಾಜ್ಯದ ಪಂಚಾಯತಿ, ಅಂಗನವಾಡಿ ಕಾರ್ಮಿಕರನ್ನು ಹಾಗೂ ಸಾಮಾಜಿಕವಾಗಿ ದಮನಕ್ಕೀಡಾಗಿದ್ದ ಶೋಷಿತ ದಲಿತ, ಮಹಿಳೆಯರನ್ನು ಕೂಡ ಸಂಘಟಿಸುವಲ್ಲಿ ಮುಂಚೂಣಿ ಪಾತ್ರವನ್ನು ಮಾರುತಿ ಮಾನ್ಪಡೆ ವಹಿಸಿದ್ದರು.

1995 ರಿಂದ 2017ರವರೆಗೆ ಸುಧೀರ್ಘ ಕಾಲಾವಧಿಗೆ ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಅವರು ೧೯೮೯ರಿಂದ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತಿ ನೌಕರರ ಸಂಘಕ್ಕೆ ಕೂಡ ರಾಜ್ಯಾಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದರು. ಸುಮಾರು 40 ವರ್ಷಗಳ ಕಾಲದ ಅವರ ಹೋರಾಟದಿಂದ ರಾಜ್ಯದ ಮತ್ತು ವಿಶೇಷವಾಗಿ ಹೈದರಾಬಾದ್ ಕರ್ನಾಟಕ ಹಾಗೂ ಇಡೀ ಉತ್ತರ ಕರ್ನಾಟಕದ ಒಬ್ಬ ಪ್ರಮುಖ ಕಮ್ಯುನಿಸ್ಟ್ ಮುಖಂಡರಾಗಿ ಗುರುತಿಸಲ್ಪಟ್ಟಿದ್ದರು.

ಕರಿ ಲಿಂಗೇಶ್ವರ ಯುವ ರೈತ ಸಂಘದ ಮೂಲಕ ಸಾರ್ವಜನಿಕ ಜೀವನ ಪ್ರಾರಂಬಿಸಿದ ಮಾರುತಿ ಮಾನ್ಪಡೆಯವರು ಯಶವಂತ ಹಲಸೂರು, ವಿ.ಎನ್ ಹಳಕಟ್ಟಿ, ಗಂಗಾಧರ ನಮೋಶಿ, ಚಂದ್ರಶೇಖಕರ ಬಾಳೆ, ಪಿ ರಾಮಚಂದ್ರರಾವ್‌ರವರ ಒಡನಾಟವೂ ಸೇರಿದಂತೆ ರೈತ ಹಾಗೂ ಕಮ್ಯುನಿಸ್ಟ್ ಚಳುವಳಿಯ ಪ್ರಭಾವಕ್ಕೆ ಒಳಗಾಗಿ ತಮ್ಮ ನೌಕರಿಗೆ ರಾಜೀನಾಮೆ ನೀಡಿ ರೈತ ಚಳವಳಿಯ ಪೂರ್ಣ ಕಾಲದ ಕಾರ್ಯಕರ್ತರಾಗಿ ಗುಲ್ಬರ್ಗ ಜಿ¯ಯಿಂದ ಕೆಲಸ ಆರಂಭಿಸಿದರು. ಶೋಷಿತರ ಪರವಾದ ದಣಿವರಿಯದ ಕೆಲಸದ ಪರಿಣಾಮವಾಗಿ 1986 ರಲ್ಲಿ ಗುಲ್ಬರ್ಗ ಜಿ.ಪಂ ಸದಸ್ಯರಾಗಿ ಸಿಪಿಐಎಂನ್ನು ಪ್ರತಿನಿಧಿಸಿದ್ದರು. ಜಿ.ಪಂ ಸದಸ್ಯರಾಗಿ ಅವರು ಮಾಡಿದ ಕೆಲಸಗಳು ಇಡೀ ರಾಜ್ಯದಲ್ಲೇ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ಹೇಗೆ ಕೆಲಸ ಮಾಡಬೇಕು ಎಂಬುದಕ್ಕೆ ಮಾದರಿಯಾಗಿತ್ತು.
ಕೆಲಸ ಕಾರ್ಯಗಳಲ್ಲಿ ಸಮರಶೀಲತೆ ಮತ್ತು ಬದ್ದತೆಯ ಹೋರಾಟಕ್ಕೆ ಮತ್ತೊಂದು ಹೆಸರಾಗಿದ್ದ ಕಾಮ್ರೆಡ್ ಮಾರುತಿ ಮಾನ್ಪಡೆಯವರು 8 ಕ್ಕೂ ಹೆಚ್ಚು ಬಾರಿ ಜೈಲುವಾಸ ಕಂಡವರು. ಪಂಪ್‌ಸೆಟ್ ಬಳಕೆದಾರರಿಗೆ ಮೀಟರ್ ಅಳವಡಿಸಿ ವಿದ್ಯುತ್ ಖಾಸಗೀಕರಣದ ಪ್ರಯತ್ನ ಮಾಡುವ ಸರ್ಕಾರದ ಧೋರಣೆ ವಿರುದ್ಧ ಹೋರಾಟ ಒಂದರಲ್ಲೇ ೩ ತಿಂಗಳು ಜೈಲಿನಲ್ಲಿದ್ದರು. ಒಟ್ಟಾರೆ ಅವರ ಹೋರಾಟದ ಜೀವನದಲ್ಲಿ ಸುಮಾರು 150 ದಿನಗಳಿಗೂ ಹೆಚ್ಚು ಜೈಲು ವಾಸ ಅನುಭವಿಸಿದ್ದರು. ರೈತ ವಿರೋಧಿ ಸುಗ್ರೀವಾಜ್ಞೆಗಳ ವಿರುದ್ಧ 2020.ಸೆಪ್ಟೆಂಬರ್ 25 ರಂದು ನಡೆದ ಬೆಂಗಳೂರಿನ ಮೈಸೂರು ಬ್ಯಾಂಕ್ ಸರ್ಕಲ್‌ನ ರಸ್ತೆ ತಡೆ ಪ್ರತಿಭಟನೆಯಲ್ಲೂ ಬಂಧನಕ್ಕೆ ಒಳಗಾಗಿದ್ದರು.

ಚುನಾವಣಾ ಹೋರಾಟದಲ್ಲೂ ಅಭ್ಯರ್ಥಿಯಾಗಿ ಭಾಗವಹಿಸಿದ್ದ ಮಾರುತಿ ಮಾನ್ಪಡೆ ರವರು ಬೀದರ್ ಲೋಕಸಭಾ ಹಾಗೂ ಗುಲ್ಬರ್ಗ ಗ್ರಾಮೀಣ ಮೀಸಲು ಕ್ಷೇತ್ರದಲ್ಲಿ ಸಿಪಿಐಎಂ ಅಭ್ಯರ್ಥಿಯಾಗಿ ಚುನಾವಣೆ ಎದುರಿಸಿದ್ದರು.

1955ರಲ್ಲಿ ಸಾಮಾಜಿಕವಾಗಿ ಅಸ್ಪೃಶ್ಯತೆ ಅನುಭವಿಸುತ್ತಿದ್ದ ಬಡತನದ ಕುಟುಂಬದಲ್ಲಿ ಜನಿಸಿದ ಮಾರುತಿ ಮಾನ್ಪಡೆಯವರು ಸ್ವತಃ ಬರಗಾಲದ ಬವಣೆಗಳನ್ನು ಅನುಭವಿಸಿ ರೈತರ ಕಷ್ಟ -ನಷ್ಟಗಳನ್ನು ನೇರವಾಗಿ ಕಂಡವರು. 65 ವಯಸ್ಸಿನ ಹಿರಿಯರಾಗಿದ್ದರೂ ದೈಹಿಕ ಆರೋಗ್ಯ ಸ್ಥಿತಿಯನ್ನು ಲೆಕ್ಕಿಸದೇ ಕೇಂದ್ರ, ರಾಜ್ಯ ಸರ್ಕಾರಗಳ ಕೃಷಿ ಸುಗ್ರಿವಾಜ್ಞೆಗಳನ್ನು ವಿರೋಧಿಸಿ ಸೆಪ್ಟೆಂಬರ್ 21 ರಿಂದ 26ರವರಿಗೆ ಬೆಂಗಳೂರಿನಲ್ಲಿ ನಡೆದ ಆಹೋರಾತ್ರಿ ಹೋರಾಟದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಮುಖಂಡರಾಗಿ ತೊಡಗಿಸಿಕೊಂಡಿದ್ದರು. ಸೆಪ್ಟೆಂಬರ್ 28 ರ ಕರ್ನಾಟಕ ಬಂದ್ ಯಶಸ್ವಿಗೊಳಿಸಲು ಗುಲ್ಬರ್ಗಕ್ಕೆ ತೆರಳಿ ಹೈದರಾಬಾದ್ ಕರ್ನಾಟಕ ಬಂದ್ ಯಶಸ್ವಿ ಆಗಲು ಶ್ರಮಿಸಿದ್ದರು. ಈ ಕಾಲಾವಧಿಯಲ್ಲಿ ಆದ ಕೋವಿಡ್-19 ಸೋಂಕಿಗೆ ಮಹಾರಾಷ್ಟ್ರ ರಾಜ್ಯದ ಸೊಲ್ಲಾಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ವೈದ್ಯರ ಉತ್ತಮ ಪ್ರಯತ್ನದ ಹೊರತಾಗಿಯೂ ಚಿಕಿತ್ಸೆ ಫಲಕಾರಿಯಾಗದೇ ಶೋಷಿತರ ಬಲವಾದ ಧ್ವನಿಯೊಂದು ನಿಂತು ಹೋಗಿದೆ.

ಸಂಗಾತಿ ಮಾನ್ಪಡೆರವರು ಜನರ ಸಮಸ್ಯೆಗಳನ್ನು ನಿಖರವಾಗಿ ಗುರುತಿಸಿ, ಹೋರಾಟದ ಸ್ಪರೂಪ ನೀಡುವುದರಲ್ಲಿ ಬಹಳ ಪರಿಣತಿ ಹೊಂದಿದ್ದ ಮತ್ತು ರಾಜ್ಯದ ಎಲ್ಲ ಜನಪರ ಚಳವಳಿಗಳಗೆ ಮಾರ್ಗದರ್ಶನ ನೀಡಬಲ್ಲ ಒಡನಾಡಿಯಾಗಿದ್ದರು. ಇವರ ನಿಧನ ರೈತ ಚಳುವಳಿಗೆ ಮಾತ್ರವೇ ಅಲ್ಲದೇ ಒಟ್ಟಾರೆ ಪ್ರಜಾಸತ್ತಾತ್ಮಕ ಹೋರಾಟಗಳಿಗೆ ಅಪಾರ ನಷ್ಟ.

  • ಟಿ.ಯಶವಂತ
    ಕರ್ನಾಟಕ ಪ್ರಾಂತ ರೈತ ಸಂಘ ರಾಜ್ಯ ಸಮಿತಿ ಸದಸ್ಯರು.

ಇದನ್ನೂ ಓದಿ: ಮಾರುತಿ ಮಾನ್ಪಡೆಯವರ ಸಾವಿಗೆ ಸರ್ಕಾರವೇ ನೇರ ಹೊಣೆ: ಐಕ್ಯ ಹೋರಾಟ ಸಮಿತಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

SIR: ಚಿಂತಕ ಪರಕಾಲ ಪ್ರಭಾಕರ್‌ಗೆ ಚುನಾವಣಾ ಆಯೋಗದಿಂದ ನೋಟಿಸ್

ಅರ್ಥಶಾಸ್ತ್ರಜ್ಞ, ರಾಜಕೀಯ ವಿಶ್ಲೇಷಕ ಡಾ. ಪರಕಾಲ ಪ್ರಭಾಕರ್ ಅವರಿಗೂ ಈಗ ‘ವಿಶೇಷ ತೀವ್ರ ಪರಿಷ್ಕರಣೆ’ (SIR) ಪ್ರಕ್ರಿಯೆಯಡಿ ಚುನಾವಣಾ ಆಯೋಗದ ನೋಟಿಸ್ ಜಾರಿಯಾಗಿದೆ. ವೋಟರ್ ಐಡಿ ಪರಿಶೀಲನೆಯಲ್ಲಿ ‘Logical Discrepancy’ (ತಾರ್ಕಿಕ ಅಸಂಗತತೆ)...

ಕರ್ನಾಟಕ ಎಸ್‌ಐಆರ್: ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬರಿಗೆ ನೋಟಿಸ್ ನೀಡಿದ ಚುನಾವಣಾ ಆಯೋಗ

ಮಂಗಳೂರು: ಶೈಕ್ಷಣಿಕ ಕ್ಷೇತ್ರದಲ್ಲಿ ತಮ್ಮ ವಿಶಿಷ್ಟ ಸೇವೆಯ ಮೂಲಕ ದೇಶ-ವಿದೇಶಗಳಲ್ಲಿ ಗುರುತಿಸಿಕೊಂಡಿರುವ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಅವರಿಗೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗದ...

SIR ಸೂತ್ರದಿಂದ ಬದಲಾಗುತ್ತಾ ಬೆಂಗಳೂರಿನ 28 ಕ್ಷೇತ್ರಗಳ ಗೆಲುವಿನ ಸಮೀಕರಣ?

ರಾಜ್ಯ ರಾಜಕೀಯದ ಶಕ್ತಿಕೇಂದ್ರವಾದ ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳಲ್ಲಿ ‘ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (SIR)’ ಪ್ರಕ್ರಿಯೆಯು ಮಹತ್ವದ ರಾಜಕೀಯ ಮತ್ತು ಆಡಳಿತಾತ್ಮಕ ಚರ್ಚೆಯನ್ನು ಹುಟ್ಟುಹಾಕಿದೆ. ಎಸ್‌ಐಆರ್‌ಗೂ ಮುನ್ನ ನಗರದಲ್ಲಿದ್ದ ಸುಮಾರು 1.03...

ಮಣಿಪುರದಲ್ಲಿ ಹಿಂಸಾಚಾರಕ್ಕೆ 306 ಬಲಿ, 49 ಮಂದಿ ನಾಪತ್ತೆ: ವಿಧಾನಸಭೆಯಲ್ಲಿ ಗೃಹ ಸಚಿವರ ಸ್ಪಷ್ಟನೆ

ಇಂಫಾಲ್: ಮಣಿಪುರದಲ್ಲಿ 2023ರ ಮೇ ತಿಂಗಳಲ್ಲಿ ಭುಗಿಲೆದ್ದ ಜನಾಂಗೀಯ ಹಿಂಸಾಚಾರಕ್ಕೆ ಮೂರು ವರ್ಷಗಳಿಗೂ ಹೆಚ್ಚು ಕಾಲ ಕಳೆದಿದ್ದರೂ, ಅದರ ಪರಿಣಾಮದಿಂದ ರಾಜ್ಯ ಸಂಪೂರ್ಣವಾಗಿ ಹೊರಬಂದಿಲ್ಲ. ಹಿಂಸಾಚಾರ ಆರಂಭವಾದ ಬಳಿಕ ಇದುವರೆಗೆ ಕನಿಷ್ಠ 306...

ದಲಿತರ ಅಭಿವೃದ್ಧಿಗೆ ಮೀಸಲಿಟ್ಟ ನಿಧಿ ದುರ್ಬಳಕೆ; ಜನವಸತಿಯೇ ಇಲ್ಲದ ಜಾಗದಲ್ಲಿ ರೂ. 50 ಲಕ್ಷದ ಸಿ.ಸಿ. ರಸ್ತೆ ನಿರ್ಮಾಣ!

ಸಮಾಜ ಕಲ್ಯಾಣ ಇಲಾಖೆಯ 'ಪ್ರಗತಿ ಕಾಲೋನಿ' ಯೋಜನೆಯ ನಿಧಿ ದುರ್ಬಳಕೆಯಾಗಿರುವ ಆರೋಪ ಕೇಳಿಬಂದಿದ್ದು, ಜನವಸತಿಯೇ ಇಲ್ಲದ ಜಾಗದಲ್ಲಿ ರೂ. 50 ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣ ಮಾಡಿರುವ ಪ್ರಕರಣ ಬೆಂಗಳೂರು...

SIR: ‘ಚುನಾವಣಾ ಆಯೋಗದಿಂದ ನೋಟಿಸ್‌’ ಇಲ್ಲದಿರುವ ದಾಖಲೆಗಳನ್ನು ಎಲ್ಲಿಂದಾ ತರೋದು? ಸಾರ್ವಜನಿಕರ ಪ್ರಶ್ನೆ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಚುನಾವಣಾ ಆಯೋಗವು ಬಳಸುತ್ತಿರುವ 'Logical Discrepancy' (ತಾರ್ಕಿಕ ವ್ಯತ್ಯಾಸ) ಎಂಬ ಸಾಫ್ಟ್‌ವೇರ್ ಆಧಾರಿತ ಪರಿಶೀಲನೆಯು ತಾಂತ್ರಿಕವಾಗಿ ದೋಷರಹಿತವೆಂದು ತೋರಿದರೂ, ವಾಸ್ತವದಲ್ಲಿ ಲಕ್ಷಾಂತರ ನೈಜ...

SIR ರಗಳೆ: ಕೊನೆಗೂ 43.81 ಲಕ್ಷ ಮತದಾರರ ನೋಟಿಸ್ ಪಟ್ಟಿ ಬಹಿರಂಗಪಡಿಸಿದ ಚುನಾವಣಾ ಆಯೋಗ

ಕರ್ನಾಟಕದಲ್ಲಿ ಭಾರಿ ಸದ್ದು ಮಾಡುತ್ತಿರುವ 'ವಿಶೇಷ ತೀವ್ರ ಪರಿಷ್ಕರಣೆ' (SIR) ಪ್ರಕ್ರಿಯೆಯಲ್ಲಿ ನೋಟಿಸ್‌ಗೆ ಗುರಿಯಾಗಿರುವ 43.81 ಲಕ್ಷ ಮತದಾರರ ಪಟ್ಟಿಯನ್ನು ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿ ಕೊನೆಗೂ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ...

‘ಆರ್‌ಎಸ್‌ಎಸ್‌ ಅಡಗಿಕೊಂಡಿದೆ’: ಮೋಹನ್ ಭಾಗವತ್‌ ಯುಕೆ ಭೇಟಿ ವಿರೋಧಿಸಿ ಲಂಡನ್‌ನಲ್ಲಿ ಪ್ರತಿಭಟನೆ

ಲಂಡನ್: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರ ಯುನೈಟೆಡ್ ಕಿಂಗ್‌ಡಮ್‌ ಭೇಟಿಯನ್ನು ವಿರೋಧಿಸಿ ಲಂಡನ್‌ನ ಪಾರ್ಲಿಮೆಂಟ್ ಸ್ಕ್ವೇರ್‌ನಲ್ಲಿ ನೂರಾರು ಜನರು ಪ್ರತಿಭಟನೆ ನಡೆಸಿದ್ದಾರೆ. ಭಾಗವತ್ ಅವರ ಯುಕೆ ಪ್ರವಾಸದ...

ಪಂಚಾಯಿತಿಯಲ್ಲಿ ಅಸ್ಪೃಶ್ಯತೆ ಆಚರಣೆ-ಪ್ರತ್ಯೇಕ ಟೀ ಲೋಟ; ಆತ್ಮಹತ್ಯೆಗೆ ಯತ್ನಿಸಿದ ಪೌರಕಾರ್ಮಿಕ ಮಹಿಳೆ

ಕೆಲಸದ ಸ್ಥಳದಲ್ಲಿ ನಡೆಯುತ್ತಿದ್ದ ಅಸ್ಪೃಶ್ಯತೆ ಆಚರಣೆಯಿಂದ ಮನನೊಂದ 37 ವರ್ಷದ ದಲಿತ ನೈರ್ಮಲ್ಯ ಕಾರ್ಮಿಕರೊಬ್ಬರು ಕ್ರಿಮಿನಾಶಕ ಸೇವಿಸಿ ಆತ್ಮತ್ಯೆಗೆ ಯತ್ನಿಸಿರುವ ಘಟನೆ ತಮಿಳುನಾಡಿನ ಮೇಲೂರು ಸಮೀಪದ ಕಂಬೂರ್ ಪಂಚಾಯತ್‌ನಲ್ಲಿ ಬೆಳಕಿಗೆ ಬಂದಿದೆ. ...

ಗೌರಿ, ಗಾಂಧಿಯನ್ನು ಕೊಂದದ್ದು ಬರೀ ಬುಲೆಟ್‌ಗಳಲ್ಲ, ಕೋಮುವಾದಿ ಸಿದ್ಧಾಂತ: ವಿದ್ಯಾರ್ಥಿ ನಾಯಕಿ ದಾನಿಶ್ ಅಲಿ

"ಗಾಂಧಿ, ಗೌರಿಯನ್ನು ಕೊಂದಿದ್ದು ಬರೀ ಬುಲೆಟ್‌ಗಳಲ್ಲ, ಅದು ಸಿದ್ಧಾಂತ ಎಂಬುದನ್ನು ನಾವು ನೆನಪಿಡಬೇಕು. ಈ ಸಿದ್ಧಾಂತಗಳ ವಿರುದ್ಧವಾಗಿ ನಾವು ಇಂದು ಹೋರಾಡಬೇಕಿದೆ” ಎಂದು ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (JNU) ವಿದ್ಯಾರ್ಥಿ ನಾಯಕಿ...