ಸೋಮವಾರ ರಾತ್ರಿಯಿಂದ ಮಂಗಳವಾರದವರೆಗೆ ಮುಖ್ಯವಾಗಿ ಅಂತಾರಾಷ್ಟ್ರೀಯ ಮಾರ್ಗಗಳಲ್ಲಿ ಪ್ರಯಾಣಿಸುವ ಕನಿಷ್ಠ 79 ವಿಮಾನಗಳಿಗೆ ಬಾಂಬ್ ಬೆದರಿಕೆಗಳು ಬಂದಿವೆ ಎಂದು ವರದಿಯಾಗಿದೆ. ಕಳೆದ ಒಂದು ವಾರದಿಂದ 160ಕ್ಕೂ ಹೆಚ್ಚು ವಿಮಾನಗಳಿಗೆ ಸರಣಿಯಾಗಿ ಬಾಂಬ್ ಬೆದರಿಕೆಗಳು ಬಂದಿವೆ. ಕಳೆದ 24 ಗಂಟೆಗಳಲ್ಲಿ
ಕಳೆದ ಒಂದು ದಿನದಲ್ಲಿ ಇಂಡಿಗೋದ 23 ವಿಮಾನಗಳು, ವಿಸ್ತಾರಾದ 21, ಅಕಾಸಾದಿಂದ 12 ಮತ್ತು ಏರ್ ಇಂಡಿಯಾದಿಂದ 23 ವಿಮಾನಗಳನ್ನು ಗುರಿಯಾಗಿಸಿ ಬಾಂಬ್ ಬೆದರಿಕೆ ಕರೆಗಳು ಬಂದಿವೆ. ಈ ವಾರ ವಿಮಾನಯಾನ ಸಂಸ್ಥೆಗಳಿಗೆ ಬಂದ ಒಟ್ಟು ಬೆದರಿಕೆ ಕರೆಗಳ ಸಂಖ್ಯೆ ಸುಮಾರು 169 ಕ್ಕೆ ಏರಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಇತ್ತೀಚಿಗೆ ಬಂದ ಬಾಂಬ್ ಬೆದರಿಕೆಗಳು ಜಿದ್ದಾ, ಇಸ್ತಾಂಬುಲ್ ಮತ್ತು ರಿಯಾದ್‌ನಂತಹ ಪ್ರಮುಖ ಸ್ಥಳಗಳಿಗೆ ತೆರಳುತ್ತಿದ್ದ ವಿಮಾನಗಳನ್ನು ಗುರಿಯಾಗಿಸಿಕೊಂಡಿವೆ. ಮಂಗಳೂರಿನಿಂದ ಮುಂಬೈಗೆ ತೆರಳುತ್ತಿದ್ದ ಇಂಡಿಗೋ ಫ್ಲೈಟ್ 6E 164 ಬಾಂಬ್ ಬೆದರಿಕೆ ತೀರಾ ಇತ್ತಿಚೆಗೆ ಪಡೆದಿದೆ. ಈ ವೇಳೆ ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗಿಳಿಸಲಾಗಿದ್ದು, ಸಂಪೂರ್ಣ ಭದ್ರತಾ ತಪಾಸಣೆ ನಡೆಸಲಾಯಿತು ಎಂದು ವರದಿಯಾಗಿದೆ. ಕಳೆದ 24 ಗಂಟೆಗಳಲ್ಲಿ
ಅಂತೆಯೇ, ಅಹಮದಾಬಾದ್‌ನಿಂದ ಜಿದ್ದಾಗೆ ಪ್ರಯಾಣಿಸುತ್ತಿದ್ದ ಇಂಡಿಗೋದ 6E 75 ವಿಮಾನಕ್ಕೆ ಕೂಡಾ ಬಾಂಬ್ ಬೆದರಿಕೆ ಕರೆ ಮಾಡಲಾಗಿದ್ದು, ಲ್ಯಾಂಡಿಂಗ್ ನಂತರ ವಿಮಾನವನ್ನು ಐಸೋಲೇಶನ್ ಕರೆದೊಯ್ಯಲಾಯಿತು. ಅಲ್ಲಿ ಪ್ರಯಾಣಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಿ, ಪ್ರಮಾಣಿತ ಕಾರ್ಯಾಚರಣೆಯ ಕಾರ್ಯವಿಧಾನಗಳನ್ನು ಅನುಸರಿಸಿ ಪರಿಶೀಲನೆ ನಡೆಸಲಾಗಿದೆ ಎಂದು ವರದಿಯಾಗಿದೆ.
ಇದೇ ರೀತಿಯ ಬೆದರಿಕೆ ಕರೆಗಳನ್ನು ಇತರೆ ಇಂಡಿಗೋ ವಿಮಾನಗಳಿಗೂ ನೀಡಲಾಗಿದೆ ಎಂದು ವರದಿಯಾಗಿದೆ. ಲಕ್ನೋದಿಂದ ಪುಣೆ ಪ್ರಯಾಣಿಸುವ ಫ್ಲೈಟ್ 6E 118, ಹೈದರಾಬಾದ್‌ನಿಂದ ಜಿದ್ದಾಗೆ ಪ್ರಯಾಣಿಸುವ 6E 67, ಇಸ್ತಾನ್‌ಬುಲ್‌ನಿಂದ ಮುಂಬೈಗೆ ಪ್ರಯಾಣಿಸುವ 6E 18, ದೆಹಲಿಯಿಂದ ದಮ್ಮಾಮ್‌ಗೆ ಪ್ರಯಾಣಿಸುವ 6E 83, ಬೆಂಗಳೂರಿನಿಂದ ಜಿದ್ದಾಗೆ ಪ್ರಯಾಣಿಸುವ 6E 77, ಇಸ್ತಾನ್‌ಬುಲ್‌ನಿಂದ ದೆಹಲಿಗೆ ಪ್ರಯಾಣಿಸುವ 6E 12, ಕೋಝಿಕ್ಕೋಡ್‌ನಿಂದ ಜಿದ್ದಾಗೆ ಪ್ರಯಾಣಿಸುವ 6E 65 ವಿಮಾನ ಮತ್ತು ದೆಹಲಿಯಿಂದ ಜಿದ್ದಾಗೆ ಪ್ರಯಾಣಿಸುವ 6E 63 ವಿಮಾನಕ್ಕೆ ಬಾಂಬ್ ಬೆದರಿಕೆ ಬಂದಿವೆ.
ಸರಣಿ ಬಾಂಬ್ ಬೆದರಿಕೆ ಬಂದ ಹಿನ್ನಲೆ, ವಿಮಾನಯಾನ ಸಂಸ್ಥೆಗಳಿಗೆ ಬಾಂಬ್ ಬೆದರಿಕೆ ಕರೆಗಳನ್ನು ಮಾಡುವುದನ್ನು ಗಂಭೀರ ಅಪರಾಧವನ್ನಾಗಿ ಮಾಡಲಾಗುವುದು ಎಂದು ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಹೇಳಿದ್ದರು. ಅವರ ಈ ಹೇಳಿಕೆಯ ನಂತರ ಕೂಡಾ ಬಾಂಬ್ ಬೆದರಿಕೆಯ ಸರಣಿ ಮುಂದುವರೆದಿದೆ.
ಕಳೆದ ಕೆಲವು ದಿನಗಳಲ್ಲಿ ಹಲವಾರು ವಿಮಾನಗಳು ಇಂತಹ ಹಲವಾರು ಕರೆಗಳನ್ನು ಸ್ವೀಕರಿಸಿವೆ. ಹಾಗಾಗಿ ದೇಶಾದ್ಯಂತ ವಿಮಾನ ಕಾರ್ಯಾಚರಣೆಗಳಿಗೆ ಗಂಭೀರವಾಗಿ ಅಡ್ಡಿಯಾಗಿವೆ.
ಶನಿವಾರ (ಅಕ್ಟೋಬರ್ 19)ದಂದು ಏರ್ ಇಂಡಿಯಾ, ಇಂಡಿಗೋ, ಆಕಾಶ ಏರ್, ವಿಸ್ತಾರಾ, ಸ್ಪೈಸ್ ಜೆಟ್, ಸ್ಟಾರ್ ಏರ್ ಮತ್ತು ಅಲಯನ್ಸ್ ಏರ್ ಸಂಸ್ಥೆಯ 30ಕ್ಕೂ ಹೆಚ್ಚು ವಿಮಾನಗಳಿಗೆ ಇಂತಹ ಸಂದೇಶಗಳು ಬಂದಿವೆ. ಈ ಪರಿಸ್ಥಿತಿಗೆ ಪ್ರತಿಕ್ರಿಯೆಯಾಗಿ, ಬ್ಯೂರೋ ಆಫ್ ಸಿವಿಲ್ ಏವಿಯೇಷನ್ ಸೆಕ್ಯುರಿಟಿ (ಬಿಸಿಎಎಸ್) ಅಕ್ಟೋಬರ್ 19 ರಂದು ನವದೆಹಲಿಯಲ್ಲಿ ವಿಮಾನಯಾನ ಸಂಸ್ಥೆಗಳ ಸಿಇಒಗಳು ಮತ್ತು ಪ್ರತಿನಿಧಿಗಳೊಂದಿಗೆ ಸಭೆ ನಡೆಸಿತ್ತು.
ಇದನ್ನೂ ಓದಿ: ಮುರುಕುಂಬಿ ಅಸ್ಪೃಶ್ಯತೆ ಪ್ರಕರಣ | 101 ಮಂದಿ ವಿರುದ್ಧದ ಆರೋಪ ಸಾಬೀತು : ಅ.24ರಂದು ಶಿಕ್ಷೆ ಪ್ರಕಟ
ಮುರುಕುಂಬಿ ಅಸ್ಪೃಶ್ಯತೆ ಪ್ರಕರಣ | 101 ಮಂದಿ ವಿರುದ್ಧದ ಆರೋಪ ಸಾಬೀತು : ಅ.24ರಂದು ಶಿಕ್ಷೆ ಪ್ರಕಟ


