Homeಕರ್ನಾಟಕವಿಜಯನಗರ ಜಿಲ್ಲೆ ತಡೆಯಲು ಸೋಮಶೇಖರ್ ರೆಡ್ಡಿ ಮಾಡಿದರೆ ಉಗ್ರ ಭಾಷಣ...?

ವಿಜಯನಗರ ಜಿಲ್ಲೆ ತಡೆಯಲು ಸೋಮಶೇಖರ್ ರೆಡ್ಡಿ ಮಾಡಿದರೆ ಉಗ್ರ ಭಾಷಣ…?

- Advertisement -
- Advertisement -

ಕಳೆದ ವಾರ ಬಳ್ಳಾರಿಯ ಸಿಎಎ ಪರ ಪ್ರತಿಭಟನೆಯಲ್ಲಿ ಬಿಜೆಪಿ ಶಾಸಕ ಸೋಮಶೇಖರ್ ರೆಡ್ಡಿ ಇದ್ದಕ್ಕಿದ್ದಂತೆಯೇ ಮುಸ್ಲಿಮರ ವಿರುದ್ಧ ಉಗ್ರ ಭಾಷಣ ಬಿಗಿದಿದ್ದರು. ಖಡ್ಗ ಮಚ್ಚು ತಂದು ಕೊಚ್ಚಿ ಹಾಕ್ತೀವಿ ಎನ್ನುವವರೆಗೂ ತನ್ನ ನಾಲಗೆ ಹರಿಯಬಿಟ್ಟಿದ್ದರು. ಆತನ ಮಾತುಗಳಿಂದ ಸ್ವತಃ ಬಿಜೆಪಿಗರೆ ಆಶ್ರ‍್ಯಚಕಿತರಾಗಿದ್ದರು. ಆತ ಮುಂಚೆ ಹಾಗಿರಲಿಲ್ಲ, ಈಗೇಕೆ ರೊಚ್ಚಿಗೆದ್ದರು ಎಂದು ಹುಡುಕಿ ಹೊರಟರೆ ಅದರ ಮೂಲ ವಿಜಯನಗರ ಜಿಲ್ಲೆಗೆ ಬಂದು ನಿಲ್ಲುತ್ತದೆ.

ಇದನ್ನೂ ಓದಿ: ಮುಸ್ಲಿಮರೆ ಜಾಸ್ತಿ ನಖರಾ ಮಾಡಿದರೆ ಉಫ್‌ ಅಂತ ಊದಿಬಿಡ್ತೇವೆ: ಬಹಿರಂಗ ಕೋಮು ಪ್ರಚೋದಾನಕಾರಿ ಭಾಷಣ ಮಾಡಿದ BJP ಶಾಸಕ ಸೋಮಶೇಖರ್‌ರೆಡ್ಡಿ

ಹೌದು, ಹೊಸಪೇಟೆಯ ಶಾಸಕ ಆನಂದ್ ಸಿಂಗ್ ವಿಜಯನಗರ ಜಿಲ್ಲೆ ಆಗಬೇಕೆಂದು ಯಡಿಯೂರಪ್ಪ ಬಳಿ ಮನವಿ ಮಾಡಿದಾಕ್ಷಣ ಯಡಿಯೂರಪ್ಪ ಒಪ್ಪಿ ಸಹಿ ಹಾಕಿದ್ದು ನಿಮಗೆ ಗೊತ್ತೆ ಇದೆ. ಉಜ್ಜಯಿನಿ ಸ್ವಾಮೀಜಿಗಳು, ಸಂಗನಬಸವ ಸ್ವಾಮೀಜಿಗಳ ಒತ್ತಡವೂ ಇದಕ್ಕೆ ಕಾರಣವಾಗಿತ್ತು. ಆದರೆ ಏನು ಕಾರಣವೋ ಯಾವ ಒತ್ತಡವೋ ಆ ಆದೇಶ ವಾಪಸ್ ಹಿಂದಕ್ಕೆ ತೆಗೆದುಕೊಂಡುಬಿಟ್ಟರು. ಅದೇ ಸಮಯದಲ್ಲಿ ಒಬ್ಬರಿಗೊಬ್ಬರು ಆಗದವರಂತಿದ್ದ ಸೋಮಶೇಖರ್‌ ರೆಡ್ಡಿ ಮತ್ತು ಕರುಣಾಕರ ರೆಡ್ಡಿ ವಿಜಯನಗರ ಜಿಲ್ಲೆ ಆಗಬಾರದು ಎಂದು ಒಟ್ಟಿಗೆ ದನಿಯೆತ್ತಿದ್ದರು. ಹಾಗೇನಾದರೂ ಮಾಡಿದರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದರು.

ಆದರೆ ಒಂದುವೇಳೆ ವಿಜಯನಗರ ಜಿಲ್ಲೆ ರಚನೆಯಾದಲ್ಲಿ ಅದು ಈ ರೆಡ್ಡಿಗಳ ಅಸ್ತಿತ್ವವನ್ನು ಅಲ್ಲಾಡಿಸುವುದರಲ್ಲಿ ಅನುಮಾನವೇ ಇಲ್ಲ. ಆಗ ಸಂಡೂರು, ಬಳ್ಳಾರಿ, ಬಳ್ಳಾರಿ ಗ್ರಾಮೀಣ ಮತ್ತು ಕುರುಗೋಡು ತಾಲ್ಲೂಕುಗಳು ಮಾತ್ರ ಬಳ್ಳಾರಿ ಜಿಲ್ಲೆಗೆ ಉಳಿದುಕೊಳ್ಳುತ್ತವೆ. ಬಳ್ಳಾರಿಗೆ ಹತ್ತಿರವಿದ್ದರೂ ಸಹ ಕೂಡ್ಲಿಗಿ, ಕಂಪ್ಲಿ ತಾಲ್ಲೂಕುಗಳು ಸಹ ವಿಜಯನಗರಕ್ಕೆ ಸೇರಲು ಒತ್ತಾಯಿಸುತ್ತಿವೆ. ಪ್ರತ್ಯೇಕ ಜಿಲ್ಲೆಯಾದರೆ ರೆಡ್ಡಿಗಳ ಆಟಾಟೋಪ ಇರುವುದಿಲ್ಲ, ಡ್ಯಾಂ ಇದೆ, ಪ್ರವಾಸೋದ್ಯಮವಿದೆ, ಹಾಗಾಗಿ ಅದು ಅಭಿವೃದ್ಧಿಯಾಗುತ್ತದೆ ಎಂಬುದು ಅಲ್ಲಿಯ ಜನರ ಅಭಿಮತ.

ವಿಜಯನಗರ ಜಿಲ್ಲೆ ಆದಲ್ಲಿ ಈಗಾಗಲೇ ಲೂಟಿಯಾಗಿರುವ ಬಳ್ಳಾರಿ ಜಿಲ್ಲೆ ಮತ್ತಷ್ಟು ಸೊರಗುತ್ತದೆ. ಇತ್ತೀಚೆಗೆ ರೆಡ್ಡಿಗಳು ಯಾವುದೇ ಅಭಿವೃದ್ದಿ ಕೆಲಸ ಮಾಡದೇ ಜನರ ಮನಸ್ಸಿನಲ್ಲಿ ನಕಾರಾತ್ಮಕ ಭಾವನೆ ಬೆಳೆದಿದೆ ಎನ್ನಲಾಗುತ್ತಿದೆ. ಆನಂದ್ ಸಿಂಗ್ ಮಂತ್ರಿಯಾಗುವುದರ ಜೊತೆಗೆ ವಿಜಯನಗರ ಜಿಲ್ಲೆಯ ಹರಿಕಾರನಾಗಿ ಮೆರೆಯುತ್ತಾರೆ, ಆಗ ಬಳ್ಳಾರಿಯಲ್ಲಿ ತಮ್ಮ ಹಿಡಿತ ಕಡಿಮೆಯಾಗುತ್ತದೆ ಎಂಬುದು ರೆಡ್ಡಿ ಸಹೋದರರ ಚಿಂತೆ. ಈಗಾಗಲೇ ಜನರಿಂದ ದೂರವಾಗುತ್ತಿರುವ ರೆಡ್ಡಿಗಳು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಶತಾಯಗತಾಯ ವಿಜಯನಗರ ಜಿಲ್ಲೆ ತಡೆಯಬೇಕು ಮತ್ತು ಮತ್ತೆ ಚಾಲ್ತಿಗೆ ಬರಬೇಕಿದೆ. ಇಂತಹ ಸಂದರ್ಭದಲ್ಲಿ ಸಿಎಎ ಅವರಿಗೆ ವರವಾಗಿ ಬಂದಿದೆ.

ಹೌದು ಹಂಪಿ ಉತ್ಸವದಲ್ಲಿ ವಿಜಯನಗರ ಜಿಲ್ಲೆ ಘೋಷಣೆಯಾಗುತ್ತೆ ಅಂತ ಪುಕಾರು ಎಬ್ಬಿತ್ತು. ಇದರಿಂದ ಗಮನವನ್ನು ಬೇರೆಡೆಗೆ ಸೆಳೆಯಲು ಮತ್ತು ತನಗೂ ಜನರ ಬೆಂಬಲವಿದೆ ಎಂದು ಘೋಷಿಸುವುದು ರೆಡ್ಡಿಗಳಿಗೆ ಅನಿವಾರ್ಯವಾಗಿತ್ತು. ಹಾಗಾಗಿಯೇ ಸೋಮಶೇಖರ್ ರೆಡ್ಡಿ ಉಗ್ರ ಭಾಷಣ ಮಾಡಿದ್ದಾರೆ. ಆಶ್ರ‍್ಯ ಎಂದರೆ ಅಷ್ಟು ದಿನ ಜನಾರ್ದನ ರೆಡ್ಡಿ ಬಲಗೈ ಬಂಟನಂತಿದ್ದ ಮೆಹಫೂಜ್ ಅಲಿಖಾನ್ ಸೋಮಶೇಖರ್ ರೆಡ್ಡಿಗಳ ವಿರುದ್ಧವೇ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾನೆ. ಅಂದರೆ ಆ ವಿಚಾರವನ್ನು ಚಾಲ್ತಿಯಲ್ಲಿಡುವುದು ಅವರಿಗೆ ಅನಿವಾರ್ಯವಾಗಿದೆ.

ಇದರಿಂದ ಏಕಕಾಲದಲ್ಲಿ ಪ್ರಚಾರವೂ, ಆರ್‌ಎಸ್‌ಎಸ್ ಬೆಂಬಲವೂ ರೆಡ್ಡಿಗಳಿಗೆ ಸಿಕ್ಕಿದೆ. ಅವರ ಹೇಳಿಕೆ ಕೇಳಿದೊಡನೆಯು ಸ್ಥಳೀಯ ಆರ್‌ಎಸ್‌ಎಸ್ ಮುಖಂಡರು ಸೋಮಶೇಖರ್ ರೆಡ್ಡಿ ಪರವಾಗಿ ನಿಂತಿದ್ದಾರೆ. ಬಳ್ಳಾರಿಯಲ್ಲಿ ಹೆಚ್ಚು ಕೋಮುಗಲಭೆಗಳು ನಡೆದ ಉದಾಹರಣೆಗಳಿಲ್ಲ. ಮುಂದೇನಾದರೂ ಆದಲ್ಲಿ ಅದು ಬಿಜೆಪಿಗೆ ವರವಾಗುವ ಲಕ್ಷಣಗಳನ್ನು ತೋರಿಸುತ್ತಿವೆ. ಆದರೂ ಸೋಮಶೇಖರ್ ರೆಡ್ಡಿ ಇಷ್ಟಕ್ಕೆ ಸುಮ್ಮನಿದ್ದಿಲ್ಲ. ನಿನ್ನೆ ರೆಡ್ಡಿಗೆ ಸವಾಲು ಹಾಕಿ ಬಳ್ಳಾರಿಗೆ ಬಂದಿದ್ದ ಜಮೀರ್ ಅಹ್ಮದ್ ಖಾನ್ ಬಂಧನ, ಬಿಡುಗಡೆಯ ಬಳಿಕ ಆತ ನನಗೆ ಹೆದರಿಕೊಂಡು ವಾಪಸ್ ಹೋಗಿದ್ದಾನೆ ಎಂದು ತನ್ನ ವರಸೆ ಮುಂದುವರೆಸಿದ್ದಾರೆ.

ಇದನ್ನೂ ಓದಿ: ಬಳ್ಳಾರಿಗೆ ಬರ್ತೀನಿ, ಅದೇನ್‌ ಮಾಡ್ತಿಯೋ ನೋಡ್ತೀನಿ: ಸೋಮಶೇಖರ್‌ ರೆಡ್ಡಿಗೆ ತೊಡೆ ತಟ್ಟಿದ ಜಮೀರ್‌ ಅಹ್ಮದ್‌

ಇನ್ನು ಜಿಲ್ಲೆಯಲ್ಲಿ ಬಿಜೆಪಿಗೆ ಪ್ರಬಲ ಪ್ರತಿರೋಧ ತೋರಬಹುದಿದ್ದ ಕಾಂಗ್ರೆಸ್ ಸಂಪೂರ್ಣ ಮಲಗಿದೆ. ಜಮೀರ್ ಆಹ್ಮದ್ ಬರಬಾರದು ಎಂದು ಅರ್ಜಿ ಕೊಟ್ಟ ಕಾಂಗ್ರೆಸ್ ಮುಖಂಡ ಕೆ.ಸಿ ಕೊಂಡಯ್ಯ ಸೋಮಶೇಖರ್ ರೆಡ್ಡಿಯ ವಿರುದ್ಧ ಒಂದೂ ಹೇಳಿಕೆ ಕೊಟ್ಟಿಲ್ಲ. ಅಷ್ಟರಮಟ್ಟಿಗೆ ಕಾಂಗ್ರೆಸ್ ನಾಯಕರು ಬಿಜೆಪಿಗೆ ಮಾರಾಟವಾಗಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ. ಇದೆಲ್ಲದರ ಲಾಭ ಪಡೆದುಕೊಳ್ಳಲು ರೆಡ್ಡಿ ಸಹೋದರರು ಮುಂದಾಗಿದ್ದಾರೆ.

ಇನ್ನು ಉಪಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿ ಬಿ.ಶ್ರೀರಾಮುಲುಗೆ ಇದೆಲ್ಲಾ ಬೇಕಾಗಿಲ್ಲ. ಅದಕ್ಕಾಗಿಯೇ ಸೋಮಶೇಖರ್ ರೆಡ್ಡಿ ಹೇಳಿಕೆ ಕೊಟ್ಟ ಮರುದಿನವೇ ಮುಸ್ಲಿಂ ಮದುವೆಯೊಂದರಲ್ಲಿ ರೆಡ್ಡಿ ಜೊತೆ ಭಾಗವಹಿಸಿದ್ದಲ್ಲದೇ ಮುಸ್ಲಿಂ ಮುಖಂಡರ ಮುಂದೆ ಅಂಗಲಾಚಿ ಮಾತನಾಡಿದ್ದಾರೆ. ದೇಶದಲ್ಲಿ ಮೋದಿ ಅಲೆ ಇದೆ, ನಾವೆಲ್ಲರೂ ಅಣ್ಣತಮ್ಮಂದಿರಂತೆ ಇದ್ದೀವಿ, ಇದನ್ನೆಲ್ಲ ಮನಸ್ಸಿಗೆ ಹಾಕಿಕೊಳ್ಳಬೇಡಿ ಎಂದು ಮನವಿ ಮಾಡುವ ವಿಡಿಯೋ ವೈರಲ್ ಆಗಿತ್ತು.

ಶ್ರೀರಾಮುಲು ಮುಸ್ಲಿಮರ ವಿರುದ್ಧ ನೇರವಾಗಿ ಮಾತಾಡುವುದಿಲ್ಲ. ಆದರೆ ಸೋಮಶೇಖರ್ ರೆಡ್ಡಿಯನ್ನು ಬಿಟ್ಟುಕೊಡುವಂತಿಲ್ಲ. ಏಕೆಂದರೆ ಬಳ್ಳಾರಿಯ ಹಿಡಿತ ತಪ್ಪುವುದು ಅವರಿಗೂ ಬೇಕಿಲ್ಲ. ತಮ್ಮ ಕುಟುಂಬದ ಅಸ್ತಿತ್ವ ಕಾಪಾಡಲು ಸಿಎಎ ಅವರಿಗೆ ಒಂದು ನೆಪವಾಗಿ ಸಿಕ್ಕಿದೆಯಷ್ಟೇ.

ಒಟ್ಟಿನಲ್ಲಿ ಸೋಮಶೇಖರ್ ರೆಡ್ಡಿ ಪ್ಲಾನ್ ವರ್ಕೌಟ್ ಆದಂತೆ ಕಾಣುತ್ತಿದೆ. ಒಂದು ಕಡೆ ರಾಜ್ಯಮಟ್ಟದ ಪ್ರಚಾರ, ಇನ್ನೊಂದು ಕಡೆ ಆರ್‌ಎಸ್‌ಎಸ್ ಬೆಂಬಲ.. ಇನ್ನು ವಿಜಯನಗರ ಜಿಲ್ಲೆಯ ಸೊಲ್ಲೆ ಕೇಳಿಬಂದಿಲ್ಲ ಎಂದಮೇಲೆ ಅವರಿಗೂ ಅದೇ ಬೇಕಿತ್ತು ತಾನೇ?

(ವಿವಿಧ ಲೇಖಕರು ತಮ್ಮ ಲೇಖನಗಳಲ್ಲಿ ಬರೆಯುವ ಅಭಿಪ್ರಾಯಗಳು ನಾನುಗೌರಿ.ಕಾಂನ ಸಂಪಾದಕೀಯ ತಂಡದ ಅಭಿಪ್ರಾಯಗಳು ಆಗಿರಬೇಕೆಂದೇನಿಲ್ಲ.)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತ್ರಿಪುರಾದಲ್ಲಿ ಕೋಮು ಹಿಂಸಾಚಾರ : ಮಸೀದಿ, ಮನೆಗಳಿಗೆ ಹಾನಿ ; ನಿಷೇಧಾಜ್ಞೆ ಜಾರಿ

ಸ್ಥಳೀಯ ದೇವಾಲಯೊಂದಕ್ಕೆ ಚಂದಾ ಸಂಗ್ರಹಿಸುವ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು ಕನಿಷ್ಠ ಐದರಿಂದ ಆರು ಜನರು ಗಾಯಗೊಂಡು ಮನೆಗಳು, ಮರದ ಅಂಗಡಿ ಮತ್ತು ಮಸೀದಿಗೆ ಹಾನಿಯಾದ ನಂತರ, ಜನವರಿ 10ರ...

ಭದ್ರತಾ ಕಾರಣ ನೀಡಿ ಸ್ಮಾರ್ಟ್‌ಫೋನ್ ತಯಾರಕರು ಮೂಲ ಕೋಡ್ ನೀಡುವಂತೆ ಒತ್ತಾಯಿಸಲು ಕೇಂದ್ರದ ಪ್ರಸ್ತಾಪ

ನವದೆಹಲಿ: ಸ್ಮಾರ್ಟ್‌ಫೋನ್ ತಯಾರಕರು ಸರ್ಕಾರದೊಂದಿಗೆ ಮೂಲ ಕೋಡ್ ಹಂಚಿಕೊಳ್ಳುವುದು ಮತ್ತು ಭದ್ರತಾ ಕ್ರಮಗಳ ಭಾಗವಾಗಿ ಹಲವಾರು ಸಾಫ್ಟ್‌ವೇರ್ ಬದಲಾವಣೆಗಳನ್ನು ಮಾಡುವುದು ಕಡ್ಡಾಯಗೊಳಿಸಲು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪ್ರಸ್ತಾಪಿಸಿದೆ, ಇದು ಆಪಲ್ ಮತ್ತು...

ದಾಳಿ ನಡೆಸಿದರೆ ನಮ್ಮ ನೇರ ಗುರಿಯಾಗುತ್ತೀರಿ : ಅಮೆರಿಕ, ಇಸ್ರೇಲ್‌ಗೆ ಎಚ್ಚರಿಕೆ ನೀಡಿದ ಇರಾನ್

ಇರಾನ್‌ನಲ್ಲಿ ನಡೆಯುತ್ತಿರುವ ಆಡಳಿತ ವಿರೋಧಿ ದಂಗೆಯಲ್ಲಿ ಸಾವುಗಳು ಹೆಚ್ಚಾದರೆ ಅಮೆರಿಕ ಮಧ್ಯಪ್ರವೇಶಿಸಲಿದೆ ಎಂದಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಇರಾನ್‌ ತಿರುಗೇಟು ನೀಡಿದೆ. ಇರಾನ್‌ನ ಸಂಸತ್ತಿನ ಅಧ್ಯಕ್ಷ ಮೊಹಮ್ಮದ್ ಬಾಗರ್ ಖಲೀಬಾಫ್ "ಅಮೆರಿಕ ಇರಾನ್ ಮೇಲೆ...

ಕೇಂದ್ರ ಸರ್ಕಾರದ ಎಚ್ಜರಿಕೆ ನಂತರ 3,500 ಪೋಸ್ಟ್‌ಗಳ ನಿರ್ಬಂಧ, 600 ಖಾತೆಗಳನ್ನು ಅಳಿಸಿದ ಎಕ್ಸ್ ಪ್ಲಾಟ್ ಫಾರ್ಮ್

ಮಹಿಳೆಯರನ್ನು ಗುರಿಯಾಗಿಸಿಕೊಂಡು AI- ರಚಿತವಾದ ಅಶ್ಲೀಲ ವಿಡಿಯೋಗಳ ವಿಷಯವನ್ನು ಕೇಂದ್ರವು ಗಮನಕ್ಕೆ ತಂದ ಕಠಿಣ ಕಾನೂನು ಜಾರಿಗೊಳಿಸುವಿಕೆಗೆ ಪ್ರತಿಜ್ಞೆ ಮಾಡಿದ ನಂತರ X 3,500 ಪೋಸ್ಟ್‌ಗಳು ಮತ್ತು 600 ಖಾತೆಗಳನ್ನು ಅಳಿಸಿಹಾಕಿದೆ.   ಅಶ್ಲೀಲ ವಿಷಯಗಳ...

ಮಾನವ ತಲೆಬುರುಡೆ, ಹುಲಿಚರ್ಮದಂತಹ ಕಸ್ಟಮೈಸ್ ಚರ್ಮ ಸೇರಿದಂತೆ ಹಲವು ಅನುಮಾನಾಸ್ಪದ ವಸ್ತುಗಳ ಮಾರಾಟ: ಮಾಂತ್ರಿಕನ ಬಂಧನ

ಬೆಂಗಳೂರು ವಲಯ ಘಟಕದ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಉತ್ತರ ಬೆಂಗಳೂರಿನ ಭೂಪ್ಸಂದ್ರದ 39 ವರ್ಷದ ವ್ಯಕ್ತಿಯನ್ನು ವನ್ಯಜೀವಿ (ರಕ್ಷಣಾ) ಕಾಯ್ದೆ, 1972 ರ ಅಡಿಯಲ್ಲಿ ಬಂಧಿಸಿದೆ. "ಜನವರಿ 9 ರಂದು ನಡೆದ ಕಾರ್ಯಾಚರಣೆಯಲ್ಲಿ...

ದಲಿತ ಮಹಿಳೆಯನ್ನು ಕೊಂದು ಮಗಳ ಅಪಹರಣ : ಆರೋಪಿಯ ಬಂಧನ

ಉತ್ತರ ಪ್ರದೇಶದ ಮೀರತ್‌ನಲ್ಲಿ ದಲಿತ ಮಹಿಳೆಯನ್ನು ಕೊಂದು, ಆಕೆಯ ಮಗಳನ್ನು ಅಪಹರಿಸಿದ ಆರೋಪಿಯನ್ನು ಪೊಲೀಸರು ಶನಿವಾರ (ಜ.10) ಬಂಧಿಸಿದ್ದಾರೆ. ಬಂಧಿತನನ್ನು 22 ವರ್ಷದ ಪರಾಸ್ ಸೋಮ್ (ಪರಾಸ್ ಠಾಕೂರ್) ಎಂದು ಗುರುತಿಸಲಾಗಿದೆ. ರಜಪೂತ ಸಮುದಾಯದ...

‘ಮುಂಬೈ ಮಹಾರಾಷ್ಟ್ರ ನಗರವಲ್ಲ’: ಅಣ್ಣಾಮಲೈ ಹೇಳಿಕೆಗೆ ಶಿವಸೇನೆಯಿಂದ ತೀವ್ರ ಆಕ್ರೋಶ

ಮುಂಬೈ: ಐಪಿಎಸ್ ಅಧಿಕಾರಿಯಿಂದ ರಾಜಕಾರಣಿಯಾಗಿ ಬದಲಾದ ಕೆ.ಅಣ್ಣಾಮಲೈ ಅವರು "ಬಾಂಬೆ ಮಹಾರಾಷ್ಟ್ರ ನಗರವಲ್ಲ, ಅಂತರರಾಷ್ಟ್ರೀಯ ನಗರ" ಎಂದು ಹೇಳಿದ್ದು, ಇದು ಮುಂಬೈನಲ್ಲಿ ವಿವಾದ ಸೃಷ್ಟಿಸಿದೆ.  ಇದಕ್ಕೆ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ)...

ಮೂರನೇ ಅತ್ಯಾಚಾರ ಪ್ರಕರಣ ದಾಖಲು : ಉಚ್ಛಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಾಂಕೂಟತ್ತಿಲ್ ಬಂಧನ

ಅತ್ಯಾಚಾರ ಆರೋಪ ಕೇಳಿ ಬಂದ ಬಳಿಕ ಕಾಂಗ್ರೆಸ್‌ನಿಂದ ಉಚ್ಛಾಟನೆಗೊಂಡಿರುವ ಕೇರಳದ ಪಾಲಕ್ಕಾಡ್‌ನ ಶಾಸಕ ರಾಹುಲ್ ಮಾಂಕೂಟತ್ತಿಲ್ ಅವರನ್ನು ಭಾನುವಾರ (ಜ.11) ಬಂಧಿಸಲಾಗಿದೆ. ಪಾಲಕ್ಕಾಡ್‌ನ ಕೆಪಿಎಂ ರೀಜೆನ್ಸಿ ಹೋಟೆಲ್‌ನಿಂದ ಬೆಳಗಿನ ಜಾವ 12.30ರ ಸುಮಾರಿಗೆ ಮಾಂಕೂಟತ್ತಿಲ್...

ಇರಾನ್‌ ಹಿಂಸಾಚಾರ : ಸಾವಿನ ಸಂಖ್ಯೆ 116ಕ್ಕೆ ಏರಿಕೆ

ಕಳೆದ ಎರಡು ವಾರಗಳಿಂದ ಇರಾನ್‌ನಲ್ಲಿ ನಡೆಯುತ್ತಿರುವ ಸರ್ಕಾರಿ ವಿರೋಧಿ ಪ್ರತಿಭಟನೆಗಳಲ್ಲಿ ಕನಿಷ್ಠ 116 ಜನರು ಸಾವನ್ನಪ್ಪಿದ್ದಾರೆ. ಅಧಿಕಾರಿಗಳು ಪ್ರತಿಭಟನಾ ನಿರತರ ಮೇಲೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. ಡಿಸೆಂಬರ್ 28ರಂದು ಪ್ರಾರಂಭವಾದ...

ಪಾಕಿಸ್ತಾನದ ಸಿಂಧ್‌ನಲ್ಲಿ 23 ವರ್ಷದ ಹಿಂದೂ ರೈತನನ್ನು ಗುಂಡಿಕ್ಕಿ ಕೊಂದ ಭೂಮಾಲೀಕರು 

ಕರಾಚಿ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ 23 ವರ್ಷದ ಹಿಂದೂ ರೈತನೊಬ್ಬ ತನ್ನ ಜಮೀನಿನಲ್ಲಿ ಆಶ್ರಯ ಮನೆ ನಿರ್ಮಿಸಿದ್ದಕ್ಕಾಗಿ ಆತನ ಮನೆ ಮಾಲೀಕರು ಗುಂಡಿಕ್ಕಿ ಕೊಂದಿದ್ದಾರೆ, ಇದು ಹಿಂದೂ ಸಮುದಾಯದಿಂದ ವ್ಯಾಪಕ ಪ್ರತಿಭಟನೆಗೆ ಎಂದು...