ಕಾಂಗ್ರೆಸ್ ಅಧಿಕಾರದಲ್ಲಿದ್ದರೆ ರಸ್ತೆಗಿಳಿದು ಕಲ್ಲು ಹೊಡೆಯಬಹುದು, ಈಗ ನಮ್ಮವರೆ ಇದ್ದಾಗ ಏನೂ ಮಾಡೋಕ್ಕಾಗಲ್ಲ. ನಾವು ಸಿಎಂ ಬಳಿ ಹೋಗಿ ಹೇಳಬೇಕು ಅಷ್ಟೇ ಎಂದು ಬಿಜೆಪಿ ಸಂಸದ ಹಾಗೂ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ ಮಾತನಾಡಿರುವ ಆಡಿಯೋ ವೈರಲ್ ಆಗಿದೆ.
ಬೆಳ್ಳಾರೆಯ ಪ್ರವೀಣ್ ನೆಟ್ಟಾರು ಕೊಲೆ ನಂತರ ಬಿಜೆಪಿ ಸರ್ಕಾರದ ವಿರುದ್ಧ ಕಾರ್ಯಕರ್ತರು ತಿರುಗಿಬಿದ್ದಿದ್ದಾರೆ. ಹಲವು ಜಿಲ್ಲೆಗಳ ಯುವ ಮೋರ್ಚಾದ ಅಧ್ಯಕ್ಷರು ಪದಾಧಿಕಾರಿಗಳು ರಾಜೀನಾಮೆ ನೀಡಿದ್ದಾರೆ. ಈ ಕುರಿತು ಸಮಾಧಾನ ಪಡಿಸಲು ಚಿಕ್ಕಮಗಳೂರು ಯುವ ಮೋರ್ಚಾ ಅಧ್ಯಕ್ಷ ಸಂದೀಪ್ ಅರವಿನಗುಂಡಿಯವರೊಂದಿಗೆ ಫೋನ್ ನಲ್ಲಿ ಮಾತನಾಡುವಾಗ ತೇಜಸ್ವ ಸೂರ್ಯ ಹೇಳಿರುವುದು ದಾಖಲಾಗಿದೆ.
ಅಲ್ಲದೆ ಇಂದು ಸಂಜೆ 5.30ಕ್ಕೆ ಎಲ್ಲಾ ಜಿಲ್ಲೆಗಳ ಯುವ ಮೋರ್ಚಾ ಅಧ್ಯಕ್ಷರ ಜೊತೆ ಸಭೆ ನಡೆಯಲಿದ್ದು, ಅದಕ್ಕೂ ಮುನ್ನವೆ ರಾಜೀನಾಮೆ ಹಿಂಪಡೆಯಿರಿ. ನಾನೇ ನಾಲ್ಕು ಸಾಲು ಬರೆದುಕಳಿಸುತ್ತೇವೆ. ಅದಕ್ಕೆ ಸಹಿ ಮಾಡಿಕೊಟ್ಟರೆ ಸಾಕು, ನೀವು ರಾಜೀನಾಮೆ ವಾಪಸ್ ಪಡೆದ ಪತ್ರ ಪಡೆದ ನಂತರವಷ್ಟೇ ನಾನು ಮೀಟಿಂಗ್ ಶುರುಮಾಡುತ್ತೇನೆ ಎಂದು ಎಂದು ಪರಿ ಪರಿಯಾಗಿ ಮನವಿ ಮಾಡುವುದು ಕಂಡುಬಂದಿದೆ.
ನನ್ನ ಹಿಂದುತ್ವದ ಮೇಲೆ ಅನುಮಾನಪಡಬೇಡಿ. ನನ್ನ ಮಾತಿಗೆ ಬೆಲೆ ಕೊಡೋದಾದ್ರೆ ನೀವು ರಾಜೀನಾಮೆ ಪತ್ರ ಹಿಂಪಡೆಯಿರಿ ಎಂದು ತೇಜಸ್ವಿ ಸೂರ್ಯ ಮಾತನಾಡಿದ್ದಾರೆ. ಅ ವಿಡಿಯೋ ನೋಡಿ
ನಿನ್ನೆ ಕೂಡ ತೇಜಸ್ವಿ ಸೂರ್ಯ “ಸರ್ಕಾರ ಎಲ್ಲರಿಗೂ ರಕ್ಷಣೆ ಕೊಡಲು ಸಾಧ್ಯವೇ” ಎಂಬು ಉಡಾಫೆಯ ಹೇಳಿಕೆ ನೀಡಿ ಟೀಕೆಗೆ ಗುರಿಯಾಗಿದ್ದರು. ಈಗ ಕಾಂಗ್ರೆಸ್ ಸರ್ಕಾರವಾಗಿದ್ದರೆ ಬೀದಿಗಿಳಿದು ಕಲ್ಲು ಹೊಡೆಯುತ್ತಿದ್ದವು ಎಂದು ಹೇಳುವ ಮೂಲಕ ಸಮಾಜದಲ್ಲಿ ಅಶಾಂತಿ ಸೃಷ್ಟಿಸುವಲ್ಲಿ ನಮ್ಮ ಪಾತ್ರವಿದೆ ಎಂದು ಒಪ್ಪಿಕೊಂಡಿದ್ದಾರೆ.
ಇಬ್ಬರ ಬಂಧನ
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನ ಬೆಳ್ಳಾರೆಯ ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರ್ ಕೊಲೆಗೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೃಷಿಕೇಶ್ ಸೋನಾವಣೆ ತಿಳಿಸಿದ್ದಾರೆ. ಬಂಧಿತರನ್ನು ಶಫೀಕ್ ಮತ್ತು ಝಾಕೀರ್ ಎಂದು ಗುರುತಿಸಲಾಗಿದೆ.
ಪ್ರಾಥಮಿಕ ಹಂತದ ತನಿಖೆ ನಡೆಯುತ್ತಿದೆ. ಅದರ ಆಧಾರಲ್ಲಿ ಇಬ್ಬರನ್ನು ಬಂಧಿಸಿದ್ದೇವೆ. ಆರೋಪಿಗಳು ಯಾವ ಸಂಘಟನೆಗೆ ಸೇರಿದ್ದಾರೆ ಎಂಬುದನ್ನು ಈಗಲೇ ಹೇಳಲು ಸಾಧ್ಯವಿಲ್ಲ. ಒಬ್ಬ ಆರೋಪಿಯ ಮೇಲೆ ಈಗಾಗಲೇ ಕ್ರಿಮಿನಲ್ ಪ್ರಕರಣವೊಂದು ದಾಖಲಾಗಿತ್ತು ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಪ್ರವೀಣ್ ಕೊಲೆ ಪ್ರಕರಣ: ಇಬ್ಬರು ಆರೋಪಿಗಳ ಬಂಧನ



ಇದು ತೇಜಸ್ವಿ ಅವರ ಧ್ವನಿಯೇ ಅಲ್ಲ
What’s wrong here…