“ಉಪ ಚನಾವಣೆಯಲ್ಲಿ ಕಾಂಗ್ರೆಸ್ ಶಾಸಕ ಗೆದ್ದರೆ, ಈ ಹಳ್ಳಿಗೆ ಒಂದೇ ಒಂದು ಇಟ್ಟಿಗೆ ಕೂಡಾ ನೀಡುವುದಿಲ್ಲ” ಎಂದು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ, ಕೇಂದ್ರ ಸರ್ಕಾರದ ಹಾಲಿ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರ ಮಗ ಕಾರ್ತಿಕೇ ಸಿಂಗ್ ಚೌಹಾಣ್ ಬೆದರಿಸಿದ್ದು ಇದೀಗ ತೀವ್ರ ವಿವಾದವಾಗಿದೆ. ಅವರು ಮಧ್ಯಪ್ರದೇಶದ ಬುಧ್ನಿ ಉಪ ಚುನಾವಣೆಗೆ ಮುನ್ನ ನಡೆಸಿದ ಪ್ರಚಾರ ಭಾಷಣಲ್ಲಿ ಕ್ಷೇತ್ರದ ಜನರನ್ನು ಬೆದರಿಸಿದ್ದಾರೆ. ಕಾಂಗ್ರೆಸ್ ಗೆದ್ದರೆ
ಬಹುಕಾಲದಿಂದ ಶಿವರಾಜ್ ಸಿಂಗ್ ಚೌಹಾಣ್ ಪ್ರತಿನಿಧಿಸುತ್ತಿದ್ದ ಕ್ಷೇತ್ರವಾದ ಬುಧ್ನಿಯಲ್ಲಿ ಕಾರ್ತಿಕೇ ಬಿಜೆಪಿ ಪ್ರಚಾರದ ಸಾರಥ್ಯವನ್ನು ವಹಿಸಿಕೊಂಡಿದ್ದಾರೆ. ಉಪಚುನಾವಣೆ ಮೂಲಕ ಅವರು ರಾಜಕೀಯಕ್ಕೆ ಪ್ರವೇಶ ಮಾಡಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಬುಧ್ನಿಯಲ್ಲಿ ಸಾರ್ವಜನಿಕ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಕಾರ್ತಿಕೇ ಅವರು ಚುನಾವಣಾ ಫಲಿತಾಂಶದ ನಂತರ ನಮ್ಮ ಕೆಲಸ ಮಾಡಿಕೊಡಿ ಎಂದು ಹೇಗೆ ಕೇಳುತ್ತೇವೆ? ಎಂದು ಅವರು ಹೇಳಿದ್ದಾರೆ.
“ಒಂದು ವೇಳೆ ಇಲ್ಲಿ ಕಾಂಗ್ರೆಸ್ ಶಾಸಕರು ಗೆದ್ದರೆ, ಇಲ್ಲಿ ತೊಂದರೆ ಯಾರಿಗೆ ಎಂದು ನಿಮಗೆ ಅರ್ಥವಾಗಬೇಕು. ನಮಗೆ ನಾವೇ ಯಾಕೆ ಹಾನಿ ಮಾಡಿಕೊಳ್ಳಬೇಕು? ಮತದಾನದಲ್ಲಿ ಅಕ್ರಮ ಮಾಡುವ ಮೂಲಕ ನಾವು ನಮ್ಮ ಖ್ಯಾತಿಯನ್ನು ಏಕೆ ಹಾಳು ಮಾಡಿಕೊಳ್ಳಬೇಕು? ಕೆಲಸ ಮಾಡಿಸಲು ನಮ್ಮ ಮುಖ್ಯಮಂತ್ರಿ ಬಳಿ ಹೋಗಬೇಕಲ್ಲವೇ? ನಮ್ಮ ಕೆಲಸಕ್ಕಾಗಿ ನಾವು ನಮ್ಮ ಗೌರವಾನ್ವಿತ ಕೃಷಿ ಸಚಿವರನ್ನು ಸಂಪರ್ಕಿಸಬೇಕಲ್ಲವೇ?” ಎಂದು ಕಾರ್ತಿಕೇಯ ಕೇಳಿದ್ದಾರೆ.
ಸರಪಂಚರನ್ನು ಉದ್ದೇಶಿಸಿ ಮಾತನಾಡಿದ ಅವರು, “ಹೇಳಿ, ಸರಪಂಚ್ ಅವರೆ. ನೀವು ಹೇಗೆ ಕೆಲಸ ಮಾಡಿಕೊಳ್ಳುತ್ತಿರಿ? ಒಂದು ವೇಳೆ ನಾವು ಸೋತರೆ, ಕೆಲಸಗಳನ್ನು ಮಾಡಲು ನೀವು ನಮ್ಮ ನಾಯಕರ ಬಳಿ ಹೇಗೆ ಹೋಗುತ್ತೀರಿ? ಅದಕ್ಕಾಗಿ ನೀವು ಯಾವ ದಾರಿ ಆಯ್ಕೆ ಮಾಡುತ್ತೀರಿ? ತಪ್ಪಿಯಾದರೂ ಕಾಂಗ್ರೆಸ್ ಶಾಸಕ ಗೆದ್ದರೆ ಈ ಹಳ್ಳಿಯಲ್ಲಿ ಒಂದು ಇಟ್ಟಿಗೆ ಕೂಡಾ ಇಡುವುದಿಲ್ಲ, ಇದನ್ನು ನೀವು ಅರ್ಥಮಾಡಿಕೊಳ್ಳಬೇಕು.” ಎಂದು ಹೇಳಿದ್ದಾರೆ.
ಅವರು ವಿವಾದಿತ ವೀಡಿಯೊ ವೈರಲ್ ಆಗುತ್ತಿದ್ದಂತೆ ಪ್ರತಿಕ್ರಿಯಿಸಿರುವ ಮಾಜಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ನಾಯಕ ದಿಗ್ವಿಜಯ ಅವರು, “ರಾಜಕೀಯದ ಬಗ್ಗೆ ತಮ್ಮ ತಂದೆಯಿಂದ ಕಲಿಯಿರಿ” ಎಂದು ಕಾರ್ತಿಕೇ ಅವರಿಗೆ ಸಲಹೆ ನೀಡಿದ್ದಾರೆ. ಕಾಂಗ್ರೆಸ್ ಗೆದ್ದರೆ
“ಪ್ರಜಾಪ್ರಭುತ್ವದಲ್ಲಿ, ಸರ್ಕಾರ ಮತ್ತು ವಿರೋಧ ಪಕ್ಷಗಳೆರಡೂ ರಾಷ್ಟ್ರ ಕಟ್ಟಲು ಒಟ್ಟಾಗಿ ಕೆಲಸ ಮಾಡುತ್ತವೆ. ನಾನು 10 ವರ್ಷ ಮುಖ್ಯಮಂತ್ರಿಯಾಗಿದ್ದೆ, ಆದರೆ ಈ ರೀತಿಯ ಭಾಷೆ ಬಳಸಿಲ್ಲ. ಇದಕ್ಕೆ ನಿಮ್ಮ ತಂದೆಯೇ ಸಾಕ್ಷಿ… ನೀವು ನನಗೆ ಮೊಮ್ಮಗ ಇದ್ದಂತೆ. ಇದು ನನ್ನ ಅಭಿಪ್ರಾಯವಾಗಿದ್ದು, ಒಪ್ಪಿಕೊಳ್ಳುವುದು ಅಥವಾ ಬಿಡುವುದು ನಿಮಗೆ ಬಿಟ್ಟದ್ದು” ಎಂದು ದಿಗ್ವಿಜಯ ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: ಠಾಣೆಯ ಎಲ್ಲ ಕೊಠಡಿಗಳಲ್ಲಿ ಸಿಸಿಟಿವಿ ಕ್ಯಾಮೆರಾ ಕಡ್ಡಾಯ; ಪೊಲೀಸ್ ಮಹಾನಿರ್ದೇಶಕರಿಗೆ ಹೈಕೋರ್ಟ್ ನಿರ್ದೇಶನ


