ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಯಿಂದ ಪಾಕಿಸ್ತಾನಕ್ಕೆ ನೀಡಲಾಗುವ ಯಾವುದೇ ಹಣಕಾಸಿನ ನೆರವು “ಭಯೋತ್ಪಾದನಾ ನಿಧಿಗಿಂತ ಕಡಿಮೆಯಿಲ್ಲ” ಮತ್ತು ಅದನ್ನು ಮರುಪರಿಶೀಲಿಸಬೇಕು ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಶುಕ್ರವಾರ ಹೇಳಿದ್ದಾರೆ. ಐಎಂಎಫ್ ಮೇ 9 ರಂದು ಪಾಕಿಸ್ತಾನಕ್ಕೆ ತನ್ನ ಬೇಲ್‌ಔಟ್ ಪ್ಯಾಕೇಜ್‌ನ ಭಾಗವಾಗಿ ಅನುಮೋದಿಸಿದ ಹೊಸ $1 ಬಿಲಿಯನ್ ಹಣಕಾಸು ನೆರವು ಕಾರ್ಯಕ್ರಮದ ಬಗ್ಗೆ ಉಲ್ಲೇಖಿ ಅವರು ಈ ಹೇಳಿಕೆ ನೀಡಿದ್ದಾರೆ. ಪಾಕಿಸ್ತಾನಕ್ಕೆ ಐಎಂಎಫ್ ಸಾಲ
ಐಎಂಎಫ್‌ನ ನಿಧಿಯ ಬಹುಪಾಲು ಭಾಗವನ್ನು ಪಾಕಿಸ್ತಾನ ದುರುಪಯೋಗಪಡಿಸಿಕೊಳ್ಳುತ್ತದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿಕೊಂಡಿದ್ದಾರೆ.
“ಅಂತರರಾಷ್ಟ್ರೀಯ ಹಣಕಾಸು ನಿಧಿಯಿಂದ ಪಡೆದ $1 ಬಿಲಿಯನ್ ನಿಧಿಯ ಹೆಚ್ಚಿನ ಭಾಗವನ್ನು ಪಾಕಿಸ್ತಾನ ಭಯೋತ್ಪಾದಕ ಮೂಲಸೌಕರ್ಯಕ್ಕಾಗಿ ಖರ್ಚು ಮಾಡುತ್ತದೆ ಎಂದು ನಾನು ನಂಬುತ್ತೇನೆ…” ಎಂದು ಭುಜ್‌ನ ವಾಯುಪಡೆಯ ನಿಲ್ದಾಣದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅವರು ಹೇಳಿದ್ದಾರೆ.
“ಇದನ್ನು ಅಂತರರಾಷ್ಟ್ರೀಯ ಸಂಸ್ಥೆಯಾದ ಅಂತರರಾಷ್ಟ್ರೀಯ ಹಣಕಾಸು ನಿಧಿಯಿಂದ [ಭಯೋತ್ಪಾದನೆಗೆ] ಪರೋಕ್ಷ ಹಣಕಾಸು ಎಂದು ಪರಿಗಣಿಸಲಾಗುವುದಿಲ್ಲವೇ?. ಈ ಪ್ರಶ್ನೆಯನ್ನು ನಾನು ಜಗತ್ತಿಗೆ ಕೇಳಲು ಬಯಸುತ್ತೇನೆ.” ಎಂದು ಅವರು ಹೇಳಿದ್ದಾರೆ.
“ಇಂದು ಪಾಕಿಸ್ತಾನಕ್ಕೆ ನೀಡುವ ಯಾವುದೇ ಜಾಗತಿಕ ನೆರವು ಅಥವಾ ನಿಧಿ ಭಯೋತ್ಪಾದನಾ ನಿಧಿಗಿಂತ ಕಡಿಮೆಯಿಲ್ಲ ಎಂದು ನಾನು ನಂಬುತ್ತೇನೆ. ಪಾಕಿಸ್ತಾನಕ್ಕೆ ಐಎಂಎಫ್ ನೀಡಿರುವ $1 ಬಿಲಿಯನ್ ಸಹಾಯವನ್ನು ಮರುಪರಿಶೀಲಿಸಬೇಕೆಂದು ಭಾರತವು ಬಯಸುತ್ತದೆ.” ಎಂದು ಅವರು ಹೇಳಿದ್ದಾರೆ.
ಭಾರತವು ಐಎಂಎಫ್‌ಗೆ ನೀಡುವ ಹಣವನ್ನು ಪಾಕಿಸ್ತಾನ ಅಥವಾ ಯಾವುದೇ ದೇಶದಲ್ಲಿ ಭಯೋತ್ಪಾದಕ ಮೂಲಸೌಕರ್ಯಗಳನ್ನು ಸೃಷ್ಟಿಸಲು ಬಳಸುವುದನ್ನು ಬಯಸುವುದಿಲ್ಲ ಎಂದು ಅವರು ಹೇಳಿದ್ದಾರೆ.
मैं मानता हूँ कि आज के समय में पाकिस्तान को किसी भी तरह की आर्थिक सहायता terror financing से कम नहीं है। भारत यही चाहेगा कि IMF पाकिस्तान को अपनी एक बिलियन डॉलर की assistance पर पुनर्विचार करे और आगे भी किसी भी तरह की सहायता देने से परहेज करे। भारत नहीं चाहता कि जो फंडिंग हम IMF…
— रक्षा मंत्री कार्यालय/ RMO India (@DefenceMinIndia) May 16, 2025
ಈ ಹಣಕಾಸನ್ನು ಪಾಕಿಸ್ತಾನವು ಸರ್ಕಾರಿ ಪ್ರಾಯೋಜಿತ ಗಡಿಯಾಚೆಗಿನ ಭಯೋತ್ಪಾದನೆಗೆ ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆಯ ಬಗ್ಗೆ ಭಾರತವು ಮೇ 9 ರಂದು ಕಳವಳ ವ್ಯಕ್ತಪಡಿಸಿತ್ತು.
ಮೇ 10 ರಂದು, ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ಐಎಂಎಫ್ ನಿಧಿಯು ಭಾರತದೊಂದಿಗಿನ ಸಂಘರ್ಷದಲ್ಲಿ ಪಾಕಿಸ್ತಾನಕ್ಕೆ ಸಹಾಯ ಮಾಡುತ್ತಿದೆ ಎಂದು ಹೇಳಿದ್ದರು. ಪಾಕಿಸ್ತಾನಕ್ಕೆ ಐಎಂಎಫ್ ಸಾಲ


