Homeಮುಖಪುಟಜೋಡಿಗಳು ಪಾರ್ಕ್‌‌ನಲ್ಲಿ ಸುತ್ತಾಡುವುದು ಕಂಡರೆ ಅವರ ಕಾಲುಗಳನ್ನು ಮುರಿಯುತ್ತೇವೆ: ಶಿವಸೇನೆ ಎಚ್ಚರಿಕೆ

ಜೋಡಿಗಳು ಪಾರ್ಕ್‌‌ನಲ್ಲಿ ಸುತ್ತಾಡುವುದು ಕಂಡರೆ ಅವರ ಕಾಲುಗಳನ್ನು ಮುರಿಯುತ್ತೇವೆ: ಶಿವಸೇನೆ ಎಚ್ಚರಿಕೆ

- Advertisement -
- Advertisement -

ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಶಿವಸೇನೆ ಕಾರ್ಯಕರ್ತರು ಭಾನುವಾರ ಪ್ರತಿಭಟನೆ ನಡೆಸಿದ್ದು, ಪ್ರೇಮಿಗಳ ದಿನವನ್ನು ಆಚರಿಸುವುದನ್ನು ತಡೆಯುವುದಾಗಿ ಪ್ರತಿಜ್ಞೆ ಮಾಡಿದ್ದಾರೆ. ಪ್ರತಿಭಟನೆಯ ಸಂದರ್ಭದಲ್ಲಿ ಶಿವಸೇನೆಯ ಕಾರ್ಯಕರ್ತರು ಕಾಳಿಕಾ ಶಕ್ತಿ ಪೀಠದ ದೇವಸ್ಥಾನದಲ್ಲಿ ‘ಲಾಠಿ’ಗಳನ್ನು ಪೂಜಿಸುತ್ತಿರುವುದು ಕಂಡುಬಂದಿದೆ.

“ಪ್ರೇಮಿಗಳ ದಿನದಂದು ಸಾರ್ವಜನಿಕ ಉದ್ಯಾನವನಗಳಲ್ಲಿ ಜೋಡಿಗಳು ಸುತ್ತಾಡುವುದನ್ನು ಕಂಡರೆ ನಾವು ಅವರ ಕಾಲುಗಳನ್ನು ಮುರಿಯುತ್ತೇವೆ” ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ಬಂಗಾಳ ಪುರಸಭೆ ಚುನಾವಣೆ: ನಾಮಪತ್ರ ಹಿಂಪಡೆದಿದ್ದ ಮೂವರು ಬಿಜೆಪಿ ನಾಯಕರು ಟಿಎಂಸಿ ಸೇರ್ಪಡೆ

“ಪಾಶ್ಚಿಮಾತ್ಯ ಸಂಸ್ಕೃತಿಯ ಆಚರಣೆ” ಯನ್ನು ವಿರೋಧಿಸಲು ಪ್ರೇಮಿಗಳ ದಿನದಂದು ಭೋಪಾಲ್‌ನ ವಿವಿಧ ಭಾಗಗಳಿಗೆ ‘ಲಾಠಿ’ಗಳನ್ನು ಹಿಡಿದು ಪ್ರಯಾಣಿಸುವುದಾಗಿ ಪ್ರತಿಭಟನೆಯ ಭಾಗವಾಗಿರುವ ಶಿವಸೇನಾ ಕಾರ್ಯಕರ್ತರು ಹೇಳಿದ್ದಾರೆ.

“ಪ್ರೇಮಿಗಳ ದಿನವನ್ನು ಆಚರಿಸುವುದು ಕಂಡುಬಂದರೆ, ನಾವು ಜೋಡಿಗಳಿಗೆ ಸ್ಥಳದಲ್ಲೇ ಮದುವೆ ಮಾಡುತ್ತೇವೆ ಮತ್ತು ಚೆಂಡೆ ವಾದ್ಯಗಳೊಂದಿಗೆ ಮೆರವಣಿಗೆ ನಡೆಸುತ್ತೇವೆ” ಎಂದು ಶಿವಸೇನೆ ಕಾರ್ಯಕರ್ತರೊಬ್ಬರು ಹೇಳಿದ್ದಾರೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ.

ಇದೇ ವೇಳೆ ಭೋಪಾಲ್‌ನ ಪಬ್‌ಗಳು, ರೆಸ್ಟೋರೆಂಟ್‌ಗಳು ಮತ್ತು ಹೋಟೆಲ್ ನಿರ್ವಾಹಕರಿಗೆ ಶಿವಸೇನೆ ಎಚ್ಚರಿಕೆ ನೀಡಿದ್ದು, ಪ್ರೇಮಿಗಳ ದಿನದಂದು ಯಾವುದೇ ಕಾರ್ಯಕ್ರಮಗಳನ್ನು ಆಯೋಜಿಸದಂತೆ ಕೇಳಿಕೊಂಡಿದೆ.

ಇದನ್ನೂ ಓದಿ: ರಾತ್ರಿ ವೇಳೆ ಅಪರಿಚಿತರಿಂದ ಫೋನ್‌ ಕಾಲ್‌: ನಟಿ ಸಂಜನಾ ತರಾಟೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...