ಮಹಾರಾಷ್ಟ್ರದಲ್ಲಿ ಹಲವು ರಾಜಕೀಯ ಏರಿಳಿತಗಳ ನಂತರ ಗುರುವಾರ ಸಂಜೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಉದ್ಧವ್ ಠಾಕ್ರೆಯವರು ಇಂದು ಮಧ್ಯಾಹ್ನ 2 ಗಂಟೆಗೆ ವಿಧಾನಸಭೆಯಲ್ಲಿ ವಿಶ್ವಾಸಮತಯಾಚನೆ ಮಾಡಲಿದ್ದಾರೆ.
ಇಂದು ಸಭೆ ಸೇರಲಿರುವ ಮಹಾರಾಷ್ಟ್ರ ವಿಧಾನಸಭೆಯ ವಿಶೇಷ ಅಧಿವೇಶನಕ್ಕೆ ಎನ್‌ಸಿಪಿ ಶಾಸಕ ದಿಲೀಪ್ ವಾಲ್ಸೆ ಪಾಟೀಲ್ ತಾತ್ಕಾಲಿಕ ಸ್ಪೀಕರ್ ಆಗಿರುತ್ತಾರೆ. ಮುಂದಿನ ಮಂಗಳವಾರದೊಳಗೆ ತಮ್ಮ ಬಹುಮತವನ್ನು ಸಾಬೀತುಪಡಿಸುವಂತೆ ಶಿವಸೇನೆಯ ಮುಖ್ಯಸ್ಥರನ್ನು ರಾಜ್ಯಪಾಲ ಭಗತ್ ಸಿಂಗ್ ಕೊಶ್ಯರಿ ಕೇಳಿದ್ದರು.
ಇದನ್ನೂ ಓದಿ: ಮಹಾರಾಷ್ಟ್ರ ದೆಹಲಿಯ ಗುಲಾಮ ಅಲ್ಲ: ಪ್ರಧಾನಿಯು ಸಹೋದರ ಉದ್ಧವ್ ಠಾಕ್ರೆಗೆ ಸಹಕರಿಸಬೇಕು – ಶಿವಸೇನೆ
ಉದ್ಧವ್ ಠಾಕ್ರೆ ಅವರು ಶಿವಸೇನೆ, ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷ (ಎನ್‌ಸಿಪಿ) ಮತ್ತು ಕಾಂಗ್ರೆಸ್ ಮೈತ್ರಿಕೂಟವಾದ ಮಹಾ ವಿಕಾಸ್ ಅಘಾಡಿಯನ್ನು ನಡೆಸುತ್ತಾರೆ. ಒಟ್ಟಾರೆಯಾಗಿ ಮೂರು ಪಕ್ಷಗಳು 288 ಸದಸ್ಯರ ವಿಧಾನಸಭೆಯಲ್ಲಿ 154 ಶಾಸಕರನ್ನು ಹೊಂದಿದ್ದು, ಬಹುಮತಕ್ಕಿಂತ ಒಂಬತ್ತು ಹೆಚ್ಚಿವೆ. ಅವರು ಕೆಲವು ಸ್ವತಂತ್ರ ಶಾಸಕರ ಬೆಂಬಲವನ್ನು ಹೊಂದಿದ್ದು ಅವರ ಶಕ್ತಿ 165 ರಷ್ಟಿದೆ ಎನ್ನಲಾಗುತ್ತಿದೆ.


