ಆರ್‌ಎಸ್‌ಎಸ್‌ನವರು ಹೇಗೆ ಲೂಟಿ ಮಾಡಿದ್ದಾರೆ ಎಂದು ಮುಂದಿನ 15-20 ದಿನಗಳಲ್ಲಿ ದಾಖಲೆ ಸಹಿತ ಬಹಿರಂಗಪಡಿಸುತ್ತೇನೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಭಾನುವಾರ (ನವೆಂಬರ್ 16) ಕಲಬುರಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ಹಣ ಆರ್‌ಎಸ್‌ಎಸ್‌ಗೆ ಹೋಗಿರುವ ಬಗ್ಗೆ ದಾಖಲೆ ಬಿಡುಗಡೆ ಮಾಡ್ತೀನಿ. ಎಷ್ಟು ಲೂಟಿ ಮಾಡಿದ್ದಾರೆನ್ನುವುದು ಗೊತ್ತಾಗುತ್ತದೆ. ಇವರೆಂತಹ ದರೋಡೆಕೋರರೆಂದು ದಾಖಲೆ ಸಮೇತ ಬಹಿರಂಗ ಮಾಡುವೆ ಎಂದು ಕಿಡಿಕಾರಿದ್ದಾರೆ.
ಚಿತ್ತಾಪುರದಲ್ಲಿ ಆರ್‌ಎಸ್‌ಎಸ್ ಪಥಸಂಚಲನ ಆಯ್ತೆಂದು ಮುಗಿದಿಲ್ಲ. ಚಿತ್ತಾಪುರದಲ್ಲಿ ಆರ್‌ಎಸ್‌ಎಸ್ ಪಥಸಂಚಲನ ಮೂಲಕ ಶುರುವಾಗಿದೆ. ಆರ್‌ಎಸ್‌ಎಸ್ ಕಥೆ ಇನ್ನೂ ಬಹಳ ಇದೆ ಮುಂದೆ ಹೇಳುತ್ತೇನೆ. ಚಿತ್ತಾಪುರಕ್ಕೆ 3 ಲಕ್ಷ ಜನ ಬರ್ತಾರೆ ಅಂದ್ರು, ಬಂದ್ರಾ? ಆರ್.ಅಶೋಕ್, ವಿಜಯೇಂದ್ರ ಚಿತ್ತಾಪುರಕ್ಕೆ ಬರ್ತೀವಿ ಅಂದ್ರು, ಬಂದ್ರಾ? ಎಂದು ಪ್ರಶ್ನಿಸಿದ್ದಾರೆ.
ದೇವಾಲಯಗಳ ಹುಂಡಿ ಹಣವನ್ನು ಸರ್ಕಾರ ಲೆಕ್ಕ ಹಾಕುತ್ತದೆ, ಅಂಥದ್ದರಲ್ಲಿ ಆರ್‌ಎಸ್‌ಎಸ್ ಹಣದ ಲೆಕ್ಕ ಕೇಳಬಾರದಾ? ಇವರು ಹೇಗೆ ಆದಾಯ ತೆರಿಗೆ ವಂಚಿಸುತ್ತಿದ್ದಾರೆಂದು ದಾಖಲೆ ಸಮೇತ ಬಹಿರಂಗಪಡಿಸುವೆ. ಇವರಿಗೆ ಯಾರೆಲ್ಲ ದೇಣಿಗೆ ಕೊಡುತ್ತಾರೆ, ಲೆಕ್ಕ ಹೇಗೆ ಕೊಡ್ತಾರೆ? ಆರ್‌ಎಸ್‌ಎಸ್ ದೇಣಿಗೆ ಸಂಗ್ರಹದ ಬಗ್ಗೆ ಹೊರಗಡೆ ಬರಲಿದೆ ಎಂದು ಹೇಳಿದ್ದಾರೆ.
ಮೋಹನ್ ಭಾಗವತ್ ಅವರೇ ಖುದ್ದಾಗಿ ನಮ್ಮದು ನೋಂದಣಿಯಾಗದ ಸಂಘಟನೆ ಎಂದು ಹೇಳಿದ್ದಾರೆ. ನಮ್ಮದು ವ್ಯಕ್ತಿಗಳ ಗುಂಪು, ನಾವು ನೋಂದಣಿ ಮಾಡಿಕೊಳ್ಳುವ ಅವಶ್ಯಕತೆ ಇಲ್ಲ ಎಂದಿದ್ದಾರೆ. ಬಹಳ ಹಳೆಯ ಸಂಸ್ಥೆ ಬೆಂಗಳೂರು ಕ್ಲಬ್ ಕೂಡ ವ್ಯಕ್ತಿಗಳ ಗುಂಪು, ಅದರೂ ಅವರು ನೋಂದಣಿ ಮಾಡಿಕೊಂಡಿದ್ದಾರೆ. ಹೀಗಿರುವಾ ಅವರು (ಆರ್‌ಎಸ್‌ಎಸ್‌ನವರು) ಹೇಳುವುದು ಸಂವಿಧಾನನ ಅಥವಾ ಸಂವಿಧಾನದಲ್ಲಿ ಇರುವುದು ಸಂವಿಧಾನನ? ಪ್ರಶ್ನಿಸಿದ್ದಾರೆ.
ಚಿತ್ತಾಪುರ RSS ಪಥಸಂಚಲನ ನಾವು ತೀರ್ಮಾನಿಸಿದಂತೆ ನಡೆದಿದೆ. ಅನುಮತಿ ಕೊಟ್ಟಿದ್ದು, ಎಷ್ಟು ಜನ, ಯಾರ‍್ಯಾರು ಇರಬೇಕು, ಯಾವ ರಸ್ತೆಯಲ್ಲಿ ಮೆರವಣಿಗೆ ಸಾಗಬೇಕು ಎಂದು ಹೇಳಿದ್ದು ನಾವು (ಸರ್ಕಾರ)
ನಾವು ಮಾಡಬೇಡಿ ಎಂದು ಹೇಳಿರಲಿಲ್ಲ, ಅನುಮತಿ ಪಡೆದು ಮಾಡಿ ಎಂದಿದ್ದೆವು ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಆರ್‌ಎಸ್‌ಎಸ್ ಎನ್ನುವ ಛಾಯಾ ಪ್ರಭುತ್ವದ (ಶ್ಯಾಡೋ ಸರ್ಕಾರ) ಆರಂಭದ ದಿನಗಳು


