ಕೇಂದ್ರ ಸರ್ಕಾರದ ರೈತ ವಿರೋಧಿ ಕಾನೂನುಗಳನ್ನು ಹಿಂಪಡೆಯುವಂತೆ ಪ್ರತಿಭಟನೆ ನಡೆಸುತ್ತಿರುವ ರೈತರು ಇಂದು ಜಾಗತಿಕ ‘ಮಾನವ ಹಕ್ಕುಗಳ ದಿನದ ಪ್ರಯುಕ್ತ ಬಂಧನಕ್ಕೊಳಗಾಗಿರುವ ಸಾಮಾಜಿಕ ಹೋರಾಟಗಾರರನ್ನು ಬಿಡುಗಡೆ ಮಾಡುವಂತೆ’ ಒತ್ತಾಯಿಸಿ ಅವರ ಭಾವಚಿತ್ರಗಳನ್ನು ಹಿಡಿದು ಪ್ರತಿಭಟನೆ ನಡೆಸಿದ್ದಾರೆ.
ಇದನ್ನೂ ಓದಿ: ಭಾರತದಲ್ಲಿ ಮಾನವಹಕ್ಕು ಹೋರಾಟಗಾರರ ಬಂಧನವಾಗುತ್ತಿದೆ: ವಿಶ್ವಸಂಸ್ಥೆ ಕಳವಳ
ದೆಹಲಿಯಲ್ಲಿ ಕಳೆದ ಹದಿನೈದು ದಿನಗಳಿಂದ ಪ್ರತಿಭಟನೆ ಮಾಡುತ್ತಿರುವ ರೈತರು ಇಂದು, ದೇಶದಾದ್ಯಂತ ವಿವಿಧ ಕಾರಣಗಳಿಗೆ ಸುಳ್ಳು ಆರೋಪಗಳ ಮೇಲೆ ಬಂಧನವಾಗಿರುವ ವರವರ ರಾವ್, ಸ್ಟ್ಯಾನ್ ಸ್ವಾಮಿ, ಉಮರ್ ಖಾಲಿದ್, ಸುಧಾ ಭಾರಧ್ವಾಜ್ ಸೇರಿದಂತೆ ನೂರಾರು ಸಾಮಾಜಿಕ ಹೋರಾಟಗಾರರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿದ್ದಾರೆ.
ಭೀಮಾ ಕೋರೆಗಾಂವ್ ಪ್ರಕರಣ, ದೆಹಲಿ ಗಲಭೆ ಪ್ರಕರಣ, ಸಿಎಎ ಹೋರಾಟ ಸೇರಿದಂತೆ ಹತ್ತಾರು ಹೋರಾಟಗಳಲ್ಲಿ ಭಾಗಿಯಾಗಿದ್ದವರನ್ನು ಮತ್ತು ಹೋರಾಟವನ್ನು ಹತ್ತಿಕ್ಕುವ ಸಲುವಾಗಿ ಅವರನ್ನು ಬಂಧಿಸಿ ಜೈಲಿನಲ್ಲಿಟ್ಟು ಹಿಂಸಿಸಲಾಗುತ್ತಿದೆ. ವಾಸ್ತವದಲ್ಲಿ ಇದು ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. ಹಾಗಾಗಿಯೇ ರೈತರು ತಮ್ಮ ಬೇಡಿಕೆಯ ವಿಷಯಗಳಲ್ಲಿ ಈ ಹೋರಾಟಗಾರರನ್ನು ಬಿಡುಗಡೆ ಮಾಡಬೇಕು ಎಂದು ದನಿಯೆತ್ತಿದ್ದಾರೆ.
ಇದನ್ನೂ ಓದಿ: ಜನಪರ ಹೋರಾಟಗಾರರ ಅಕ್ರಮ ಬಂಧನ


