ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯ ಕ್ಯಾಂಪಸ್‌ನಲ್ಲಿರುವ ಹಾಸ್ಟೆಲ್ ಕಟ್ಟಡದ ಎರಡನೇ ಮಹಡಿಯಿಂದ ಆಕಸ್ಮಿಕವಾಗಿ ಬಿದ್ದು 28 ವರ್ಷದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್-ಬೆಂಗಳೂರು (ಐಐಎಂಬಿ) ಸ್ನಾತಕೋತ್ತರ ವಿದ್ಯಾರ್ಥಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಗುಜರಾತ್ ಮೂಲದ ಮೃತರನ್ನು ಎಂಬಿಎ ಎರಡನೇ ವರ್ಷದ ವಿದ್ಯಾರ್ಥಿ ನಿಲಯ್ ಕೈಲಾಶ್‌ಭಾಯ್ ಪಟೇಲ್ ಎಂದು ಗುರುತಿಸಲಾಗಿದೆ. ಬೆಂಗಳೂರು ಐಐಎಂ
ಶನಿವಾರ ರಾತ್ರಿ ಕ್ಯಾಂಪಸ್‌ನಲ್ಲಿರುವ ಸ್ನೇಹಿತರೊಬ್ಬರ ಕೊಠಡಿಯಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡು ಪಟೇಲ್ ತಮ್ಮ ಕೋಣೆಗೆ ಹಿಂತಿರುಗುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಭಾನುವಾರ ಬೆಳಗ್ಗೆ 6:45ರ ಸುಮಾರಿಗೆ ಭದ್ರತಾ ಸಿಬ್ಬಂದಿಗೆ ಪಟೇಲ್ ಶವ ಪತ್ತೆಯಾದಾಗ ಘಟನೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಶನಿವಾರ ಜನ್ಮದಿನವಾಗಿದ್ದರಿಂದ ಪಟೇಲ್ ಅವರು ಕ್ಯಾಂಪಸ್‌ನಲ್ಲಿರುವ ಹಾಸ್ಟೆಲ್‌ನ ಬೇರೆ ಬ್ಲಾಕ್‌ನಲ್ಲಿರುವ ಸ್ನೇಹಿತನ ಕೊಠಡಿಯಲ್ಲಿ ಹುಟ್ಟುಹಬ್ಬವನ್ನು ಆಚರಿಸಲು ಹೋಗಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ದೃಢಪಟ್ಟಿದೆ ಎಂದು ವರದಿ ಉಲ್ಲೇಖಿಸಿದೆ. ರಾತ್ರಿ 11:30ರ ಸುಮಾರಿಗೆ ಸ್ನೇಹಿತನ ಕೊಠಡಿಯಿಂದ ಹೊರಟು ‘ಎಫ್’ ಬ್ಲಾಕ್‌ನಲ್ಲಿರುವ ತನ್ನ ಕೋಣೆಗೆ ಮರಳಿದ್ದಾರೆ.
“ಪಟೇಲ್ ಅವರು ತಮ್ಮ ಕೋಣೆಗೆ ಹಿಂತಿರುಗುವಾಗ ಸಮತೋಲನ ಕಳೆದುಕೊಂಡು ಎರಡನೇ ಮಹಡಿಯಿಂದ ಆಕಸ್ಮಿಕವಾಗಿ ಬಿದ್ದಿರಬಹುದು ಎಂದು ಶಂಕಿಸಲಾಗಿದೆ” ಎಂದು ಪೊಲೀಸರು ತಿಳಿಸಿದ್ದಾರೆ. ಭಾನುವಾರ ಸಂಜೆ ಬೆಂಗಳೂರಿಗೆ ಆಗಮಿಸಿದ ಪಟೇಲ್ ಅವರ ಸಂಬಂಧಿ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮುಂದಿನ ತನಿಖೆ ನಡೆಯುತ್ತಿದೆ.
ಘಟನೆಯ ನಂತರ, ಐಐಎಂಬಿ ಹೇಳಿಕೆ ನೀಡಿದ್ದು, “ಪ್ರತಿಭಾವಂತ ವಿದ್ಯಾರ್ಥಿ ಮತ್ತು ಎಲ್ಲರ ಪ್ರೀತಿಯ ಸ್ನೇಹಿತ, ನಿಲಯ್ ಅವರನ್ನು ಇಡೀ ಐಐಎಂಬಿ ಕುಟುಂಬವು ಕಳೆದುಕೊಂಡಿದೆ. ನಾವು ಅವರಿಗೆ ಸಂತಾಪ ಕೋರುತ್ತೇವೆ ಮತ್ತು ಈ ಕಷ್ಟದ ಸಮಯದಲ್ಲಿ ನಾವು ಅವರ ಕುಟುಂಬದೊಂದಿಗೆ ನಿಲ್ಲುತ್ತೇವೆ” ಎಂದು ಹೇಳಿದೆ. ಬೆಂಗಳೂರು ಐಐಎಂ
ಐಐಎಂಬಿಯಿಂದ ಸ್ಪಷ್ಟನೆ ಕೇಳಿದ ವಿದ್ಯಾರ್ಥಿ ಸಂಘ
ಘಟನೆಯ ನಂತರ, ಅಖಿಲ ಭಾರತ ಒಬಿಸಿ ವಿದ್ಯಾರ್ಥಿಗಳ ಸಂಘವು ಸಂಸ್ಥೆಯು ಈ ವಿಷಯದ ಬಗ್ಗೆ ಸ್ಪಷ್ಟನೆ ನೀಡಬೇಕೆಂದು ಒತ್ತಾಯಿಸಿದೆ. ಸಂಸ್ಥೆಯು ತಳಮಟ್ಟದ ಸಮುದಾಯಗಳ ಆತಂಕಗಳನ್ನು ಪರಿಹರಿಸಲು ಸಾಕಷ್ಟು ಕಾರ್ಯವಿಧಾನಗಳನ್ನು ಹೊಂದಿಲ್ಲ ಎಂದು ಸಂಘವು ಒತ್ತಿಹೇಳಿದೆ. ಈ ವಿಚಾರವನ್ನು ಸಂಘವು ನಿರಂತರವಾಗಿ ಎತ್ತುತ್ತಿದೆ ಎಂದು ಅದು ಹೇಳಿದೆ.
ಇದನ್ನೂಓದಿ: ಕೇರಳ ನರ್ಸ್ ಮರಣದಂಡನೆಗೆ ಅಧ್ಯಕ್ಷರ ಅನುಮತಿಯಿಲ್ಲ; ಯೆಮೆನ್ ರಾಯಭಾರ ಕಚೇರಿ ಸ್ಪಷ್ಟನೆ
ಕೇರಳ ನರ್ಸ್ ಮರಣದಂಡನೆಗೆ ಅಧ್ಯಕ್ಷರ ಅನುಮತಿಯಿಲ್ಲ; ಯೆಮೆನ್ ರಾಯಭಾರ ಕಚೇರಿ ಸ್ಪಷ್ಟನೆ


