ಕಣ್ಣಿನ ಪೊರೆ ಚಿಕಿತ್ಸೆಗೆ ಒಳಗಾಗಲು ಮೂರು ತಿಂಗಳು ಹೈದರಾಬಾದ್‌ಗೆ ತೆರಳಿದರೆ 2018ರ ಭೀಮಾ ಕೋರೆಗಾಂವ್-ಎಲ್ಗಾರ್ ಪರಿಷತ್ ಹಿಂಸಾಚಾರ ಪ್ರಕರಣದ ಚಾರ್ಜ್‌ಶೀಟ್ ರೂಪಿಸುವುದು ವಿಳಂಬವಾಗಲಿದೆ ಎಂದು ಹೇಳಿರುವ ವಿಶೇಷ ನ್ಯಾಯಾಲಯವು, ಕ್ರಾಂತಿಕಾರಿ ಕವಿ ವರವರ ರಾವ್ ಅವರ ಅರ್ಜಿಯನ್ನು ತಿರಸ್ಕರಿಸಿದೆ.
ವಿಶೇಷ ನ್ಯಾಯಾಧೀಶ ರಾಜೇಶ್ ಕಟಾರಿಯಾ ಅವರು ವರವರ ರಾವ್ ಅವರಿಗೆ ಜಾಮೀನು ಮಂಜೂರು ಮಾಡಿರುವ ಇತ್ತೀಚಿನ ಸುಪ್ರೀಂಕೋರ್ಟ್‌ನ ತೀರ್ಪನ್ನು ಉಲ್ಲೇಖಿಸಿ, ಇದರಲ್ಲಿ ಮೂರು ತಿಂಗಳೊಳಗೆ ಚಾರ್ಜ್‌ಶೀಟ್ ರೂಪಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಹೇಳಲಾಗಿದೆ ಎಂದು ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
“ಗೌರವಾನ್ವಿತ ಸುಪ್ರೀಂಕೋರ್ಟ್ ಹೊರಡಿಸಿದ ಮೇಲಿನ ಆದೇಶದ ದೃಷ್ಟಿಯಿಂದ, ಈ ನ್ಯಾಯಾಲಯವು ಆರೋಪಿಗಳ ವಿರುದ್ಧ ಆರೋಪಗಳನ್ನು ರೂಪಿಸುವ ಅಗತ್ಯವಿದೆ. ಆದೇಶದ ಪ್ರಕಾರ ಮೂರು ತಿಂಗಳೊಳಗೆ ಏಕಕಾಲದಲ್ಲಿ ಬಾಕಿ ಉಳಿದಿರುವ ಅರ್ಜಿಯನ್ನು ನಿರ್ಧರಿಸುವ ಅಗತ್ಯವಿದೆ. ಹಾಗಾಗಿ ಅರ್ಜಿದಾರರು ಹೈದರಾಬಾದ್‌ನಲ್ಲಿ ಮೂರು ತಿಂಗಳ ಕಾಲ ಹೋಗಿ ಉಳಿಯಲು ಅನುಮತಿಸಿದರೆ, ಚಾರ್ಜ್‌ಶೀಟ್ ರಚನೆಯು ದೀರ್ಘವಾಗಿರುತ್ತದೆ” ಎಂದು ನ್ಯಾಯಾಲಯವು ಹೇಳಿದೆ.
ಇದನ್ನೂ ಓದಿ: ಭೀಮಾಕೊರೆಗಾಂವ್ ಪ್ರಕರಣ: ಕ್ರಾಂತಿಕಾರಿ ಕವಿ ವರವರ ರಾವ್‌ಗೆ ಸುಪ್ರೀಂನಿಂದ ಜಾಮೀನು
ಆಗಸ್ಟ್ 10 ರಂದು ಸುಪ್ರೀಂಕೋರ್ಟ್ ವರವರ ರಾವ್ ಅವರಿಗೆ ವೈದ್ಯಕೀಯ ಕಾರಣಗಳಿಗಾಗಿ ಜಾಮೀನು ನೀಡಿತು. ಮುಂದಿನ ವಾರ ಹೈದರಾಬಾದ್‌ನಲ್ಲಿ ಅವರ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗೆ ಒಳಗಾಗಲು ವಿಶೇಷ ಎನ್‌ಐಎ ನ್ಯಾಯಾಲಯವನ್ನು ಸಂಪರ್ಕಿಸಲು ಅವರಿಗೆ ಅನುಮತಿ ನೀಡಿತ್ತು.
ಸುಪ್ರೀಂಕೋರ್ಟ್‌ನ ತೀರ್ಪಿನ ಪರಿಣಾಮವಾಗಿ, ವರವರ ರಾವ್ ಅವರು ಮೂರು ತಿಂಗಳ ಕಾಲ ಹೈದರಾಬಾದ್‌ಗೆ ಪ್ರಯಾಣಿಸಲು ಮತ್ತು ಅಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಲು ಅನುಮತಿ ಕೋರಿ ಮುಂಬೈನ ವಿಶೇಷ ಎನ್‌ಐಎ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯಲ್ಲಿ ಅವರು, ಹೈದರಾಬಾದ್‌ನಲ್ಲಿ ತನಗೆ ಸಿಗುವ ಉಚಿತ ಚಿಕಿತ್ಸೆಗೆ ಹೋಲಿಸಿದ, ಮುಂಬೈನಲ್ಲಿ ದುಭಾರಿ ವೆಚ್ಚವಾಗಲಿದೆ ಎಂದು ಉಲ್ಲೇಖಿಸಿದರು.
ಆದರೆ, ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಪ್ರಕಾಶ್ ಶೆಟ್ಟಿ ಅವರು ಆಗಸ್ಟ್ 8 ರ ಆದೇಶದ ಮೇಲೆ ವಿಧಿಸಲಾದ ಜಾಮೀನು ಷರತ್ತುಗಳನ್ನು ಉಲ್ಲೇಖಿಸಿ,“ಟ್ರಯಲ್ ಕೋರ್ಟ್‌ನಿಂದ ಎಕ್ಸ್‌ಪ್ರೆಸ್ ಅನುಮತಿಯಿಲ್ಲದೆ” ಅವರು ಮುಂಬೈನಿಂದ ಹೊರಹೋಗುವುದಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ವರವರ ರಾವ್ ಅವರ ಪುಸ್ತಕದಿಂದ, ‘ಹಿಂದುತ್ವ’, ‘ಸಂಘಪರಿವಾರ’ ಸೇರಿದಂತೆ ಹಲವು ಪದಗಳನ್ನು ಕೈಬಿಟ್ಟ ಪ್ರಕಾಶನ ಸಂಸ್ಥೆ!
“ಹೈದರಾಬಾದ್‌ನಲ್ಲಿ ಚಿಕಿತ್ಸೆ ಪಡೆಯಲು ವರವರ ರಾವ್ ಅವರ ಪ್ರಾಥಮಿಕ ಕಾರಣವೆಂದರೆ ಚಿಕಿತ್ಸಾ ವೆಚ್ಚದಲ್ಲಿನ ವ್ಯತ್ಯಾಸವಾಗಿದೆ. ಅರ್ಜಿದಾರನಿಗೆ ಮುಂಬೈನಲ್ಲಿ ಉತ್ತಮ ಚಿಕಿತ್ಸೆ ಸಿಗುವುದಿಲ್ಲ ಎಂಬುದು ಪ್ರಕರಣವಲ್ಲ” ಎಂದು ನ್ಯಾಯಾಧೀಶರು ತಮ್ಮ ಆದೇಶದಲ್ಲಿ ಹೇಳಿದ್ದಾರೆ.
ವರವರ ರಾವ್ ಮತ್ತು ಇತರ 14 ಹೋರಾಟಗಾರರು ನಿಷೇಧಿತ ಸಿಪಿಐ(ಮಾವೋವಾದಿ)ಯ ಅಜೆಂಡಾವನ್ನು ಮುಂದಿಟ್ಟುಕೊಂಡು ಸರ್ಕಾರವನ್ನು ಉರುಳಿಸಲು ಪಿತೂರಿ ನಡೆಸುತ್ತಿದ್ದಾರೆ ಎಂದು ಎನ್‌ಐಎ ಆರೋಪಿಸಿದೆ. ಪ್ರಾಥಮಿಕವಾಗಿ ಅವರ ಎಲೆಕ್ಟ್ರಾನಿಕ್ ಸಾಧನಗಳಿಂದ ವಶಪಡಿಸಿದ ಪತ್ರಗಳು ಮತ್ತು ಇಮೇಲ್‌ಗಳ ಆಧಾರದ ಮೇಲೆ ಅವರ ವಿರುದ್ಧ ‘ಕಾನೂನುಬಾಹಿರ ಚಟುವಟಿಕೆಗಳ-ತಡೆಗಟ್ಟುವಿಕೆ-ಕಾಯಿದೆ’ (UAPA) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
2017ರ ಡಿಸೆಂಬರ್ 31 ರಂದು ಪುಣೆಯಲ್ಲಿ ಎಲ್ಗಾರ್ ಪರಿಷತ್ ಸಾಂಸ್ಕೃತಿಕ ಕಾರ್ಯಕ್ರಮವನ್ನು ಕ್ರಿಮಿನಲ್ ಪಿತೂರಿಯ ಭಾಗವಾಗಿ ಆಯೋಜಿಸಲಾಗಿದೆ ಎಂದು ಎನ್‌ಐಎ ಆರೋಪಿಸಿದೆ. ಸಮಾರಂಭದಲ್ಲಿ ಮಾಡಲಾದ ಭಾಷಣವು, ಮರುದಿನ ಭೀಮಾ ಕೋರೆಗಾಂವ್‌ನಲ್ಲಿ ನಡೆದ ಜಾತಿ ಹಿಂಸಾಚಾರಕ್ಕೆ ಕಾರಣವಾಯಿತು ಎಂದು ಎನ್‌ಐಎ ಆರೋಪಿಸಿದೆ.
ಇದನ್ನೂ ಓದಿ: ಭೀಮಾ ಕೊರೆಗಾಂವ್: ಫೆಬ್ರವರಿ 5 ರವರೆಗೆ ಹೋರಾಟಗಾರ ವರವರ ರಾವ್ ಅವರ ಜಾಮೀನು ಅವಧಿ ವಿಸ್ತರಣೆ
ಹೋರಾಟಗಾರರಲ್ಲಿ ಹೆಚ್ಚಿನವರು ಕಾರ್ಯಕ್ರಮದಲ್ಲಿ ಭಾಗವಹಿಸಿಲ್ಲ ಹಾಗೂ ಎಫ್‌ಐಆರ್‌ನಲ್ಲಿ ತಮ್ಮ ಹೆಸರೂ ಇರಲಿಲ್ಲ ಎಂದು ಹೇಳಿದ್ದಾರೆ. ಆದರೂ ಎಲೆಕ್ಟ್ರಾನಿಕ್ ಪುರಾವೆಗಳನ್ನು ‘ಸೃಷ್ಟಿಸಿ’ ತಮ್ಮ ಬಂಧನ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.


