ಮಹಾರಾಷ್ಟ್ರದ ಆಡಳಿತಾರೂಢ ಮಹಾಯುತಿ ಮೈತ್ರಿಯ ಪಕ್ಷಗಳಾದ ಬಿಜೆಪಿ, ಶಿವಸೇನೆ ಮತ್ತು ಎನ್‌ಸಿಪಿ ಮುಂದಿನ ತಿಂಗಳು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಹಾಲಿ ಸಿಎಂ ಏಕನಾಥ್ ಶಿಂಧೆ ಆಗಲಿ ಅಥವಾ ಬೇರೆ ಯಾರನ್ನೂ ಮುಖ್ಯಮಂತ್ರಿಯಾಗಿ ಬಿಂಬಿಸುವುದಿಲ್ಲ ಎಂದು ತೀರ್ಮಾನಿಸಿದೆ. ಪ್ರಧಾನಿ ಹೆಸರಿನಲ್ಲಿ ಮಹಾರಾಷ್ಟ್ರ ಚುನಾವಣೆಯನ್ನು ಎದುರಿಸುವುದಾಗಿ ಮೈತ್ರಿಯು ನಿರ್ಧರಿಸಿದೆ. ಮೋದಿಯ ಹೆಸರಿನಲ್ಲಿ
ಮುಖ್ಯಮಂತ್ರಿ ಶಿಂಧೆ, ಉಪ ಮುಖ್ಯಮಂತ್ರಿಗಳಾದ ಅಜಿತ್ ಪವಾರ್ ಮತ್ತು ದೇವೇಂದ್ರ ಫಡ್ನವೀಸ್ ಅವರು ಶುಕ್ರವಾರ ತಡರಾತ್ರಿ ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಇತರ ಬಿಜೆಪಿ ಹಿರಿಯ ನಾಯಕರನ್ನು ಭೇಟಿಯಾದಾಗ ಈ ನಿರ್ಧಾರ ತೆಗೆದುಕೊಂಡಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಪ್ರಧಾನಿ ಮೋದಿ ಅವರ ಮುಖವನ್ನು ಚುನಾವಣೆಯಲ್ಲಿ ಮಹಾಯುತಿ ಪ್ರಮುಖವಾಗಿ ಜನರ ಮುಂದಿಡಲಿದೆ ಎಂದು ಮೂಲಗಳು ತಿಳಿಸಿವೆ. “ಮೈತ್ರಿಯನ್ನು ಮುನ್ನಡೆಸುವ ನಾಯಕನನ್ನು ನಂತರ ನಿರ್ಧರಿಸಲಾಗುವುದು. ಚುನಾವಣಾ ಪೂರ್ವ ಅಥವಾ ನಂತರ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂಬ ಬಗ್ಗೆ ಯಾವುದೇ ಸ್ಪಷ್ಟತೆ ನೀಡಲು ಬಿಜೆಪಿ ನಿರಾಕರಿಸಿದೆ” ಎಂದು ಮೂಲವೊಂದು ತಿಳಿಸಿದೆ ಎಂದು TNIE ವರದಿ ಮಾಡಿದೆ. ಮೋದಿಯ ಹೆಸರಿನಲ್ಲಿ
“ಮಹಾಯುತಿಯು ಎಲ್ಲಾ ಮೂರು ಪಕ್ಷಗಳ ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆಗಳನ್ನು ಎದುರಿಸಲಿದೆ. ಆದರೆ ಬಿಜೆಪಿ ಅಥವಾ ಶಿವಸೇನೆ ಅಥವಾ ಎನ್‌ಸಿಪಿಯಿಂದ ಯಾವುದೇ ಪ್ರಮುಖ ನಾಯಕ ಅಥವಾ ಯಾವುದೇ ನಿರ್ದಿಷ್ಟ ಮುಖವನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಬಿಂಬಿಸಲಾಗುವುದಿಲ್ಲ” ಎಂದು ಮತ್ತೊಂದು ಮೂಲಗಳು ತಿಳಿಸಿವೆ.
ಶುಕ್ರವಾರ ನಡೆದ ಸಭೆಯಲ್ಲಿ ರಾಜ್ಯದ ಒಟ್ಟು 288 ವಿಧಾನಸಭಾ ಸ್ಥಾನಗಳಲ್ಲಿ ಬಿಜೆಪಿ 155-160 ಸ್ಥಾನಗಳಲ್ಲಿ ಸ್ಪರ್ಧಿಸಲಿದ್ದು, ಶಿಂಧೆ ನೇತೃತ್ವದ ಶಿವಸೇನೆ 80-85 ಮತ್ತು ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ 50-55 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ.
ದೆಹಲಿ ಸಭೆಯಲ್ಲಿ ಹಾಲಿ ಸಿಎಂ ಏಕನಾಥ್ ಶಿಂಧೆ ತಮ್ಮನ್ನು ಸಿಎಂ ಮುಖ ಎಂದು ಬಿಂಬಿಸಲು ಒತ್ತಾಯಿಸಿದರಾದರೂ, ಬಿಜೆಪಿ ನಾಯಕರು ಮತ್ತು ಅಜಿತ್ ಪವಾರ್ ಅದಕ್ಕೆ ಹಿಂಜರಿದರು ಎಂದು ವರದಿಯಾಗಿದೆ.
ಪ್ರಸ್ತುತ ಬಿಜೆಪಿ 105 ಶಾಸಕರನ್ನು ಹೊಂದಿದ್ದು, ಶಿಂಧೆ ಅವರ ಶಿವಸೇನೆ 56 ಮತ್ತು ಅಜಿತ್ ಪವಾರ್ ಅವರ ಪಕ್ಷವು 54 ಶಾಸಕರ ಬೆಂಬಲವನ್ನು ಹೊಂದಿದೆ. ಮಹಾಯುತಿಯ ಪ್ರಸ್ತುತ ಬಲದ ಪ್ರಕಾರ 210 ಸ್ಥಾನಗಳ ಬಗ್ಗೆ ಯಾವುದೇ ವಿವಾದವಿಲ್ಲ. ಉಳಿದ ಸ್ಥಾನಗಳನ್ನು ಮೈತ್ರಿಯಲ್ಲಿ ಹಂಚಿಕೆ ಮಾಡಲಾಗುತ್ತದೆ.
“ದೆಹಲಿ ಸಭೆಯಲ್ಲಿ ಸೀಟು ಹಂಚಿಕೆ ಕುರಿತು ಚರ್ಚೆ ನಡೆದಿದೆ. ಕೆಲವೇ ಕೆಲವು ಅನಿಶ್ಚಿತ ಕ್ಷೇತ್ರಗಳಿವೆ. ಆದರೆ ಆಯಾ ಪಕ್ಷದ ನಾಯಕರು ಕ್ಷೇತ್ರಗಳ ವಿನಿಮಯ ಸೇರಿದಂತೆ ಹೊಂದಾಣಿಕೆ ಮಾಡಲು ಒಪ್ಪಿಕೊಂಡಿದ್ದಾರೆ. ಗೆಲ್ಲುವಿಕೆ, ಆಯಾ ಪಕ್ಷದ ಪ್ರಬಲ ಅಭ್ಯರ್ಥಿಯ ಉಪಸ್ಥಿತಿ ಆಧಾರದಲ್ಲಿ ಉಳಿದ ಸ್ಥಾನಗಳನ್ನು ನಿಯೋಜಿಸಲಾಗುತ್ತದೆ” ಎಂದು ಶಿವಸೇನೆಯ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ.
288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಗೆ ನವೆಂಬರ್ 20 ರಂದು ಮತದಾಯ ನಡೆಯುತ್ತಿದ್ದು, ಚುನಾವಣೆಯಲ್ಲಿ ಮಹಾಯುತಿ ಮೈತ್ರಿಕೂಟ ಅಧಿಕಾರವನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದೆ.
ಇದನ್ನೂ ಓದಿ: ‘ಕಾಂಗ್ರೆಸ್‌ಗೆ ಸಮಸ್ಯೆ ಬಗೆಹರಿಸುವ ಇಚ್ಛೆಯಿಲ್ಲ’ | ಶಿವಸೇನೆ (ಯುಬಿಟಿ) ವಾಗ್ದಾಳಿ
‘ಕಾಂಗ್ರೆಸ್‌ಗೆ ಸಮಸ್ಯೆ ಬಗೆಹರಿಸುವ ಇಚ್ಛೆಯಿಲ್ಲ’ | ಶಿವಸೇನೆ (ಯುಬಿಟಿ) ವಾಗ್ದಾಳಿ


