ಸ್ವೀಡಿಷ್ ಪರಿಸರ ಕಾರ್ಯಕರ್ತೆ ಗ್ರೇಟಾ ಥನ್‌ಬರ್ಗ್ ಇತ್ತೀಚೆಗೆ ಭಾರತದಲ್ಲಿ ಮೂರು ಹೊಸ ಕೃಷಿ ಕಾನೂನುಗಳ ವಿರುದ್ಧ ನಡೆಯುತ್ತಿರುವ ರೈತ ಪ್ರತಿಭಟನೆಯನ್ನು ಬೆಂಬಲಿಸುವ ಮಾರ್ಗಗಳನ್ನು ವಿವರಿಸುವ ಟೂಲ್ಕಿಟ್ ಅನ್ನು ಟ್ವೀಟ್ ಮಾಡಿದ್ದರು. ಆ ಮೂಲಕ ರೈತ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದರು. ಬೆಂಗಳೂರು ಮೂಲದ ಪರಿಸರ ಕಾರ್ಯಕರ್ತೆ ದಿಶಾ ರವಿ ಅವರನ್ನು ದೆಹಲಿ ಪೊಲೀಸರು ಟೂಲ್ಕಿಟ್ ಅನ್ನು ‘ಎಡಿಟ್’ ಮಾಡಿದ್ದಾರೆ ಎಂದು ಆರೋಪಿಸಿ ಬಂಧಿಸಿದ್ದರು.
India ask these anti forces #AskGretaWhy pic.twitter.com/E4vWMMpKPX
— Bembde Pavan (@bembadep) February 16, 2021
ಈ ನಡುವೆ ರೈಲೊಂದರಲ್ಲಿ ಥನ್ಬರ್ಗ್ ಊಟ ಮಾಡುತ್ತಿರುವ ಫೋಟೊವೊಂದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಪ್ರಸಾರವಾಗುತ್ತಿದ್ದು, ಗ್ರೇಟಾ ರೈಲಿನೊಳಗೆ ಆಹಾರವನ್ನು ಸೇವಿಸುತ್ತಿರುವುದನ್ನು ಚಿತ್ರ ತೋರಿಸುತ್ತದೆ. ಹೊರಗಡೆ ಪ್ಲಾಟ್‌ಫಾರಂ ಮೇಲೆ ಹಸಿದ ಆಫ್ರಿಕನ್ ಮಕ್ಕಳು ಥನ್‌ಬರ್ಗ್ ಊಟ ಮಾಡುವುದನ್ನು ನೋಡುತ್ತ ನಿಂತಿವೆ. ಟ್ವಿಟರ್ ಬಳಕೆದಾರ @ಬೆಂಬಡೆಪ್ ಈ ಚಿತ್ರವನ್ನು ಪೋಸ್ಟ್ ಮಾಡಿ, “ಭಾರತದ ಈ ವಿರೋಧಿ ಪಡೆಗಳನ್ನು ಕೇಳಿ #AskGretaWhy” ಎಂದು ಬರೆದಿದ್ದಾರೆ. ಸೋಮವಾರದವರೆಗೆ 700 ಕ್ಕೂ ಹೆಚ್ಚು ರಿಟ್ವೀಟ್‌ಗಳನ್ನು ಟ್ವೀಟ್ ಸಂಗ್ರಹಿಸಿದೆ.
ಟ್ವಿಟರ್ ಬಳಕೆದಾರ ಉಮೇಶ್‌ಸಿಂಗ್ ಎಂಬುವವರು ಇದನ್ನು ಬಹಿರಂಗಪಡಿಸಿದ್ದಕ್ಕಾಗಿ ಝೀ ನ್ಯೂಸ್‌ನ ಮುಖ್ಯ ಸಂಪಾದಕ ಸುಧೀರ್ ಚೌಧರಿಯವರಿಗೆ ಧನ್ಯವಾದ ತಿಳಿಸಿ ಟ್ವೀಟ್ ಮಾಡಿದ್ದಾರೆ.
ಎರಡು ವಿಭಿನ್ನ ಫೋಟೊಗಳ ಕೊಲ್ಯಾಜ್!
ಆಲ್ಟ್ ನ್ಯೂಸ್ ಗೂಗಲ್‌ನಲ್ಲಿ ಸರಳ ರಿವರ್ಸ್ ಇಮೇಜ್ ಹುಡುಕಾಟ ನಡೆಸಿದಾಗ, ಸೆಪ್ಟೆಂಬರ್ 27, 2019 ರಂದು ಬ್ರಿಟಿಷ್ ಪತ್ರಿಕೆ ಮೆಟ್ರೊದಲ್ಲಿ ಲೇಖನವೊಂದರಲ್ಲಿ ಈ ಮೂಲ ಫೋಟೋ ಪ್ರಕಟವಾಗಿದೆ. ವೈರಲ್ ಚಿತ್ರಕ್ಕಿಂತ ಭಿನ್ನವಾಗಿ, ಈ ಫೋಟೋ ಕಿಟಕಿಯ ಹೊರಗೆ ಮರಗಳನ್ನು ತೋರಿಸುತ್ತದೆ ಮತ್ತು ಮಕ್ಕಳ ಗುಂಪನ್ನಲ್ಲ. ಆದ್ದರಿಂದ, ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಿರುವ ಚಿತ್ರವನ್ನು ಎಡಿಟ್ ಮಾಡಲಾಗಿದೆ ಎಂಬುದು ಸ್ಪಷ್ಟ. ಚಿತ್ರವನ್ನು ಡೆನ್ಮಾರ್ಕ್‌ನಲ್ಲಿ ತೆಗೆದುಕೊಳ್ಳಲಾಗಿದೆ ಎಂದು ಅದರ ಜೊತೆಗಿನ ಲೇಖನವು ಹೇಳುತ್ತದೆ.
ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸನಾರೊ ಅವರ ಪುತ್ರ ಎಡ್ವರ್ಡೊ ಬೋಲ್ಸನಾರೊ ಅವರು ಕೂಡ ಎಡಿಟೆಡ್ ಚಿತ್ರವನ್ನು ಹಂಚಿಕೊಂಡಿದ್ದಾರೆ ಎಂದು ಅದು ಹೇಳುತ್ತದೆ.
ಥನ್ಬರ್ಗ್ ಸ್ವತಃ ಮೂಲ ಫೋಟೋವನ್ನು ಜನವರಿ 22, 2019 ರಂದು ಪೋಸ್ಟ್ ಮಾಡಿದ್ದರು. ಇನ್ನು ಆ ಬಡ ಮಕ್ಕಳ ಛಾಯಾಚಿತ್ರವು ಆಗಸ್ಟ್ 23, 2007 ರ ರಾಯಿಟರ್ಸ್ ಲೇಖನದಲ್ಲಿ ಕಂಡುಬಂದಿದೆ. ಇದನ್ನು ರಾಯಿಟರ್ಸ್ ಛಾಯಾಗ್ರಾಹಕ ಸ್ಟೆಫನಿ ಹ್ಯಾನ್ಕಾಕ್ ಆಫ್ರಿಕಾದಲ್ಲಿ ಚಿತ್ರೀಕರಿಸಿದ್ದಾರೆ. ಲೇಖನವು ಮಧ್ಯ ಆಫ್ರಿಕಾದಲ್ಲಿ ಆಂತರಿಕ ಯುದ್ಧದ ಸಮಯದಲ್ಲಿ ಹಳ್ಳಿಗಳನ್ನು ಬಿಟ್ಟು ಕಾಡುಗಳಿಗೆ ತೆರಳಿದ ಜನರ ಬಗ್ಗೆ ವಿವರಿಸುತ್ತದೆ.
ಅಲ್ಟ್ ನ್ಯೂಸ್ ಫ್ಯಾಕ್ಟ್‌ಚೆಕ್ ಲೇಖನದಲ್ಲಿ ಥನ್‌ಬರ್ಗ್‌ಳ ಫೋಟೋವನ್ನು ವಿವಿಧ ರೀತಿಯಲ್ಲಿ ಎಡಿಟ್ ಮಾಡಿ, 2019 ರಿಂದ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದೆ ಎಂದು ಕಂಡುಕೊಳ್ಳಲಾಗಿದೆ.
ರೈಲು ಪ್ರಯಾಣದ ಸಮಯದಲ್ಲಿ ಗ್ರೆಟಾ ಥನ್‌ಬರ್ಗ್ ಆಹಾರ ಹೊಂದಿರುವ ಫೋಟೋವನ್ನು ಆನ್‌ಲೈನ್‌ನಲ್ಲಿ ಪ್ರಸಾರ ಮಾಡಲಾಗಿದೆ. ಈ ಚಿತ್ರವನ್ನು 2019 ರಿಂದ ಎಡಿಟ್ ಮಾಡಿ ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಲಾಗುತ್ತಿದೆ.
ದಿಶಾ ಮತ್ತು 5-7 ಲಕ್ಷ ಲಾಯರ್ ಫೀಸು!
ದಿಶಾ ರವಿಯವರ ಬಗ್ಗೆಯೂ ಇಂತಹ ಸುಳ್ಳು ಪ್ರಚಾರ ನಡೆದಿವೆ. ಅವರು ಕ್ರಿಶ್ಚಿಯನ್ (ಆಕಸ್ಮಾತ್ ಆಗಿದ್ದರೆ ಅದರಲ್ಲೇನು ತಪ್ಪು?) ಎಂದು ಸುಳ್ಳು ಹರಡಲಾಗಿತ್ತು. ವಕೀಲ ಅಖಿಲ್ ಸಿಬಲ್ ಅವರಿಗೆ ಒಮ್ಮೆ ಕೋರ್ಟಿಗೆ ಹಾಜರಾಗಲು ದಿಶಾ 5-7 ಲಕ್ಷ ರೂ ಫೀಸು ಕೊಡುತ್ತಿದ್ದಾರೆ, ಯಾರು ಈ ಫೀಸ್ ತುಂಬುತ್ತಿರುವುದು ಎಂದೆಲ್ಲ ಸುಲ್ಳು ಹರಡಲಾಗಿತ್ತು. ಆದರೆ ಸತ್ಯ ಏನೆಂದರೆ, ಅಖಿಲ್ ಸಿಬಲ್ ದಿಶಾ ವಕೀಲೆ ವೃಂದಾ ಭಂಡಾರಿ ಅವರ ಮನವಿಯ ಮೇರೆಗೆ ಮೀಡಿಯಾ ವರ್ತನೆಗೆ ಸಂಬಂಧಿಸಿದ ಎರಡು ವಿಚಾರಣೆಗಳಿಗೆ ಮಾತ್ರ ಹಾಜರಾಗಿದ್ದು, ಇದಕ್ಕಾಗಿ ಅವರು ಯಾವುದೇ ಫೀಸು ಪಡೆದಿಲ್ಲ.
ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಭಗತ್ ಸಿಂಗ್‌ರನ್ನು ಗಲ್ಲಿಗೇರಿಸಿದ್ದು ಫೆಬ್ರವರಿ 14 ಪ್ರೇಮಿಗಳ ದಿನದಂದು ಅಲ್ಲ