Homeಮುಖಪುಟಬಜೆಟ್‌ನಲ್ಲಿ ಘೋಷಿಸಿ ಪ್ರಚಾರ ಪಡೆದು ನಂತರ ಸದ್ದಿಲ್ಲದೆ ಕೈಬಿಟ್ಟ ಸಾಲು ಸಾಲು ಯೋಜನೆಗಳಿವು!

ಬಜೆಟ್‌ನಲ್ಲಿ ಘೋಷಿಸಿ ಪ್ರಚಾರ ಪಡೆದು ನಂತರ ಸದ್ದಿಲ್ಲದೆ ಕೈಬಿಟ್ಟ ಸಾಲು ಸಾಲು ಯೋಜನೆಗಳಿವು!

2020-21ರ ಸಾಲಿನಲ್ಲಿ ಬಜೆಟ್‌ನಲ್ಲಿ ಯೆಡಿಯೂರಪ್ಪನವರು ಘೋಷಿಸಿದ ಸುಮಾರು 1422.5 ಕೋಟಿ ರೂ ವೆಚ್ಚದ ಯೋಜನೆಗಳನ್ನು ಕೈಬಿಡಲಾಗಿದೆ...

- Advertisement -
- Advertisement -

ಎರಡು ವರ್ಷ ಹಿಂದೆ ಅಂದರೆ 2020-21ರ ಸಾಲಿನಲ್ಲಿ ಯೆಡಿಯೂರಪ್ಪನವರು ಬಜೆಟ್‌ನಲ್ಲಿ ಘೋಷಿಸಿದ ಹಲವಾರು ಯೋಜನೆಗಳ ಹಣೆಬರಹ ಇದು! ಬಡ ಮೀನುಗಾರ ಮಹಿಳೆಯರಿಂದ ಹಿಡಿದು ಒಣ ಭೂಮಿ ರೈತರ ಬಾಳು ಉತ್ತಮಪಡಿಸಲು ಧಾಂ ಧೂಂ ಅಂತ ಬಜೆಟ್ಟಿನಲ್ಲಿ ಕಾರ್ಯಕ್ರಮ ಘೋಷಿಸಿ, ವರ್ಷಾಂತ್ಯದಲ್ಲಿ ತಣ್ಣಗೆ ಯೋಜನೆಗಳನ್ನು ಕೈಬಿಡಲಾಗಿದೆ ಎಂಬ ಟಿಪ್ಪಣಿ ಹಾಕಲಾಗಿದೆ. ಈ ಕೈಬಿಡಲಾದ ಯೋಜನೆಗಳ ಪಟ್ಟಿ ಇಲ್ಲಿದೆ.

2020-21ರ ಸಾಲಿನ ಬಜೆಟ್ ಮೇಲೆ “ಕ್ರಮ ಕೈಗೊಂಡ ವರದಿ”ಯನ್ನು ಕಳೆದ ಸಾಲಿನ ಬಜೆಟ್ ವೇಳೆ ಮಂಡಿಸಲಾಗಿದೆ. ಈ ವರದಿಯಲ್ಲಿ ಈ ಧೂರ್ತತನ ಅನಾವರಣಗೊಂಡಿದೆ. ಈ ಪಟ್ಟಿಯಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಅವರ ತವರು ಜಿಲ್ಲೆಯ ಯೋಜನೆಯೂ ಸೇರಿದೆ. ಕಳೆದ ಸಾಲಿನ ಘೋಷಣೆಗಳ ಹಣೆಬರಹ ಈ ಬಾರಿಯ “ಕ್ರಮಕೈಗೊಂಡ ವರದಿ”ಯಲ್ಲಿ ಉಲ್ಲೇಖವಾಗಲಿದೆ.! ಈಗ ಯಾವ ಯಾವ ಯೋಜನೆಗಳನ್ನು ಕೈ ಬಿಡಲಾಗಿದೆಯೋ ದೇವರಿಗೇ ಗೊತ್ತು. ಬಜೆಟ್ ಘೋಷಣೆ ಎಂಬುದು ಸಿನೆಮಾ ಪೋಸ್ಟರ್ ತರಹದ ಗಮನ ಸೆಳೆಯುವ ತಂತ್ರವಾಗಿದೆಯೇ ಹೊರತು, ಸರಕಾರ ಕಲ್ಯಾಣ ಕಾರ್ಯಕ್ರಮದ ದಿಸೆಯನ್ನು ತೋರುತ್ತಿಲ್ಲ. (ಈ ಪಟ್ಟಿಯಲ್ಲಿರುವ ಸಂಖ್ಯೆ ಬಜೆಟ್ಟಿನಲ್ಲಿ ನೀಡಲಾಗಿರುವ ಕಾರ್ಯಕ್ರಮಗಳ ಅನುಕ್ರಮಣಿಕೆ ಪಟ್ಟಿಯ ಸಂಖ್ಯೆ)

ಕೈಬಿಡಲಾದ ಘೋಷಿತ ಯೋಜನೆಗಳು: ಸರ್ಕಾರ ಯೋಜನೆ ಘೋಷಿಸುವಾಗ ಹೇಳಿದ್ದನ್ನು ಸಹ ಸೇರಿಸಲಾಗಿದೆ.

33. ರಾಸಾಯನಿಕ ಆಧಾರಿತ ಕೃಷಿಯ ಅನಾನುಕೂಲತೆ ಮತ್ತು ಅಪಾಯವು ವಿಜ್ಞಾನಿಗಳಿಗೆ ಗೋಚರವಾಗಿದೆ.
ಸಾವಯವ ಕೃಷಿ ಇದಕ್ಕೆ ಪರಿಹಾರವಾಗಿದೆ. ರಾಸಾಯನಿಕಗಳ ಮೂಲಕ ದೊರೆಯುವಂತಹ ಅದೇ ಪೌಷ್ಟಿಕತೆಯನ್ನು ಸಾವಯವ ಆಕರಗಳಿಂದ ಪಡೆದುಕೊಳ್ಳಬಹುದಾಗಿದೆ. ಈ ಉದ್ದೇಶಕ್ಕಾಗಿ ನೀರಿನಲ್ಲಿ ಕರಗುವಂತಹ ಗೊಬ್ಬರಗಳು, ಸೂಕ್ಷ್ಮ-ಪೌಷ್ಟಿಕಾಂಶಗಳು, ಹೈಡ್ರೋಜೆಲ್ ಇತ್ಯಾದಿಗಳನ್ನು ಬಳಸಲು ನೆರವು
ನೀಡಲಾಗುವುದು. ಸಾವಯವ ಕೃಷಿಯನ್ನು ಪ್ರೋತ್ಸಾಹಿಸುವುದಕ್ಕಾಗಿ 200 ಕೋಟಿ ರೂ.ಗಳನ್ನು ಒದಗಿಸಲಾಗುವುದು.

35. ನೀರು ಮತ್ತು ಗೊಬ್ಬರಗಳ ಬಳಕೆಯ ದಕ್ಷತೆಯನ್ನು ಹೆಚ್ಚಿಸಲು ಮತ್ತು ಕೃಷಿ ಉತ್ಪಾದಕತೆಯನ್ನು ಹೆಚ್ಚಿಸಲು ಸಾಮರ್ಥ್ಯಾಭಿವೃದ್ಧಿ ಮತ್ತು ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಈ ನಿಟ್ಟಿನಲ್ಲಿ ರಾಜ್ಯಾದ್ಯಂತ 40 ಪ್ರಾತ್ಯಕ್ಷಿಕೆ ಕ್ಷೇತ್ರಗಳನ್ನು ಅಭಿವೃದ್ಧಿಪಡಿಸಿ, ಉತ್ತಮ ಕೃಷಿ ಪದ್ಧತಿಗಳು, ನೂತನ
ತಂತ್ರಜ್ಞಾನಗಳು ಮತ್ತು ಕೊಯ್ಲೋತ್ತರ ನಿರ್ವಹಣೆ ಇತ್ಯಾದಿಗಳ ಬಗ್ಗೆ ಕೃಷಿಕರಿಗೆ ಪ್ರಾತ್ಯಕ್ಷಿಕೆ ನೀಡಲಾಗುವುದು.

43. ಕರ್ನಾಟಕದಲ್ಲಿ ಶೇ.75ರಷ್ಟು ಸಣ್ಣ ಹಾಗೂ ಅತೀ ಸಣ್ಣ ರೈತರಿದ್ದಾರೆ. ರಾಜ್ಯದ ಕೃಷಿ ಪದ್ಧತಿಯು ಬಹುತೇಕ
ಮಳೆಯಾಧಾರಿತ ಆಗಿರುವುದರಿಂದ ತೋಟಗಾರಿಕಾ ಬೆಳೆಗಳ ಪ್ರದೇಶವನ್ನು ವಿಸ್ತರಿಸುವ ಸಾಧ್ಯತೆಗಳು
ಹೆಚ್ಚಿರುತ್ತವೆ. ತೋಟಗಾರಿಕೆ ಕೃಷಿ ಪದ್ಧತಿಗೆ ವರ್ಗಾವಣೆಗೊಳ್ಳಲು ಸಣ್ಣ ಮತ್ತು ಅತೀ ಸಣ್ಣ ರೈತರು ಇಚ್ಛಿಸಿದಲ್ಲಿ ಅವರಿಗೆ ಬೀಜ, ರಸಗೊಬ್ಬರ ಖರೀದಿ, ಕೃಷಿ ಕಾರ್ಮಿಕರ ವೆಚ್ಚ ಭರಿಸಲು ಅನುಕೂಲವಾಗುವಂತೆ
ಒಂದು ಸಮಗ್ರ ಯೋಜನೆಯನ್ನು ರೂಪಿಸಲಾಗುವುದು. ಈ ಯೋಜನೆಯಡಿಯಲ್ಲಿ ಸಣ್ಣ ಮತ್ತು ಅತೀ ಸಣ್ಣ
ರೈತರು ಹೊಸದಾಗಿ ತೋಟಗಾರಿಕೆ ಕೃಷಿ ಪದ್ಧತಿಗೆ ವರ್ಗಾವಣೆಗೊಂಡಲ್ಲಿ ಪ್ರತಿ ಹೆಕ್ಟೇರಿಗೆ 5000 ರೂ.ಗಳಂತೆ ಗರಿಷ್ಠ 10,000 ರೂ.ಗಳ ಮೊತ್ತವನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗೆ ವರ್ಗಾಯಿಸಲಗುವುದು.

44. ಹಾಪ್‌ಕಾಮ್ಸ್ ರಾಷ್ಟ್ರ ಮಟ್ಟದಲ್ಲಿ ಮಾನ್ಯತೆ ಪಡೆದ ಸಹಕಾರಿ ಸಂಘವಾಗಿದ್ದು, ರಾಜ್ಯದ ತೋಟಗಾರಿಕಾ
ಬೆಳೆಗಾರರ ಬೆನ್ನೆಲುಬಾಗಿದೆ. ಹಾಪ್‌ಕಾಮ್ಸ್‌ಗಳಲ್ಲಿ ಉತ್ತಮ ಸೇವೆಗಳನ್ನು ಒದಗಿಸುವ ಹಾಗೂ ವಿಸ್ತರಿಸುವ
ಉದ್ದೇಶದಿಂದ ಹಾಪ್‌ಕಾಮ್ಸ್ ಸಂಸ್ಥೆಯನ್ನು ಬಲಪಡಿಸಲಾಗುವುದು.

55. ರಾಯಚೂರು, ಯಾದಗಿರಿ, ಕಲಬುರಗಿ ಭಾಗದ ಜನರಿಗೆ ಕುಡಿಯುವ ನೀರಿನ ಸರಬರಾಜಿಗೆ ಅನುಕೂಲವಾಗುವಂತೆ ತಿಂತಿಣಿ ಬ್ರಿಡ್ಜ್ ಬಳಿ ಕೃಷ್ಣಾ ನದಿಗೆ ಜಲಾಶಯ ನಿರ್ಮಿಸಲು ಉದ್ದೇಶಿಸಿ, ವಿಸ್ತೃತ
ಯೋಜನಾ ವರದಿಯನ್ನು ತಯಾರಿಸಲು ಕ್ರಮ ವಹಿಸಲಾಗುವುದು.

59. ರಾಜ್ಯದಲ್ಲಿ ಹಂದಿಗಳ ಸಾಕಾಣಿಕೆ ಮತ್ತು ಉತ್ಪಾದನೆ ಗುಣಮಟ್ಟದಲ್ಲಿ ಸುಧಾರಣೆಯನ್ನು ತರಲು ವಿದೇಶಿ
ತಳಿಯ ಹಂದಿಗಳನ್ನು ಆಮದು ಮಾಡಿಕೊಳ್ಳಲು “ಸಮಗ್ರ ವರಾಹ ಅಭಿವೃದ್ಧಿ” ಯೋಜನೆಯನ್ನು
ರೂಪಿಸಲಾಗುವುದು. ಈ ಯೋಜನೆಯನ್ನು ಐದು ಕೋಟಿ ರೂ.ಗಳ ವೆಚ್ಚದಲ್ಲಿ ಕೈಗೊಳ್ಳಲಾಗುವುದು.

61. ರಾಜ್ಯದ ಹೈನುರಾಸುಗಳಲ್ಲಿ ಶೇ. 90ಕ್ಕಿಂತ ಹೆಚ್ಚು ಹೆಣ್ಣು ಕರುಗಳನ್ನು ಪಡೆಯಲು ಲಿಂಗ ನಿರ್ಧಾರಿತ
ವೀರ್ಯನಳಿಕೆಗಳಿಂದ ಕೃತಕ ಗರ್ಭಧಾರಣೆ ಕೈಗೊಂಡು ಹೆಣ್ಣು ಕರುಗಳ ಜನನವನ್ನು ಹೆಚ್ಚಿಸಲಾಗುವುದು. ಈ
ಉದ್ದೇಶಕ್ಕಾಗಿ ಎರಡು ಕೋಟಿ ರೂ. ಅನುದಾನ ನೀಡಲಾಗುವುದು.

62. ಮೀನುಗಾರರು ಆಧುನಿಕ ಮೀನುಗಾರಿಕೆ ತಾಂತ್ರಿಕತೆಗಳನ್ನು ಅಳವಡಿಸಿಕೊಳ್ಳುವಂತೆ
ಪ್ರೋತ್ಸಾಹಿಸಲು “ಕರ್ನಾಟಕ ಮತ್ಸ್ಯ ವಿಕಾಸ ಯೋಜನೆ” ಯನ್ನು ಜಾರಿಗೆ ತರಲು ಉದ್ದೇಶಿಸಲಾಗಿದೆ.
ಈ ಯೋಜನೆಗೆ 2020-21ನೇ ಸಾಲಿನಲ್ಲಿ 1.5 ಕೋಟಿ ರೂ.ಗಳನ್ನು ಒದಗಿಸಲಾಗುವುದು.
ಈ ಯೋಜನೆಯನ್ನು ಕೈಬಿಡಲಾಗಿದೆ.

63. ಮೀನುಗಾರ ಮಹಿಳೆಯರು ಮೀನು ಮಾರಾಟ ಪ್ರಕ್ರಿಯೆಯಲ್ಲಿ ಹೆಚ್ಚು ಸಕ್ರಿಯರಾಗಿರುತ್ತಾರೆ. ಮೀನುಗಾರ ಮಹಿಳೆಯರು ಮೀನು ಇಳಿದಾಣದಿಂದ ಮಾರುಕಟ್ಟೆಗೆ ತ್ವರಿತವಾಗಿ ಮೀನು ಸಾಗಿಸಲು ಅನುಕೂಲ ಮಾಡಿಕೊಡುವ ಉದ್ದೇಶದಿಂದ 1000 ಮೀನುಗಾರ ಮಹಿಳೆಯರಿಗೆ “ಮಹಿಳಾ ಮೀನುಗಾರ
ಸಬಲೀಕರಣ” ಯೋಜನೆಯ ಮೂಲಕ ದ್ವಿಚಕ್ರ ವಾಹನಗಳನ್ನು ನೀಡಲು ಉದ್ದೇಶಿಸಲಾಗಿದೆ. ಈ ಯೋಜನೆಯನ್ನು ಐದು ಕೋಟಿ ರೂ..ಗಳ ವೆಚ್ಚದಲ್ಲಿಅನುಷ್ಠಾನಗೊಳಿಸಲಾಗುವುದು.
ಈ ಯೋಜನೆಯನ್ನು ಕೈಬಿಡಲಾಗಿದೆ.

64. ಕರಾವಳಿ ಜಲಕೃಷಿ ಎಂದೇ ಕರೆಯಲ್ಪಡುವ ಹಿನ್ನೀರು ಜಲಕೃಷಿಯು ದೇಶದ ಮತ್ತು ರಾಜ್ಯದ ಒಟ್ಟಾರೆ
ಮೀನುಗಾರಿಕೆಯ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ. ಈ ಹಿನ್ನೀರು ಮೀನುಗಾರಿಕೆಯನ್ನು
ಸದೃಢಗೊಳಿಸಲು ಮುಲ್ಕಿಯಲ್ಲಿ ಹಿನ್ನೀರು ಮೀನು ಮರಿ ಉತ್ಪಾದನಾ ಕೇಂದ್ರವನ್ನು ಮುಲ್ಕಿಯಲ್ಲಿ ಎರಡು ಕೋಟಿ ರೂ.ಗಳ ವೆಚ್ಚದಲ್ಲಿ ಸ್ಥಾಪಿಸಲಾಗುವುದು.

67. ಉಡುಪಿ ಜಿಲ್ಲೆಯ ಹಂಗಾರಕಟ್ಟೆ ಬಂದರನ್ನು 130 ಕೋಟಿ ರೂ.ಗಳ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು..

68. ಉತ್ತರ ಕನ್ನಡ ಜಿಲ್ಲೆಯ ಕಾರವಾರ ಮೀನುಗಾರಿಕಾ ಬಂದರಿನ ಅಭಿವೃದ್ಧಿ ಹಾಗೂ ಮೂಲಭೂತ
ಸೌಕರ್ಯಕ್ಕಾಗಿ ನಾಲ್ಕು ಕೋಟಿ ರೂ. ಗಳನ್ನು ಒದಗಿಸಲಾಗುವುದು.

69. ಉತ್ತರ ಕನ್ನಡ ಜಿಲ್ಲೆಯ ತೆಂಗಿನಗುಂಡಿ ಬಂದರಿನ ಅಳಿವೆ ಹೂಳೆತ್ತುವ ಕಾಮಗಾರಿಗೆ (100 ಮೀ) ಐದು ಕೋಟಿ ರೂ. ಗಳನ್ನು ಒದಗಿಸಲಾಗುವುದು.

110. ಕರ್ನಾಟಕವನ್ನು “ಶ್ರವಣ ದೋಷ ಮುಕ್ತ” ಮಾಡಲು ಆರು ವರ್ಷದೊಳಗಿನ ಮಕ್ಕಳಲ್ಲಿ ಜನ್ಮಜಾತ
ಕಿವುಡುತನವನ್ನು ಆರಂಭಿಕ ಹಂತದಲ್ಲಿಯೇ ಪತ್ತೆ ಹಚ್ಚಿ ಕಾಕ್ಲಿಯರ್ ಇಂಪ್ಲಾಂಟ್ ಶಸ್ತ್ರ ಚಿಕಿತ್ಸೆ ನಡೆಸಿ, ಶ್ರವಣಯಂತ್ರ ಒದಗಿಸಿ ಗುಣಪಡಿಸುವ ಯೋಜನೆ ಕೈಗೊಳ್ಳಲು ಉದ್ದೇಶಿಸಲಾಗಿದೆ. ಈ ಯೋಜನೆಗೆ
2020-21ನೇ ಸಾಲಿನಲ್ಲಿ 28 ಕೋಟಿ ರೂ.ಗಳನ್ನು ಒದಗಿಸಲಾಗುವುದು.

111. ರಾಜ್ಯದ ಎಲ್ಲಾ ತಾಲ್ಲೂಕು ಆಸ್ಪತ್ರೆಗಳಲ್ಲಿ ತೀವ್ರ ನಿಗಾ ಘಟಕಗಳನ್ನು ಸ್ಥಾಪಿಸಲಾಗಿದ್ದು ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಸದರಿ ತೀವ್ರ ನಿಗಾ ಘಟಕಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಉದ್ದೇಶಿಸಲಾಗಿದೆ. 2020-21ನೇ ಸಾಲಿನಲ್ಲಿ ಈ ಘಟಕಗಳನ್ನು ಪ್ರಾಯೋಗಿಕವಾಗಿ ಎರಡು ಜಿಲ್ಲೆಗಳಲ್ಲಿ
ಅನುಷ್ಠಾನಗೊಳಿಸಲಾಗುವುದು.

115. ಹಾವೇರಿ ಜಿಲ್ಲೆಯಲ್ಲಿ 20 ಹಾಸಿಗೆಗಳ ಆಯುಷ್ ಸಂಯುಕ್ತ ಆಸ್ಪತ್ರೆಯನ್ನು 20 ಕೋಟಿ ರೂ. ವೆಚ್ಚದಲ್ಲಿ ಪ್ರಾರಂಭಿಸಲಾಗುವುದು. ಈ ಉದ್ದೇಶಕ್ಕಾಗಿ 2020- 21ನೇ ಸಾಲಿನಲ್ಲಿ ಐದು ಕೋಟಿ ರೂ.ಗಳ ಅನುದಾನ ಒದಗಿಸಲಾಗುವುದು.

152. ರಾಜ್ಯದ ಬಳ್ಳಾರಿ, ಚಿತ್ರದುರ್ಗ ಮತ್ತು ಹುಬ್ಬಳ್ಳಿ-ಧಾರವಾಡ ನಗರಗಳಲ್ಲಿ 20 ಕೋಟಿ ರೂ. ಮೊತ್ತದಲ್ಲಿ
ಶುದ್ಧೀಕರಿಸಿದ ನೀರನ್ನು ಗೃಹೇತರ ಉದ್ದೇಶಕ್ಕೆ ಮರುಬಳಕೆ ಮಾಡುವ ಯೋಜನೆಯನ್ನು ರೂಪಿಸಿ
ಅನುಷ್ಠಾನಗೊಳಿಸಲಾಗುವುದು.

205. ಬೆಂಗಳೂರು ನಗರಕ್ಕೆ ಸೇರ್ಪಡೆಗೊಂಡಿರುವ 110 ಹಳ್ಳಿಗಳಲ್ಲಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಲಿಯು ನೀರಿನ ಪೈಪ್‌ಲೈನ್ ಹಾಗೂ ಒಳಚರಂಡಿ ವ್ಯವಸ್ಥೆಯನ್ನು ನಿರ್ಮಿಸುತ್ತಿದೆ. ಈ ಕಾರಣದಿಂದಾಗಿ ಅಲ್ಲಿನ ರಸ್ತೆಗಳು ದುಃಸ್ಥಿತಿಯಲ್ಲಿರುತ್ತವೆ. ಅವುಗಳ ಪುನಶ್ಚೇತನಕ್ಕಾಗಿ ಮುಂದಿನ ಎರಡು ವರ್ಷಗಳಲ್ಲಿ 1000 ಕೋಟಿ ರೂ.ಗಳನ್ನು ನೀಡಲಾಗುವುದು. 2020-21ನೇ ಸಾಲಿನಲ್ಲಿ ಈ
ಉದ್ದೇಶಕ್ಕಾಗಿ 500 ಕೋಟಿ ರೂ.ಗಳನ್ನು ಒದಗಿಸಲಾಗುವುದು.

ಈ ಮೇಲಿನ ಎಲ್ಲಾ ಯೋಜನೆಗಳನ್ನು ಸದ್ದಿಲ್ಲದೆ ಕೈಬಿಡಲಾಗಿದೆ. ಘೋಷಿಸುವಾಗಿ ಅಬ್ಬರಿಸಿ ಪ್ರಚಾರ ಪಡೆದ ಸರ್ಕಾರ ಕೈಬಿಡುವಾಗ ಯಾರಿಗೂ ತಿಳಿಸಿಲ್ಲ. ಇದು ಈ ಸರ್ಕಾರದ ವರಸೆ. ಹಾಗಾಗಿ ಬಜೆಟ್ ಘೋಷಣೆ ಎಂಬುದು ಎಷ್ಟು ಜಾರಿಯಾಗುತ್ತದೆ ಎಂಬುದನ್ನು ಈ ಮೇಲಿನ ಅಂಕಿ ಅಂಶಗಳ ಮೂಲಕ ಸಾರ್ವಜನಿಕರೆ ನಿರ್ಧರಿಸಬೇಕಿದೆ.

  • ಕೆ.ಪಿ ಸುರೇಶ

ಇಂಗ್ಲಿಷ್ ಅಧ್ಯಾಪಕರಾಗಲು ಎಂ.ಎ ಓದಿದ್ದ ಕೆ.ಪಿ.ಸುರೇಶ ಅವರು ಕೃಷಿಯಲ್ಲಿ ತೊಡಗಲು ಸುಳ್ಯ ತಾಲೂಕಿನ ತಮ್ಮ ಊರಿಗೆ ಮರಳಿದ್ದರು. ತಮ್ಮ ಸ್ವಂತ ಅನುಭವ, ಅಧ್ಯಯನ ಹಾಗೂ ಒಳನೋಟಗಳ ಕಾರಣಕ್ಕೆ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿಯ ವಿಚಾರದಲ್ಲಿ ತಜ್ಞರಿಗೂ, ರೈತರಿಗೂ ಪಾಠ ಮಾಡಬಲ್ಲರು. ಅಪಾರ ಕೀಟಲೆಯ ಸ್ವಭಾವದ ಅವರು ಹಲವು ವಿಚಾರಗಳ ಕುರಿತು ಬರೆಯುತ್ತಿರುವ ಆಲ್‌ರೌಂಡರ್ ಕೂಡ.


ಇದನ್ನೂ ಓದಿ: ಹಿಂದುಳಿದ ವರ್ಗಗಳ ರಾಜಕೀಯ ಮೀಸಲಾತಿ: ಸುಪ್ರೀಂ ಆದೇಶಕ್ಕೆ ಆತಂಕಪಡಬೇಕಿಲ್ಲ- ಸಿದ್ದರಾಮಯ್ಯ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...