Homeಮುಖಪುಟ‘ಅಗತ್ಯ ಬಿದ್ದರೆ, ಕಳೆದ ವರ್ಷ ಮಾಡಿದ್ದನ್ನು ಮತ್ತೆ ಮಾಡುತ್ತೇನೆ: ಕಪಿಲ್ ಮಿಶ್ರಾ ವಿವಾದಾತ್ಮಕ ಹೇಳಿಕೆ

‘ಅಗತ್ಯ ಬಿದ್ದರೆ, ಕಳೆದ ವರ್ಷ ಮಾಡಿದ್ದನ್ನು ಮತ್ತೆ ಮಾಡುತ್ತೇನೆ: ಕಪಿಲ್ ಮಿಶ್ರಾ ವಿವಾದಾತ್ಮಕ ಹೇಳಿಕೆ

- Advertisement -
- Advertisement -

ಸೋಮವಾರ ಸಂವಿಧಾನ ಕ್ಲಬ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಬಿಜೆಪಿ ನಾಯಕ ಕಪಿಲ್ ಮಿಶ್ರಾ, ಅಗತ್ಯ ಬಿದ್ದರೆ ಕಳೆದ ವರ್ಷ ಫೆಬ್ರವರಿ 23 ರಂದು ತಾವು ಮಾಡಿದ್ದನ್ನು “ಮತ್ತೆ” ಮಾಡುವುದಾಗಿ ಹೇಳಿದ್ದಾರೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್‌ ವರದಿ ಮಾಡಿದೆ.

“ಆಜ್ ಏಕ್ ಸಾಲ್ ಹೋ ಗಯಾ ಹೈ, ಇಸ್ಲಿಯೆ ಯೆ ಬಾತ್ ದೋಬಾರಾ ಬೊಲ್ನಾ ಚಾಹತಾ ಹೂ- ಫೆಬ್ರವರಿ 23 ಪಿಚ್ಲ್ ಸಾಲ್ ಜೋ ಕಿಯಾ, ಅಗರ್ ಜರೂರತ್ ಪಡೆ ತೋಹ್ ದೋಬಾರಾ ಕರ್ ಲುಂಗಾ (ಈಗ ಒಂದು ವರ್ಷವಾಯಿತು. ಅದಕ್ಕೆ ನಾನು ಈ ಮಾತನ್ನು ಮತ್ತೆ ಹೇಳಲು ಬಯಸುತ್ತೇನೆ. ಫೆಬ್ರವರಿ 23 ರಂದು ನಾನು ಮಾಡಿದ್ದನ್ನು ಮತ್ತೆ ಮಾಡುವ ಅವಶ್ಯಕತೆ ಬಿದ್ದರೆ, ನಾನು ಅದನ್ನು ಮತ್ತೆ ಮಾಡುತ್ತೇನೆ) ” ಎಂದು ಅವರು ಹೇಳಿದ್ದಾರೆ.

‘ದೆಹಲಿ ರಾಯಿಟ್ಸ್: ದಿ ಅನ್ಟೋಲ್ಡ್ ಸ್ಟೋರಿ’ ಪುಸ್ತಕದ ಲೇಖಕರೊಂದಿಗೆ ವೇದಿಕೆ ಹಂಚಿಕೊಂಡು ಮೇಲಿನ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

“ನನಗೆ ಯಾವುದೇ ಪಶ್ಚಾತ್ತಾಪವಿಲ್ಲ, ಇಂಟೆಲಿಜೆನ್ಸ್ ಬ್ಯೂರೋ ಅಧಿಕಾರಿ ಅಂಕಿತ್ ಶರ್ಮಾ ಮತ್ತು ಕಾನ್‌ಸ್ಟೇಬಲ್ ರತನ್ ಲಾಲ್ ಅವರನ್ನು ಉಳಿಸಲು ನಮಗೆ ಸಾಧ್ಯವಾಗಲಿಲ್ಲ” ಎಂದು ಅವರು ಹೇಳಿದರು.

ಸರಿಯಾಗಿ ಒಂದು ವರ್ಷದ ಹಿಂದೆ ಫೆಬ್ರುವರಿ 23ರಂದು ಬಿಜೆಪಿ ನಾಯಕ ಕಪಿಲ್ ಮಿಶ್ರಾ ಕಳೆದ ವರ್ಷ ಈಶಾನ್ಯ ದೆಹಲಿಯಲ್ಲಿ ಸಿಎಎ ಪರ ರ‍್ಯಾಲಿಯ ನೇತೃತ್ವ ವಹಿಸಿದ್ದರು ಮತ್ತು ಸಿಎಎ ವಿರೋಧಿ ಪ್ರತಿಭಟನಾಕಾರರನ್ನು ಈ ಪ್ರದೇಶದಿಂದ ತೆರವುಗೊಳಿಸುವಂತೆ ಪೊಲೀಸರಿಗೆ ಎಚ್ಚರಿಕೆ ನೀಡಿದ್ದರು, ವಿಫಲವಾದರೆ ತಾವು ಬೀದಿಗೀಳಿಯ ಬೇಕಾಗುತ್ತದೆ ಎಂದು ಪೊಲೀಸ್ ಅಧಿಕಾರಿಯ ಸಮ್ಮುಖದಲ್ಲೇ ಪೊಲೀಸರಿಗೆ ವಾರ್ನಿಂಗ್ ಮಾಡಿದ್ದರು.

ಕಳೆದ ವರ್ಷ ಫೆಬ್ರವರಿ 23 ರಂದು ಅವರು ಟ್ವೀಟ್ ಮಾಡಿದ ವೀಡಿಯೊದಲ್ಲಿ, ಅವರು ಮೌಜ್ಪುರ ಟ್ರಾಫಿಕ್ ಸಿಗ್ನಲ್ ಬಳಿ ಸಿಎಎ ಪರವಾದ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದಾರೆ ಮತ್ತು ಅವರು ಪೊಲೀಸರಿಗೆ ಎಚ್ಚರಿಕೆ ನೀಡಿದಾಗ ಡಿಸಿಪಿ (ಈಶಾನ್ಯ) ವೇದ ಪ್ರಕಾಶ್ ಸೂರ್ಯ ಅವರ ಪಕ್ಕದಲ್ಲೆ ನಿಂತಿದ್ದಾರೆ.

ಮರುದಿನ ಆ ಜಿಲ್ಲೆಯಲ್ಲಿ ಗಲಭೆ-ಹಿಂಸಾಚಾರ ಆರಂಭವಾಗಿ 53 ಮಂದಿ ಸಾವನ್ನಪ್ಪಿದ್ದರು.
“ಜಿಹಾದಿ ಪಡೆಗಳು ದೆಹಲಿಯಲ್ಲಿ ಗಲಭೆಗಳನ್ನು ರೂಪಿಸಿ ಒಂದು ವರ್ಷವಾಗಿದೆ. ಗಣರಾಜ್ಯೋತ್ಸವದಂದು ಏನಾಯಿತು ಎಂಬುದರಂತೆಯೇ ಈಗಲೂ ಅದೇ ಮಾದರಿಯನ್ನು ನೋಡಲಾಗುತ್ತಿದೆ. ವಿಧ್ವಂಸಕರು ಎಂದು ಕರೆಯಲ್ಪಡುವವರು ರಾಜಧಾನಿಯಲ್ಲಿ ಶಾಂತಿಯನ್ನು ಹಾಳುಮಾಡಲು ಪ್ರಯತ್ನಿಸುತ್ತಿದ್ದಾರೆ, ಭಾರತದ ವಿರೋಧಿ ಪಡೆಗಳ ನೆರವು ಮತ್ತು ಧನಸಹಾಯವನ್ನು ದೇಶದ ಒಳಗೆ ಮತ್ತು ಹೊರಗಿನಿಂದ ಪಡೆಯುತ್ತಿದ್ದಾರೆ. ಮತ್ತು ‘ಪ್ರದರ್ಶನ್ ಸೆ ದಂಗಾ ತಕ್ (ಪ್ರತಿಭಟನೆಯಿಂದ ಗಲಭೆಗಳವರೆಗೆ)’ ಈ ಮಾದರಿ ತುಂಬಾ ಸ್ಪಷ್ಟವಾಗಿದೆ” ಎಂದು ಅವರು ಪರೋಕ್ಷವಾಗಿ ರೈತ ಪ್ರತಿಭಟನೆಯ ಮೇಲೆ ಆರೋಪ ಮಾಡಿದ್ದಾರೆ.

“ನಾವು ಗಲಭೆಯ ಹಿಂದೂ ಸಂತ್ರಸ್ತರಿಗೆ ಪ್ರತ್ಯೇಕವಾಗಿ ಸಹಾಯ ಮಾಡಿದ್ದೇವೆ. ತದನಂತರ ನಾವು ಇನ್ನೊಂದು ಬದಿಗೆ ಏಕೆ ಸಹಾಯ ಮಾಡುವುದಿಲ್ಲ ಎಂದು ಪ್ರಶ್ನಿಸಲಾಗಿತು. ವಕ್ಫ್ ಮಂಡಳಿ, ಇಡೀ ದೆಹಲಿ ಸರ್ಕಾರ ಅವರ ಹಿಂದೆ ನಿಂತಿದೆ. ಮಾಧ್ಯಮ, ಎನ್‌ಜಿಒಗಳು ಎಲ್ಲರೂ ಅವರೊಂದಿಗೆ ಇವೆ. ನಾವೇಕೆ ಸಹಾಯ ಮಾಡಬೇಕು ”ಎಂದು ಮಿಶ್ರಾ ಹೇಳಿದ್ದಾರೆ.

“ಈ ಪುಸ್ತಕವು ಗಲಭೆಯ ಸಂಚುಕೋರರ ಬಗ್ಗೆ ಬಹಳಷ್ಟು ಹೊಂದಿದೆ. ಆದ್ದರಿಂದ ನೀವು ನನ್ನ ಬಗ್ಗೆ ಪುಸ್ತಕದಲ್ಲಿ ಹೆಚ್ಚು ಕಾಣುವುದಿಲ್ಲ” ಎಂದು ಅವರು ನಗುತ್ತಾ ಹೇಳಿದರು.

ಈ ಪುಸ್ತಕವನ್ನು ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲೆ ಮೋನಿಕಾ ಅರೋರಾ ಇತರ ಕೆಲವರೊಂದಿಗೆ ಸೇರಿ ಬರೆದಿದ್ದಾರೆ. ಕಳೆದ ವರ್ಷ ಬ್ಲೂಮ್ಸ್‌ಬರಿ ಪ್ರಕಟಣೆಯಿಂದ ಹೊರ ಹೋದ ನಂತರ ಇದನ್ನು ಗರುಡ ಪ್ರಕಾಶನ ಪ್ರಕಟಿಸಿದೆ.


ಇದನ್ನೂ ಓದಿ: ಆಪ್ ಮುಖಂಡರ ಮೇಲೆ ಆರೋಪ: ಬೇಷರತ್ ಕ್ಷಮೆ ಕೇಳಿದ ಬಿಜೆಪಿ ಮುಖಂಡ ಕಪಿಲ್ ಮಿಶ್ರಾ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...